ಅಭಿಪ್ರಾಯ / ಸಲಹೆಗಳು

Crime Report in  : Mulki PS

ದಿನಾಂಕ: 09-11-2023 ರಂದು 19-30 ಗಂಟೆಗೆ ಕೊಲ್ನಾಡು ಜಂಕ್ಷನ್ ಬಳಿಯ ಬಸ್ಸು ನಿಲ್ದಾಣದಲ್ಲಿ ಬಿಲಾಲ್ @ ಅಬ್ದುಲ್ ಬಿಲಾಲ್ ಪ್ರಾಯ: 23 ವರ್ಷ,  ವಾಸ: ಕುಂದಾಪುರ ಅಶ್ರಫ್ ರವರ ಬಾಡಿಗೆ ಮನೆ, ಕೆಎಸ್ ರಾವ್ ನಗರ, ಕೊಲ್ನಾಡು, ಕಾರ್ನಾಡು ಗ್ರಾಮ ಯುವಕನು ಅವನಷ್ಟಕ್ಕೆ ಜೋರಾಗಿ ಮಾತನಾಡುತ್ತಾ, ನಗುತ್ತಿದ್ದು, ಸದ್ರಿ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂದಿದ್ದು ಆತನು ಯಾವುದೋ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿರುವುದನ್ನು ಧೃಡಪಡಿಸಲು ವೈದ್ಯಕೀಯ ತಪಾಸಣೆ ಬಗ್ಗೆ ಎಜೆ ಆಸ್ಪತ್ರೆಗೆ ಕಳುಹಿಸಿದ್ದು ಆರೋಪಿಯನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವಿಸಿರುವ ಬಗ್ಗೆ ಪರೀಕ್ಷಾ ವರದಿಯ ಧೃಡಪತ್ರವನ್ನು  ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಂತೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂಬಿತ್ಯಾದಿಯಾಗಿರುತ್ತದೆ.

Moodabidre PS

ದಿನಾಂಕ: 10/11/2023 ರಂದು ಬೆಳಗ್ಗೆ 7.00 ಗಂಟೆಗೆ ಪಿರ್ಯಾ ದಿ Chandrahasa Koraga ದಾರರು ರಾಮ್ ಎಂಬಾತನ ಜೊತೆಯಲ್ಲಿ ದುರ್ಗಾಚರಣ್ ರವರ ಕೆ.ಎ-19-ಡಿ-5147 ನೇ ಲಾರಿಯಲ್ಲಿ ಕೆಂಪು ಕಲ್ಲು ಲೋಡಿಂಗ್ ಮಾಡಲೆಂದು ನಿಡ್ಡೋಡಿಯ ಬೊಂಟಳಿಕೆ ಎಂಬಲ್ಲಿಗೆ ತೆರಳಿದ್ದು ಲೋಡ್ ಆದ ನಂತರ ಲಾರಿಯ ಚಾಲಕರಾದ ವಿಶ್ವನಾಥ್ ಎಂಬುವರು ಕಲ್ಲಕುಮೇರು ಎಂಬಲ್ಲಿಗೆ ಹೋಗಲಿದೆಯೆಂದು ತಿಳಿಸಿ ಅವರಿಬ್ಬರನ್ನು ಡ್ರೈವರ್ ಸೀಟ್ ನ ಪಕ್ಕದಲ್ಲಿ ಕುರಿಸಿಕೊಂಡು 8.15 ಗಂಟೆಗೆ ಹೊರಟಿದ್ದು ಸಮಯ ಸುಮಾರು 8.30 ಗಂಟೆಗೆ  ನಿಡ್ಡೋಡಿಯ ಬೊಂಟಳಿಕೆ ಎಂಬಲ್ಲಿ ತಲುಪುತ್ತಿದ್ದಂತೆ ಅಲ್ಲಿ ರಸ್ತೆಯು ತಿರುವು ಮತ್ತು ಇಳಿಜಾರು ಇದ್ದುದರಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದರಿಂದ ನಿಯಂತ್ರಣಕ್ಕೆ ಸಿಗದೇ ಲಾರಿಯನ್ನು ರಸ್ತೆಯ ಬಲಬದಿಯ ತೋಡಿನ ಗುಂಡಿಗೆ ಇಳಿಸಿದ್ದು ಪರಿಣಾಮ ಪಿರ್ಯಾ್ದಿದಾರರಿಗೆ ಮತ್ತು ರಾಮ್ ಎಂಬಾತನಿಗೆ ಸಣ್ಣಪುಟ್ಟ ಸಾಮಾನ್ಯ ಸ್ವರೂಪದ ಗಾಯದ ನೋವುಗಳಾಗಿದ್ದು ಚಾಲಕರಾಗಿದ್ದ ವಿಶ್ವನಾಥ್ ರವರು ಲಾರಿಯ ಸ್ಟೇರಿಂಗ್ ಮತ್ತು ಸೀಟ್ ನಡುವೆ ಜಾಮ್ ಆಗಿ ಸಿಕ್ಕಿಹಾಕಿಕೊಂಡಿದ್ದು ನಂತರ ಸಾರ್ವಜನಿಕರ ಸಹಾಯದಿಂದ ಹೊರತೆಗೆದು ಹತ್ತಿರದ ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷಿಸಿದಾಗ ಪರೀಕ್ಷಿಸಿದ ವೈದ್ಯರು ವಿಶ್ವನಾಥ್ ರವರು ಈಗಾಗಲೇ ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ

Traffic North Police Station                                       

 ಪಿರ್ಯಾದಿ Vinodraj ದಾರರು ಈ ದಿನ ದಿನಾಂಕ 10.11.2023 ರಂದು ತಮ್ಮ ಕಂಪೆನಿಯಿಂದ ಕೆಲಸಕ್ಕೆ ಹೋಗಲು ನಿಯೋಜಿಸಿದ್ದ ಟೆಂಪೋ ಟ್ರಾವೆಲರ್ ವಾಹನ ನಂಬ್ರ KA-20A-1552 ರಲ್ಲಿ ಕೋಡಿಕೆರೆಯಿಂದ ಇತರರೊಂದಿಗೆ ಹೊರಟು ಕುಳಾಯಿ-ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ 66ನೇ ರಸ್ತೆಯಲ್ಲಿ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 05:45 ಗಂಟೆಗೆ ಬೈಕಂಪಾಡಿ ಜಂಕ್ಷನ್ ಬಳಿ ತಲುಪುತ್ತಿದ್ದಂತೆಯೇ ಟೆಂಪೋ ಟ್ರಾವೆಲರ್ ವಾಹನವನ್ನು ಅದರ ಚಾಲಕ ಕಿರಣ ಬಾಳಿಗ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಾಧವ ಮೆಡಿಕಲ್ ಕಡೆಯಿಂದ APMC ಕಡೆಗೆ ರಸ್ತೆ ದಾಟುತ್ತಾ ರಸ್ತೆಯ ಎಡಭಾಗಕ್ಕೆ ತಲುಪಿದ್ದ ಸಾವಿತ್ರಿ (40) ಎಂಬ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯು ಡಾಮಾರು ರಸ್ತೆಗೆ ಬಿದ್ದು ಅವರ ಬಲ ತೊಡೆಯಲ್ಲಿ ಮೂಳೆ ಮುರಿತದ ಗಾಯ, ತಲೆಗೆ ಮತ್ತು ಎದೆಯ ಭಾಗಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು ಗಾಯಾಳುವನ್ನು ಚಿಕಿತ್ಸೆಯ  ಬಗ್ಗೆ ಮುಕ್ಕ ಶ್ರೀನಿವಾಸ  ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 10-11-2023 07:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080