ಅಭಿಪ್ರಾಯ / ಸಲಹೆಗಳು

Crime Report in :   Mangalore East Traffic PS            

ಪಿರ್ಯಾದಿ SHAMAL KUMAR K.P ದಾರರು ನಿನ್ನೆ ದಿನಾಂಕ: 09-01-2023 ರಂದು ತನ್ನ ತಂದೆಯಾದ V.P. ನಾನು ಹಾಗೂ ತಾಯಿಯಾದ ಶ್ರೀಮತಿ. ವಸುಮತಿ K.P ರವರನ್ನು ತನ್ನ ಬಾಬ್ತು KL-58-R-5067 ನಂಬ್ರದ ಕಾರಿನಲ್ಲಿ ತನ್ನ ತಂದೆಗೆ ಕಾಲು ನೋವಿನ ಬಗ್ಗೆ ಚಿಕಿತ್ಸೆಗಾಗಿ ಮಂಗಳೂರಿನ KMC ಆಸ್ಪತ್ರೆಗೆ ಕರೆತಂದಿದ್ದು, ಬಳಿಕ ತನ್ನ ಮನೆಯಾದ ಕೇರಳ ಕಡೆಗೆ ಹೋಗುವ ಸಲುವಾಗಿ ನಂತೂರು ಜಂಕ್ಷನ್ ಮೂಲಕ ಪಂಪ್ ವೆಲ್ ಕಡೆಗೆ ಹೋಗುತ್ತಾ ರಾತ್ರಿ ಸುಮಾರು 7:30 ಗಂಟೆ ನಂತೂರು ಸಂದೇಶ್ ಸಮೀಪ ಇರುವ ಸ್ವಾಗತ್ ಗ್ಯಾರೇಜ್ ಬಳಿ NH 66ನೇ ಡಾಮಾರು ರಸ್ತೆಯಲ್ಲಿ TN-88-8455 ನಂಬ್ರದ ಗೂಡ್ಸ್ ಲಾರಿಯನ್ನು ಅದರ ಚಾಲಕನಾದ ಚಂದ್ರಕುಮಾರ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂದಿನ ಬಲಭಾಗಕ್ಕೆ ಢಿಕ್ಕಿಪಡಿಸಿದ ಪರಿಣಾಮ ಕಾರು ಮುಂದಕ್ಕೆ ಬಲಬದಿಗೆ ತಿರುಗಿದ್ದು, ಇದೇ ವೇಳೆ ಅಪಘಾತಪಡಿಸಿದ ಗೂಡ್ಸ್ ಲಾರಿಯು ಕಾರಿನ ಬಲಭಾಗಕ್ಕೆ ಪುನಃ ಢಿಕ್ಕಿಯಾಗಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರ ತಂದೆ ಮತ್ತು ತಾಯಿಯವರಿಗೆ  ಅಲ್ಲಲ್ಲಿ ಸಣ್ಣ ಪುಟ್ಟ ಗುದ್ದಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ KMC ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Mangalore South PS

ಪಿರ್ಯಾದಿ ಚಂದ್ರಶೆಕರ ಶೆಟ್ಟಿ  ರವರ ತಮ್ಮ ಸಂತೋಷ ಶೆಟ್ಟಿ [ಪ್ರಾಯ 42 ವರ್ಷ] ಎಂಬುವರು ಮಾನಸಿಕನಾಗಿ ಅಶ್ವಸ್ಥನಾಗಿದ್ದು ದಿನಾಂಕ 08-01-2024 ರಂದು  ಮಂಗಳೂರು ನಗರದ ವೆನ್ ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದ, ಸಮಯ 11-00 ಗಂಟೆಗೆ ಪಿರ್ಯಾದಿದಾರರ ತಮ್ಮ ಸಂತೋಷ ಶೆಟ್ಟಿ [ಪ್ರಾಯ 42 ವರ್ಷ ] ರವರು ಮನೆಯವರಿಗೆ ಹೇಳದೆ ಕೆಳದೆ ಆಸ್ಪತ್ರೆಯಿಂದ ತೆರಳಿರುತ್ತಾರೆ. ಆಸ್ಪತ್ರೆಯಿಂದ ತೆರಳಿದವರು ಮನೆಗೂ ಹೋಗದೇ  ಕಾಣೆಯಾಗಿರುತ್ತಾರೆ. ಪಿರ್ಯಾದಿದಾರರು ಅವರ ಬಗ್ಗೆ ಮಂಗಳೂರು ನಗರದ ಕೆಲವೊಂದು ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ, ನೆರೆಕೆರೆಯವರನ್ನು ಹಾಗೂ ಸಂಭಂಧಿಕರನ್ನು, ಪರಿಚಯದ ಸ್ನೇಹಿತರನ್ನು ವಿಚಾರಿಸಿದಲ್ಲಿ ಯಾವುದೇ ಮಾಹಿತಿ ಈ ತನಕ ದೊರೆತಿರುವುದಿಲ್ಲ, ಆದ್ದರಿಂದ ಕಾಣೆಯಾದ ಸಂತೋಷ ಶೆಟ್ಟಿ ರವರನ್ನು ಪತ್ತೆ ಮಾಡಿಕೊಡಬೇಕಾಗಿ. ಎಂಬಿತ್ಯಾದಿ.

Urva PS   

ದಿನಾಂಕ 10-01-2024  ಬೆಳಿಗ್ಗೆ  08-00  ಗಂಟೆಯಿಂದ ಹೊಯ್ಸಳ ಕರ್ತವ್ಯದಲ್ಲಿದ್ದ ಪಿಸಿ  ನೇ ನವೀನ್ ಮತ್ತು ಮಪಿಸಿ  ನೇ ಮಮತರವರಿಗೆ  ಬೆಳಿಗ್ಗೆ 11-00 ಗಂಟೆಗೆ ಠಾಣೆಯಿಂದ, ಕೋಡಿಕಲ್ ರಸ್ತೆಯ ಡೊಮಿನಿಕ್ ಚರ್ಚ ಬಳಿ ಗಲಾಟೆಯಾಗುತ್ತಿದೆ  ಕೂಡಲೇ ಸ್ಥಳಕ್ಕೆ ಹೋಗಿ ಎಂದು ಕರೆ ಮಾಡಿ ತಿಳಿಸಿದಂತೆ ಸದ್ರಿ ಸ್ಥಳಕ್ಕೆ ಹೊಯ್ಸಳ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು 11-20 ರ ವೇಳೆಗೆ ತಲುಪಿದಾಗ ಇಲ್ಲಿನ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ  ಕೆಎ19ಎಎ 2674 ನೇ ನಂಬ್ರದ ಆಟೋರಿಕ್ಷಾದ ಚಾಲಕ ಹಾಗೂ ಕೆಎ 19 ಇಎಸ್ 8036 ನೇ  ಬೈಕ್ ನ ಸವಾರ ಮತ್ತು ಸಹಸವಾರ ಒಬ್ಬರಿಗೊಬ್ಬರು ತಳ್ಳುತ್ತಾ ಜೋರಾಗಿ ಬೈಯುತ್ತಾ ಗಲಾಟೆ ಮಾಡಿ ಸಾರ್ವಜನಕರ ಶಾಂತಿಗೆ ಭಂಗವುಂಟು ಮಾಡುತ್ತಿದ್ದು, ಇದನ್ನು ಕಂಡ ಹೊಯ್ಸಳ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಅವರ ಜಗಳವನ್ನು ಬಿಡಿಸಿ, ಸಮಾದಾನ ಪಡಿಸಿ ಠಾಣೆಗೆ ಬರುವಂತೆ ತಿಳಿಸಿದಾಗ ಸಮಾದಾನಗೊಳ್ಳದೇ ಮಾತಿಗೆ ಮಾತು ಪುನಃ ಜಗಳ ಬೆಳೆಸಿಕೊಂಡು ಹೊಡೆದಾಡಿಕೊಂಡಿದ್ದು, ಆದ್ದರಿಂದ  ಇವರುಗಳು ಸಾರ್ವಜನಿಕರ ಶಾಂತಿಗೆ ಭಂಗವನ್ನುಂಟು ಮಾಡುತ್ತಿರುವುದರಿಂದ ಇವರಗಳ ಹೆಸರು ವಿಳಾಸ ವಿಚಾರಿಸಿದಾಗ ಆಟೋರಿಕ್ಷಾದ ಚಾಲಕ  ಅಶ್ರಫ್, ಪ್ರಾಯ: 32 ವರ್ಷ, ತಂದೆ: ಮಹಮ್ಮದ್, ವಾಸ: ಬಾಪೂಜಿನಗರ, ಸೀತಾರಾಮ ಕಂಪೌಂಡ್, ಅಶೋಕನಗರ, ಮಂಗಳೂರು, ಬೈಕ್ ನ ಸವಾರ ರವಿರಾಜ್, ಪ್ರಾಯ:29 ವರ್ಷ, ತಂದೆ: ಭಾಸ್ಕರ್, ವಾಸ: ಬಾಪೂಜಿನಗರ,  ಅಂಗನವಾಡಿ ಹತ್ತಿರ, ಅಶೋಕನಗರ, ಮಂಗಳೂರು, ಹಾಗೂ ಬೈಕ ನ ಸಹಸವಾರ ಚಂದ್ರಶೇಖರ್, ಪ್ರಾಯ: 34 ವರ್ಷ, ತಂದೆ: ಭಾಸ್ಕರ್, ವಾಸ: ಜಾನಕಿ ಕಂಪೌಂಡ್, ಅಂಗನವಾಡಿ ಹತ್ತಿರ, ಬಾಬೂಜಿನಗರ, ಅಶೋಕನಗರ ಮಂಗಳೂರು ಎಂಬುದಾಗಿ ತಿಳಿಸಿದ್ದು, ಸದ್ರಿಯವರುಗಳು ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು, ಸಾರ್ವಜನಿಕ ಶಾಂತಿ ಕದಡುವಂತೆ ಮಾಡಿರುವುದರಿಂದ ಈ ಮೂರು ಜನರ ಮೇಲೆ ಮುಂದಿನ ಕಾನೂನು ಕ್ರಮದ ಬಗ್ಗೆ ಪಿಸಿ-2385 ನೇ ನವೀನ್ ರವರು ವರದಿ ನೀಡಿರುವುದಾಗಿದೆ ಎಂಬಿತ್ಯಾದಿ.

Moodabidre PS

ಪಿರ್ಯಾದಿ Prahalladha Nayaka N ದಾರರು ಬಂಟ್ವಾಳ ಉಪ ವಿಭಾಗದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಆರೋಪಿ ಅಶೋಕ  ಎಂಬಾತನು ದಿನಾಂಕ 06-09-2010 ರಿಂದ ದಿನಾಂಕ 19-06-2021 ರ ವರೆಗೆ ಕಡಂದಲೆ ಶಾಖಾ ಅಂಚೆ ಕಛೇರಿಯಲ್ಲಿ ಅಂಚೆ ಪಾಲಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಆರೋಪಿಯು ಕರ್ತವ್ಯ ನಿರ್ವಸುತ್ತಿರುವ ಮೇಲ್ಕಂಡ ಅವಧಿಯಲ್ಲಿ 22 ಗ್ರಾಹಕರ 25 ಉಳಿತಾಯ ಖಾತೆ ಹಾಗೂ 4 ಗ್ರಾಹಕರ 6 ವಿಮಾ ಪಾಲಿಸಿಗಳಲ್ಲಿ ಜಮಾ ಮಾಡಲು ನೀಡಿದ ಹಣವನ್ನು ಪಡೆದುಕೊಂಡು ಸಂಬಂಧಪಟ್ಟ ಖಾತೆದಾರರ ಪಾಸ್ ಪುಸ್ತಕಗಳಲ್ಲಿ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ ಪುಸ್ತಕದಲ್ಲಿ ನಮೂದಿಸಿ ಆತನು ಪಡೆದುಕೊಂಡ ಹಣದ ವಿವರಗಳನ್ನು ಇಲಾಖೆಯ ದಾಖಲೆಗಳಲ್ಲಿ ನಮೂದಿಸದೆ, ಹಣವನ್ನು ಅಂಚೆ ಇಲಾಖೆಯ ಲೆಕ್ಕಕ್ಕೆ ಜಮಾ ಮಾಡದೆ ತನ್ನ ಸ್ವಂತ ಉಪಯೋಗಕ್ಕೆ ಬಳಸಿ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ. 

Ullal PS

ದಿನಾಂಕ:10-01-2024 ರಂದು ಉಳ್ಳಾಲ ತಾಲೂಕು ಕೋಟೆಕಾರ್ ಗ್ರಾಮದ ಕೆ.ಸಿ. ರೋಡ್ ಜಂಕ್ಷನ್ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒರ್ವ ಯುವಕನು ಯಾವುದೋ ಮಾದಕ ವಸ್ತು ವನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬ ಮಾಹಿತಿಯ ಮೇರೆಗೆ ಸ್ಥಳಕ್ಕೆ ಹೋಗಿ ನೋಡಿದಾಗ ಒರ್ವ ವ್ಯಕ್ತಿಯು ಯಾವುದೋ ಮಾದಕ ವಸ್ತು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ನಶೆಯಲ್ಲಿ ತೂರಾಡಿಕೊಂಡಿದ್ದ ವನನ್ನು ಮಧ್ಯಾಹ್ನ ಸುಮಾರು 2-00 ಗಂಟೆಗೆ ವಶಕ್ಕೆ ತೆಗೆದು ಕೊಂಡು ವಿಚಾರಿಸಿಕೊಂಡಲ್ಲಿ ತನ್ನ ಹೆಸರು ಸಾಹುಲ್ ಹಮೀದ್, ಪ್ರಾಯ: 22 ವರ್ಷ, ವಾಸ: ಪಲಹ ಶಾಲೆಯ ಬಳಿ, ಹೊಸನಗರ, ಕೆ.ಸಿ. ರೋಡ್, ಕೋಟೆಕಾರ್ ಗ್ರಾಮ, ಮಂಗಳೂರು ಎಂಬುದಾಗಿ ತಿಳಿಸಿದ್ದು, ಆತನು ತಾನು ನಿಷೇದಿತ ಮಾದಕ ವಸ್ತು  ಸೇವನೆ ಮಾಡಿಕೊಂಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನಂತರ ಆತ ನನ್ನು ಮಂಗಳೂರಿನ ದೇರಳಕಟ್ಟೆ, ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕೋರಿಕೆ ಪತ್ರದೊಂದಿಗೆ ವೈದ್ಯಕೀಯ ತಪಾಸಣೆಗೊಳಪಡಿಸಿದಂತೆ ಸಾಹುಲ್ ಹಮೀದ್ ನು ನಿಷೇ ದಿತ ಮಾದಕ ವಸ್ತು ‘AMPHETAMINES’ ಸೇವನೆ ಮಾಡಿರುವುದಾಗಿ ವೈದ್ಯಕೀಯ ದೃಢಪತ್ರ ನೀಡಿದ್ದು, ಸಾಹುಲ್ ಹಮೀದ್ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Ullal PS

ದಿನಾಂಕ: 09-01-2024 ರಂದು ಸಾಯಂಕಾಲ ಸುಮಾರು 6:30 ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕಿನ ಕೋಟೆಕಾರು ಗ್ರಾಮದ ದೇರಳಕಟ್ಟೆ ಎಂಬಲ್ಲಿರುವ ಖಾಸಗೀ ಮೆಡಿಕಲ್ ಕಾಲೇಜಿನ ಹಿಂಬದಿಯಲ್ಲಿಗೆ ಮಡಿಕಲ್ ಕಾಲೇಜಿನ ವಿಧ್ಯಾರ್ಥಿ ಆರೋಪಿ  ಯಾಪೀಝ್ ಎಂಬಾತನು ಫಿರ್ಯಾದಿದಾರರಲ್ಲಿ ಮಾತನಾಡಲು ಇರುವುದಾಗಿ ಪೋನಿನಲ್ಲಿ ತಿಳಿಸಿ ಬರಮಾಡಿಸಿಕೊಂಡು ಅಲ್ಲಿ 21 ಬ್ಯಾಚಿನ ವಿಧ್ಯಾರ್ಥಿಗಳು ಗುಂಪಾಗಿ ನಿಂತುಕೊಂಡಿದ್ದು ಅವರಲ್ಲಿ ಆರೋಪಿಗಳಾದ ಶಹನಾದ್, ಮೊಹಮ್ಮದ್ ಯಾಪೀಝ್ , ಹಾಸೀಮ್ , ಮೊಹಮ್ಮದ್ ನಾಪೀಲ್,ಮತ್ತು  ಮುನ್ನ ಜಾಸೀಮ್, ಎಂಬವರುಗಳು ಇದ್ದು ಆರೋಪಿ ಮೊಹಮ್ಮದ್ ಯಾಫೀಝನು ವಾಸೀಲ್ ನಿಗೆ ಬೆದರಿಕೆಯನ್ನು ಹಾಕಿ ನಿಹಾಲ್ ಗೆ ಮತ್ತು ವಾಸೀಲ್ ಗೆ ಕೈಯಿಂದ ಹಲ್ಲೆಯನ್ನು ಮಾಡಿದ್ದಲ್ಲದೇ , ಫಿರ್ಯಾದಿದಾರರು  ಅವರಲ್ಲಿ ಮಾತನಾಡುವ ಮೊದಲೇ ಸದ್ರಿ ಆರೋಪಿಗಳು  ಫಿರ್ಯಾದಿದಾರರಿಗೆ ಬೆದರಿಕೆಯನ್ನು ಹಾಕಿ   ಕೈಯಿಂದ ಥಳಿಸಿ ಕಾಲಿನಿಂದ ತುಳಿದ, ಪರಿಣಾಮ ಫಿರ್ಯಾದಿದಾರರ ಕುತ್ತಿಗೆ, ಮುಖ, ಬಲಕಾಲಿಗೆ, ಗುದ್ದಿನ ನೋವಾಗಿದ್ದು, ಈ ಬಗ್ಗೆ ಕನಚೂರು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯನ್ನು ಪಡೆದಿರುವುದಾಗಿ. ಎಂಬಿತ್ಯಾದಿ

Mangalore South PS

ಪಿರ್ಯಾದಿದಾರರಾದ ಡಾ|| ಶೆರಿಲ್ ಗ್ರೇಸ್ ಕೊಲಾಸೊ ರವರು ಮೋರ್ಗಾನ್ಸ್ ಗೇಟ್ ಪ್ರದೇಶದ ನಿವಾಸಿಯಾಗಿದ್ದು. ಪಿರ್ಯಾದಿದಾರರು ಹಲವಾರು ವರ್ಷಗಳಿಂದ ನೇತ್ರಾವತಿ ಸೇತುವೆ ಪ್ರದೇಶಕ್ಕೆ ಎಂಎಸ್ಸಿಎಲ್ ಯೋಜನೆ ಪ್ರಾರಂಭವಾಗುವ ಮೊದಲು ಭೇಟಿ ನೀಡುತ್ತಿದ್ದು, MSCL  ಮತ್ತು ಅದರ ಗುತ್ತಿಗೆದಾರ SKS ಕಾರ್ಕಳ ಮತ್ತು TL ರಾಜೇಂದ್ರನ್ ಸಂಸ್ಥೆಯಿಂದ ಸ್ಥಳದಲ್ಲಿ ಸಂಭವಿಸುವ ನದಿ ಅತಿಕ್ರಮಣ ಮತ್ತು ಪರಿಸರ ಉಲ್ಲಂಘನೆಯ ನಿದರ್ಶನಗಳನ್ನು ದಾಖಲಿಸಲು ಪಿರ್ಯಾದಿದಾರರು ಯೋಜನೆಯ ಸ್ಥಳಕ್ಕ ಭೇಟಿ ನೀಡುತ್ತಿದ್ದರು. ದಿನಾಂಕ: 09-01-2024 ರಂದು ಮಾರ್ಗನ್ಸ್ ಗೇಟ್ ಬಳಿಯ ನೇತ್ರಾವತಿ ರೈಲ್ವೆ ಸೇತುವೆ ಬಳಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂಎಸ್ಸಿಎಲ್) ಪ್ರಸ್ತುತ ನೇತ್ರಾವತಿ ವಾಟರ್ಫ್ರಂಟ್ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದು, ಪಿರ್ಯಾದಿದಾರರು ಸಂಜೆ ಸ್ಥಳಕ್ಕೆ ಬೇಟಿ ನೀಡಿದಾಗ ಸಮಯ ಸುಮಾರು 6:30 ಗಂಟೆಗೆ ಅಪರಿಚಿತ ಕೆಲಸಗಾರ ಒಬ್ಬನು ಪಿರ್ಯಾದಿದಾರರ ಬಾವಚಿತ್ರವನ್ನು ಚಿತ್ರಿಸಿ ಪಿರ್ಯಾದಿದಾರರನ್ನು ಹಿಂಬಾಲಿಸಲು ಪ್ರಾರಂಭಿಸಿ. ಉಳಿದ ಕೆಲಸಗಾರರು ಪಿರ್ಯಾದಿದಾರರನ್ನು ನೋಡುತ್ತಿರುವುದನ್ನು ಮತ್ತು ತಮ್ಮತಮ್ಮಲ್ಲೇ ಪಿಸುಗುಟ್ಟುವುದನ್ನು ಪಿರ್ಯಾದಿದಾರರು ಗಮನಿಸಿ ವೀಡಿಯೋಗ್ರಾಫಿಂಗ್ ಮತ್ತು ಫೋಟೋಗ್ರಾಫಿಂಗ್ ಮಾಡುತ್ತಿದ್ದ ಕೆಲಸಗಾರನನ್ನು ಪ್ರಶ್ನಿಸಿದಾಗ, ಅಲ್ಲಿದ್ದ ಪಿರ್ಯಾದಿದಾರರಿಗೆ ನೀವೂ ಬೇಕಾದರೇ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ಎಂಬುದಾಗಿ ಹೇಳಿರುತ್ತಾರೆ.ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 11-01-2024 05:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080