ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic South Police Station

ಫಿರ್ಯಾದಿದಾರರಾದ ರಾಮ ಪೂಜಾರಿ ಎಂಬವರ ಮಗನಾದ ಚರಣ್ ರಾಜ್ ( 34 ವರ್ಷ) ಎಂಬಾತನು ಈ ದಿನ ದಿನಾಂಕ 11-02-2024 ರಂದು ಬೆಳಿಗ್ಗೆ ಸುಮಾರು 08.40 ಗಂಟೆಯ ಸುಮಾರಿಗೆ ಆಡ್ಯಾರ್ ಕಡೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ, KA-19ES 8926ನೇ ನಂಬ್ರದ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಮನೆಯಿಂದ ಬಂದವನು  ಮೇರ ಮಜಲು ಕಡೆಯಿಂದಾಗಿ ಅರ್ಕುಳ ದ್ವಾರದ ಬಳಿ ಆಡ್ಯಾರ್ ಕಡೆಗೆ ಹೋಗುವರೇ ಮೋಟಾರ್ ಸೈಕಲ್ ನ್ನು ರಾ. ಹೆದ್ದಾರಿ 73 ನ್ನು ಕ್ರಾಸಿಂಗ್ ಮಾಡುತ್ತಿರುವಾಗ, ಬೆಳಿಗ್ಗೆ  ಮಂಗಳೂರು ಕಡೆಯಿಂದ KA-21-F-0127 ನೇ ನಂಬ್ರದ ಕೆ.ಎಸ್. ಆರ್.ಟಿ.ಸಿ. ಬಸ್ಸನ್ನು ಅದರ ಚಾಲಕನಾದ ಸಂದೀಪ್ ರಾಮಚಂದ್ರ ನಾಯ್ಕ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಮುಂದಿನ ಎಡಭಾಗವನ್ನು   ಮೋಟಾರ್ ಸೈಕಲ್ ನ  ಬಲಭಾಗದ ಮಧ್ಯಕ್ಕೆ ಡಿಕ್ಕಿ ಹೊಡೆದಿರುವುದರಿಂದ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಚರಣ್ ರಾಜ್ ರವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು, ತಲೆಗೆ, ಬಲಕೈ, ಕಾಲಿಗೆ ಹಾಗೂ ದೇಹದ ಇತರ ಕಡೆಗೆ ಗಂಭೀರ ಗಾಯವಾದವರನ್ನು ಅಲ್ಲಿ  ಸೇರಿದ  ಜನರು ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರ ಮುಂದೆ ಹಾಜರುಪಡಿಸಿದಾಗ ವೈದ್ಯರು ಬೆಳಿಗ್ಗೆ 10.00 ಗಂಟೆಗೆ ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ ಎಂಬಿತ್ಯಾದಿ.

 

Mangalore North PS

ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ GANGA KUMAR ಇವರು ಕೋರ್ಟ್ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ 08.02.2024  ರಂದು 19.00 ಗಂಟೆಗೆ ತನ್ನ ಗೆಳೆಯನಾದ ಶ್ರವಣ್ ಕುಮಾರ್ ಪ್ರಾಯ:19 ವರ್ಷ ಇವರು ತಮ್ಮ ಸ್ನೇಹಿತರಾದ ದಿಲ್ ಕುಶ್ ಕುಮಾರ್ ಮತ್ತು ಕಿಶನ್ ಕುಮಾರ್ ರವರ ಒಟ್ಟಿಗೆ ಮದ್ಯಪಾನ ಮಾಡಲು  ಕೆ .ಎಸ್. ರಾವ್ ರೋಡ್ ನಲ್ಲಿರುವ ಆಶಿರ್ವಾದ್ ಬಾರ್ ಗೆ  ಹೋದವನು ಈ ವರೆಗೂ ತಾನು ಕೆಲಸ ಮಾಡುವ ಕೋರ್ಟ್ ಕ್ಯಾಂಟೀನ್ ಗೆ ಬಂದಿರುವುದಿಲ್ಲ ಹಾಗೂ ಸ್ವಂತ ಊರಾದ ಬಿಹಾರ ರಾಜ್ಯದ ಮಾನ್ ಪುರ್ ಗ್ರಾಮಕ್ಕೂ ಹೋಗಿರುವುದಿಲ್ಲ,  ಪಿರ್ಯಾದಿದಾರರು ಹಲವು ಬಾರಿ ಪೋನ್ ಮಾಡಿದಾಗ ಕರೆ  ಸ್ವೀಕರಿಸಿರುವುದಿಲ್ಲ ನಂತರ ದಿನಾಂಕ 09.02.2024 ರಂದು  ಅವರ ಮೊಬೈಲ್ ಪೋನ್ ಸ್ವಿಚ್ ಆಫ್ ಆಗಿರುತ್ತದೆ. ನಂತರ ಪಿರ್ಯಾದಿದಾರರು ಕೂಡಲೇ ಸುತ್ತ ಮುತ್ತಲಿನ ಪರಿಸರದಲ್ಲಿ ಹುಡುಕಾಡಿದಲ್ಲಿ ಮತ್ತು ತಮ್ಮ ಸಂಬಂಧಿಕರ ಮನೆಗೆ ಮೊಬೈಲ್ ಕರೆ ಮಾಡಿ  ಕೇಳಲಾಗಿ ಅವರು ಇಲ್ಲಿ ಬರಲಿಲ್ಲವೆಂದು ತಿಳಿಸಿರುತ್ತಾರೆ.ಅವರನ್ನು ಇಲ್ಲಿಯವರೆಗೂ ಹುಡುಕಾಡಿ ಪತ್ತೆಯಾಗಿರುವುದಿಲ್ಲವಾಗಿ ಪಿರ್ಯಾದಿದಾರರು ತಡವಾಗಿ ದೂರು ನೀಡುತ್ತಿದ್ದು ,ಕಾಣೆಯಾದ ತನ್ನ ಸ್ನೇಹಿತ ಶ್ರವಣ್ ಕುಮಾರ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ ದೂರಿನ ಸಾರಾಂಶ

ಕಾಣೆಯಾದ ಶ್ರವಣ್ ಕುಮಾರ್ ರವರ ಚಹರೆ ವಿವರಗಳು

ಹೆಸರುಃ ಶ್ರವಣ್ ಕುಮಾರ್,ಪ್ರಾಯಃ19 ವರ್ಷ ,ತಂದೆ:ಉಪೇಂದ್ರ 

ಎತ್ತರಃ5.5 ಇಂಚು,ಸಾಧಾರಣ ಶರೀರ 

 ಭಾಷೆಃಹಿಂದಿ  , ಮೈಥೇಯಿ ಮಾತನಾಡುತ್ತಾರೆ.

ಉಡುಪು : ಪಿಂಕ್ ಬಣ್ಣದ  ಉದ್ದ ತೋಳಿನ  ಟೀ ಶರ್ಟ್ ,ಬ್ಲಾಕ್ ಕಲರ್ ¾ th ಜೀನ್ಸ್ ಪ್ಯಾಂಟ್

 

Traffic North Police Station   

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 09-02-2024 ರಂದು ಪಿರ್ಯಾದಿ Shailesh ಇವರ ಅಣ್ಣ ಪ್ರಕಾಶ್ ನು ತನ್ನ ಬಾಬ್ತು KA-19-EV-0991 ನಂಬ್ರದ ಮೋಟಾರ್ ಸೈಕಲಿನಲ್ಲಿ ನಂದಿಕೂರು ದೇವಸ್ಥಾನಕ್ಕೆ ಹೋಗುತ್ತಿದ್ದ ಸಮಯ ಬೆಳಿಗ್ಗೆ 08:30 ಗಂಟೆಗೆ ಶಾಂಭವಿ ಬ್ರಿಡ್ಹ್ ಕೆಳಗೆ ಕೆರ್ನೆರೆ ಬಸ್ಸು ನಿಲ್ದಾಣದ ಬಳಿ ತಲುಪಿದಾಗ ಎದುರಿನಿಂದ ಅಂದರೆ ಪಾಲಿಮಾರ್ ಕಡೆಯಿಂದ ಮುಲ್ಕಿ ಕಡೆಗೆ KA-20-EJ-8984 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಮನೀಶ್ ಕುಮಾರ್  ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲಿನ ಪೆಟ್ರೋಲ್ ಟ್ಯಾಂಕ್ ಪ್ರಕಾಶ ರವರ ಮರ್ಮಾಂಗಕ್ಕೆ ತಾಗಿ ಗುದ್ದಿದ ರೀತಿಯ ಗಾಯವಾಗಿದ್ದು, ಅಲ್ಲದೆ ಅಪಘಾತ ಪಡಿಸಿದ ಮೊಟಾರ್ ಸೈಕಲ್ ಸವಾರ ಮನೀಶ್ ಕುಮಾರ್ ರವರ ಕಾಲಿಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ. ನಂತರ ಪಿರ್ಯಾದಿದಾರರ ಅಣ್ಣನನ್ನು ಉಡುಪಿ ನ್ಯೂಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

 

Traffic North Police Station            

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 11-02-2024 ರಂದು ಪಿರ್ಯಾದಿ Smt Savitha Poojary ಇವರ ಗಂಡ ಸುನೀಲ್ ರವರು KA-19-HK-8914 ನಂಬ್ರದ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ದಾಮಸಕಟ್ಟೆಗೆ ಕೆಲಸದ ಸಾಮಾಗ್ರಿಗಳನ್ನು ತರಲು ಹೋದವರು ವಾಪಾಸು ಕಟೀಲು ಕಡೆಗೆ ಬರುತ್ತಿದ್ದ ಸಮಯ ಬೆಳಿಗ್ಗೆ 10:00 ಗಂಟೆಗೆ ಸ್ಕೂಟರಿನ ಹಿಂದಿನಿಂದ, KA-20-D-6313 ನಂಬ್ರದ ಕಾರನ್ನು ಅದರ ಚಾಲಕ ಶೇಕ್ ಇರ್ಫಾನ್ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡನವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಗಂಡ ಸುನೀಲ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಅವರ ತಲೆಯ ಹಿಂಭಾಗ ರಕ್ತಗಾಯವಾಗಿದ್ದು, ಬೆನ್ನೆಗೆ, ಎಡ ಕೈಗೆ ತರಚಿದ ರೀತಿಯ ರಕ್ತಗಾಯವಾಗಿರುತ್ತದೆ ನಂತರ ಪಿರ್ಯಾದಿದಾರರ ಗಂಡ ಸುನೀಲ್ ರವರು ಕಾನ್ಸೆಟ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಹೋಗಿರುತ್ತಾರೆ ಎಂಬಿತ್ಯಾದಿ

 

Kavoor PS   

ಈ ಪ್ರಕರಣದ ಸಾರಾಂಶವೇನೆಂದರೆ,  ಪಿರ್ಯಾದಿ NARASAVVA ಇವರ ಮಗಳಾದ ಲಕ್ಷ್ಮಿ ಯಾನೆ ಸುಸ್ಮಾ(27 ವರ್ಷ) ಗಂಡ : ಬಸವರಾಜ   ದಂಬೆಲ್ ಅಶೋಕ ನಗರ ಬಂಗ್ರ ಕೂಳೂರು ಇದ್ದು  ದಿನಾಂಕ 10/02/2024  ರಂದು ಬೆಳಿಗ್ಗೆ 11:00 ಗಂಟೆಗೆ ಮನೆಗೆ ಬೇಕಾದ ಸಾಮಾಗ್ರಿಗಳನ್ನು ತರಲೆಂದು ಹೋದವರು ಮರಳಿ ಮನೆಗೆ ಬಾರದೇ ಇದ್ದು ಪಿರ್ಯಾದಿದಾರರು ನೆರೆಕೆರೆಯವರಲ್ಲಿ  ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಗಿ ಎಲ್ಲಿಯೂ ಕೂಡಾ ಸಿಗದೇ ಇದ್ದು,  ಈ ಬಗ್ಗೆ ಪಿರ್ಯಾದಿದಾರರು ಈ ದಿನ ದಿನಾಂಕ-11-02-2024 ರಂದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

ಕಾಣಿಯಾದವರ ಚಹರೆ:

ಹೆಸರು: ಲಕ್ಷ್ಮಿ ಯಾನೆ ಸುಷ್ಮಾ (27 ವರ್ಷ)

ಎತ್ತರ: 5.5ಅಡಿ, ಸಪೂರ ಶರೀರ ,ಗೋಲು ಮುಖ ಬಿಳಿ ಮೈಬಣ್ಣ ಇರುತ್ತದೆ.

ಧರಿಸಿದ ಬಟ್ಟೆ: ಗುಲಾಬಿ ಬಣ್ಣದ ಟಾಪ್ ಹಾಗೂ ಕೆಂಪು ಬಣ್ಣದ ಪ್ಯಾಂಟ ಧರಿಸಿರುತ್ತಾರೆ.

ಮಾತಾನಾಡುವ ಭಾಷೆ: ತುಳು ,ಕನ್ನಡ,ಹಿಂದಿ

ವಿದ್ಯಾಬ್ಯಾಸ : 5 ನೇ ತರಗತಿ

 

Mangalore South PS

ಈ ಪ್ರಕರಣದ ಸಾರಾಂಶವೆನೆಂದರೆ ದಿನಾಂಕ: 10-02-2024 ರಂದು ಪಿರ್ಯಾದಿ SHEENAPPA ಸಿಬ್ಬಂದಿಯೊಂದಿಗೆ ಮಂಗಳೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ಪೋರಂ ಫಿಜಾ ನೆಕ್ಸಲ್ ಮಾಲ್ ನ ಬಳಿ 3 ಜನ ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿದಂತೆ ಬಾಯಿಯಿಂದ ವಾಸನೆ ಬರುತ್ತಿದ್ದ  ಸದ್ರಿ 1). ಮಿಶಾಲ್ ಪ್ರಾಯ: 32 ವರ್ಷ,  ವಾಸ: ಕೋಡಿಯಾಲ್ ಗುತ್ತು ವೆಸ್ಟ್ ಕೋಡಿಯಾಲ್ ಬೈಲ್, ಮಂಗಳೂರು. 2) ಸೃಜನ್ ಪ್ರಾಯ: 19 ವರ್ಷ ವಾಸ: ಜಪ್ಪು ಕುಡಪ್ಪಾಡಿ, ಮಸೀದಿ ಹತ್ತಿರ, ಡಾಮಾರ್ ಕೆರೆ ರಸ್ತೆ, ಜೆಪ್ಪು, ಮಂಗಳೂರು ಹಾಗೂ 3) ಶಮಿತ್ ಜಿ ಶೆಟ್ಟಿ ಪ್ರಾಯ; 20 ವಾಸ: ರೋಚ್ ಲೈನ್, ಮಂಗಳಾದೇವಿ ಟೆಂಪಲ್ ರೋಡ್, ಮಂಗಳೂರು ಈ ಮೂರು ಜನರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಲ್ಲಿ ಅವರು ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಡಪಟ್ಟಿರುತ್ತದೆ. ಆರೋಪಿತ 3 ಜನರ ವಿರುದ್ದ ಕಲಂ 27 (B) NDPS ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಳ್ಳಲು ವರದಿಯೊಂದಿಗೆ ಹಾಜರುಪಡಿಸಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

 

Panambur PS

ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ ZABEENA ಇವರು  ಅವರ ಕುಟುಂಬ ಸಮೇತರಾಗಿ ವ್ಯಾನನಲ್ಲಿ ಪ್ರವಾಸಕ್ಕಾಗಿ ಮಂಗಳೂರಿಗೆ ಬಂದಿರುತ್ತಾರೆ. ಪಣಂಬೂರು ಬೀಚ್ ಗೆ ತಲುಪಿ ಕುಟುಂಬದವರೆಲ್ಲರೂ ಕಡಲ ತೀರದ ನೀರಿನಲ್ಲಿ ಆಟವಾಡುತ್ತಿರುವಾಗ ಸಮಯ ಮಧ್ಯಾಹ್ನ ಮೋಟರ್ ಬೋಟೊಂದರಲ್ಲಿ ನಾಲ್ಕು ಜನರನ್ನು ಕುರಿಸಿಕೊಂಡು ಆದರ ಚಾಲಕ ವೇಗವಾಗಿ ನೀರಿನಲ್ಲಿ ರೈಡ್ ಮಾಡಿಕೊಂಡು ಬಂದು ಅಲ್ಲೇ ಇದ್ದ ನನಗೆ ಡಿಕ್ಕಿ ಮಾಡಿರುತ್ತಾನೆ. ಆಗ ಪಿರ್ಯಾದಿಯು ಕೇಳಗೆ ಬಿದ್ದಿದ್ದು. ಇದರ ಪರಿಣಮ ಪಿರ್ಯಾದಿಯ ತಲೆಗೆ ಗುದ್ದಿದ ತರದ ಸಧಾರಣ ಗಾಯವಾಗಿರುತ್ತೆ. ಪಿರ್ಯಾದಿದಾರರ ಮಗ ಮತ್ತು ಅಳಿಯ ರಕ್ಷಿಸಿ ದಡಕ್ಕೆ ತಂದು ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಫತ್ರೆಗೆ ಹೋಗಿ ಚಿಕಿತ್ಸೆಪಡೆದುದ್ದಾಗಿರುತ್ತದೆ. ಪಣಂಬೂರು ಬೀಚ್ ನಲ್ಲಿ ಮೋಟರ್ ರೈಡಿಂಗ್ ಬೋಟುಗಳನ್ನು ಪ್ರವಾಸಿಗರು ಬೀಚ್ ನೀರಿನಲ್ಲಿ ಆಟವಾಡುವ ಸ್ಥಳದಲ್ಲಿ ಅಸುರಕ್ಷತೆ ರೀತಿಯಲ್ಲಿ ಚಾಲಯಿಸಿದ ಚಾಲಕ, ಕದಳಿ ಬೀಚ್ ಟ್ಯೂರಿಸಮ್ ಬೀಟ್ ನಿರ್ವಹಣೆಯ ಮುಖ್ಯಸ್ಥರು ಹಾಗೂ ಸುಪರ್ ವೈಸರ್ ಗಳ ನಿರ್ಲಕ್ಷತನವೇ ಈ ಅಪಘಾತಕ್ಕೆ ಕಾರಣವಾಗಿರುತ್ತದೆ, ಎಂಬಿತ್ಯಾದಿ

Ullal PS

ಈ ಪ್ರಕರಣದ ಸಾರಂಶವೆನೆಂದರೆ ಪಿರ್ಯದಿ Sudheer Upadhyay ಇವರು ಉಳ್ಳಾಲ ವಿಧ್ಯಾರಣ್ಯ ನಗರ ಭಗವರತಿ ದೇವಸ್ಥಾನದ ಬಳಿಯಲ್ಲಿ ಮನೆಯಲ್ಲಿಯೇ ಚೈತ್ರಾ ಕ್ಲಿನಿಕ್ ನ್ನು ನಡೆಸಿಕೊಂಡು ಬರುತ್ತಿದ್ದು ದಿನಾಂಕ 10.02.2024 ರಂದು ಕ್ಲಿನಿಕಿಗೆ ರಜೆ ಹಾಕಿ ಮಗಳ ಮನೆಯಾದ ಮಂಗಳೂರು ಕೆ ಪಿಟಿ ಗೆ ಹೋಗಿದ್ದು ರಾತ್ರಿ ಕಾರ್ಯಕ್ರಮ ಇದ್ದುದ್ದರಿಂದ ಅಲ್ಲಿಯಾ ಉಳಿದುಕೊಂಡಿದ್ದು ಬೆಳಿಗ್ಗೆ  11.02.2024 ರಂದು ಮನೆಗೆ ಬಂದು ನೊಡಿದಾಗ ಯಾರೋ ಕಳ್ಳರು ಮನೆಯ ಬಾಗಿಲ ಲಾಕ್ ನ್ನು ಒಡೆದು ಒಳ ಪ್ರವೇಶಿಸಿ ಒಂದು ಚಿನ್ನದ ನೆಕ್ಲೇಸ್,ಕಿವಿ ಒಲೆ,ವಾಟಿ ಚಿನ್ನದ ಬಟನ್,ಅಮೇರಿಕಾ ಡೈಮೆಂಡ್ ಪೆಂಡೆಟ್ ಗಾರ್ನೆಟ್ ಸೆಟ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾದ ಚಿನ್ನಾಭರಣ ಸುಮಾರು 80 ಗ್ರಾಮ ಆಗಿದ್ದು ಅದರ ಅಂದಾಜು  ಮೌಲ್ಯ 80.0000 ಆಗಬಹುದು ಎಂಬಿತ್ಯಾದಿ

 

Surathkal PS    

ಈ ದಿನ ದಿನಾಂಕ 11-02-2024 ರಂದು ಸಂಜೆ 5.30 ಗಂಟೆ ಸುಮಾರಿಗೆ ಕಾಟಿಪಳ್ಳ ಗ್ರಾಮದ 5ನೇ ಬ್ಲಾಕ್ ನಲ್ಲಿರುವ ಕಮರಡಿ ಎನ್ಲ್ಕೇವ್ ಎಂಬ ಹೆಸರಿನ ವಸತಿ ಸಮುಚ್ಚಯದ ನೆಲ ಮಹಡಿಯಿಂದ  ಲಿಪ್ಟ್ ನಲ್ಲಿ 3ನೇ ಮಹಡಿಗೆ ಹೋಗಲು ಪಿರ್ಯಾದಿದಾ Hammabba Badavide ಇವರು ಮತ್ತು  ಅವರ ಪತ್ನಿ ಶ್ರೀಮತಿ ಜುಬೈದಾ  ಲಿಪ್ಟಿನ ಒಳಗೆ ಹೋಗಿ ಲಿಪ್ಟಿನ ಬಟನ್ ನ್ನು ಒತ್ತಿದಾಗ ಸದ್ರಿ ಲಿಪ್ಟ್ ನಲ್ಲಿದ್ದ ಆರೋಪಿ ಮೊಹಮ್ಮದ್ ಶರೀಪ್ ನು ಪಿರ್ಯಾದಿದಾರರನ್ನು ಕೈಯಿಂದ ದೂಡಿ ಹಾಕಿ, ಮುಷ್ಠಿ ಹಿಡಿದು ಎರಡರಿಂದ ಮೂರು ಬಾರಿ ಪಿರ್ಯಾದಿದಾರರ ಬಾಯಿಗೆ ಗುದ್ದಿ, ಬಳಿಕ ಪಿರ್ಯಾದಿದಾರರ ಮೂಗಿಗೆ, ಎಡಗಣ್ಣಿನ ಮೇಲುಗಡೆ ಹಾಗೂ ಕೆಳಗಡೆ ಮುಷ್ಠಿ ಹಿಡಿದು ಗುದ್ದಿದ ಪರಿಣಾಮ ಪಿರ್ಯಾದಿದಾರರ ಮುಂಭಾಗದ 3 ಹಲ್ಲುಗಳು ಅಲುಗಾಡಿ ವಸಡಿಗೆ ಗಾಯವಾಗಿದ್ದು, ಆ ಸಮಯ ಬಿಡಿಸಲು ಬಂದ ಪಿರ್ಯಾದಿದಾರರ ಪತ್ನಿ ಶ್ರೀಮತಿ ಜುಬೈದಾರ ಮೈಮೇಲೆ ಕೈ ಹಾಕಿ ದೂಡಿದ ಪರಿಣಾಮ ಜುಬೈದಾರವರು ಲಿಫ್ಟಿನ ಒಳಗಡೆ ಕೆಳಕ್ಕೆ ಬಿದ್ದಿದ್ದು, ಆ ಸಮಯ ಆರೋಪಿಯು ಪಿರ್ಯಾದಿದಾರರು ಹಾಗೂ ಅವರ ಪತ್ನಿಗೆ ಬ್ಯಾರಿ ಭಾಷೆಯಲ್ಲಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೆ ಲಿಪ್ಟ್ 3ನೇ ಮಹಡಿಯ ಹಂತಕ್ಕೆ  ಬಂದಾಗ ಪಿರ್ಯಾದಿದಾರರರನ್ನು ಹಾಗೂ ಅವರ ಪತ್ನಿಯನ್ನು ಹೊರಗೆ ಬಾರದಂತೆ ತಡೆದು ನಿಲ್ಲಿಸಿ, ಲಿಪ್ಟ್ 7ನೇ ಮಹಡಿಯವರಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಆರೋಪಿಯು ಲಿಪ್ಟ್ ನಿಂದ ಇಳಿದ ಬಳಿಕ  ಪಿರ್ಯಾದಿದಾರರು ಮತ್ತು ಅವರ ಹೆಂಡತಿ ಅಲ್ಲಿಂದ 3ನೇ ಮಹಡಿಗೆ ಬಂದಿರುವುದಾಗಿದೆ ನಂತರ ಪಿರ್ಯಾದಿದಾರರು ಸುರತ್ಕಲ್ ನ ಪದ್ಮಾವತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆ ಬಳಿಕ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಆರೋಪಿಯು ಹಳೇ ದ್ವೇಷದಿಂದ ಆರೋಪಿ ಈ ಕೃತ್ಯ ಮಾಡಿರುವುದಾಗಿದೆ ಎಂಬಿತ್ಯಾದಿ

 

Surathkal PS

ದಿನಾಂಕ 11-02-2024 ರಂದು 16.30 ಗಂಟೆಗೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ ಗ್ರಾಮದ ಟಿಕ್ ಟಾಕ್ ಗಾರ್ಡನ್ ಬಳಿ ಸಾರ್ವಜನಿಕ ಸ್ಥಳದಲ್ಲಿ 4 ರಿಂದ 5 ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಅದೃಷ್ಟ ಆಟ ಜೂಜಾಟ  ನಡೆಯುತ್ತಿರುವ ಮಾನ್ಯ ನ್ಯಾಯಾಲಯಕ್ಕೆ ವರದಿ ನಿವೇದಿಸಿ ಅನುಮತಿಯನ್ನು ಪಡೆದು ಸದ್ರಿ ಸ್ಥಳಕ್ಕೆ ಧಾಳಿ ನಡೆಸಿ ಅಂದರ್ ಬಾಹರ್ ಆಟ ಆಡುತ್ತಿದ್ದ  1.ಚಂದು ಸಾಬ್, ಪ್ರಾಯ: 50 ವರ್ಷ, ತಂದೆ: ನೆಬಿಸಾಬ್, ವಾಸ: ಕುಷ್ಟಗಿ, ಕೊಪ್ಪಳ ಜಿಲ್ಲೆ 2.ಹನುಮೇಶ, ಪ್ರಾಯ: 27 ವರ್ಷ, ತಂದೆ: ರಾಮಣ್ಣ, ವಾಸ: ಗಂಗಾವತಿ, ಕೊಪ್ಪಳ ಜಿಲ್ಲೆ, 3.ಯಮನೂರಪ್ಪ, ಪ್ರಾಯ: 28 ವರ್ಷ, ತಂದೆ: ವೀರಭದ್ರಪ್ಪ, ವಾಸ: ಯಲಬುರ್ಗಾ, ಕೊಪ್ಪಳ ಜಿಲ್ಲೆ 4. ಮೆಹಬೂಬ್, ಪ್ರಾಯ: 26 ವರ್ಷ, ತಂದೆ: ಮಾಮು ಸಾಬ್, ವಾಸ: ಯಲಬುರಗಾ, ಕೊಪ್ಪಳ ಜಿಲ್ಲೆ, 5. ಶರಣಪ್ಪ, ಪ್ರಾಯ: 26 ವರ್ಷ, ತಂದೆ: ಬರ್ಮಪ್ಪ, ವಾಸ: ತಿಮ್ಮಪುರ, ಗದಗ ಜಿಲ್ಲೆ ಅವರನ್ನು ದಸ್ತಗಿರಿಯನ್ನು ಮಾಡಿ ಆರೋಪಿಗಳು ಜುಗಾರಿ ಜೂಜಾಟಕ್ಕೆ ಉಪಯೋಗಿಸಿದ ವಸ್ತುಗಳನ್ನು ವಶಪಡಿಸಿ, ಆರೋಪಿಗಳ ವಿರುದ್ದ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87  ಅನ್ವಯ ಕಾನೂನು ಕ್ರಮ ಜರಗಿಸಿದ್ದಾಗಿ  ಎಂಬಿತ್ಯಾದಿಯಾಗಿರುತ್ತದೆ

 

Konaje PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:10-02-2024 ರಂದು ಪಿರ್ಯಾದಿ Puneet Gaonkar ಇವರು ಇಲಾಖಾ ವಾಹನದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ರಾತ್ರಿ ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ, ನಾಟೆಕಲ್ ಸೈಟ್ ಬಳಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಮಹಮ್ಮದ್ ಆಸಿರ್ ಪ್ರಾಯ: 19 ವರ್ಷ ತಂದೆ: ಅಬ್ಬಾಸ್ ವಾಸ: ಇದಾಯತ್ ನಗರ ಮುಳ್ಳುಗುಡ್ಡೆ, ಕೆ.ಸಿ ರೋಡ್ ತಲಪಾಡಿ ಉಳ್ಳಾಲ ತಾಲೂಕು ಮಂಗಳೂರು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ದೇರಳಕಟ್ಟೆ ಕಣಚೂರು ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ

 

Konaje PS    

ಈ ಪ್ರಕರಣದ ಸಾರಾಂಶವೆನೇಂದರೆ ದಿನಾಂಕ 10.02.2024 ರಂದು 23-00 ಗಂಟೆಗೆ ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ ನಾಟೆಕಲ್ ಸೈಟ್ ಎಂಬಲ್ಲಿ ಆರೋಪಿಗಳಾದ ನೌಶಾದ್, ಇಕ್ಬಾಲ್, ಹ್ಯಾರಿಸ್, ಇಸ್ಮಾಯಿಲ್, ಆಸೀಂ ಮತ್ತು ಇತರರು  ಕೃತ್ಯ ನಡೆಸುವ ಸಮಾನ ಉದ್ದೇಶದಿಂದ ಆಕ್ರಮ ಕೂಟ ಸೇರಿಕೊಂಡು ಪಿರ್ಯಾದಿ Sulaiman ರವರ ಮನೆಯ ಬಳಿ  ರಸ್ತೆಯಲ್ಲಿ ಪಿರ್ಯಾದಿ Sulaiman ಇವರ ಮಗ ಅಬ್ದುಲ್ ಖಾದರ್ ಅಫ್ರೀದ್ ಎಂಬಾತನಿಗೆ ಕೈಯಿಂದ ಹೊಡೆದು ಗಲಾಟೆ ನಡೆಸುತ್ತಿದ್ದಾಗ ಪಿರ್ಯಾದಿದಾರರು ಮಧ್ಯಪ್ರವೇಶಿಸಿ ಆಪ್ರೀದ್ ನನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಈ ಸಮಯ ಆರೋಪಿಗಳೆಲ್ಲರೂ ಪಿರ್ಯಾದಿದಾರರ ಮನೆಗೆ ಆಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಆರೋಪಿಗಳ ಪೈಕಿ ನೌಶಾದ್ ಎಂಬಾತನು ಎಳೆದು ಹಾಕಿ ಪಿರ್ಯಾದಿದಾರರು ಕೆಳಗಡೆ ಬಿದ್ದಾಗ , ಆರೋಪಿ ಇಕ್ಬಾಲ್ ನು ತನ್ನ ಕೈಯಲ್ಲಿದ್ದ ಮರದ ಸೊಂಟೆಯಿಂದ ಪಿರ್ಯಾದಿದಾರರ ಎಡ ಕೈಗೆ ಹೊಡೆದು ಹಲ್ಲೆ ನಡೆಸಿ, ಜನರು ಸೇರುವುದನ್ನು ಕಂಡು ಆರೋಪಿಗಳ ಪೈಕಿ ಆಸೀಂ ಎಂಬಾತನು ಪಿರ್ಯಾದಿದಾರರಿಗೆ ಮತ್ತು ಮಗ ಆಪ್ರೀದ್ ನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ತಡರಾತ್ರಿ ಪಿರ್ಯಾದಿದಾರರ ಮಗ ತನ್ನ ಸ್ನೇಹಿತರೊಂದಿಗೆ ರಸ್ತೆಯಲ್ಲಿ ನಿಂತುಕೊಂಡು ಮಾತನಾಡಿಕೊಂಡಿರುವುದೇ ಈ ಘಟನೆಗೆ ಕಾರಣವಾಗಿರುತ್ತದೆ ಎಂಬಿತ್ಯಾದಿ.

 

 Konaje PS

ಈ ಪ್ರಕರಣದ ಸಂಕ್ಷೀಪ್ತ ಸಾರಾಶವೆನೆಂದರೆ ಪಿರ್ಯಾದಿ Mohammed Ismail ಇವರ ದಿನಾಂಕ 11-02-2024 ರಂದು ಸಂಜೆ 4.30 ವೇಳೆಗೆ ಮನೆಯಿಂದ ಮಂಜನಾಡಿ ಗ್ರಾಮದ ನಾಟೇಕಲ್ ಸೈಟ್ ರಸ್ತೆಯಾಗಿ ನಾಟೇಕಲ್ ಜಂಕ್ಷನ್ ಗೆ ನಡೆದುಕೊಂಡು ಹೋಗುತ್ತಿರುವಾಗ ಮಜೀದ್ ಎಂಬವರ ಮನೆಯ ಮುಂಭಾಗದ ರಸ್ತೆಯಲ್ಲಿ ನಾಟೇಕಲ್ ಸೈಟ್ ನಿವಾಸಿಯಾದ. ಸುಲೈಮಾನ್ ರವರ ಮಗ ಅಝ್ಮಲ್ @ ಮಾಲು ಎಂಬಾತನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರನ್ನು ಹಾಗೂ ಪಿರ್ಯಾದಿದಾರರ ತಮ್ಮಂದಿರರಾದ ಹಾಸಿಂ ಮತ್ತು ನೌಶದ್ ರವರನ್ನು ತಲವಾರಿನಲ್ಲಿ ಕಡಿಯದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾನೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 13-02-2024 07:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080