ಅಭಿಪ್ರಾಯ / ಸಲಹೆಗಳು

 

Mangalore East Traffic PS  

ಪಿರ್ಯಾದಿದಾರರಾದ ಎಂ ಪುರುಷೋತ್ತಮ ರವರ ಅಣ್ಣ ಪ್ರಭಾಕರ ಆಚಾರ್ಯ ರವರು ದಿನಾಂಕ: 11/04/2023 ರಂದು ತಮ್ಮ ಮನೆಯಿಂದ ಕುಂಟಿಕಾನ ಕೆ.ಪಿ.ಟಿ ಮಾರ್ಗವಾಗಿ ಹಾದು ಹೋಗಿರುವ ರಾ.ಹೆ 66 ನೇಯದರಲ್ಲಿ ತಮ್ಮ ಸ್ಕೂಟರ್ ನೊಂದಣಿ ಸಂಖ್ಯೆ: KA-19-HD-8830 ನೇಯದನ್ನು ಕುಂಟಿಕಾನದಿಂದ ಕೆ.ಪಿ.ಟಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 6-30 ಗಂಟೆಗೆ ಎ.ಜೆ ಆಸ್ಪತ್ರೆ ಎದುರು ತಲುಪುತ್ತಿದ್ದಂತೆ ಅವರ ಮುಂಭಾಗದಲ್ಲಿ ಹೋಗುತ್ತಿದ್ದ ಲಾರಿಯನ್ನು ಅದರ ಚಾಲಕನು ಎಡಕ್ಕೆ ಚಲಾಯಿಸಿಕೊಂಡು ಬಂದಿದ್ದರಿಂದ ಸದ್ರಿ ಲಾರಿಯ ಹಿಂಬದಿಗೆ ಸ್ಕೂಟರ್ ಢಿಕ್ಕಿಯಾಗುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಅಜಾಗರೂಕತೆಯಿಂದ ಒಮ್ಮೆಲೆ ಬ್ರೆಕ್ ಹಾಕಿದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಸವಾರನ ಸಮೇತ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಮುಖಕ್ಕೆ ಗುದ್ದಿದ ರೀತಿಯ ಹಾಗೂ ತರಚಿದ ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದು ಸಾರ್ವಜನಿಕರು ಸ್ಥಳದಲ್ಲಿ ಉಪಚರಿಸಿ ಚಿಕತ್ಸೆಗಾಗಿ ಎ.ಜೆ ಆಸ್ಪತ್ರೆಗೆ ದಾಖಲಿಸಿದಂತೆ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಿಸದೇ ಮಧ್ಯಾಹ್ನ 12-06 ಗಂಟೆಗೆ ಮೃತಪಟ್ಟಿರುತ್ತಾರೆ, ಎಂಬಿತ್ಯಾದಿಯಾಗಿರುತ್ತದೆ.

Traffic South Police Station

ದಿನಾಂಕ: 10-04-2023 ರಂದು ಪಿರ್ಯಾದಿದಾರರಾದ ಪ್ರಕಾಶ್ ಕೌಶಿಕ್  31 ವರ್ಷ ರವರು ಅವರ ಬಾಬ್ತು ಇನೋವಾ ಕಾರು ನಂಬ್ರ: KA-19-MN-9990 ನೇದನ್ನು ಚಲಾಯಿಸಿಕೊಂಡು ಹೋಗಿ ಅವರ ಹೋಟೆಲ್ ಆದ ಪಡೀಲ್ ಕೊಚ್ಚಿನ್ ಬೇಕರಿ ಹತ್ತಿರದ ಉನ್ಕ ತಿನ್ಕ ಎಂಬಲ್ಲಿ ಪಾರ್ಕ್ ಮಾಡಿ ನಿಲ್ಲಿಸಿ ಅವರು ಹೋಟೆಲ್ ನಲ್ಲಿರುವಾಗ ಸಮಯ ಸುಮಾರು ಸಂಜೆ: 7-18 ಗಂಟೆಗೆ ಪಂಪ್ ವೇಲ್ ಕಡೆಯಿಂದ ಪಡೀಲ್ ಕಡೆಗೆ  ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ನಂಬ್ರ: KA-19-F-3362 ನೇದನ್ನು ಅದರ ಚಾಲಕ ಯುವರಾಜ್ ಕೆ ಆರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಕಾಮಗಾರಿ ನಡೆಯುತ್ತಿರುವುದ್ದರಿಂದ ಸದ್ರಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಭಂದಿಸಿದರೂ ಕೂಡಾ ಅದನ್ನು ಲೆಕ್ಕಿಸದೇ ಅದೇ ರಸ್ತೆಯಲ್ಲಿ ಸೀದಾ ಬಂದು ಪಿರ್ಯಾದಿದಾರರ ಹೋಟೆಲ್ ಎದುರು ನಿಲ್ಲಿಸಿದ ಅವರ ಕಾರಿನ ಹಿಂಬದಿ ಬಲಭಾಗಕ್ಕೆ ಬಸ್ಸಿನ ಹಿಂದಿನ ಎಡಭಾಗವನ್ನು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಭಾಗದ ಬಲಭಾಗ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

Ullal PS

ಪಿರ್ಯಾದಿ ಜಿತೇಶ ಕ್ಲಿಶನ್ ಡಿ ಸೋಜಾ, ರಿಕ್ಸನ್ ಸಂತಾನಿಸ್, ಎಡ್ಲಿನ್ ಕ್ಲಿಂಟನ್ ಡಿ ಸೋಜಾ, ಗ್ಲಾನ್ಸಿಲ ಫೆರ್ನಾಂಡೀಸ್, ಜೋಸೆಫ್ ಡಿ ಸೋಜಾ, ಗ್ಲಾನೆಟ್ ಫೆರ್ನಾಂಡೀಸ್, ಸಚಿನ್ ಪಸನ್ನ, ವಿನಯ್ ಜೋಯ್ ಅಲ್ವಾರಿಸ್, ಜೀವನ್ ಕ್ಲಿಫರ್ಡ್ ಡಿ ಸೋಜಾ, ನಾಗೇಂದ್ರ ಗಣಪತಿ, ಅವಿಶ್ ಡಿ ಸೋಜ, ಜೋಯ್ ಸನ್ ಲೂವಿಸ್ ರವರಿಗೆ ವಿದೇಶದಲ್ಲಿ ಉದ್ಯೋಗವನ್ನು ಮಾಡಿ ಕೊಡುವುದಾಗಿ ಲೀನಾ ಲೊಬೋ ರವರು ನಂಬಿಸಿ ಇವರುಗಳಿಂದ ದಿನಾಂಕ 02.02.2023 ರಿಂದ 12.03.2023 ರ ಅವಧಿಯಲ್ಲಿ ಗೂಗಲ್ ಪೇ ಮೂಲಕ ಹಣವನ್ನು ಲೀನಾ ಲೊಬೋ ರವರು ಪಡೆದುಕೊಂಡು ಆದರೆ ಲೀನಾ ಲೊಬೋ ರವರು ಯಾವುದೇ ರೀತಿಯಲ್ಲಿ ವಿದೇಶದಲ್ಲಿ ಉದ್ಯೋಗವನ್ನು ಮಾಡಿ ಕೊಡದೇ ಪಿರ್ಯಾದಿ ಮತ್ತು ಇತರರಿಂದ  ಹಂತ ಹಂತವಾಗಿ 8073324647 ನೇ ನಂಬ್ರದ ಮುಖಾಂತರ ಗೂಗಲ್ ಪೇ ಮೂಲಕ ಪಡೆದುಕೊಂಡ ರೂ 2.82.000/- ಹಣವನ್ನು ವಾಪಾಸು ಕೊಡದೇ ಮೋಸ ಮಾಡಿರುವುದರಿಂದ ಲೀನಾ ಲೊಬೋ ರವರ ವಿರುದ್ಧ ನೀಡಿದ ದೂರಿನ ಮೇರೆಗೆ ಸೂಕ್ತ ಕ್ರಮಕ್ಕಾಗಿ ಪಿರ್ಯಾದಿದಾರರು ನೀಡಿದ ಪ್ರಕರಣದ ಸಾರಾಂಶ.

 

Kankanady Town PS               

ಪಿರ್ಯಾದುದಾರರಾದ ಯುವರಾಜ್.ಕೆ.ಆರ್ ಎಂಬುವವರು ಕೆ.ಎಸ್.ಆರ್.ಟಿ.ಸಿ 3 ನೇ ಘಟಕ ಮಂಗಳೂರಿನಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ:10-04-2023 ರಂದು ಕೆಎ 19 ಎಫ್ 3362 ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ  ಕಂಡಕ್ಟರ್ ಕೆ.ಪಿ ಹನೀಫ್ ಜೊತೆ ರಾತ್ರಿ 07:00 ಗಂಟೆಗೆ ಮಂಗಳೂರು ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿರುತ್ತಾರೆ. ಪಡೀಲ್ ಬಜಾಲ್ ಕ್ರಾಸ್ ನಲ್ಲಿರುವ ಕೊಚ್ಚಿನ್ ಬೇಕರಿಯ ಎದುರು ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದರಿಂದ ಪಿರ್ಯಾದುದಾರರು ಚಲಾಯಿಸುತ್ತಿರುವ ಬಸ್ ಕ್ರಾಸ್ ಮಾಡುವ ಸಮಯ ರಾತ್ರಿ 7:30 ಗಂಟೆಗೆ ಬಸ್ಸಿನ ಹಿಂಬದಿ ಭಾಗ ಅಲ್ಲೇ ರಸ್ತೆ ಬದಿಯಲ್ಲಿ ನಿಂತಿದ್ದ ಕೆಎ 19 ಎಮ್ ಎನ್  9990 ನೇ ಇನೋವಾ ಕಾರಿನ ಹಿಂಬದಿಗೆ ತಾಗಿರುತ್ತದೆ. ಪಿರ್ಯಾದುದಾರರು ಬಸ್ಸನ್ನು ನಿಲ್ಲಿಸಿರುತ್ತಾರೆ ಅಷ್ಟರಲ್ಲಿ ಅಲ್ಲೇ ಹತ್ತಿರ “ಉಣಕಾ ತಿನಕಾ” ಹೋಟೇಲ್ ನಲ್ಲಿದ್ದ ನಾಲ್ಕು ಜನ ಅಪರಿಚಿತ ವ್ಯಕ್ತಿಗಳು ಪಿರ್ಯಾದುದಾರರು ಧರಿಸಿದ್ದ ಸಮವಸ್ತ್ರದ ಕಾಲರ್ ಪಟ್ಟಿ ಹಿಡಿದು  ಬಸ್ಸಿನಿಂದ ಕೆಳಗೆ ಎಳೆದು ಕೈಯಿಂದ ತಲೆಗೆ, ಬೆನ್ನಿಗೆ, ಎಡ ಭುಜಕ್ಕೆ ಹೊಡೆದಿರುತ್ತಾರೆ. ಅವರ ಪೈಕಿ ಓರ್ವ “ಬೇವರ್ಸಿ ರಂಡೆ ಮಗ” ನನ್ನ ಕಾರಿಗೆ ಯಾಕೆ ತಾಗಿಸಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಹಾಗೂ ಕೈಯಲ್ಲಿದ್ದ ಕಾರಿನ ಕೀ ಯಿಂದ ತಲೆಗೆ ಹೊಡೆದು ರಕ್ತ ಗಾಯವಾಗಿರುತ್ತದೆ. ಮತ್ತು ಪಿರ್ಯಾದುದಾರರ ಮೊಬೈಲ್ ನ್ನು ತೆಗೆದು ನೆಲಕ್ಕೆ ಬಿಸಾಡಿ ಹಾನಿಮಾಡಿರುತ್ತಾನೆ. ಪಿರ್ಯಾದುದಾರರು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಹೊರ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಕೃತ್ಯ ಆಕಸ್ಮಿಕವಾಗಿ ನಡೆದಿರುವುದರಿಂದ ಪಿರ್ಯಾದುದಾರರ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿಯಾಗಿ ನೀಡಿದ ದೂರು.

Surathkal PS

ಪಿರ್ಯಾದಿದಾರರು ಸುರತ್ಕಲ್ ಮುಕ್ಕ ಜಂಕ್ಷನ್ ಬಳಿ ಇರುವ ಶ್ರೀನಿವಾಸ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪಕ್ಕದಲ್ಲಿರುವ ಆಧಿದನ್ ರೆಸಿಡೆನ್ಸಿ ಕಾಂಪ್ಲೆನ ನೆಲ ಮಾಳಿಗೆಯಲ್ಲಿರುವ  NIGHT SPICE  ಹೆಸರಿನ ಹೊಟೇಲ್ ಮತ್ತು ಕೆಫೆಯನ್ನು ನಡೆಸುತ್ತಿದ್ದು ನಿನ್ನೆ ದಿನಾಂಕ:09-04-2023 ರಂದು ನಾನು ರಾತ್ರಿ ಸುಮಾರು 11.00 ಗಂಟೆಗೆ ಪಿರ್ಯಾದಿದಾರರು ತನ್ನ ವ್ಯವಹಾರ ಮುಗಿಸಿ ಕೆಫೆಯನ್ನು ಬಂದ್ ಮಾಡಿ ಹೊರಡುತ್ತಿರುವ ಸಮಯದಲ್ಲಿ ಪಿರ್ಯಾದಿದಾರರ ಕೆಫೆಯ ಮುಂಭಾಗ (ಮುಕ್ಕ ಜಂಕ್ಷನ್ ರಸ್ತೆಯ ಬದಿಯಲ್ಲಿ)  ಅಪರಿಚಿತ 04-05  ಜನ ಯುವಕರು ಪರಸ್ಪರ ಒಬ್ಬರನ್ನೊಬ್ಬರು ನಿಂದಿಸುತ್ತಾ ಬೈದಾಡಿಕೊಂಡು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿರುತ್ತಾರೆ, ಸದ್ರಿ ಸಮಯ ಘಟನೆಯನ್ನು ನೋಡಿದ ಕೆಲ ಸಾರ್ವಜನಿಕರು ಕೈ ಕೈ ಮಿಲಾಯಿಸುತ್ತಿದ್ದವರನ್ನು ಸಮಾಧಾನ ಪಡಿಸಿ ಕಳುಹಿಸಿ ಕೊಟ್ಟಿರುತ್ತಾರೆ. ನಂತರ ಸದ್ರಿ ಯುವಕರುಗಳು ಅಲ್ಲಿಂದ ತಾವಾಗಿಯೇ ಹೊರಟು ಹೋಗಿರುತ್ತಾರೆ. ಸದ್ರಿ ಮುಕ್ಕ ಜಂಕ್ಷನ್ ಪರಿಸರವು ಜನನಿಬಿಡ ಪ್ರದೇಶವಾಗಿದ್ದು ಜಂಕ್ಷನ್ ಪಕ್ಕದಲ್ಲಿಯೇ ಶ್ರೀನಿವಾಸ ಆಸ್ಪತ್ರೆ, ಕಾಲೇಜು, ವಾಣಿಜ್ಯ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿರುವುದಾಗಿದೆ. ಸದ್ರಿ ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಸ್ಥಳದಲ್ಲಿ ಹೀಗೆ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಯುವಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 12:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080