ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police Station

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Amitha Roopesh ಇವರು  ದಿನಾಂಕ 11-04-2024 ರಂದು ತಮ್ಮ ಪರಿಚಯದ ಲಕ್ಷ್ಮಣ ಶೆಟ್ಟಿ ಎಂಬವರು ಆಟೋ ರಿಕ್ಷಾ ನಂಬ್ರ KA-19-AE-0683 ರಲ್ಲಿ ತಾನು ಹಾಗೂ ತನ್ನ ಚಿಕ್ಕಮ್ಮ ಲಕ್ಷ್ಮಿ (50), ಅಣ್ಣನ ಮಗಳಾದ ದೃಶ್ಯ (06) ಹಾಗೂ ತಂಗಿಯ ಮಗ ರಿಯಾಂಶ್ (08) ಎಂಬವರೊಂದಿಗೆ ಮನೆಯಿಂದ ಹೊರಟು ಕುಕಟ್ಟೆ ಪಂಜಿನಡ್ಕ ಮಾರ್ಗವಾಗಿ ಮುಲ್ಕಿ ಕಡೆಗೆ ಪ್ರಯಾಣಿಸುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 15:00 ಗಂಟೆಗೆ ಶ್ರೀಮತಿ ಪ್ರೇಮಾ ಶೆಟ್ಟಿರವರ ಮನೆ ಬಳಿ ತಲುಪುತ್ತಿದ್ದಂತೆಯೇ ಆಟೋ ರಿಕ್ಷಾವನ್ನು ಅದರ ಚಾಲಕ ಲಕ್ಷ್ಮಣ ಶೆಟ್ಟಿರವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಆಟೋ ರಿಕ್ಷಾವು ರಸ್ತೆಯ ಎಡ ಬದಿಗೆ ಮಗುಚಿ ಬಿದ್ದು ಇದರ ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮಿರವರ ಬಲಕೈ ಮುಂಗೈ ಬಳಿ ಮೂಳೆ ಮುರಿತದ ಗಾಯ, ರಿಯಾಂಶುರವರ ಬಲಕೈ ಮುಂಗೈನಲ್ಲಿ ಹಾಗೂ ಎಡಕಾಲಿನ ಮೊಣಗಂಟಿನ ಬಳಿ ಚರ್ಮ ತರಚಿದ ಗಾಯ         , ಕುಮಾರಿ ದೃಶ್ಯರವರ ಹೊಟ್ಟೆಯ ಬಲಬದಿ ಚರ್ಮ ಹರಿದ ರೀತಿಯ ಗಾಯವಾಗಿದ್ದು, ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಅಪಘಾತದಿಂದ ಪಿರ್ಯಾದಿದಾರರಿಗೆ ಮತ್ತು ಆಟೋ ರಿಕ್ಷಾ ಚಾಲಕ ಲಕ್ಷ್ಮಣ ಶೆಟ್ಟಿರವರಿಗೆ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ ಎಂಬಿತ್ಯಾದಿ.

 

Traffic South Police Station       

 ಈ ಪ್ರಕರಣದ ಸಾರಾಂಶವೆನೇಂದರೆ ಪಿರ್ಯಾದು Mohammad Siraj ಇವರು  ದಿನಾಂಕ:11-04-2024 ರಂದು ಕೆಲಸದ ನಿಮಿತ್ತ ತನ್ನ ಸ್ನೇಹಿತನಾದ ಮೊಹಮ್ಮದ್ ಆರ್ಫಾಝ್ ರವರ ಮೋಟಾರ್ ಸೈಕಲ್ ನಂಬ್ರ KA 19 HM 6209 ರಲ್ಲಿ ವಾಮಂಜೂರು ಕಡೆಯಿಂದ ಮಲ್ಲೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ ಸಮಯ ಸುಮಾರು 02.00 ಗಂಟೆಗೆ ತಾರಿಗುಡ್ಡೆ ಮೂಡಾಯಿಬೆಟ್ಟು ತಿರುವು ರಸ್ತೆಗೆ ತಲಪುತಿದ್ದಂತೆ ಪಿರ್ಯಾದಿದಾರರ ಮುಂದಿನಿಂದ ಅಂದರೆ ಮಲ್ಲೂರು ಕಡೆಯಿಂದ KA 19 AC 8785 ನೇ ಲಾರಿಯ ಚಾಲಕನಾದ ಮೋಹನ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ರಸ್ತೆಯ ತೀರ ಬಲಭಾಗಕ್ಕೆ ಬಂದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಎಡಕೈಯ ಹೆಬ್ಬರಿಳಿನಲ್ಲಿ ತೀವ್ರ ರಕ್ತಗಾಯ, ಬಲಗೈಯಲ್ಲಿ ಗುದ್ದಿದ ಗಾಯ, ಬಾಯಿಯಲ್ಲಿ ರಕ್ತಗಾಯ, ಹಣೆಯ ಬಲಭಾಗದಲ್ಲಿ ರಕ್ತಗಾಯ ಮತ್ತು ಮೂಗಿನಲ್ಲಿ  ರಕ್ತಗಾಯ ಉಂಟಾಗಿರುತ್ತದೆ  ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 15-04-2024 08:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080