ಅಭಿಪ್ರಾಯ / ಸಲಹೆಗಳು

Crime report in: Mangalore East Traffic PS     

ದಿನಾಂಕ 11-07-2023 ರಂದು ಪಿರ್ಯಾದಿದಾರರಾದ ಸತೀಶ ಬಿ ರವರು  ತನ್ನ ಬಾಬ್ತು KA-20-MA-0939 ನೇ ನೋಂದಣಿ ನಂಬ್ರದ ಕಾರನ್ನು ಬಂಟ್ಸ್ ಹಾಸ್ಟೆಲ್ ಕಡೆಯಿಂದ ಪಿ ವಿ ಎಸ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಪಿ ವಿ ಎಸ್ ಸರ್ಕಲ್ ಹತ್ತಿರದ ಲಲಿತಾ ಜ್ಯುವೆಲ್ಲರ್ಸ ಮುಂದುಗಡೆ ರಸ್ತೆಯಲ್ಲಿ ತಲುಪಿದಾಗ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಹಿಂದಿನಿಂದ ಅದೇ ಮಾರ್ಗವಾಗಿ ಬರುತ್ತಿದ್ದ KA-19-F-3396 ನೆ ನಂಬ್ರದ ಕೆ ಎಸ್ ಅರ್ ಟಿ ಸಿ ಬಸ್ಸನ್ನು ಅದರ ಚಾಲಕ ಶಿವಕುಮಾರ ಎಂಬಾತನು ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಮುಂದಕ್ಕೆ ದೂಡಲ್ಪಟ್ಟು ಪಿರ್ಯಾದಿದಾರರ ಕಾರಿನ ಮುಂದಿನಿಂದ ಚಲಿಸುತ್ತಿದ್ದ KA-19-MG-4823 ನೇ ನಂಬ್ರದ ಎರ್ಟಿಗಾ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಕಾರು ಜಖಂ ಗೊಂಡಿದ್ದು, ಅಪಘಾತದಿಂದ ಪಿರ್ಯಾದಿದಾರರ ಕಾರು ಹಿಂದಿನಿಂದ ಮತ್ತು ಮುಂದಿನಿಂದ ಸಂಪೂರ್ಣ ಜಖಂ ಗೊಂಡಿದ್ದು. ಈ ಅಪಘಾತಕ್ಕೆ ಕಾರಣನಾದ  KA-19-F-3396 ನೆ ನಂಬ್ರದ ಕೆ ಎಸ್ ಆರ್ ಟಿ ಸಿ ಬಸ್ಸು ಚಾಲಕ ಶಿವಕುಮಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

 

Traffic North Police Station                   

ಪಿರ್ಯಾದಿ Karthik R Kotian ದಾರರು ದಿನಾಂಕ 11-07-2023 ರಂದು ತನ್ನ ಬಾಬ್ತು KA-19-HF-0870 ನೇ ನಂಬರ್ ನ ಸ್ಕೂಟರಿನಲ್ಲಿ ಬೆಳಿಗ್ಗೆ ಮನೆಯಿಂದ ಮುಲ್ಕಿ ಜಂಕ್ಷನ್ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 7-45 ಗಂಟೆಗೆ ಮುಲ್ಕಿ ಜಂಕ್ಷನ್ ಹತ್ತಿರ NH-66 ರಸ್ತೆಯನ್ನು ದಾಟುತ್ತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ KA-20-ME-6456 ನೇ ನಂಬರ್ ನ ಕಾರ ಚಾಲಕ Lanston Cardoza ಎಂಬುವರು ತೀರಾ ನಿರ್ಲಕ್ಷ್ಯತನದಿಂದ ಹಾಗೂ ದುಡುಕತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿಪಡಿಸಿದ್ದು, ಇದರ  ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಅದರ ಪರಿಣಾಮ ಪಿರ್ಯಾದಿದಾರರ ಎಡ ಕಾಲಿನ ಮೊನಗಂಟಿಗೆ ಗುದ್ದಿದ ಗಾಯ ಮತ್ತು ಎಡ ಕಾಲಿನ ಬೆರಳಿನ ಹತ್ತಿರ ತರಚ್ಚಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಅರ್ಥವ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

    

Bajpe PS

ಪಿರ್ಯಾದಿ Narayana ದಾರರ ತಂದೆಯವರಾದ ಪೋಂಕ್ರ ಪೂಜಾರಿ ಪ್ರಾಯ:67 ವರ್ಷ ಇವರು ದಿನಾಂಕ 10.07.2023 ರಂದು ಕೈಕಂಬದ ಸಲೂನ್ ನಿಂದ ವಾಪಸ್ಸು ಮನೆಗೆ ಬರುವಾಗ ಪರಿಚಯವಿರುವ ದಿನೇಶ್ ಎಂಬುವರ ಬಾಬ್ತು KA19HB1623 ನೇ ಆಕ್ಟೀವಾ ಸ್ಕೂಟರ್ ನಲ್ಲಿ ಸಹಸವಾರನಾಗಿ ಬರುತಿದ್ದ ಸಮಯ ಮಧ್ಯಾಹ್ನ 12.00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ತೆಂಕುಳಿಪಾಡಿ ಗ್ರಾಮದ ಕಾಜಿಲ ಬಸ್ಸು ನಿಲ್ದಾಣದ ಬಳಿ ಬರುತ್ತಿರುವ ಸಮಯ ಸವಾರನಾದ ದಿನೇಶ್ ರವರು ಚಲಾಯಿಸುತ್ತಿದ್ದ ಆಕ್ಟೀವಾ ಹೊಂಡಾವನ್ನು ಅತೀವೇಗ ಮತ್ತು ಅಜಾಗಾರುಕತೆಯಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ಸ್ಕೀಡ್ ಆಗಿ ಬಿದ್ದು ಸಹಸವಾರನಾಗಿ ಕುಳಿತಿದ್ದ ಪಿರ್ಯಾದಿದಾರರ ತಂದೆಯವರಿಗೆ ಹಣೆಯ ಎಡಭಾಗ ಹಾಗೂ ಕಣ್ಣು ಎಡ ಕೈ ಭುಜ ,ಕಾಲಿನ ಎರೆಡು ಮೊಣಗಂಟಿಗೆ ತೀವ್ರತರದ ರಕ್ತಗಾಯವಾಗಿದ್ದು ಅಲ್ಲದೆ ಸ್ಕೂಟರ್ ಚಾಲಾಯಿಸುತಿದ್ದ ದಿನೇಶ್ ರವರಿಗೂ ಮುಖದ ಎಡಭಾಗ ,ಎಡಕೈ, ಭಾಗಕ್ಕೆ ರಕ್ತಗಾಯವಾಗಿದ್ದು ಗಾಯಾಳುಗಳನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

Mangalore South PS                    

ದಿನಾಂಕ 15-05-2023 ರಂದು ಬೆಳಿಗ್ಗೆ 09-00 ಗಂಟೆಯಿಂದ ಬೆಳಿಗ್ಗೆ 09-20 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಕಂಕನಾಡಿ ಪಾಧರ್ ಮುಲ್ಲರ್ ಆಸ್ಪತ್ರೆಯ  ದ್ಚಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿ HARISH KUMAR ದಾರರ ಆರ್. ಸಿ. ಮಾಲಕತ್ವದ KA 19 HE 5868 ನೊಂದಣಿ ಸಂಖ್ಯೆಯ MB8DP12DHL8286009 ಚೆಸಿಸ್ ನಂಬ್ರದ, AF212337911 ಇಂಜೀನ್ ನಂಬ್ರದ 08/2020 ನೇ ಮೋಡಲ್ ನ ಮ್ಯಾಟ್ ಗ್ರೆ ಬಣ್ಣದ ಅಂದಾಜು ರೂಪಾಯಿ 60,000/- ಬೆಲೆ ಬಾಳುವ ACCESS 125 DISC  ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರು ಕಳವಾದ ದ್ಚಿಚಕ್ರ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿಯಾಗಿರುತ್ತದೆ        

CEN Crime PS

ಪಿರ್ಯಾದಿದಾರರ ಗಂಡರವರು ದಿನಾಂಕ 28-12-2016 ರಂದು ಸಹರಾ ಇಂಡಿಯಾ ಪರಿವಾರ ಎಂಬ ಕಂಪನಿಯಲ್ಲಿ ವಿಮೆ ಮಾಡಿದ್ದು ಆ ವಿಮೆಯ ಅವಧಿಯು ದಿನಾಂಕ 28-12-2017 ರಂದು ಮುಕ್ತಾಯವಾಗಿದ್ದು ಫಿರ್ಯಾದಿದಾರರು ಮತ್ತು ಅವರ ಗಂಡ ವಿದೇಶದಲ್ಲಿ ಇದ್ದ ಕಾರಣ ಈ ವಿಮೆಯ ಬಗ್ಗೆ ಹೆಚ್ಚಿನ ಗಮನಹರಿಸಿಲಿಲ್ಲ ನಂತರ ಮರಳಿ ಸ್ವದೇಶಕ್ಕೆ ಬಂದಿದ್ದು ಫಿರ್ಯಾದಿದಾರರು ದಿನಾಂಕ 05-07-2023 ರಂದು ಸಹರಾ ಇಂಡಿಯಾ ಪರಿವಾರ ಎಂಬ ಕಂಪನಿಯ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಅದರಲ್ಲಿ ದೊರೆತ info@saharaindiapariwar.org  ಇಮೇಲ್ ಐಡಿಗೆ ಫಿರ್ಯಾದಿದಾರರ ತಮ್ಮ ಗಂಡನ ವಿಮೆಯ ಸಂರ್ಪೂಣ ವಿವರಗಳನ್ನು ಮತ್ತು ತಮ್ಮ  ಮೊಬೈಲ್ ನಂಬ್ರವನ್ನು ಕಳುಹಿಸಿರುತ್ತಾರೆ. ನಂತರ ದಿನಾಂಕ 09-07-2023 ರಂದು ಸಮಯ ಸಂಜೆ 04-00 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿಯ 9205098549 ನೇದರಿಂದ ಫಿರ್ಯಾದಿದಾರರ  ಮೊಬೈಲ್ ನೇದಕ್ಕೆ  ಕರೆ ಬಂದಿದ್ದು ಕರೆ ಮಾಡಿದ ವ್ಯಕ್ತಿಯು ಪಿರ್ಯಾದಿದಾರರ  ಗಂಡ ಹೆಸರಿನಲ್ಲಿ ಸಹರಾ ಇಂಡಿಯಾ ಪರಿವಾರ ಎಂಬ ಕಂಪನಿಯಲ್ಲಿ ಮಾಡಿದ ವಿಮೆಯ ಅವಧಿಯ ಮುಕ್ತಾಯಗೊಂಡಿದ್ದು ಆ ಹಣವನ್ನು ಪಡೆಯುವ  ಬಗ್ಗೆ ದೂರನ್ನು ನೀಡಿದ್ದು ಆ ವಿಮೆಯ ಹಣವನ್ನು ಪಡೆಯ ಬೇಕಾದರೆ ಮುಂಗಡ ಹಣವಾಗಿ 75,000/ ವರ್ಗಾವಣೆ ಮಾಡುವಂತೆ ತಿಳಿಸಿದ್ದು ಅದರಂತೆ ಫಿರ್ಯಾದಿದಾರರು ತಮ್ಮ ಕರ್ನಾಟಕ  ಬ್ಯಾಂಕ್ ಖಾತೆ ನಂಬ್ರ  ನೇದರಿಂದ ಆರೋಪಿತನ ಕೋಟಕ್ ಮಹೇಂದ್ರ ಬ್ಯಾಂಕ್  IFSC CODE: KKBK0000811 ಖಾತೆ ನಂಬ್ರ 5548521109 ನೇದಕ್ಕೆ ಹಂತ ಹಂತವಾಗಿ ಒಟ್ಟು ರೂ. 74,500/ ಹಣವನ್ನು ವರ್ಗಾವಣೆ  ಮಾಡಿರುತ್ತಾರೆ. ಈ ರೀತಿಯಾಗಿ ವಿಮೆಯ ಮೆಚುರಿಟಿ ಹಣವನ್ನು ನೀಡುತ್ತೇನೆಂದು ಹೇಳಿ ಫಿರ್ಯಾದಿದಾರರಿಂದ ಹಣವನ್ನು ಮೋಸದಿಂದ ವರ್ಗಾವಣೆ  ಮಾಡಿಸಿಕೊಂಡಿರುವುದು ಎಂಬಿತ್ಯಾದಿ.

        

ಇತ್ತೀಚಿನ ನವೀಕರಣ​ : 21-08-2023 02:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080