ಅಭಿಪ್ರಾಯ / ಸಲಹೆಗಳು

Crime Report in Mangalore East Traffic PS

ಪಿರ್ಯಾದಿ ಶ್ರೀಮತಿ ಮಂಜುಳಾ ಎಂಬುವರು ದಿನಾಂಕ 10-08-2023  ರಂದು ರಾತ್ರಿ ಸಮಯ ಸುಮಾರು 7.30 ಗಂಟೆಗೆ ಬಿಕರ್ನಕಟ್ಟೆಯಲ್ಲಿರುವ ಶ್ರೀಕೃಷ್ಣ ಭವನ ಹೊಟೇಲ್ ಎದುರುಗಡೆ ಬಜ್ಜೋಡಿ ಕಡೆಗೆ ಹೋಗಲು ಮರೋಳಿ ಕಡೆಯಿಂದ ನಂತೂರು ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 73 ನೇ ಡಾಮಾರು ರಸ್ತೆಯನ್ನು ದಾಟುತ್ತಿದ್ದ ವೇಳೆ  ಮರೋಳಿ ಕಡೆಯಿಂದ ನಂತೂರು ಕಡೆಗೆ  KA-70-E-9908 ನಂಬ್ರದ ಸ್ಕೂಟರನ್ನು ಅದರ ಸವಾರ  ಮೊಹಮ್ಮದ್ ಅಬ್ದುಲ್ ರೆಹಮಾನ್ ಎಂಬಾತನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎಡಕಾಲಿಗೆ ಢಿಕ್ಕಿಪಡಿಸಿದ್ದು, ಪಿರ್ಯಾದಿದಾರರ ಎಡಕಾಲಿನ ಪಾದದ ಗಂಟಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ ಎಂಬಿತ್ಯಾದಿ.

Traffic South Police Station              

 ದಿನಾಂಕ:07-08-2023 ರಂದು ಕಲ್ಲಾಪು ಪ್ಲೆವುಡ್ ಪ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಪಿರ್ಯಾದಿ MOHAMMAD SHARIF  ಬಾಬ್ತು ಸ್ಕೂಟರ್ KA-19-HG-2563 ರಲ್ಲಿ ಕಲ್ಲಾಪು ಕಡೆಯಿಂದ ಪಿರ್ಯಾದಿಯ ಮನೆಯ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದು  ದಿನಾಂಕ 08-08-2023 ರಂದು ಸಮಯ ಸುಮಾರು  ರಾತ್ರಿ 00.00 ಗಂಟೆಗೆ ರಾ.ಹೆದ್ದಾರಿ 66 ರಲ್ಲಿ ಜಪ್ಪು ಮಹಾಕಳಿಪಡ್ಪು ಜಂಕ್ಷನ್ ತಲುಪುತ್ತಿದ್ದಂತೆ ಪಿರ್ಯಾದಿಯ ಹಿಂದಿನಿಂದ ಅಂದರೆ ಕಲ್ಲಪು ಕಡೆಯಿಂದ ಬರುತ್ತಿದ್ದ ಅಪರಿಚಿತ ಕಾರೊಂದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಪಡಿಸಿ ಕಾರು ನಿಲ್ಲಿಸದೇ  ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಡಾಮರು ರಸ್ತೆಗೆ ಬಿದ್ದಿದ್ದು ಕೂಡಲೇ  ಸಾರ್ವಜನಿಕರು ಉಪಚರಿಸಿ  ನಂತರ ಪಿರ್ಯಾದಿದಾರರು  ತನ್ನ ಬಾವನಿಗೆ  ದೂರವಾಣಿ ಕರೆ ಮಾಡಿ ಬರಲು ತಿಳಿಸಿ ಪಿರ್ಯಾದಿದಾರರ ಬಾವ ಕಾರೊಂದರಲ್ಲಿ  ಕೊಡಿಯಲ್ ಬೈಲ್ ಯೆನೆಪೋಯಾ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ  ಕರೆದುಕೊಂಡು ಹೋಗಿ  ಹೊರರೋಗಿಯಾಗಿ ದಾಖಲಿಸಿರುತ್ತಾರೆ. ಪಿರ್ಯಾದಿಗೆ ಉಂಟಾದ ಅಪಘಾತದಿಂದ  ತುಂಬಾ ನೋವುಂಟಾಗಿದ್ದು ಇದರಿಂದ ನಡೆದಾಡಲು ಕಷ್ಟವಾಗಿರುವುದರಿಂದ ಅಲ್ಲದೇ ಆಸ್ಪತ್ರೆಯ ಖರ್ಚು ಜಾಸ್ತಿ ಆಗಿರುವುದರಿಂದ ದೂರು ನೀಡಲು ವಿಳಂಬವಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 02:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080