ಅಭಿಪ್ರಾಯ / ಸಲಹೆಗಳು

Crime Report in  Bajpe PS

ಪಿರ್ಯಾದಿದಾರರಾದ ಗೋವಿಂದ ಗೌಡ (55) ಎಂಬುವರು  ಕೊಂಪದವು ಎಂಬಲ್ಲಿ 1 ಎಕರೆ ಜಮೀನು ಹೊದಿದ್ದು ಅರಲ್ಲಿ ಅಡಿಕೆ ಬೆಳೆದುಕೊಂಡಿರುತ್ತಾರೆ. ದಿನಾಂಕ 05/08/2023 ರಂದು ಅಡಿಕೆ ಮರಗಳಿಂದ ಅಡಿಕೆಯನ್ನು ತೆಗೆದು ಅವುಗಳ ಸಿಪ್ಪೆಗಳನ್ನು ಸುಲಿದು ಅಡಿಕೆಗಳನ್ನು ತಲಾ 50 KG ಯಂತೆ 4 ಗೋಣಿ ಚೀಲಗಳಲ್ಲಿ ತುಂಬಿಸಿ ಪ್ಯಾಕ್ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಮನೆಯ ಅಡುಗೆ ಕೋಣೆಯ ಬಳಿ ಇರುವ ರೂಮಿನಲ್ಲಿ ಇಟ್ಟಿರುತ್ತೇನೆ. ಈ ಸುಲಿದ ಅಡಿಕೆಯ ಜೊತೆಗೆ ಸುಲಿಯದ 5 ಗೋಣಿ ಚೀಲಗಳಲ್ಲಿ ತುಂಬಿಸಿದ್ದ ಅಡಿಕೆಯನ್ನ ಸಹ ಇದೇ ರೂಮಿನಲ್ಲಿ ಇಟ್ಟು ಅದರ ಮೇಲೆ ಪ್ಲಾಸ್ಟಿಕ್ ಹೊದಿಕೆಯನ್ನು ಹಾಸಿ ಇಟ್ಟಿದ್ದು ದಿನಾಂಕ 08-09-2023 ರಂದು ಸಂಜೆ ಕೆಲಸ ಮುಗಿಸಿ ಬಂದ ಬಳಿಕ ಅಡಿಕೆಗಳನ್ನು ಇಟ್ಟಿದ್ದ ರೂಮಿನಲ್ಲಿ ಹೋಗಿ ಅಡಿಕೆಯನ್ನು ತುಂಬಿಸಿದ್ದ ಚೀಲಗಳನ್ನು ನೋಡಿ ರಾತ್ರಿ ಮನೆಯಲ್ಲಿ ಮಲಗಿದವರು ಮರು ದಿನ ದಿನಾಂಕ 09-09-2023 ರಂದು ಬೆಳಿಗ್ಗೆ ಸುಮಾರು 06-00 ಗಂಟೆಗೆ ಎದ್ದು ಅಡಿಕೆಯನ್ನು ಇಟ್ಟಿದ್ದ ರೂಮಿನಲ್ಲಿ ಹೋಗಿ ನೋಡಿದಾಗ ಸುಲಿದ 4 ಗೋಣಿ ಚೀಲಗಳಲ್ಲಿ ತುಂಬಿಸಿದ್ದ ಒಟ್ಟು 200 KG ತೂಕದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಅಡಿಕೆಯ ತುಂಬಿಸಿದ್ದ ಚೀಲಗಳು ಇಲ್ಲದೆ ಇರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರ ಸುಮಾರು 200 KG ತೂಕದ ಅಡಿಕೆಯನ್ನು ಯಾರೋ ಕಳ್ಳರು ದಿನಾಂಕ 08-09-2023 ರಂದು ಸಂಜೆಯಿಂದ 6-00 ಗಂಟೆಯಿಂದ  ದಿನಾಂಕ 09-09-2023 ರಂದು ಬೆಳಿಗ್ಗೆ 06-00 ಗಂಟೆಯ ಮದ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

Moodabidre PS

ಪಿರ್ಯಾದಿ Jaya ದಾರರ ಅತ್ತಿಗೆ ಶಾಲಿನಿ (38 ವರ್ಷ) ಎಂಬುವರು ಟಿ.ಬಿ ಖಾಯಿಲೆಯಿಂದ ಬಳಲುತ್ತಿದ್ದು, ಆಸ್ಪತ್ರೆ ಚಿಕಿತ್ಸೆ ಮಾಡಿಸಿ ಔಷಧಿ ತೆಗೆದುಕೊಳ್ಳುತ್ತಿದ್ದವರು ದಿನಾಂಕ 02-09-2023 ರಂದು ಬೆಳಿಗ್ಗೆ 10.00 ಗಂಟೆ ಸಮಯಕ್ಕೆ ಮನೆಯವರಿಗೂ ಮತ್ತು ಮಕ್ಕಳಿಗೂ ಯಾವುದೇ ಮಾಹಿತಿ ನೀಡದೇ ಮನೆ ಬಿಟ್ಟು ಹೋದವರು ಈವರೆಗೆ ವಾಪಸು ಮನೆಗೆ ಬಾರದೇ ಕಾಣೆಯಾಗಿದ್ದು, ಪಿರ್ಯಾದಿದಾರರು ನೆರೆಕೆರೆಯಲ್ಲಿ ವಿಚಾರಿಸಿ ಹುಡುಕಾಡಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ ಈ ಹಿಂದೆ ಮನೆ ಬಿಟ್ಟು ಹೋಗಿ ಕೆಲವು ದಿನಗಳ ನಂತರ ಮನೆಗೆ ಬಂದಿದ್ದರಿಂದ ಪುನಃ ಮನೆಗೆ ಬರುವುದಾಗಿ ನಂಬಿದ್ದು, ಆದ್ದರಿಂದ ಈ ದಿನ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

ಕಾಣೆಯಾದವರ ಚಹರೆ ಗುರುತು:

ಹೆಸರು: ಶಾಲಿನಿ ಪ್ರಾಯ 38 ವರ್ಷ

ಎತ್ತರ: 5.2

ಮುಖ: ಕೋಲು ಮುಖ, ಗೋಧಿ ಮೈಬಣ್ಣ,

ಶರೀರ: ಸಪೂರ ಶರೀರ

Mulki PS

ದಿನಾಂಕ:10-09-2023ರಂದು 08-15ಗಂಟೆಗೆ ಬಪ್ಪನಾಡು ಗ್ರಾಮದ ಶಾಂಭವಿಬ್ರಿಡ್ಜ್ ಎಂಬಲ್ಲಿ  ಆರೋಪಿ ಮೊಹಮ್ಮದ್ ಶಾಹೀನ್ ಎಂಬವರು  ಹೊಗೆಬತ್ತಿಯೊಂದಿಗೆ ಗಾಂಜಾ ಸೇವನೆ ಮಾಡುತ್ತಿದ್ದವನನ್ನು ವಶಕ್ಕೆ ಪಡೆದು  ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಎ.ಜೆ.ಆಸ್ಪತ್ರೆಯ   ವೈದ್ಯಾಧಿಕಾರಿಯವರ ಮುಖೇನಾ ಪರೀಕ್ಷೆಗೊಳಪಡಿಸಿದಲ್ಲಿ  ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

2) ದಿನಾಂಕ:10-09-2023 ರಂದು 11-30 ಗಂಟೆಗೆ ಆರೋಪಿ ಶರತ್ ಪಿ ರವರು  ಬಪ್ಪನಾಡು ಗ್ರಾಮದ ಕೊಳಚೆಕಂಬಳ ಎಂಬಲ್ಲಿ ಹೊಗೆ ಬತ್ತಿ ಯೊಂದಿಗೆ  ಗಾಂಜಾ ಸೇವನೆ ಮಾಡುತ್ತಿದ್ದವನನ್ನು  ವಶಕ್ಕೆ ಪಡೆದು  ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಎ.ಜೆ.ಆಸ್ಪತ್ರೆಯ   ವೈದ್ಯಾಧಿಕಾರಿಯವರ ಮುಖೇನಾ ಪರೀಕ್ಷೆಗೊಳಪಡಿಸಿದಲ್ಲಿ  ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 11-09-2023 07:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080