ಅಭಿಪ್ರಾಯ / ಸಲಹೆಗಳು

Crime Report in  Mangalore East Traffic PS       

 ಪಿರ್ಯಾದಿದಾರರಾದ ಕೀರ್ತನ್ ಅಶೀರ್ ಸಿಕ್ವೇರ ರವರು ದಿನಾಂಕ 10-10-2023 ರಂದು ಬೆಳಿಗ್ಗೆ ಸಮಯ ಸುಮಾರು 08.20 ಗಂಟೆಗೆ ಕೂಳೂರಿಗೆ ಹೋಗುವುದಕ್ಕಾಗಿ ಶಿವಭಾಗ್ ಬಸ್ಸು ನಿಲ್ದಾಣದ ಬಳಿ ನೊಂದಣಿ ಸಂಖ್ಯೆ KA-19-AB-2308 ರೂಟ್ ನಂಬ್ರ 15 ನೇ  ಖಾಸಗಿ ಬಸ್ಸನ್ನು ಪಿರ್ಯಾದಿದಾರರು ಹಿಂಭಾಗದ ಬಾಗಿಲಿನ ಮೂಲಕ ಹತ್ತುತ್ತಿದ್ದಂತೆ ಬಸ್ಸನ್ನು ಅದರ ಚಾಲಕ ಮಹೇಶ್ ಕುಮಾರ್ ಎಂಬಾತನು ಒಮ್ಮೆಲೇ ಏಕಾಏಕಿಯಾಗಿ ದುಡುಕುತನದಿಂದ ಮುಂದಕ್ಕೆ ಚಲಾಯಿಸಿಕೊಂಡು ಹೋದ ಪರಿಣಾಮ ಬಸ್ಸಿನಲ್ಲಿ ನಿಂತಿದ್ದ ಪ್ರಯಾಣಿಕರು ಒಮ್ಮೆಲೇ ಹಿಂದಕ್ಕೆ ವಾಲಿದ್ದರಿಂದ ಪಿರ್ಯಾದಿದಾರರು ಬಸ್ಸಿನಿಂದ ಹೊರಗೆ ರಸ್ತೆಗೆ ಬಿದ್ದು, ಎರಡು ಕೈಗಳಿಗೆ, ಸೊಂಟಕ್ಕೆ ತರಚಿದ ಹಾಗೂ ಗುದ್ದಿದ ರೀತಿಯ ಗಾಯವಾಗಿದ್ದು, ಎಸ್.ಸಿ.ಎಸ್. ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಬಸ್ಸು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.         

Traffic South Police Station              

ದಿನಾಂಕ:11-10-2023 ರಂದು ಬೆಳಗಿನ ಜಾವ 04-15 ಗಂಟೆಗೆ ಪಿರ್ಯಾದಿ AFREEZ ದಾರರಿಗೆ ಮೊಬೈಲ್ ಫೋನ್ ಗೆ ಕರೆ ಬಂದಿದ್ದು, ಕರೆ ಮಾಡಿದವರು ಪಿರ್ಯಾದಿದಾರರ ತಮ್ಮ ಅಝ್ವೀದ್ ಗೆ ತೊಕ್ಕೊಟ್ಟು ನೇತ್ರಾವತಿ ಬ್ರಿಡ್ಜ್ ಬಳಿಯಲ್ಲಿ ಅಪಘಾತವಾಗಿ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋದ ಬಗ್ಗೆ ತಿಳಿಸಿದಂತೆ ಪಿರ್ಯಾದಿದಾರರು ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆಗೆ ತೆರಳಿ ಅಲ್ಲಿನ  ವೈದ್ಯರಲ್ಲಿ ವಿಚಾರಿಸಿದಾಗ, ಪಿರ್ಯಾದಿದಾರರ ತಮ್ಮನು ದಿನಾಂಕ:11-10-2023 ರಂದು ಮುಂಜಾನೆ 04-09 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ನಂತರ ಆಸ್ಪತ್ರೆ ಬಳಿ ಇದ್ದ ಅಬ್ಬಾಸ್ ಎಂಬವರು ಪಿರ್ಯಾದಿದಾರರಲ್ಲಿ  ಜಪ್ಪಿನಮೊಗೇರು ನೇತ್ರಾವತಿ ಬ್ರಿಡ್ಜ್ ನಲ್ಲಿ  KA 07 A 2372  ನೇ ನಂಬ್ರದ ಮೀನಿನ ಲಾರಿಯೊಂದು ಅದರ ಹಿಂದುಗಡೆ KA 19 HN 4174 ನೇ ನಂಬ್ರದ ಸ್ಕೂಟರ್ ಸವಾರನಾದ ಅಝ್ವೀದ್ ಎಂಬಾತನು ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದು, ಅದರ ಮುಂದುಗಡೆ ಹೋಗುತ್ತಿದ್ದ ಲಾರಿಯಲ್ಲಿದ್ದ ಮೀನಿನ ಬಾಕ್ಸೊಂದು ಒಮ್ಮೆಲೇ ರಸ್ತೆಗೆ ಬಿದ್ದಿದ್ದು, ಸಮಯ ಸುಮಾರು ಮುಂಜಾನೆ 03-45 ಗಂಟೆಗೆ ಲಾರಿಯ ಚಾಲಕನಾದ ನಿಶಾಮ್.ಪಿ ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಯಾವುದೇ ಮುನ್ಸೂಚನೆ ನೀಡದೇ ಒಮ್ಮೆಲೇ ಬ್ರೇಕ್ ಹಾಕಿ ನಿಲ್ಲಿಸಿದಾಗ ಅದರ ಹಿಂದಿದ್ದ  ಸ್ಕೂಟರ್ ಸವಾರನಾದ ಅಝ್ವೀದ್ ಎಂಬಾತನು ಸವಾರಿ ಮಾಡಿಕೊಂಡಿದ್ದ ಸ್ಕೂಟರ್  ನಿಯಂತ್ರಣ ತಪ್ಪಿ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರನು  ರಸ್ತೆಗೆ ಬಿದ್ದು, ಸ್ಕೂಟರ್ ಸವಾರನ ತಲೆಯ ಎಡಭಾಗದಲ್ಲಿ  ಕಿವಿಯ ಬಳಿ ತೀವ್ರ ರಕ್ತಗಾಯ ಹಾಗೂ ಎಡ ಕೈಗೆ ತರಚಿದ ಗಾಯವಾದವನನ್ನು ಅಬ್ಬಾಸ್ ಮತ್ತು ಅಪಘಾತವೆಸಗಿದ ಲಾರಿ ಚಾಲಕ ಚಿಕಿತ್ಸೆಯ ಬಗ್ಗೆ ಕಾರೊಂದರಲ್ಲಿ ಪಂಪ್ ವೆಲ್ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಮುಂದೆ ಹಾಜರುಪಡಿಸಿದ್ದು, ವೈದ್ಯರು ಗಾಯಾಳುವನ್ನು ಮುಂಜಾನೆ 04-09 ಗಂಟೆಗೆ ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅಪಘಾತಕ್ಕೆ ಲಾರಿ ನಂಬ್ರ KA 07 A 2372 ನೇದರ ಚಾಲಕ ನಿಶಾಮ್ ಪಿ ಎಂಬಾತನು ತನ್ನ ಲಾರಿಯಲ್ಲಿ ಮೀನುಗಳ ಬಾಕ್ಸ್ ಗಳನ್ನು ಹೇರಿಕೊಂಡು ಹೋಗುವಾಗ ಬಾಕ್ಸ್ ಗಳನ್ನು ಸರಿಯಾಗಿ ಜೋಡಿಸದೇ ಕಟ್ಟದೇ, ನಿರ್ಲಕ್ಷ್ಯ ವಹಿಸಿರುವುದಲ್ಲದೇ ಮೀನಿನ ಬಾಕ್ಸ್ ರಸ್ತೆಗೆ ಬಿದ್ದಾಗ ಹಿಂದುಗಡೆ ಯಾವ ವಾಹನ ಬರುತ್ತಿದೆಯೂ ಎಂದು ನೋಡದೇ  ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ  ಯಾವುದೇ ಮುನ್ಸೂಚನೆ ನೀಡದೇ ಒಮ್ಮೆಲೇ ಲಾರಿಯನ್ನು ಬ್ರೇಕ್ ಹಾಕಿ ನಿಲ್ಲಿಸಿರುವುದೇ ಕಾರಣವಾಗಿರುತ್ತದೆ. ಈ ಬಗ್ಗೆ ಸದ್ರಿ ಚಾಲಕನ ವಿರುದ್ಧ ಸೂಕ್ತ  ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Urva PS

ಪಿರ್ಯಾಧಿ HARISH PSI ದಾರರು ದಿನಾಂಕಃ10-10-2023 ರಂದು ಇಲಾಖಾ ವಾಹನ  ರಲ್ಲಿ ಚಾಲಕರಾಗಿ ವೆಂಕಟೇಶ್ ಹಾಗು ಶಶಿಕುಮಾರ್ ರವರನ್ನು ಜೊತೆಯಲ್ಲಿ ಕರೆದುಕೊಂಡು ರೌಂಡ್ಸ್ ಬಗ್ಗೆ ಠಾಣೆಯಿಂದ ಬೆಳಿಗ್ಗೆ 09-00 ರ ವೇಳೆಗೆ ಹೊರಟು. ಲೇಡಿಹಿಲ್. ಬೋಳೂರು.ದಂಬೆಲ್ .ಕೋಡಿಕಲ್ ಮಾರ್ಗವಾಗಿ ಕೋಡಿಕಲ್ ಕ್ರಾಸ್ ಬಳಿ ತಲುಪುತ್ತಿದ್ದಾಗ ಸಮಯ ಸುಮಾರು 11-55 ರ ವೇಳೆಗೆ ಕೊಟ್ಟಾರ ಚೌಕಿಯಿಂದ ಕೋಡಿಕಲ್ ಕಡೆಗೆ ಮಿನಿ ಟಿಪ್ಪರ್ ಲಾರಿಯೊಂದನ್ನು ಅದರ ಚಾಲಕರು  ಚಲಾಯಿಸಿಕೊಂಡು ಬರುತ್ತಿದ್ದು ಕೋಡಿಕಲ್ ಕ್ರಾಸ್ ಬಳಿ ಇದ್ದ ಪಿರ್ಯಾಧಿದಾರರು ಆ ಟಿಪ್ಪರ್ ಲಾರಿಯನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ  ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪೊಳಲಿ ಕಡೆಯಿಂದ  ಮರಳನ್ನು ಕಳವು ಮಾಡಿ KA 19 D 2051 ನೇ ನಂಬ್ರದ ಟಿಪ್ಪರ್ ಲಾರಿಯಲ್ಲಿ ತುಂಬಿಸಿಕೊಂಡು ಕೋಡಿಕಲ್ ನಲ್ಲಿ ಮಾರಾಟ ಮಾಡಲು ತೆರಳುತ್ತಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ  KA 19 D 2051 ನೇ ನಂಬ್ರದ ಟಿಪ್ಪರ್ ಲಾರಿಯನ್ನು ಮತ್ತು ಸುಮಾರು 11.000/- ರೂ ಮೌಲ್ಯದ ಲಾರಿಯ ಬಾಡಿಯೊಳಗಡೆ ಇದ್ದ 10 ಟನ್ ಮರಳನ್ನು ಮಹಜರು ಮೂಲಕ ಸ್ವಾದೀನಪಡಿಸಿಕೊಂಡಿರುದಲ್ಲದೇ ಆರೋಪಿಗಳಾದ ಅಪ್ರಿದ್ ಮತ್ತು ಅಬ್ದುಲ್ ಸತ್ತಾರ್ ಎಂಬುವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ,

 

ಇತ್ತೀಚಿನ ನವೀಕರಣ​ : 11-10-2023 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080