ಅಭಿಪ್ರಾಯ / ಸಲಹೆಗಳು

Crime Report in  Mangalore West Traffic PS                       

ಪಿರ್ಯಾದಿ PUNEETH RAJ ದಾರರು ತಮ್ಮ ಬಾಬ್ತು ಕೆಎ-19-ಇಜೆಡ್-2945ನೇ ಸ್ಕೂಟರ್ ನಲ್ಲಿ ಮನೆಯಿಂದ ಹೊರಟು ಮದುವೆಯಾಗುವ ಹುಡುಗಿ ವನಿತಾಳನ್ನು ಅವಳ ಮನೆಯಾದ ಮುಲ್ಕಿಗೆ ಬಿಡಲು ಮನೆಯಿಂದ ಹೊರಟು ವನಿತಾಳು ಕೆಲಸ ಮಾಡುವಲ್ಲಿಂದ ಸ್ಕೂಟರ್ ನಲ್ಲಿ ಹಿಂಬದಿ ಸವಾರೆಯಾಗಿ ಕುಳ್ಳಿರಿಸಿಕೊಂಡು ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 07;00 ಗಂಟೆಗೆ ಕೊಡಿಯಾಲ್ ಗುತ್ತು ವೃತ್ತದ ಬಳಿ ತಲುಪುತ್ತಿರುವಾಗ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್ ನ ಹಿಂದಿನಿಂದ ಅಂದರೆ ಬೆಸೆಂಟ್ ಕಡೆಯಿಂದ ಕೊಡಿಯಾಲ್ ಗುತ್ತು ಕಡೆಗೆ  ಕೆಎ-19-ಎಬಿ-9079ನೇ ಬಸ್ಸನ್ನು ಅದರ ಚಾಲಕನು ಇಳಿಜಾರು ರಸ್ತೆಯಲ್ಲಿ ನಿರ್ಲಕ್ಷತನದಿಂದ ಹಾಗೂ ಅಜಾಗರೂಕತೆ ಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್ನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ವನಿತಾಳು ಸ್ಕೂಟರ್ ಸಮೇತ ರಸ್ತೆಗೆ  ಬಿದ್ದಾಗ ವನಿತಾಳ ಬಲಗಾಲಿನ ಪಾದದ ಮೇಲೆ ಬಸ್ಸಿನ ಎದುರಿನ ಚಕ್ರವು  ಹರಿದು ಹೋಗಿ ವನಿತಾಳ  ಪಾದ ಪೂರ್ತಿ ಪುಡಿಯಾಗಿರುತ್ತದೆ ಪಿರ್ಯಾದಿದಾರರಿಗೆ ಪಾದದ ಬಳಿ ಸಣ್ಣ ಪುಟ್ಟ ಗಾಯವಾಗಿರುತ್ತದೆ ಎಂಬಿತ್ಯಾದಿ

Traffic North Police Station               

ಪಿರ್ಯಾದಿ Yallappa Chalageri ದಾರರ ಊರಿನವನಾದ ಬಾಳಪ್ಪ(33) ಎಂಬಾತನು  ನಿನ್ನೆ ದಿನಾಂಕ 10/11/2023 ರಂದು ಸಮಯ ಸುಮಾರು 19.00 ಗಂಟೆಗೆ ತಡಂಬೈಲ್ ಗರುಡ ಬಾರಿಗೆ ಊಟದ ಸಲುವಾಗಿ  NH 66 ನೇಯದನ್ನು ಪೂರ್ವ ಬದಿಯಿಂದ ಪಶ್ಚಿಮ ದಿಕ್ಕಿಗೆ ಡಿವೈಡರ್ ದಾಟಿ ನಡೆದು ಕೊಂಡು ರಸ್ತೆ ದಾಟುತ್ತಿದ್ದ ಸಮಯ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ಏಕಮುಖ ರಸ್ತೆಯಲ್ಲಿ ಸುರತ್ಕಲ್ -ಉಡುಪಿ ಕಡೆಗೆ ಹೋಗುವ KA-19-AB-0997 ನಂಬ್ರದ ಖಾಸಗಿ ಬಸ್ಸನ್ನು  ಅದರ ಚಾಲಕ ಲೋಹಿತ್ ಕೋಟ್ಯಾನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಾಳಪ್ಪ ಎಂಬುವರಿಗೆ ಡಿಕ್ಕಿ ಪಡಿಸಿದ ಪರಿಣಾಮ ರಸ್ತೆಗೆ ಬಿದ್ದಿದ್ದು ಬಸ್ಸಿನ ಬಲಬದಿಯ ಹಿಂಬದಿ ಚಕ್ರವು ಬಾಳಪ್ಪ ರವರ ಬಲಕಾಲಿನ ಪಾದಕ್ಕೆ ತಾಗಿ ಪಾದದ ಬಳಿ ಮತ್ತು ಹಿಮ್ಮಡಿಯ ಬಳಿ ಚರ್ಮ ಹರಿದ ರೀತಿಯ ಗಂಭೀರ ಸ್ವರೂಪದ ಗಾಯವಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Barke PS

ದಿನಾಂಕ:11.11.2023 ರಂದು ಮಂಗಳೂರು ನಗರ ಪೊಲೀಸ್ ಕೇಂದ್ರ  ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿಎಸ್ ಐ ಮಂಗಳೂರು ಉತ್ತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಧ್ಯಾಹ್ನ 13-00 ಉರ್ವ ಮಾರ್ಕೆಟ್ ಬಳಿ   ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ವಿಚಾರಿಸಲಾಗಿ ಹೆಸರು ತಿಲಕ್ ರಾಜ್ ಪ್ರಾಯ: 28 ವರ್ಷ ವಾಸ: ಕೊರ್ದಬ್ಬು ದೇವಸ್ಥಾನದ ಹತ್ತಿರ ಕೃಷ್ಣಪುರ 9 ನೇ ಬ್ಲಾಕ್ ಸುರತ್ಕಲ್ ಮಂಗಳೂರು ಎಂಬುದಾಗಿ ತಿಳಿಸಿದ್ದು ಅನುಮಾನಗೊಂಡ ಫಿರ್ಯಾಧಿದಾರರು ಮತ್ತು ಸಿಬ್ಬಂದಿಗಳು ಅತನಲ್ಲಿ ಮುಂದುವರೆದು ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕೂಲಂಕುಷವಾಗಿ ವಿಚಾರಿಸಲಾಗಿ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ.  ಸದ್ರಿ ತಿಲಕ್ ರಾಜ್ ನನ್ನು ಫಿರ್ಯಾಧಿದಾರರು ಮತ್ತು ಸಿಬ್ಬಂದಿಗಳು ಠಾಣೆಗೆ  ಕರೆ ತಂದು ಅವರ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಸ್ಪರ್ಶ ಡಯಾಗ್ನೊಸ್ಟಿಕ್ ಸೆಂಟರ್ ಗೆ ಸಿಬ್ಬಂದಿಗಳ ಭದ್ರಿಕೆಯಲ್ಲಿ . ಕಳುಹಿಸಿಕೊಟ್ಟಲ್ಲಿ   “Tetrahydracannabinoid (Marijuana) POSITIVE ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಸದ್ರಿ ಆಪಾದಿತರ ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳವಂತೆ ಎಂಬಿತ್ಯಾದಿಯಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 12-11-2023 11:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080