ಅಭಿಪ್ರಾಯ / ಸಲಹೆಗಳು

Crime Report in : Panambur PS        

ದಿನಾಂಕ:10-12-2023 ರಂದು ಮಂಗಳೂರು ತಾಲೂಕು ತಣ್ಣೀರು ಬಾವಿ ಗ್ರಾಮದ ಟೀ ಪಾರ್ಕ್ ಬಳಿಯಿರುವ ಮಂಗಳಾ ಬೋಟ್ ಯಾರ್ಡ್ ನಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಾದ ಬಿನು. ಮತ್ತು ಜಾನ್ ಸನ್ ರವರುಗಳು ದಿನಾಂಕ:09-12-2023 ರಂದು ಹಣದ ವಿಷಯದಲ್ಲಿ ಮಾತನಾಡುತ್ತಿರುವಾಗ ರಾತ್ರಿ 11 ಗಂಟೆಯ ಸುಮಾರಿಗೆ ಏಕಾಏಕಿ ಕೋಪಗೊಂಡ ಜಾನ್ ಸನನು ಮರದ ಕಬ್ಬಿಣದ ಕೆಲಸದ ಉಳಿಯಿಂದ ಬಿನುವಿನ ಹೊಟ್ಟೆಯ ಮೇಲ್ಬಾಗದಲ್ಲಿ ಚುಚ್ಚಿ  ಗಂಭೀರ ಸ್ವರೂಪದ ರಕ್ತ ಗಾಯಗೊಳಿಸಿ ಕೊಲೆ ಮಾಡಿರುತ್ತಾನೆ ಎಂಬಿತ್ಯಾದಿ.

Mulki PS

ಮಂಜುಳಾ ಪ್ರಾಯ:19 ವರಷ, ಎಂಬಾಕೆಯು ದಿನಾಂಕ 09-12-2023 ರಂದು ತನ್ನ ಮನೆ Lingappayyakadu, Karnad Village, Mangaluru City, Karnataka,   ಯಲ್ಲಿಯೇ ಇದ್ದು ಸಂಜೆ 5:40 ಗಂಟೆಗೆ ಪಿರ್ಯದಿದಾರರು ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದಿಂದ ತನ್ನ ಮನೆಗೆ ಬಂದಾಗ ಮನೆಯಲ್ಲಿದ್ದ ಪಿರ್ಯದಿದಾರರ ಮಗಳು ಮಂಜುಳಾ ಪ್ರಾಯ:19 ವರ್ಷ ಎಂಬಾಕೆಯು ಮನೆಯಲ್ಲಿಲ್ಲದೆ ಕಾಣೆಯಾಗಿದ್ದು ಬಳಿಕ ಪಿರ್ಯದಿದಾರರು ಈವರೆಗೆ ತನ್ನ ಸ್ವಂತ ಊರಾದ ಬಿಜಾಪುರ ಮತ್ತು ಇತರ ಸಂಬಂದಿಕರ ಮನೆಗೆ ವಿಚಾರಿಸಿದಾಗಲು ಪಿರ್ಯಾದಿದಾರರ ಮಗಳು  ಅಲ್ಲಿಗೂ ಹೋಗದೆ ವಾಪಾಸ್ಸು ಮನೆಗೂ ಬಾರದೆ ಕಾಣೆಯಾಗಿರುವುದಾಗಿದೆ ಎಂಬಿತ್ಯಾದಿ.

Traffic North Police Station           

ದಿನಾಂಕ 10-12-2023 ರಂದು ಶ್ತೀಮತಿ ಗಂಗವ್ವ ವಗ್ಗರ (47 ವರ್ಷ) ಎಂಬವರು ಮದ್ಯಾಹ್ನ ಸಮಯ ಸುಮಾರು 15:15 ಗಂಟೆಗೆ ಮಂಗಳೂರು ತಾಲೂಕು, ಕುಳಾಯಿ ಶೆಟ್ಟಿ ಐಸ್ ಕ್ರೀಂ ಬಳಿ ಇರುವ A.P. ಮಾರ್ಬಲ್ಸ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆಯನ್ನು ದಾಟುತ್ತಿರುವಾಗ ಬೈಕಂಪಾಡಿ ಕಡೆಯಿಂದ ಕಾರು ನಂಬ್ರ KA-19MB-5595 ನೇಯದನ್ನು ಅದರ ಚಾಲಕ ಫ್ರಾನ್ಸಿಸ್ ಡಿಸೋಜಾ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮಂಗಳೂರು-ಉಡುಪಿ ರಸ್ತೆಯನ್ನು ದಾಟುತ್ತಿದ್ದ ಗಂಗವ್ವ ವಗ್ಗರರವರಿಗೆ ಢಿಕ್ಕಿ ಪಡಿಸಿದ ಪರಿಣಾಮ ಗಂಗವ್ವ ವಗ್ಗರರವರು ರಸ್ತೆಯ ಎಡ ಬದಿಗೆ ಎಸೆಯಲ್ಪಟ್ಟು ಅವರ ತಲೆಯ ಹಿಂಬದಿಗೆ ಗಂಭೀರ ಸ್ವರೂಪದ ಗಾಯ ಮತ್ತು ಬಲಕಾಲಿನ ಕೋಲು ಕಾಲಿನಲ್ಲಿ ಮೂಳೆ ಮುರಿತದ ಗಾಯವಾಗಿದ್ದು ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಶ್ತೀಮತಿ ಗಂಗವ್ವ ವಗ್ಗರರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.  . 

Kankanady Town PS

ದಿನಾಂಕ 10-12-2023 ರಂದು ಬೆಳಗ್ಗೆ ಸುಮಾರು 10.30 ಗಂಟೆಗೆ ಮಂಗಳೂರು ನಗರದ ಕೊಡೆಕ್ಕಲ್  ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ: ಇಝಾಜ್ ಅಹ್ಮದ್ ಪ್ರಾಯ: 25 ವರ್ಷ ವಾಸ:ಶಾಫಿ ಕ್ಲಿನಿಕ್ ಬಳಿ. ಪಕ್ಕಲಡ್ಕ. ಬಜಾಲ್ ಪೋಸ್ಟ್ ಮಂಗಳೂರು. ಎಂಬಾತನು ನಿಷೇದಿತ ಮಾದಕ ವಸ್ತು ಗಾಂಜಾವನ್ನು  ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಪಡಿಸುತ್ತಿದ್ದದಂತೆ, ಆರೋಪಿಯನ್ನು ವಶಕ್ಕೆ  ಪಡೆದುಕೊಂಡು ಎ.ಜೆ ಆಸ್ಪತ್ರೆ ವೈಧ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆರೋಪಿ ಇಝಾಜ್ ಅಹಮ್ಮದ್  ಗಾಂಜಾ  ಸೇವನೆ  ಮಾಡಿರುವುದು ವೈದ್ಯರಿಂದ ದೃಢಪಟ್ಟಿರುತ್ತದೆ. ಆದ್ದರಿಂದ ಆರೋಪಿ ವಿರುದ್ದ ಠಾಣಾ ಎನ್.ಡಿ.ಪಿ.ಎಸ್ ಕಾಯ್ದೆ ಅನ್ವಯ   ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ, ಎಂಬಿತ್ಯಾದಿಯಾಗಿರುತ್ತದೆ

ಇತ್ತೀಚಿನ ನವೀಕರಣ​ : 11-12-2023 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080