ಅಭಿಪ್ರಾಯ / ಸಲಹೆಗಳು

Crime Report in :   Mulki PS      

ಪಿರ್ಯಾದಿ Smt Nisha Kumari ದಾರರು ತನ್ನ ತಂದೆ, ತಾಯಿ, ಮಗುವಿನೊಂದಿಗೆ ತಾಯಿ ಮನೆಯಲ್ಲಿ ವಾಸವಿದ್ದು, ಕಳೆದ 2 ವರ್ಷಗಳ ಹಿಂದೆ ಪಕ್ಷಿಕೆರೆಯ ಪ್ರದೀಪ್ ಜೊತೆ ಮದುವೆ ಮಾಡಿಕೊಟ್ಟಿದ್ದು, ಸದ್ರಿ ಪಕ್ಷಿಕೆರೆಯ ಮನೆಯನ್ನು ಮಾರಾಟ ಮಾಡಿ ದಾಮಸ್ ಕಟ್ಟೆಯಲ್ಲಿ ಬಾಡಿಗೆಗೆ ಮನೆ ಮಾಡಿದ್ದು ಮನೆಯಲ್ಲಿ ಪಿರ್ಯಾದಿಯ ಗಂಡ ಪ್ರದೀಪ್ ಮತ್ತು ಅವರ ಅಣ್ಣ ಪ್ರವೀಣ್ ಇದ್ದುಕೊಂಡು ಅವರು ರಾತ್ರಿ ಕೆಲಸಕ್ಕೆ ಹೋಗುತ್ತಿದ್ದುದರಿಂದ ಪಿರ್ಯಾದಿದಾರರು ತಾಯಿ ಮನೆಯಲ್ಲಿ ಉಳಕೊಂಡು ಪ್ರತೀ ಶನಿವಾರ ಗಂಡನ ಮನೆಗೆ ಹೋಗಿ ಸೋಮವಾರ ಬೆಳಿಗ್ಗೆ ವಾಪಾಸ್ ಬರುತ್ತಿದ್ದು, ದಿನಾಂಕ 06-01-2024 ರಂದು ಪಿರ್ಯಾದಿದಾರರನ್ನು ಆಕೆಯ ಗಂಡ ಪ್ರದೀಪ್ ರವರು ಚೇಳ್ಯಾರ್ ನಲ್ಲಿರುವ ಚಿಕ್ಕಮ್ಮನ ಮನೆಗೆ ಕರೆದಕೊಂಡು ಹೋಗಿ ಭಾನುವಾರ ಸಂಜೆ ಆಕೆಯ ಮನೆಗೆ ಬಿಟ್ಟು ಪ್ರದೀಪನು ದಾಮಸ್ ಕಟ್ಟೆಯ ಮನೆಗೆ ಹೋಗಿದ್ದು, ದಿನಾಂಕ 08-01-2024 ರಂದು ಮದ್ಯಾಹ್ನ 3-00 ಗಂಟೆಯವರೆಗೆ ಪ್ರವೀಣನು ಮನೆಯಿಂದ ಹೊರಡುವ ಸಮಯ ಮನೆಯಲ್ಲಿದ್ದವರು ರಾತ್ರಿ 9-00 ಗಂಟೆ ವೇಳೆಗೆ ಪಿರ್ಯಾದಿದಾರರಿಗೆ ತಾನು ಕೆಲಸದ ಬಗ್ಗೆ ದೂರ ಹೋಗುವುದಾಗಿ ಮೊಬೈಲ್ ಮೂಲಕ ಮೆಸೇಜ್ ಕಳುಹಿಸಿದ್ದನ್ನು ಪಿರ್ಯಾದಿ ದಾರರು ಗಮನಿಸಿ ಪ್ರದೀಪ್ ರವರ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ಛ್ ಆಪ್ ಬರುತ್ತಿದ್ದು ಈ ವಿಚಾರವನ್ನು ಪಿರ್ಯಾದಿದಾರರು ಭಾವ ಪ್ರವೀಣ್ ರವರಿಗೆ ತಿಳಿಸಿ ಪ್ರದೀಪ್ ರವರನ್ನು ಸಂಬಂಧಿಕರ ಮನೆಯಲ್ಲಿ, ಪರಿಚಯಸ್ಥರಲ್ಲಿ ವಿಚಾರಿಸಿ ಎಲ್ಲಾ ಕಡೆ ಹುಡುಕಾಡಿದ್ದಲ್ಲಿ  ನನ್ನ ಗಂಡ ಪ್ರದೀಪ್ (30) ರವರು ಮನೆಗೆ ವಾಪಾಸ್ ಬಾರದೇ, ಸಂಬಂಧಿಕರ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Mulki PS

ಮುಲ್ಕಿ ತಾಲೂಕು ಹಳೆಯಂಗಡಿ ಗ್ರಾಮದ ಕೊಪ್ಪಳ ಎಂಬಲ್ಲಿರುವ ನಂದಿನಿ ನದಿಯಲ್ಲಿ ಯಾರೋ ಅಪರಿಚಿತರು ಅಕ್ರಮವಾಗಿ ಮರಳುಗಾರಿಕೆನಡೆಸುತ್ತಿರುವ ಬಗ್ಗೆ ದಿನಾಂಕ 10-01-2024 ರಂದು 14-30 ಗಂಟೆಗೆ ಪಿರ್ಯಾದಿದಾರರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಇತರ ಸರಕಾರಿ ಅಧಿಕಾರಿಗಳೊಂದಿಗೆ ಮತ್ತು ಸರಕಾರಿ ಪಂಚರೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದಾಗ ನಂದಿನಿ ನದಿಯಿಂದ ಅಕ್ರಮವಾಗಿ ಮರಳು ಗಾರಿಕೆ ನಡೆಸುತ್ತಿದ್ದ ಆರೋಪಿಗಳು ಪರಾರಿಯಾಗಿದ್ದು, ಬಳಿಕ ಪಿರ್ಯಾದಿದಾರರು ಪರಾರಿಯಾದ ಆರೋಪಿಗಳು ಬಿಟ್ಟುಹೋದ 4 ಕಬ್ಬಿಣದ ದೋಣಿಗಳನ್ನು ಮತ್ತು ಸದ್ರಿ ದೋಣಿಗಳ ಒಳಗಡೆ ಇದ್ದ ಸುಮಾರು ಒಂದರಿಂದ ಎರಡು ಬುಟ್ಟಿ ಮರಳನ್ನು ಮಹಜರು ಮುಖೇನ ಸ್ವಾದೀನ ಪಡಿಸಿಕೊಂಡಿದ್ದು ಪಿರ್ಯಾದಿದಾರರು ಸ್ವಾದೀನಪಡಿಸಿಕೊಂಡ 4 ದೋಣಿಗಳ ಅಂದಾಜು ಮೌಲ್ಯ 6 ಲಕ್ಷ ರೂ ಆಗಿದ್ದು ಸ್ವಾದೀನ ಪಡಿಸಿಕೊಂಡ ಮರಳಿನ ಪ್ರಮಾಣ ಸುಮಾರು 0.50 ಮೆಟ್ರಿಕ್ಟನ್ ಆಗಿದ್ದು ಅದರ ಅಂದಾಜು ಮೌಲ್ಯ 1,500/- ರೂ ಆಗಿದ್ದು ಅಲ್ಲದೇ ಯಾರೋ ಸದ್ರಿ ನದಿಗೆ ಹೊಂದಿಕೊಂಡಿರುವ ಸರ್ವೆ ನಂಬ್ರ:37/18 ಮತ್ತು ಸರ್ವೆ ನಂಬ್ರ:37/17 ನೇ ಜಾಗದಲ್ಲಿ ಮರಳಿನ ದಕ್ಕೆಯನ್ನು ನಿರ್ಮಿಸಿರುವುದಾಗಿದೆ ಎಂಬಿತ್ಯಾದಿ.

Moodabidre PS

 ಪಿರ್ಯಾದಿದಾರರಾದ ಶ್ರೀ ಯಮನೂರ (35 ವರ್ಷ)  ರವರು ದಿನಾಂಕ 10-01-2024 ರಂದು ಎಂದಿನಂತೆ ರಾತ್ರಿ 10.00 ಗಂಟೆಗೆ ತನ್ನ ಹೆಂಡತಿ ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದು, ನಂತರ ಪಿರ್ಯಾದಿದಾರರು ಮತ್ತು ಅವರ ಹೆಂಡತಿ ನಿರ್ಮಲ ರವರು ಬೆಳಿಗ್ಗೆ ಸುಮಾರು 5.00 ಗಂಟೆಗೆ ಎದ್ದು ನೋಡುವಾಗ ಪಿರ್ಯಾದಿದಾರರ ಹೆಂಡತಿಯ ಸುಮಾರು 8 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಒಂದು ರೆಡ್ ಮಿ ಮೊಬೈಲ್ ಪೋನ್ ಕಳವಾಗಿದ್ದು ಅವುಗಳ ಅಂದಾಜು ಮೌಲ್ಯ 50000/- ರೂಪಾಯಿ ಆಗಬಹುದು ಎಂಬಿತ್ಯಾದಿ

Mangalore South PS

ಪಿರ್ಯಾದಿ CHINDAN T ದಾರರು ಮನೆಯಲ್ಲಿ ಪತ್ನಿ ಶ್ರೀದೇವಿ, ಮಕ್ಕಳಾದ ಸುಜಾತ, ಸುರೇಶ್, ಸುಚಿತ್ರ  ಜೊತೆ ವಾಸವಾಗಿದ್ದು, ದಿನಾಂಕ 19-12-2023 ರಂದು ರಾತ್ರಿ ಪಿರ್ಯಾದಿದಾರರ ಮಗಳಾದ ಸುಜಾತ ಮತ್ತು ಪಿರ್ಯಾದಿದಾರರ ಪತ್ನಿ ದೇವಸ್ಥಾನಕ್ಕೆ ಹೋಗಿ ಬಂದ ನಂತರ ಪಿರ್ಯಾದುದಾರರ ಪತ್ನಿ ಚಿನ್ನವನ್ನು ಮತ್ತು ನಗದು 6,000/- ರೂಪಾಯಿ ಹಣವನ್ನು ಒಂದು ಪರ್ಸಿನಲ್ಲಿ ಹಾಕಿ ಆ ಪರ್ಸ್ ನ್ನು ಒಂದು ವ್ಯಾನಿಟಿ ಬ್ಯಾಗ್ ನೊಳಗಡೆ ಇಟ್ಟು ಆ ವ್ಯಾನಿಟ್ ಬ್ಯಾಗ್ ನ್ನು ಸುಜಾತಳ ಬೆಡ್ ರೂಮ್ ನಲ್ಲಿರುವ ಟಿಪಾಯಿ ಬಳಿಯಲ್ಲಿ ರಾತ್ರಿ 9-30 ಗಂಟೆಗೆ  ಇಟ್ಟಿರುತ್ತಾರೆ. ನಂತರ ಪಿರ್ಯಾದಿದಾರರು ಮತ್ತು ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಮಲಗಿರುತ್ತಾರೆ. ದಿನಾಂಕ 20-12-2023 ರಂದು ಬೆಳಗ್ಗಿನ ಜಾವ 5-30 ಗಂಟೆಗೆ ಪಿರ್ಯಾದುದಾರರ ಪತ್ನಿ ಶ್ರೀದೇವಿ ವ್ಯಾನಿಟಿ ಬ್ಯಾಗ್ ಒಳಗಡೆ ಕೈ ಹಾಕಿ ನೋಡಿದಾಗ ಚಿನ್ನಾಭರಣ ಇದ್ದ ಪರ್ಸ್ ಇರಲಿಲ್ಲ. ನಂತರ ಪಿರ್ಯಾದುದಾರರ ಮಗಳಾದ ಸುಜಾತ ಮತ್ತು ಪಿರ್ಯಾದುದಾರರ ಪತ್ನಿ ಬೆಳಗ್ಗಿನ ಜಾವ ದೇವಸ್ಥಾನಕ್ಕೆ ಹೋಗಲಿಕ್ಕೆ ಇದ್ದುದರಿಂದ ಅವರು ದೇವಸ್ಥಾನಕ್ಕೆ ಹೋಗಿ ಬಂದು ಎಲ್ಲರೂ ಸೇರಿ ಮನೆಯೆಲ್ಲ ಹುಡುಕಾಡಿದರೂ ಚಿನ್ನಾಭರಣ ಮತ್ತು ನಗದು ಹಣ ಸಿಗಲಿಲ್ಲ. ಯಾರೋ ಕಳ್ಳರು ಒಟ್ಟು 160 ಗ್ರಾಂ ಚಿನ್ನಾಭರಣ ಮತ್ತು ನಗದು ಹಣ 6000/- ರೂಪಾಯಿ ಸೇರಿ ಒಟ್ಟು 9,34,000/- ರೂಪಾಯಿ ಮೌಲ್ಯ ಸೊತ್ತುಗಳನ್ನು ಕಳವು ಮಾಡಿರುತ್ತಾರೆ. ಕಳವಾದ ಚಿನ್ನಾಭರಣವನ್ನು ಮನೆಯೆಲ್ಲಾ ಹುಡುಕಾಡಿ ಸಿಗದೇ ಇರುವುದರಿಂದ. ಈ ದಿನ ದಿನಾಂಕ 11-01-2024 ರಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ಈ ಪಿರ್ಯಾದು ನೀಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Panambur PS

ಪಿರ್ಯಾದಿ RAKESH ದಾರರು ಟ್ಯಾಕ್ಸಿ ಚಾಲಕ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ತಾಯಿ ಕಳೆದ 12 ವರ್ಷಗಳಿಂದ  ಮನೋರೋಗದಿಂದ  ಬಳಲುತ್ತಿದ್ದು ಅವರಿಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿಯವರಿಂದ ಚಿಕಿತ್ಸೆ ನೀಡಿರುವುದಾಗಿದೆ ಅದರಂತೆ ಪ್ರತಿದಿನ ಔಷಧಿಯನ್ನು ತೆಗೆದುಕೊಂಡು  ಮನೆಯಲ್ಲೇ ಇರುತ್ತಿದ್ದರು. ಆದರೆ  ದಿನಾಂಕ 09-01-2024 ರಂದು ಪ್ರತಿ ದಿನದಂತೆ  ಪಿರ್ಯಾದಿದಾರರು ಹಾಗೂ ಕುಟುಂಬದವರು ಕೆಲಸಕ್ಕೆ ತೆರಳಿ ಸಂಜೆ 05:00 ಗಂಟೆಗೆ ಪಿರ್ಯಾದಿದಾರರ ಅಕ್ಕನಾದ ಪುರ್ಣಿಮಾರವರು ಕೆಲಸ ಮುಗಿಸಿ ಮನೆಗೆ ಬಂದಾಗ ತನ್ನ ತಾಯಿಯಾದ ರಾಧರವರು ಮನೆಯಲ್ಲಿರಲಿಲ್ಲ. ಆಗ ತನ್ನ ಅಕ್ಕ ಪೋನ್ ಕರೆ ಮಾಡಿ ವಿಷಯವನ್ನು ತಿಳಿಸಿದ್ದು, ಪಿರ್ಯಾದಿ  ಮತ್ತು ಮನೆಯವರು  ಸೇರಿ ಈವರೆಗೆ ನೆರೆಕರೆಯವರಲ್ಲಿ ವಿಚಾರಿಸಿ ಹಾಗೂ ಅಂಗಾರಗುಂಡಿ, ಬೈಕಂಪಾಡಿ,  ಮಂಗಳೂರು  ಮುಂತಾದ ಕಡೆಗಳಲ್ಲಿ   ರಾಧರವರನ್ನು  ಹುಡುಕಾಡಿದಲ್ಲಿ   ಈವರೆಗೂ  ಪತ್ತೆಯಾಗಿರುವುದಿಲ್ಲ ಆದುದರಿಂದ ಕಾಣೆಯಾದ ತನ್ನ ತಾಯಿ ರಾಧ ಪ್ರಾಯ: 53 ವರ್ಷ  ಎಂಬವರನ್ನು ಪತ್ತೆ ಮಾಡಿಕೊಡಬೇಕಾಗಿ  ಕೋರಿಕೆ.

Mangalore South PS

ಪ್ರಕರಣದ ಪಿರ್ಯಾದಿ ಶ್ರೀಮತಿ ಲಕ್ಷೀ  ರವರ ಮಗ  ದೇವಪ್ಪ [ಪ್ರಾಯ 37 ವರ್ಷ] ಎಂಬುವರು ಮಾನಸಿಕನಾಗಿ ಅಶ್ವಸ್ಥನಾಗಿದ್ದು ದಿನಾಂಕ 07-01-2024 ರಂದು  ಮಂಗಳೂರು ನಗರದ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದ್ದಿದ್ದು, ಚಿಕಿತ್ಸೆಗೆ ದಾಖಲುಮಾಡಿರುತ್ತಾರೆ, ದಿನಾಂಕ: 09-01-2024 ರಂದು  ಸಮಯ ಮಧ್ಯಾಹ್ನ 02-00 ಗಂಟೆಗೆ ಪಿರ್ಯಾದಿದಾರರು ಅವರ ಮಗನಿಗೆ ಊಟ ಕೊಟ್ಟು ನಂತರ  ಅವರು ಊಟ ಮಾಡುವ ಸಮಯ ದೇವಪ್ಪ [ಪ್ರಾಯ 37 ವರ್ಷ]  ಪಿರ್ಯಾದಿದಾರರಿಗೆ  ಹೇಳದೆ  ಕೇಳದೆ ಆಸ್ಪತ್ರೆಯಿಂದ ಓಡಿ ಹೋಗಿರುತ್ತಾನೆ, ಪಿರ್ಯಾದಿದಾರರು ಆಸ್ಪತ್ರೆಯ ಆವರಣದ ಎಲ್ಲ ಕಡೆಗಳಲ್ಲಿ ಹುಡುಕಾಡಿ ನಂತರ ಆಸ್ಪತ್ರೆಯ ಸುತ್ತಮುತ್ತಲೂ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ ನಂತರ  ಪಿರ್ಯಾದಿದಾರರು ಮನೆಗೆ ಹೋಗಿ ಅಲ್ಲಿಯೂ ಎಲ್ಲಕಡೆಗಳಲ್ಲಿ ಹುಡುಕಿ, ಸಂಬಂಧಿಕರಲ್ಲಿ ನೆರೆಕೆರೆಯವರಲ್ಲಿ ವಿಚಾರಿಸಲಾಗಿ ಈವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ. ಈತನಕ ಪಿರ್ಯಾದಿದಾರರು ಅವರ ಮಗನ ಬಗ್ಗೆ ಮಂಗಳೂರು ನಗರದ ಕೆಲವೊಂದು ಕಡೆಗಳಲ್ಲಿ ಹುಡುಕಾಡಿದರೂ ಯಾವುದೇ  ಮಾಹಿತಿ ದೊರೆತಿರುವುದಿಲ್ಲ  ಎಂಬಿತ್ಯಾದಿ.

Mangalore East PS

ಪಿರ್ಯಾದಿದಾರರು ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಮಂಗಳೂರು ಕಾಲೇಜಿನ  ಪ್ರಾಂಶುಪಾಲರಾಗಿ 3 ವರ್ಷಗಳಿಂದ ಕೆಲಸ ಮಾಡುತ್ತಿದ್ದವರು, ದಿನಾಂಕ 30-12-2023 ರಂದು ಅಪರಾಹ್ನ ಸುಮಾರು 2:30 ಗಂಟೆಗೆ ಕಾಲೇಜಿನ ಕರ್ತವ್ಯ ಮುಗಿಸಿಕೊಂಡು ಮನೆಗೆ ಹೋಗಿರುತ್ತಾರೆ. ನಂತರ ದಿನಾಂಕ 01-01-2024 ರಂದು  ಪೂರ್ವಾಹ್ನ ಸುಮಾರು ಸಮಯ 9:30 ಗಂಟೆಗೆ ಕಾಲೇಜಿಗೆ ಬಂದಾಗ ಕಾಲೇಜಿನ ಜವಾನರಾದ ಶ್ರೀ ಭವಾನಿಶಂಕರ ಜಿ ಕೆ ಇವರು ಪಿರ್ಯಾದಿದಾರರಿಗೆ ಮಾಹಿತಿ ನೀಡಿದಂತೆ ಪಿರ್ಯಾದಿದಾರರ ಜೊತೆಗೆ ಸಂಸ್ಥೆಯ ಉಪನ್ಯಾಸಕರಾದ ಶ್ರೀ ಹರೀಶ ಸಿ.ಪಿ, ಶ್ರೀ ಸಂತೋಷ್ ಕುಮಾರ ಪಿ, ಶ್ರೀ ದೇವರಾಜು ಡಿ, ಹಾಗೂ ಸಿಸಿಟೆಕ್ ಸಂಯೋಜಕರಾದ ಶ್ರೀ ರೊನಾಲ್ಡ ಮಿರಾಂದ ಇವರೊಂದಿಗೆ ಸಂಸ್ಥೆಯ ಅವರಣದ ಎಲ್ಲಾ ಕಡೆ ಸುತ್ತಾಡಿ ನೋಡಿದಾಗ, ಉಪಹಾರ  ಗೃಹದ ಮೇಜು, ಬೆಂಚು, ಆವರಣದ ಗೋಡೆ ಮತ್ತು ಪೈಪ್ ವ್ಯವಸ್ಥೆಗಳನ್ನು ಹಾಗೂ ಮಹಿಳಾ ಶೌಚಾಲಯದ ಒಳಗಿರುವ ಪ್ಯಾಡ್ ಡಿಸ್ ಪೋಸಿಂಗ್ ಉಪಕರಣ, ವಿದ್ಯುತ್ ವ್ಯವಸ್ಥೆ ಹೀಗೆ ಎಲ್ಲವನ್ನು ಧ್ವಂಸಗೊಳಿಸರುವುದಲ್ಲದೆ ಕೆಲವು ಸಿಸಿಟಿವಿ ಕ್ಯಾಮೆರಾಗಳನ್ನು ಕಿತ್ತ ಕೊಂಡು ಹೋಗಿರುವುದು ಮಾತ್ರವಲ್ಲದೆ, ಡ್ರೈನೇಜ್ ಮುಚ್ಚಳವನ್ನು ಒಡೆದು ಹಾಕಿರುವುದು ಮತ್ತು ಇತರ ಹಲವಾರು ಜಾಗಗಳಲ್ಲಿ ಹಾನಿ ಮಾಡಿರುತ್ತಾರೆ, ಹಾಗೂ ಸಂಸ್ಥೆಯ ಆಟದ ಮೈದಾನದಲ್ಲಿ ಗುಂಪು ಸೇರಿ ಮದ್ಯ ಸಹಿತ ಅಮಲು ಪದಾರ್ಥ ಸೇವನೆ ಮಾಡಿ ಮೈದಾನದಲ್ಲಿ ಗಾಜಿನ ಬಾಟಲುಗಳನ್ನು ಒಡೆದು ಹಾಕಿ ಬಿಸಾಕಿ ಹಾಳುಗೆಡವಿರುವುದು ಕಂಡುಬಂದಿರುತ್ತದೆ. ಕೂಡಲೇ ಪಿರ್ಯಾದಿದಾರರು 112 ಕ್ಕೆ ದೂರವಾಣಿ ಮೂಲಕ ತಿಳಿಸಿರುತ್ತೇನೆ. ನಂತರ ಸಂಸ್ಥೆಯ ಹಂತದಲ್ಲಿ ವಿವರಗಳನ್ನು ಕಲೆ ಹಾಕಿ ವಿಚಾರಣೆ ಕೈಗೊಂಡು ಎಲ್ಲಾ ಸಿಸಿಟಿವಿಗಳ ದೃಶ್ಯಗಳನ್ನು  ಪರಿಶಿಲಿಸಿ ನೋಡಿದಾಗ ಕೆಲವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಂಡುಬಂದ ದೃಶಗಳಿಂದಾಗಿ ದಿನಾಂಕ 31-12-2023 ರಂದು ತಡರಾತ್ರಿ ಸುಮಾರು 2:40 ರಿಂದ 3:30 ಗಂಟೆಯ ಸಮಯದಲ್ಲಿ ಸುಮಾರು 7 ರಿಂದ 9 ವಿದ್ಯಾರ್ಥಿಗಳು ಸಂಸ್ಥೆಯ ಆವರಣದೊಳಗೆ ಓಡಾಡುವುದು ಕಂಡು ಬಂದಿರುತ್ತದೆ. ಇದರಿಂದ ಸಂಸ್ಥೆಗೆ ಸಂಬಂಧಪಟ್ಟ ಸುಮಾರು ರೂಪಾಯಿ 1 ಲಕ್ಷದಷ್ಟು ಸೊತ್ತುಗಳನ್ನು ಹಾಳುಗೆಡವಿ ಧ್ವಂಸವಾಗಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಅವರನ್ನು ಪತ್ತೆ ಮಾಡಿ,ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಲು ಕೋರಿಕೆ ಎಂಬಿತ್ಯಾದಿ.

Kankanady Town PS

ಪಿರ್ಯಾದಿ Arun H S ದಾರರರು ಮಂಗಳೂರು ನಗರದ ಕುಲಶೇಖರದ ಕೆ.ಎಮ್ ಎಫ್ ಡೈರಿ ಹತ್ತಿರ ಇರುವ ನಂದಿನ ನಗರದಲ್ಲಿರುವ ಕಾಳಿಕಂಭ ನಿಲಯದಲ್ಲಿ ಹೆಂಡತಿ ಮಗುವಿನೊಂದಿಗೆ ವಾಸ ಮಾಡಿಕೊಂಡಿದ್ದು, ದಿನಾಂಕ: 11-01-2024 ರಂದು ಬೆಡ್ ರೂಮ್ ನಲ್ಲಿ ಗಾಡ್ರೆಜ್ ನಲ್ಲಿ ಚಿನ್ನಾಭರಣಗಳನ್ನು ಇಟ್ಟಿದ್ದು, ಆ ಕೀಯನ್ನು ಅದೇ ಕೋಣೆಯ ಸೆಲ್ಪ್ ನಲ್ಲಿಟ್ಟು, ಮನೆಯನ್ನು ಲಾಕ್ ಮಾಡಿ,  ಬೆಳಿಗ್ಗೆ 10-30 ಗಂಟೆಗೆ ಹೆಂಡತಿಯನ್ನು ಕೆಲಸದ ಬಗ್ಗೆ ಫರಂಗಿಪೇಟೆಗೆ ಹೋಗಿ, ಅವರನ್ನು ಬಿಟ್ಟು ಮದ್ಯಾಹ್ನ 3-00 ಗಂಟೆಗೆ ಬಂದು, ಮನೆಯ ಲಾಕ್ ನ್ನು ತೆರೆದು ಒಳಗೆ ನೋಡಿದಾಗ ಯಾರೋ ಕಳ್ಳರು ಮನೆಯ ಹೆಂಚುಗಳನ್ನು ತೆಗೆದು ಒಳ ಪ್ರವೇಶಿಸಿ, ಮನೆಯ ಬೆಡ್ ರೂಮ್ ನ ಸೆಲ್ಪ್ ನಲ್ಲಿದ್ದ  ಗಾಡ್ರೇಜ್ ಕೀಯನ್ನು ಬಳಸಿ ಗಾಡ್ರೇಜ್ ನಲ್ಲಿದ್ದ ನೆಕ್ಲೇಸ್ -  8 ಗ್ರಾಂ, ಜೋಮಾಲೆ ಸರ-40 ಗ್ರಾಂ, ಚಿನ್ನದ ಖಡ್ಗ- 8ಗ್ರಾಂ, ಕಿವಿಯೋಲೆ-1 ಜೊತೆ- 6 ಗ್ರಾಂ, ಮಗುವಿನ ಚೈನ್ – 10 ಗ್ರಾಂ, ಮಗುವಿನ ಬ್ರಾಸ್ ಲೈಟ್- 4 ಗ್ರಾಂ, ಮಗುವಿನ ಕೈ ಬಳೆ-2.5 ಗ್ರಾಂ, ಮಗುವಿನ ಕಪ್ಪು ಮಣಿ ಇರುವ ಕೈಬಳೆ-1, 5 ಗ್ರಾಂ, ಮಗುವಿನ ರಿಂಗ್ ಗಳು-2, ಅಂದಾಜು – 4 ಗ್ರಾಂ ಒಟ್ಟು ಅಂದಾಜು 87.5 ಗ್ರಾಂ ನ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಇವುಗಳ ಒಟ್ಟು ಮೌಲ್ಯ ರೂ. 3,50,000/- ಆಗಬಹುದಾಗಿದೆ.

 

ಇತ್ತೀಚಿನ ನವೀಕರಣ​ : 12-01-2024 04:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080