ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore East Traffic PS                          

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿದಾರರಾದ ಜಲಜಾಕ್ಷಿ ರವರ ಮಗ ಧನರಾಜ್ ರವರು ದಿನಾಂಕ: 11/12/2024 ರಂದು ರಾತ್ರಿ 11-45 ಗಂಟೆಗೆ ಸ್ಕೂಟರ್ ನೊಂದಣಿ ಸಂಖ್ಯೆ KA-19-HM-8408 ನೇಯದನ್ನು ಚಲಾಯಿಸಿಕೊಂಡು ಭಾರತ್ ಬೀಡಿ ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಬರುತ್ತಿರುವಾಗ ಭಾರತ್ ಬೀಡಿ ಸಮೀಪದ ವನಸ್ ಹೋಟೇಲ್ ಎದುರು ತಲುಪುತ್ತಿದ್ದಂತೆ ತನ್ನ ಎಡ ಭಾಗದಲ್ಲಿ ಹೋಗುತ್ತಿದ್ದ ಕಾರು ನೊಂದಣಿ ಸಂಖ್ಯೆ: KA-19-MP-0870 ನೇಯದನ್ನು ಅದರ ಚಾಲಕ ದತ್ತಾತ್ರೇಯ ಎಂಬಾತನು ವಾಪಸ್ ಭಾರತ್ ಬೀಡಿ ಕಡೆಗೆ ಹೋಗಲು ತೆರೆದ ಡಿವೈಡರ್ ಕಡೆಗೆ ಯಾವುದೇ ಸೂಚನೆ ನೀಡದೇ ಒಮ್ಮೇಲೆ ಏಕಾಏಕಿಯಾಗಿ ಯೂ ಟರ್ನ್ ಮಾಡಿ ಸ್ಕೂಟರಿಗೆ ಢಿಕ್ಕಿ ಪಡಿಸಿದ್ದರಿಂದ ಸವಾರ ಧನರಾಜ್ ರವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋದಾಗ ಪರೀಕ್ಷಿಸಿದ ತಲೆಗೆ ಒಳಪೆಟ್ಟಾದ ಗಾಯವಾಗಿರುವುದಾಗಿ ತಿಳಿಸಿರುತ್ತಾರೆ, ಸದ್ರಿ ಆಸ್ಪತ್ರೆಯಲ್ಲಿಎ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಬಳಿಕ ಮುಂದಿನ ಚಿಕಿತ್ಸೆಗಾಗಿ ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

Traffic South Police Station                        

ಪಿರ್ಯಾದಿ B Khaleed  ಇವರು ರರು ತಲಪಾಡಿ RTO ಚೆಕ್ ಪೊಸ್ಟ್ ಬಳಿ ರಾತ್ರಿ ಕರ್ತವ್ಯದಲ್ಲಿದ್ದು  ದಿನಾಂಕ 12-02-2024 ರಂದು  ಬೆಳಿಗ್ಗೆ 1.30 ಗಂಟೆಗೆ  ಮಂಗಳೂರಿನಿಂದ ತಲಪಾಡಿ ಕಡೆಗೆ  ಹಾದು ಹೋಗಿರುವ ರಾಹೆ 66 ರ ತಲಪಾಡಿ ಚೆಕ್ ಪೊಸ್ಟ್ ಎದುರಿನಲ್ಲಿ ಅಪರಿಚಿತ ವ್ಯಕ್ತಿಯೊರ್ವನು ನಜಾತ್ ಕಾಂಪ್ಲೇಕ್ಸ್  ಕಡೆಯಿಂದ RTO   ಚೆಕ್ ಪೊಸ್ಟ್ ಕಡೆಗೆ  ರಸ್ತೆ  ದಾಟುತ್ತಿದ್ದಾಗ  ಮಂಗಳೂರು ಕಡೆಯಿಂದ  ತಲಪಾಡಿ ಕಡೆಗೆ  ಬರುತ್ತಿದ್ದ ಕಾರಿನ ಚಾಲಕನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸದ್ರಿ ಅಪರಿಚಿತ ವ್ಯಕ್ತಿಗೆ ಡಿಕ್ಕಿಪಡಿಸಿದ್ದು ಕಾರನ್ನು ಅದರ ಚಾಲಕ ನಿಲ್ಲಿಸದೇ ಅದರ ಚಾಲಕನು ಪರಾರಿಯಾಗುತ್ತಿರುವಾಗ  ಕಾರು ನಂಬ್ರ ನೋಡಲಾಗಿ KL-14-AD-4002 ಆಗಿರುತ್ತದೆ. ಕೂಡಲೇ ಪಿರ್ಯಾದಿದಾರರು ಮತ್ತು ಇತರೇ ವಾಹನದ ಚಾಲಕರು ಡಾಮಾರು ರಸ್ತೆಯಲ್ಲಿ ಬಿದ್ದದ್ದ ವ್ಯಕ್ತಿಯನ್ನು ಉಪಚರಿಸಿ ನೊಡಲಾಗಿ ಸದ್ರಿ ವ್ಯಕ್ತಿಯು ಸುಮಾರು 60 ವರ್ಷದವರಾಗಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಸೊಂಟಕ್ಕೆ ಗುದ್ದಿದ ಹಾಗೂ ಕೈಕಾಲುಗಳಿಗೆ ಪರಚಿದ ಗಾಯವಾಗಿದ್ದು ಕೂಡಲೇ ಅಂಬುಲೆನ್ಸ್ ನಲ್ಲಿ ವೆನ್ಲಾಕ್ ಅಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ವೈದ್ಯರು ಪರೀಕ್ಷಿಸಿ ಸುಮಾರು 02.:8 ಗಂಟೆಗೆ ಅಪರಿಚಿತ ವ್ಯಕ್ತಿ ಮೃತಪಟ್ಟ ಬಗ್ಗೆ ತಿಳಿಸಿರುವುದಾಗಿದೆ ಎಂಬಿತ್ಯಾದಿ.

 

Traffic South Police Station                        

ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ PARVATHI ದಿನಾಂಕ: 12-02-2024 ರಂದು ಫಿರ್ಯಾದಿದಾರರು ತೊಕ್ಕೋಟ್ಟು ಬಸ್ಸು ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟಿನಿ ಬಳಿ ರಸ್ತೆಯನ್ನು ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಸಮಯ ಸುಮಾರು 10-15 ಗಂಟೆಗೆ KA-19-ME-3184 ನೇ ನಂಬ್ರದ ಬಿಳಿ ಬಣ್ಣದ ಓಮ್ನಿ ಕಾರು ಚಾಲಕ ಅಬ್ಸಾಲಿ ಎಂಬಾತನು ತೊಕ್ಕೊಟ್ಟು ಬಸ್ ನಿಲ್ದಾಣದ ಕಡೆಯಿಂದ ದುಡುಕುತನ ಹಾಗೂ ನಿರ್ಲಕ್ಷತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು ಫಿರ್ಯಾದಿದಾರರ ಎಡಕೋಲು ಕಾಲಿನ ಮೇಲೆ ಓಮ್ನಿ ಕಾರಿನ ಚಕ್ರ ಹರಿದು ಎಡಕೋಲು ಕಾಲಿನ ಮೂಳೆ ಮುರಿತ, ಹೆಬ್ಬೆರಳು ಬಳಿ ತರಚಿದ ಗಾಯವಾಗಿದ್ದು, ಸಾರ್ವಜನಿಕರು ಮತ್ತು ಓಮ್ನಿ ಕಾರಿನ ಚಾಲಕ ಫಿರ್ಯಾದಿದಾರರನ್ನು ಉಪಚರಿಸಿ ನೇತಾಜಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈಧ್ಯರು ಫಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

 

Traffic North Police

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಈ ದಿನ ದಿನಾಂಕ 12-02-2024 ರಂದು ಪಿರ್ಯಾದಿ Vinod Alva ಇವರ ಅಕ್ಕ ಯಶೋಧ (54) ಆಕೆಯ ಮೈದುನ ಯಶವಂತ ರವರನ್ನು ಸುರತ್ಕಲ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೆಳಿಗ್ಗೆ  09:45 ಗಂಟೆಗೆ ರಸ್ತೆ ದಾಟುತ್ತಿದ್ದ KA-19-HG-9253 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಲಕ್ಷ್ಮಣ್ ಎಂಬಾತನು ಚೊಕ್ಕಬೆಟ್ಟು ಕ್ರಾಸ್ ನಿಂದ ಸುರತ್ಕಲ್ ಕಡೆಗೆ ದುಡುಕುತನದಿಂದ ವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಅಕ್ಕ ಯಶೋಧಾಳಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಅಕ್ಕ ಮತ್ತು ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಅಕ್ಕ ಯಶೋದಾಳಿಗೆ ಎಡ ಕಾಲಿನ ಮೊಣಗಂಟಿನ ಬಳಿ ರಕ್ತಗಾಯವಾಗಿದ್ದು,ಬಲ ಕಾಲಿನ ಮೊಣಗಂಟಿನ ಬಳಿ ಗುದ್ದಿದ ರೀತಿಯ ಗಾಯ,ಬಲ ಭುಜದ ಬಳಿ ಗುದ್ದಿದ ರೀತಿಯ ಗಾಯ, ತಲೆಯ ಬಲಬದಿ ರಕ್ತಗಾಯವಾಗಿರುತ್ತದೆ. ಡಿಕ್ಕಿಪಡಿಸಿದ ಮೋಟಾರ್ ಸೈಕಲ್ ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಆತನು ಅಪಘಾತದ ನಂತರ ಪಿರ್ಯಾದಿದಾರರ ಅಕ್ಕನನ್ನು ಆಸ್ಪತ್ರೆಗೆ ಸೇರಿಸದೇ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 13-02-2024 07:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080