ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Mangalore East Traffic PS                          

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಅಸ್ತಿಕ್ H.C ಪ್ರಾಯ: 27 ವರ್ಷ ರವರು ಈ ದಿನ ದಿನಾಂಕ: 12-03-2024 ರಂದು ತನ್ನ ಮಾಲಕತ್ವದ KA-18-EJ-0189 ನಂಬ್ರದ ಪಲ್ಸರ್ ಮೋಟಾರ್ ಸೈಕಲಿನಲ್ಲಿ ಕೆಲಸದ ಬಗ್ಗೆ ಕುಲಶೇಖರಕ್ಕೆ ಹೋಗಿದ್ದವರು ಅಲ್ಲಿಂದ ವಾಪಾಸು ಬಿಜೈ ಕಡೆಗೆ ಬರುತ್ತಾ ಮಧ್ಯಾಹ್ನ ಸಮಯ ಸುಮಾರು 3:00 ಘಂಟೆಗೆ ನಂತೂರು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಪದುವಾ ಜಂಕ್ಷನ್ ಕಡೆಯಿಂದ KA-19-D-9283 ನಂಬ್ರದ ಪಿಕ್ ಅಪ್ ವಾಹನವನ್ನು ಅದರ ಚಾಲಕ ಶಕೀಲ್ ಎಂಬಾತನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

CEN Crime PS

ಈ ದಿನ ದಿನಾಂಕ 12-03-2024 ರಂದು ಸೆನ್ ಕ್ರೈಂ ಪೊಲೀಸ್ ಠಾಣೆಯ ಉಪ-ನಿರೀಕ್ಷಕರಾದ ಸತೀಶ್ ಕೆ ಎಸ್  ಇವರು ತಮ್ಮ ಸಿಬ್ಬಂದಿಯವರೊಂದಿಗೆ, ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್  ಬಳಿ ಮೊಹಮ್ಮದ್ ರಝೀಮ್  (27) ತಂದೆ: ಅಬ್ದುಲ್ ಜಬ್ಬಾರ್  ವಾಸ: ಎಲ್ಯಾರ್ ಅಂಬ್ಲಮೊಗರು ಗ್ರಾಮ ಮಂಗಳೂರು ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್  ಬಳಿ ನಡೆದಾಡುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವವರನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಮಾಧಕ ವಸ್ತು ಸೇದಿರುವ ಬಗ್ಗೆ ತಪಾಸನಣೆಗೆ ಒಳಪಡಿಸಿದಾಗ ವೈದ್ಯಾಧಿಕಾರಿಗಳು  ಮಾಧಕ ವಸ್ತು ಸೇದಿರುವುದು ದೃಢಪಟ್ಟಿರುವುದಾಗಿ ನೀಡಿದ ದೃಢಪತ್ರದಂತೆ ಆರೋಪಿ ಮೊಹಮ್ಮದ್ ರಝೀಮ್  ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗದೆ ಎಂಬಿತ್ಯಾದಿ

 

Surathkal PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ಮಹಾದೇವ ಮಂಡಲ್ ರವರ ಸ್ವಂತ ಊರು ಪಶ್ಚಿಮ ಬಂಗಾಳವಾಗಿದ್ದು, ಅವರು ಸುರತ್ಕಲ್ ನಲ್ಲಿರುವ ಸೂರಜ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಕುಕ್ ಕೆಲಸ ಮಾಡಿಕೊಂಡಿರುತ್ತಾರೆ, ಪಿರ್ಯಾದಿದಾರರ ತಂದೆ ನಾರಾಯಣ ಮಂಡಲ್ (55) ಇವರು ಮಾನಸಿಕವಾಗಿ ಅಸ್ವಸ್ಥರಾದವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯುವುದಕ್ಕಾಗಿ ಪಶ್ಚಿಮ ಬಂಗಾಳದಿಂದ ಕರೆದುಕೊಂಡು ಬಂದ ಸುಭಾಷಿತ ನಗರದ 8ನೇ ಕ್ರಾಸ್, ಸುರತ್ಕಲ್ ನಲ್ಲಿದ್ದವರು ಅವರಿಗೆ 1 ತಿಂಗಳಿನಿಂದ ಮಾನಸಿಕ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯನ್ನು ಪಡೆದುಕೊಂಡು ನಂತರ ವೈದ್ಯರ ಆದೇಶದಂತೆ ಮನೆಗೆ ಕರೆದುಕೊಂಡು ಬಂದಿದ್ದು, ಮನೆಯಲ್ಲಿದ್ದವರು ದಿನಾಂಕ 11-03-2024 ರಂದು ಸಂಜೆ 5:00 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಈವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಅವರಿಗೆ ಮಾನಸಿಕ ಕಾಯಿಲೆಯಿದ್ದು  ಈ ಕಾಯಿಲೆಯು ಉಲ್ಬಣಗೊಂಡು ಮನೆ ಬಿಟ್ಟು ಹೋಗಿರಬಹುದಾಗಿದೆ ಎಂಬಿತ್ಯಾದಿ

 

Ullal PS

ಪ್ರಕರಣದ ಸಾರಾಂಶವೇನೆಂದರೇ, ದಿನಾಂಕ   11-03-2024 ರಂದು  ರಾತ್ರಿ  ಸಮಯ ಪಿರ್ಯಾದಿದಾರರಾದ ರಕ್ಷಿತ್ ಎಂಬವರು  ಗೆಳೆಯರಾದ ಗಣೇಶ್, ನಿಶಾಂತ್, ರಕ್ಷಿತ್, ದೀಪಕ್ ರವರುಗಳೊಂದಿಗೆ  ತೊಕ್ಕೊಟ್ಟು ಸಹರಾ ಆಸ್ಪತ್ರೆಯ ಎದುರು ಮೈದಾನದಲ್ಲಿ ಮಾತನಾಡುತ್ತಿರುವಾಗ  ಸುಮಾರು 23-15 ಗಂಟೆಗೆ  ಪರಿಚಯದ ಅಖಿಲ್, ಆದಿ, ವಿನುತನ್, ಕಾರ್ತಿಕ್ ಹಾಗೂ ಇತರರು ಅಕ್ರಮ ಕೂಟ ಸೇರಿ ಅಲ್ಲಿಗೆ ಬಂದು ನಮ್ಮ ಮೇಲೆ ಪೊಲೀಸಿಗೆ ಭಾರಿ ಕಂಪ್ಲೇಂಟ್ ಕೊಡುತ್ತೀಯ ಎಂದು ಹೇಳಿ ಅಖಿಲ್ ಎಂಬಾತನು ಚೂರಿಯಿಂದ ಹಲ್ಲೆ ಮಾಡಲು ಬಂದಿದ್ದು ಈ ಸಮಯ ಪಿರ್ಯಾದಿದಾರರಿಗೆ ಬಲಕೈಯ ತೋರು ಬೆರಳಿಗೆ ರಕ್ತ ಗಾಯವಾಗಿರುತ್ತದೆ. ನಿಶಾಂತ್ ಎಂಬವರಿಗೆ ಆದಿ ಎಂಬಾತನು ಬಾಟಲಿಯಿಂದ ತಲೆಗೆ ಹೊಡೆದಿದ್ದು, ಗಣೇಶ್ ಎಂಬವರಿಗೆ ಕಾರ್ತಿಕ್ ಎಂಬಾತನು  ಕೈಯಿಂದ ಹೊಡೆದಿದ್ದು ಅಲ್ಲದೇ  ಪಿರ್ಯಾದಿ ಮತ್ತು ಗೆಳೆಯರಿಗೆ ಎಲ್ಲರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ತುಳಿದು ಕೊಲ್ಲದೇ ಬಿಡುವುದಿಲ್ಲವೆಂದು ಹೇಳಿ ಜೀದ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 13-03-2024 10:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080