ಅಭಿಪ್ರಾಯ / ಸಲಹೆಗಳು

 

Mangalore East Traffic PS           

ಪಿರ್ಯಾದಿದಾರರು SHARANAPPA ದಿನಾಂಕ: 11/04/2023 ರಂದು ಮಂಗಳೂರು ನಗರದ ಬಂಟ್ಸ್ ಹಾಸ್ಟೇಲ್ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿರುವಾಗ ರಾತ್ರಿ ಸಮಯ ಸುಮಾರು 19:30 ಗಂಟೆಗೆ KA-19-EZ-8542  ನೊಂದಣಿ ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ನಿಶ್ವಿತ್  ಎಂಬಾತನು ಅಂಬೇಡ್ಕರ್ ಸರ್ಕಲ್ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಸರ್ಕಲ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಬರುತ್ತಿರುವುದನ್ನು  ಕಂಡು ಕರ್ತವ್ಯದಲ್ಲಿದ್ದ ಪಿರ್ಯಾದಿದಾರರು ಸದ್ರಿ ಮೋಟಾರು ಸೈಕಲನ್ನು ನಿಲ್ಲಿಸಿ ನೋಡಿದಾಗ  ಮೋಟಾರು ಸೈಕಲ್ ನ ಮುಂಭಾಗದಲ್ಲಿ ನೊಂದಾಣಿ ಸಂಖ್ಯೆಯು ಇದ್ದು, ಹಿಂಬದಿಯ ನಂಬ್ರ ಪ್ಲೇಟನ್ನು ಯಾರಿಗೂ ಕಾಣದಂತೆ ಮಡಚಿದ್ದು ಹಾಗೂ ಮೋಟಾರು ಸೈಕಲ್ ನ ಎರಡೂ ಸೈಡ್ ಮಿರರ್ ಗಳನ್ನು ತೆಗೆದಿರುವುದು ಹಾಗೂ ದೋಷಪೂರಿತ ಸೈಲೆನ್ಸರನ್ನು ಅಳವಡಿಸಿರುವುದು ಕಂಡು ಬಂದಿರುತ್ತದೆ. ಆದುದರಿಂದ KA-19-EZ-8542 ನೇ ಮೋಟಾರು ಸೈಕಲ್ ಸವಾರ ನಿಶ್ವಿತ್ ಎಂಬಾತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

    

Traffic South Police Station     

ದಿನಾಂಕ: 10-04-2023 ರಂದು ಪಿರ್ಯಾದಿದಾರರಾದ ಪ್ರಕಾಶ್ ಕೌಶಿಕ್  31 ವರ್ಷ ರವರು ಅವರ ಬಾಬ್ತು ಇನೋವಾ ಕಾರು ನಂಬ್ರ: KA-19-MN-9990 ನೇದನ್ನು ಚಲಾಯಿಸಿಕೊಂಡು ಹೋಗಿ ಅವರ ಹೋಟೆಲ್ ಆದ ಪಡೀಲ್ ಕೊಚ್ಚಿನ್ ಬೇಕರಿ ಹತ್ತಿರದ ಉನ್ಕ ತಿನ್ಕ ಎಂಬಲ್ಲಿ ಪಾರ್ಕ್ ಮಾಡಿ ನಿಲ್ಲಿಸಿ ಅವರು ಹೋಟೆಲ್ ನಲ್ಲಿರುವಾಗ ಸಮಯ ಸುಮಾರು ಸಂಜೆ: 7-18 ಗಂಟೆಗೆ ಪಂಪ್ ವೇಲ್ ಕಡೆಯಿಂದ ಪಡೀಲ್ ಕಡೆಗೆ  ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ನಂಬ್ರ: KA-19-F-3362 ನೇದನ್ನು ಅದರ ಚಾಲಕ ಯುವರಾಜ್ ಕೆ ಆರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಕಾಮಗಾರಿ ನಡೆಯುತ್ತಿರುವುದ್ದರಿಂದ ಸದ್ರಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಭಂದಿಸಿದರೂ ಕೂಡಾ ಅದನ್ನು ಲೆಕ್ಕಿಸದೇ ಅದೇ ರಸ್ತೆಯಲ್ಲಿ ಸೀದಾ ಬಂದು ಪಿರ್ಯಾದಿದಾರರ ಹೋಟೆಲ್ ಎದುರು ನಿಲ್ಲಿಸಿದ ಅವರ ಕಾರಿನ ಹಿಂಬದಿ ಬಲಭಾಗಕ್ಕೆ ಬಸ್ಸಿನ ಹಿಂದಿನ ಎಡಭಾಗವನ್ನು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಭಾಗದ ಬಲಭಾಗ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

Kavoor PS

ದಿನಾಂಕ: 11/04/2023 ರಂದು ಮಧ್ಯಾಹ್ನ 13.30 ಗಂಟೆಗೆ  ಮಂಗಳೂರು ನಗರದ ದೇರೆಬೈಲ್ ಮಾಲೇಮಾರ್ ಎಂಬಲ್ಲಿಯ ಮರಿಯನ್ ಸೊಲ್ಯಾಸ್ ಅಪಾರ್ಟಮೆಂಟ್ ಹೊರಗಡೆ ರಸ್ತೆಬದಿಯಲ್ಲಿ ಅಮಲು ಪದಾರ್ಥ ಸೇವನೆ ಮಾಡಿಕೊಂಡಿರುವ 1) ಅಕ್ಷಯ್ ಸಿ (27 ವರ್ಷ), 2) ಸೂರ್ಯದೇವ್ (30 ವರ್ಷ),  ಎಂಬವರುಗಳನ್ನುವಶಕ್ಕೆ ಪಡೆದು  ವಿಚಾರಿಸಿದಲ್ಲಿ ಅಪಾದಿತರು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ನಂತರ  ಅಪಾದಿತರುಗಳನ್ನು ವೈದ್ಯಕೀಯ ತಪಾಸಣೆಯ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು, ತಜ್ಞ ವೈದ್ಯರು ಸದ್ರಿಯವರನ್ನು ಪರೀಕ್ಷಿಸಿ ಆರೋಪಿತರು ಮಾದಕ ವಸ್ತುವನ್ನು ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುತ್ತಾರೆ.ಆದುದರಿಂದ ಸದ್ರಿಯವರ ಮೇಲೆ ಮುಂದಿನ ಕಾನೂನು ಕ್ರಮದ ಬಗ್ಗೆ ಅಪಾದಿತರುಗಳನ್ನು ಹಾಗೂ ವರದಿಯನ್ನು  ಹಾಜರುಪಡಿಸುತ್ತಿದ್ದೇನೆ  ಎಂಬಿತ್ಯಾದಿ.

                

ಇತ್ತೀಚಿನ ನವೀಕರಣ​ : 21-08-2023 12:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080