ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic South Police Station                        

ಈ ಪ್ರಕರಣದ ಸಾರಾಂಶವೆನೇಂದರೆ ದಿನಾಂಕ 12-04-2024 ರಂದು ಪಿರ್ಯಾದಿ Vikram Shetty ಇವರು ತಮ್ಮ ಅಗತ್ಯ ಕೆಲಸ ನಿಮಿತ್ತ  ಗುರುಪುರದ ಮನೆಯಿಂದ ಮಂಗಳೂರು ಕಡೆಗೆ ಹೊರಟು ತನ್ನ ಪತ್ನಿ ಯಷಿಕಾ ರವರ ಬಾಬ್ತು TVS NTORQ KA 19 HD 7063 ನೇದರಲ್ಲಿ ವಾಮಂಜೂರು ಚೇಕ್ ಪೋಸ್ಟ್ ಬಳಿ ಇರುವ ಬ್ಯಾಂಕ್ ಆಪ್ ಬರೋಡದ ಮುಂಭಾಗದಲ್ಲಿ ಹಾದು ಹೋಗಿರುವ ರಾ. ಹೆ. 169 ನೇದರಲ್ಲಿ ಬೆಳಿಗ್ಗೆ ಸಮಯ ಸುಮಾರು 11.15 ಗಂಟೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ರೋಟ್ ನಂಬ್ರ 22 ನೇದರ ಖಾಸಗಿ ಬಸ್ಸು KA 19 AD 4937 ನೇದನ್ನು ಅದರ ಚಾಲಕ ಅಬ್ದುಲ್ ಅಫ್ರೀದ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರ್ ಅನ್ನು ಯಾವುದೇ ಸೂಚನೆ ನೀಡದೇ ಒಮ್ಮಿಂದೊಮ್ಮೇಲೆ ಒವರ್ ಟೇಕ್ ಮಾಡಿದ ಪರಿಣಾಮ ಬಸ್ಸಿನ ಹಿಂಭಾಗ ಪಿರ್ಯಾದಿದಾರರ ಸ್ಕೂಟರನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತವಾಗಿ ರಸ್ತೆಗೆ ಬಿದ್ದವರನ್ನು ಅಲ್ಲಿದ್ದವರು ಉಪಚರಸಿ ಅಂಬುಲೇನ್ಸ್ ಒಂದರಲ್ಲಿ ಎ ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಪಿರ್ಯಾದುದಾರರಿಗೆ ಕುತ್ತಿಗೆಗೆ, ಬಲ, ಎಡ ಕೈಯ ಮುಂಗೈಗೆ, ಬಲ ಸೊಂಟ, ಬಲ ತೊಡೆಗೆ ಗುದ್ದಿದ, ತೆರಚಿದ ಗಾಯಗಳಾಗಿರುತ್ತದೆ ಎಂಬಿತ್ಯಾದಿ

 

Traffic South Police Station       

ಈ ಪ್ರಕರಣದ ಸಾರಾಂಶವೆನೇಂದರೆ ದಿನಾಂಕ 12-04-2024 ರಂದು ಪಿರ್ಯಾದಿ Atmakuri Keshavalu  ಇವರು  ಚಲಾಯಿಸುತ್ತಿದ್ದ ಲಾರಿಯ ಕ್ಲಿನರ್ ಆಗಿದ್ದ ಗದ್ವಾಲ್ ಸತ್ಯಂ ಪ್ರಾಯ 50 ವರ್ಷ ಎಂಬವರು ಮಂಗಳೂರು ನಗರದ ಉಚ್ಚಿಲಾ ಬಳಿಯ ಭಾರತ್ ಪೆಟ್ರೋಲ್ ಪಂಪ ಬಳಿಯಿಂದ ಕೋಟೆಕಾರು ಬೀರಿ ಕಡೆಗೆ ನಡೆದುಕೊಂಡು ನೇತಾಜಿ ರೋಡ್ ಕ್ರಾಸ್ ಬಳಿ ಬಂದ ಸಮಯ 22.00 ಗಂಟೆಗೆ ನೇತಾಜಿ ರೋಡ್ ಕ್ರಾಸ್ ಕಡೆಯಿಂದ ಎನ್ ಹೆಚ್ 66 ರಸ್ತೆಯನ್ನು ದಾಟುತ್ತಾ ರಸ್ತೆಯ ಮದ್ಯದ ಡಿವೈಡರ್ ಬಳಿ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಕಾಸರಗೋಡು ಕಡೆಗೆ KL 15 A 2033 ನೇ ನಂಬ್ರದ ಬಸ್ಸನ್ನು ಅದರ ಚಾಲಕ ಪ್ರಮೋದ್ ಎಂ ಕೆ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಗದ್ವಾಲ್ ಸತ್ಯಂ ರವರಿಗೆ ಡಿಕ್ಕಿ ಪಡಿಸಿದ್ದು ಡಿಕ್ಕಿಯ ಪರಿಣಾಮ ಸದ್ರಿರವರು ಡಿವೈಡರ್ ಮೇಲೆ ಬಿದ್ದು ಬಲ ಕೈ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ತಲೆಯ ಬಲಭಾಗಕ್ಕೆ, ಹಣೆಯ ಬಲಬದಿ, ಎರಡು ಕಾಲುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಎಂಬಿತ್ಯಾದಿ

 

Kavoor PS

ಈ ಪ್ರಕರಣದ ಸಾರಾಂಶವೇನೆಂದರೆ, ಫಿರ್ಯಾದಿ ಸ್ವಾಮಿ  ಇವರ   ಹೆಂಡತಿ ಯಾದ ಲಕ್ಷ್ಮೀ (24 ವರ್ಷ) ವಾಸ; ಪಾಟ್ಟ ಹೌಸ್-2 ಬಂಗ್ರ ಕೂಳೂರು, ಕೂಳೂರು  ಇವೆರು ದಿನಾಂಕ 03/04/2024 ರಂದು ಬೆಳಗ್ಗೆ 09:00 ಗಂಟೆಗೆ ಕ್ಷುಲಕ ಕಾರಣಕ್ಕೆ ಜಗಳ ಮಾಡಿ ಮನೆ ಬಿಟ್ಟು ಹೋಗಿದ್ದು. ಪಿರ್ಯಾದಿದಾರರು ಆಕೆಯ ತವರು ಮನೆಯಲ್ಲಿಯು ವಿಚಾರಿಸಲಾಗಿ  ಹಾಗೂ ನೆರೆಕೆರೆಯವರಲ್ಲಿ  ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಗಿ ಎಲ್ಲಿಯೂ ಕೂಡಾ ಸಿಗದೇ ಇದ್ದು, ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

ಕಾಣಿಯಾದವರ ಚಹರೆ:

ಹೆಸರು: ಲಕ್ಷ್ಮೀ ಪ್ರಾಯ-24 ವರ್ಷ. ಗಂಡ: ಸ್ವಾಮಿ ಎತ್ತರ: 5.2ಅಡಿ, ಚಹರೆ:ಗುಂಡು ಮುಖ ಸಾದಾರಣ ಮೈಕಟ್ಟು.ಬಣ್ಣ: ಗೋಧಿ ಮೈ ಬಣ್ಣ. ಕಪ್ಪು ಕೂದಲು .ಧರಿಸಿರಿರುವ ಬಟ್ಟೆ: ಗುಲಾಬಿ ಬಣ್ಣದ ನೈಟ್ ಡ್ರಸ್ಸ್.ಮಾತಾನಾಡುವ ಭಾಷೆ: ,ಕನ್ನಡ, ಮರಾಠಿ, ಹಿಂದಿ.

ಇತ್ತೀಚಿನ ನವೀಕರಣ​ : 15-04-2024 08:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080