ಅಭಿಪ್ರಾಯ / ಸಲಹೆಗಳು

Traffic North Police Station

ಪಿರ್ಯಾದಿ Yashoda  ದಿನಾಂಕ: 11-05-2023 ರಂದು ಹಾನಗಲ್ ನಿಂದ ಅವರ ಸಂಬಂದಿಕರ ಜೊತೆಯಲ್ಲಿ KA-20-AA-6720 ನಂಬ್ರದ ಗಜಾನನ ಎಂಬ ಹೆಸರಿನ ಬಸ್ಸಿನಲ್ಲಿ ಮಂಗಳೂರು ಕಡೆಗೆ ಪ್ರಯಾಣಿಸಿಕೊಂಡು ಬರುತ್ತಾ  ದಿನಾಂಕ: 12-05-2023 ರಂದು ಬೆಳಿಗ್ಗೆ ಸಮಯ ಸುಮಾರು 6:00 ಗಂಟೆಗೆ ಮೂಲ್ಕಿ ಕಡೆಯಿಂದ ಮಂಗಳೂರು ಕಡೆಗೆ ನಮ್ಮ ಬಸ್ಸನ್ನು ಚಾಲಕನಾದ ಸೈಯ್ಯದ್ ಆಲಿ ಎಂಬವರು ವೇಗವಾಗಿ ಚಲಾಯಿಸಿಕೊಂಡು ಬಂದು ಮುಕ್ಕಾ ಬಳಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ನಮ್ಮ ಬಸ್ಸಿನ ಎದುರಿಗೆ ಅದೇ ರಸ್ತೆಯಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ KA-57-F-4545 ನಂಬ್ರದ KSRTC ಬಸ್ಸಿನ ಹಿಂಭಾಗಕ್ಕೆ ರಭಸವಾಗಿ ಢಿಕ್ಕಿ ಪಡಿಸಿದ ಪರಿಣಾಮ ಬಸ್ಸಿನಲ್ಲಿದ್ದ ಪಿರ್ಯಾದಿದಾರರು ಅವರ ಸಂಬಂದಿ ಮಂಜುಳಾ, ಬಸ್ಸಿನ ಕಂಡಕ್ಟರ್ ಕುಮಾರ ಸ್ವಾಮಿ, ಮಂಜುನಾಥ, ನೇತ್ರಾ, ಸಾವಿತ್ರಮ್ಮ, ಸಾಧಿಕ್ ಬಾಷಾ, ಗಂಗಮ್ಮ, ಖಲೀಮುಲ್ಲಾ, ಹಾಗೂ ಇನ್ನಿತರ  ಪ್ರಯಾಣಿಕರಿಗೆ ಅಲ್ಲಲ್ಲಿ ರಕ್ತಗಾಯ ಮತ್ತು ಗುದ್ದಿದ ಗಾಯಗಳಾಗಿದ್ದು KSRTC ಬಸ್ಸಿನ ಕಂಡಕ್ಟರ್ ಬಡೇಸಾಬ್ ಎಂಬವರಿಗೂ ಕೂಡಾ ಗಾಯಗಳಾಗಿದ್ದು ಗಾಯಾಳು ಎಲ್ಲರೂ ಚಿಕಿತ್ಸೆ ಬಗ್ಗೆ ಮುಕ್ಕಾದ  ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ ಸಾರಾಂಶ.

        

Surathkal PS

ಪಿರ್ಯಾದಿಯವರಾದ ಶ್ರೀಮತಿ ವಿಜಯಲಕ್ಷ್ಮಿ ಗಂಡ ಸುರೇಶ್ ರಾವ್,ಪ್ರಾಯ 65 ವರ್ಷ, ವಾಸ: ಓಂ ಸಾಯಿ ಅಪಾರ್ಟಮೆಂಟ್,ಪ್ಲಾಟ್ , ನೆರೂಲ್ ವೆಸ್ಟ್, ಸೆಕ್ಟರ್ ನಂ.06,ನವ ಮುಂಬೈ, ಮಹಾರಾಷ್ಟ್ರ-400706.  ರವರು ದಿನಾಂಕ 22-03-2023 ರಂದು ಪನ್ವೇಲ್ ನಿಂದ ಮಂಗಳೂರಿಗೆ ತಮ್ಮ  ಮೊಮ್ಮಗಳಾದ ಪ್ರಾಯ 05 ವರ್ಷ, ಆಕೆಯೊಂದಿಗೆ ರೈಲುಗಾಡಿ ಸಂ.12619 ರ ಎಸ್-8 ಭೊಗಿ ಸೀಟ್ ನಂ.44, PNR No.8400845360 ರಲ್ಲಿ ಪ್ರಯಾಣ ಮಾಡಿದ್ದು, ತಮ್ಮ  ಊರಿನಲ್ಲಿ ಬ್ರಹ್ಮಕಳಸೋತ್ಸವ ಇದ್ದ ಪ್ರಯುಕ್ತ ತಮ್ಮ  ಬ್ಯಾಗಿನಲ್ಲಿ ಚಿನ್ನಾಭರಣಗಳನ್ನು ಇಟ್ಟುಕೊಂಡು ಬಂದಿರುತ್ತೇನೆ. ದಿನಾಂಕ 23-03-2023 ರಂದು ಬೆಳಿಗ್ಗೆ ಸುಮಾರು 07-15 ಕ್ಕೆ ರೈಲುಗಾಡಿಯು ಸೂರತ್ಕಲ್ ರೈಲು ನಿಲ್ದಾಣದಲ್ಲಿ ನಿಂತು ಹೋಗುತ್ತಿರುವಾಗ್ಗೆ ತಮ್ಮ  ಮೊಮ್ಮಗಳು ಮೂತ್ರ ಮಾಡಬೇಕೆಂದು ಹೇಳಿದ್ದಕ್ಕೆ ಪಿರ್ಯಾದಿಯವರು ಆ ಸಮಯದಲ್ಲಿ ಅವಳನ್ನು ರೈಲುಗಾಡಿಯ ಶೌಚಾಲಯಕ್ಕೆ ಮೂತ್ರ ಮಾಡಿಸಲು ಕರೆದುಕೊಂಡು ಹೋಗಿ ಬಂದು ನೋಡಲಾಗಿ ಆ ಸಮಯದಲ್ಲಿ ರೈಲುಗಾಡಿಯು ಸೂರತ್ಕಲ್ ರೈಲ್ವೆ ನಿಲ್ದಾಣದಿಂದ ಚಲಿಸುತ್ತಿದ್ದು, ಸೀಟಿನಲ್ಲಿಟ್ಟಿದ್ದ ಕಪ್ಪುಬಣ್ಣದ ಬ್ಯಾಗ್ ನೋಡಲಾಗಿ ಕಾಣೆಯಾಗಿದ್ದು, ತಮ್ಮ  ಎದುರು ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಯಾರೋ ಅಪರಿಚಿತ ವ್ಯಕ್ತಿ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾನೆಂದು ತಿಳಿಸಿದರು. ಕೂಡಲೆ ಭೋಗಿಯಲ್ಲಿ ಹುಡುಕಿದ್ದು, ಎಲ್ಲಿಯೂ ಸಿಕ್ಕಿರುವುದಿಲ್ಲ. ಕಳುವಾದ ಬ್ಯಾಗಿನಲ್ಲಿ 1) ಚಿನ್ನದ ಬಳೆ 32 ಗ್ರಾಂ, ಬೆಲೆ ಸು.1,44,000/-ರೂ, 2) ಚಿನ್ನದ ಬಳೆ 16 ಗ್ರಾಂ ಬೆಲೆ ಸು. 72,000/-ರೂ, 3) 03 ಚಿನ್ನದ ಉಂಗುರಗಳು 08 ಗ್ರಾಂ ಬೆಲೆ ಸು.36,000/-ರೂ 4) ಚಿನ್ನದ ಸರ 24 ಗ್ರಾಂ(ಮೋಹನ ಮಾಲೆ) ಬೆಲೆ ಸು.1,08,000/- ರೂ, 5) ಸ್ಯಾಮಸಂಗ್ ಮೊಬೈಲ್ ಬೆಲೆ ಸು. 5,000/-ರೂ. ಬ್ಯಾಗಿನಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬಟ್ಟೆಗಳು ಇರುತ್ತವೆ. ಕಳುವಾದ ಸ್ವತ್ತಿನ ಬೆಲೆ ಸುಮಾರು 03,65,000/- ರೂಗಳು ಆಗಿದ್ದು,  ಸೂರತ್ಕಲ್ ರೈಲು ನಿಲ್ದಾಣದ ಹತ್ತಿರ ರೈಲುಗಾಡಿಯಲ್ಲಿ ಮೊಮ್ಮಗಳಿಗೆ ಶೌಚಾಲಯದಲ್ಲಿ ಮೂತ್ರ ಮಾಡಿಸಿಕೊಂಡು ಬಂದು ನೋಡಲಾಗಿ ಯಾರೋ ಕಳುವು ಮಾಡಿರುತ್ತಾರೆ  ಎಂಬಿತ್ಯಾದಿಯಾಗಿರುತ್ತದೆ.

 

Traffic South Police Station

ದಿನಾಂಕ: 11-05-2023 ರಂದು ಪಿರ್ಯಾದಿದಾರರಾದ ಸತೀಶ ಪಿ (46 ವರ್ಷ) ರವರು ಆಟೋರಿಕ್ಷಾ ನಂಬ್ರ; KA-19-AB-2955 ನೇದರಲ್ಲಿ ಅವರ ಪರಿಚಯದವರಾದ ದಿನೇಶ್ ಸಪಲ್ಯ ಎಂಬುವರನ್ನು ಸಹ ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು  ಮುಡಿಪು ಕಡೆಯಿಂದ ಮುದುಂಗಾರು ಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 9-30 ಗಂಟೆಗೆ ಮುದುಂಗಾರು ಕಟ್ಟೆ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ಆಟೋರಿಕ್ಷಾದ ಹಿಂದಿನಿಂದ ಬರುತ್ತಿದ್ದ ಹದಾದಿಯ ಎಂಬ ಹೆಸರಿನ ಬಸ್ಸು ನಂಬ್ರ: KA-19-AC-5066  ನೇದನ್ನು ಅದರ ಚಾಲಕ ಶಶಿಕಾಂತ್ ನಾಯಕ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರರು ಚಲಾಯಿಸುತ್ತಿದ್ದ ಆಟೋರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಸೊಂಟಕ್ಕೆ ,ಬೆನ್ನಿಗೆ ಮತ್ತು ಎಡಗಾಲಿಗೆ ಗುದ್ದಿದ ರೀತಿಯ ಗಾಯ ಹಾಗೂ ಸಹ ಪ್ರಯಾಣಿಕ ದಿನೇಶ್  ಸಪಲ್ಯ ರವರಿಗೆ ಮುಖಕ್ಕೆ, ಹಣೆಗೆ, ಬಲಭುಜಕ್ಕೆ ಮತ್ತು ಎರಡು ಕಾಲಿನ ಮೊಣಗಂಟಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಮತ್ತು ದಿನೇಶ್ ಸಪಲ್ಯ ರವರ ಮಗ ಪವನ್ ಹಾಗೂ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಸೇರಿ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ  ಹಾಗೂ ಈ ಅಪಘಾತದಿಂದ ಬಸ್ಸಿನ ಮುಂಭಾಗ ಮತ್ತು ಆಟೋರಿಕ್ಷಾದ ಹಿಂಭಾಗ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

 

Barke PS

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಾದ ಶ್ರೀ ಪ್ರಕಾಶ್ ಗಾವಡೆ ವೀಕ್ಷಕರು ದಿನಾಂಕ: 11-05-2023 ರಂದು ಸಂಜೆ 17-00 ಗಂಟೆಗೆ ಕರ್ತವ್ಯಕ್ಕೆ ಬಂದಿದ್ದು ಆಗ ಕಾರಾಗೃಹದ ಮುಖ್ಯದ್ವಾರದಲ್ಲಿ ಕೆ.ಎಸ್.ಐ.ಎಸ್.ಎಫ್.ನ ಸಿಬ್ಬಂದಿಗಳಾದ ಶ್ರೀ ಕಿರಣ್ ಹಾಗೂ ಶ್ರೀ ಶಶಿಕುಮಾರ್ ಇವರುಗಳು ತಪಾಸಣೆ ಮಾಡಲಾಗಿ ಸದರಿ ವೀಕ್ಷಕ ಸಿಬ್ಬಂದಿಯ ಗುಪ್ತ ಸ್ಥಳದಲ್ಲಿ ಅನುಮಾನಾಸ್ಪದ ತರಹದ ವಸ್ತು ದೊರಕಿರುತ್ತದೆ ಎಂಬುದಾಗಿ ಹಾಗೂ ಅದನ್ನು ತಂದ ವೀಕ್ಷಕ ಸಿಬ್ಬಂದಿಯನ್ನು ವಿಚಾರಿಸಲಾಗಿ ಅದು ಗಾಂಜಾ ಎಂದು ತಿಳಿಸಿರುತ್ತಾನೆಂದು ತಪಾಸಣಾ ಸಿಬ್ಬಂದಿಗಳು ಮುಖ್ಯ ದ್ವಾರದಲ್ಲಿದ್ದ ಕರ್ತವ್ಯ ನಿರತ ಸಿಬ್ಬಂದಿಗಳಾದ ಶ್ರೀ ವಿಠ್ಠಲ್ ಎಂ. ಕೊಂಡಗೋಳಿ ಹಾಗೂ ಶ್ರೀನಿವಾಸ ಎನ್. ಇವರುಗಳಿಗೆ ತಿಳಿಸಿದಂತೆ, ಸದ್ರಿಯವರು ಲಿಖಿತವಾಗಿ ಪೊಲೀಸ್ ನಿರೀಕ್ಷಕರು ಕೆ.ಎಸ್.ಐ.ಎಸ್.ಎಫ್. ರವರಿಗೆ ತಿಳಿಸಿದ್ದು, ನಂತರ ಪೊಲೀಸ್ ನಿರೀಕ್ಷಕರು ಉಲ್ಲೇಖಿಸಿದಂತೆ ಪಿರ್ಯಾದಿದಾರರಾದ ಜೈಲು ಅಧೀಕ್ಷಕರು ಅನುಮಾನಾಸ್ಪದ ವಸ್ತು ಯಾವುದೆಂದು ಹಾಗೂ ಅದನ್ನು ವಾಮಮಾರ್ಗದಿಂದ ತಂದ ಪ್ರಕಾಶ್ ಗಾವಡೆ ವೀಕ್ಷಕರು ಈತನ ಮೇಲೆ ಕರ್ನಾಟಕ ಕಾರಾಗೃಹ ಅಧಿನಿಯಮ 1963 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ ಮತ್ತು ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿಯಾಗಿ  ಸಾರಾಂಶವಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-08-2023 12:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080