ಅಭಿಪ್ರಾಯ / ಸಲಹೆಗಳು

 

Crime report in CEN Crime PS

ದಿನಾಂಕ 09-06-2023 ರಂದು ಸಮಯ 16-14 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ನಂಬ್ರ: ನೇದಕ್ಕೆ ಯಾರೋ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬ್ರ: +918981538274 ನೇದರಿಂದ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದಾಗಿಯೂ ಕೆವೈಸಿ ಅಪ್ ಡೇಟ್ ಮಾಡಬೇಕೆಂದು ಎಂಬುದಾಗಿ ಸಂದೇಶ ಬಂದಿರುತ್ತದೆ.ಅದರಲ್ಲಿ ಕಸ್ಟ್ ಮರ್ ಕೇರ್ ನಂಬ್ರ 8967050738 ಎಂಬುದಾಗಿ ನಮೂದು ಆಗಿರುತ್ತದೆ. ನಂತರ ಪಿರ್ಯಾದಿದಾರರು ಆ ಕಸ್ಟ್ ಮರ್ ಕೇರ್ ಮೊಬೈಲ್ ನಂಬ್ರಗೆ ಕರೆ ವಿಚಾರಿಸಿದಾಗ ಆ ವ್ಯಕ್ತಿಯು ನಾನು ಕೆನರಾ ಬ್ಯಾಂಕ್ ಕೆವೈಸಿ ಅಪ್ ಡೇಟ್ ಮಾಡುವ ಅಧಿಕಾರಿ ಎಂದು ತಿಳಿಸಿ ನಂತರ ಫಿರ್ಯಾದಿದಾರರ ಕೆನರಾ ಬ್ಯಾಂಕ್ ವಿವರಗಳನ್ನು ಮತ್ತು ಡೇಬಿಟ್ ಕಾರ್ಡ ನಂಬ್ರವನ್ನು ನೀಡುವಂತೆ ತಿಳಿಸಿದ್ದು ಅದರಂತೆ ಫಿರ್ಯಾದಿದಾರರು ಬ್ಯಾಂಕ್ ವಿವರಗಳನ್ನು ಹಾಗೂ ಡೇಬಿಟ್ ಕಾರ್ಡ ನಂಬ್ರವನ್ನು ಆ ವ್ಯಕ್ತಿಗೆ ತಿಳಿಸಿದ್ದು ನಂತರ ಆ ವ್ಯಕ್ತಿಯು ಫಿರ್ಯಾದಿದಾರರಿಗೆ ಮೊಬೈಲ್ ಗೆ ಸ್ವೀಕೃತವಾದ ಒಟಿಪಿ ಯನ್ನು ಶೇರ್ ಮಾಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ಆ ಒಟಿಪಿ ಯನ್ನು ಆ ವ್ಯಕ್ತಿಗೆ ತಿಳಿಸಿರುತ್ತಾರೆ. ಪಿರ್ಯಾದಿದಾರರು ಒಟಿಪಿ ನೀಡಿದ ಕೂಡಲೇ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ನಂಬ್ರ:  ನೇದರಿಂದ ರೂಪಾಯಿ 99,999/- ಹಣವನ್ನು ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ. ಅಪರಿಚಿತ ವ್ಯಕ್ತಿಯ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಒಟಿಪಿ ಯನ್ನು ಪಡೆದುಕೊಂಡು  ಪಿರ್ಯಾದಿದಾರರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

Moodabidre PS

ದಿನಾಂಕ 07-05-2023 ರಂದು ಸಂಜೆ 05.30 ಗಂಟೆಯಿಂದ 11.30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿ Arun ಅವರ ಹೆಂಡತಿ ಜ್ಯೋತಿ ರವರ ಜೊತೆ ಪಿರ್ಯಾದಿದಾರರ ಮನೆಯ ತೀರಾ ಸಮೀಪವಿರುವ ಅವರ ಅಕ್ಕನ ಮನೆಗೆ ದೈವದ ತಂಬಿಲ ಕಾರ್ಯಕ್ರಮಕ್ಕೆ ಹೋದ ಸಮಯ ಮನೆಯ ಬಾಗಿಲನ್ನು ಹಾಕದೇ ಹೋಗಿದ್ದು, ಆ ಸಮಯ ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಿ ಮನೆಯ ಗಾಡ್ರೇಜ್ ನಲ್ಲಿ  ಇಟ್ಟಿದ್ದ ಒಂದು ನೆಕ್ಲಸ್ (ಸುಮಾರು 4 ಪವನ್),  ಒಂದು ಕೈಬಳೆ (ಸುಮಾರು 3 ಪವನ್), ಒಂದು ಜೊತೆ ಬೆಂಡೋಲೆ (ಸುಮಾರು 1 ಪವನ್ ), ಆರು ಉಂಗುರಗಳು (ಸುಮಾರು ಒಂದುವರೇ ಪವನ್), ಒಂದು ಪೆಂಡೆಂಟ್ ಇರುವ ಚೈನ್ (ಸುಮಾರು ಒಂದುವರೇ ಪವನ್ ), ಹಾಗೂ  ಒಂದು ಜೊತೆ ಬೆಳ್ಳಿಯ ಗೆಜ್ಜೆ – ಇವುಗಳನ್ನು ಕಳ್ಳತನ ಮಾಡಿದ್ದು ಇವುಗಳ ಅಂದಾಜು ಮೌಲ್ಯ ಸುಮಾರು 250000/- ರೂ ಆಗಬಹುದು ಎಂಬಿತ್ಯಾದಿ.

 

Mangalore Rural PS

ದಿನಾಂಕ 11-06-2023 ರಂದು ಪಿ.ಎಸ್.ಐ  ಶ್ರೀ ವಿನಾಯಕ ಭಾವಿಕಟ್ಟಿ ರವರು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ  ಬೆಳಿಗ್ಗೆ 10.00 ಗಂಟೆಗೆ ಮಂಗಳೂರು ತಾಲೂಕು ವಾಮಂಜೂರು ಚೆಕ್ ಪೋಸ್ಟ್  ಹತ್ತಿರ ಒಬ್ಬ ವ್ಯಕ್ತಿ  ಅಮಲು ಪದಾರ್ಥ ಸೇವನೆ ಮಾಡಿದಂತೆ ಕಂಡು ಬಂದಿದ್ದು, ವಿಚಾರಿಸಲಾಗಿ ಆತನು ತೇಜಸ್ (19ವ) ವಾಸ: ಕೆಲರೈ ಕ್ರಾಸ್, ನೆಕ್ಕರೆ ಪದವು, ನೀರುಮಾರ್ಗ ಗ್ರಾಮ ಎಂಬುದಾಗಿ ತಿಳಿಸಿರುತ್ತಾನೆ. ಆತ ಗಾಂಜಾ  ಎಂಬ ಅಮಲು ಪದಾರ್ಥ ಸೇವಿಸಿದ ನಶೆಯಲ್ಲಿ ಇರುವಂತೆ ಕಂಡು ಬಂದಿದ್ದರಿಂದ ಆತನಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡಲಾಗಿದೆಯೇ ಎಂದು ಕೇಳಲಾಗಿ, ಆತ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಆತನನ್ನು ಎ.ಜೆ ಆಸ್ಪತ್ರೆ ಕುಂಟಿಕಾನ ಮಂಗಳೂರು ವೈದ್ಯಾಧಿಕಾರಿಯವರಲ್ಲಿ ಪರಿಕ್ಷೆಗೆ ಒಳಪಡಿಸಿದ್ದು  ತೇಜಸ್ (19)ನು ಗಾಂಜ ಎಂಬ ಮಾದಕ ವಸ್ತುವನ್ನು ಸೇವಿಸಿರುತ್ತಾನೆ ಎಂಬುದಾಗಿ ವೈದ್ಯರು ವೈದ್ಯಕೀಯ ವರದಿಯನ್ನುನೀಡಿದಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

Mangalore East Traffic PS

ಪಿರ್ಯಾದಿ SURESH ದಿನಾಂಕ: 11-06-2023 ರಂದು ತನ್ನ ತಂದೆ ವೀರಪ್ಪ ವೀರಭದ್ರಪ್ಪ ಹಾಲಿಗೇರಿ ರವರೊಂದಿಗೆ KA-19-EW-4272 ನಂಬ್ರದ ಮೋಟಾರು ಸೈಕಲಿನಲ್ಲಿ ಹಿಂಬದಿ ಸಹಸವಾರನಾಗಿ ಕುಳಿತುಕೊಂಡು ತನ್ನ ಮನೆಯಾದ ಶಕ್ತಿನಗರಕ್ಕೆ ಹೋಗಲು ಕೆ.ಪಿ.ಟಿ ಯಿಂದಾಗಿ ಮಧ್ಯಾಹ್ನ 3-15 ಗಂಟೆಗೆ ಯೆಯ್ಯಾಡಿ ಜಂಕ್ಷನಿಗೆ ಬಂದು ತಲುಪಿ ತೆರೆದ ಡಿವೈಡರ್ ಮೂಲಕ ಬಲಕ್ಕೆ ತಿರುಗಿಸಿ ಶಕ್ತಿನಗರ ಕಡೆಗೆ ಹಾದು ಹೋಗಿರುವ ರಸ್ತೆ ಕಡೆಗೆ ಹೋಗಲು ಮೇರಿಹಿಲ್ ಕಡೆಯಿಂದ ಕೆ.ಪಿ.ಟಿ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ಏರ್ ಪೋರ್ಟ್ ರಸ್ತೆಯನ್ನು ಕ್ರಾಸ್ ಮಾಡಿಕೊಂಡು ಹೋಗುತ್ತಿದ್ದ ವೇಳೆ KA-12-N-8707 ನಂಬ್ರದ  ಕಾರನ್ನು ಅದರ ಚಾಲಕ ವಿನೋದ್ ಎಂಬಾತನು ಮೇರಿಹಿಲ್ ಕಡೆಯಿಂದ ಕೆ.ಪಿ.ಟಿ ಕಡೆಗೆ ಅತೀ ವೇಗವಾಗಿ ಅಪಾಯಕಾರಿಯಾದ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆ ಚಲಾಯಿಸಿಕೊಂಡಿದ್ದ ಮೋಟಾರು ಸೈಕಲಿನ ಎಡಬದಿ ಮುಂಭಾಗಕ್ಕೆ ಢಿಕ್ಕಿಪಡಿಸಿ ಬಳಿಕ ನಿಯಂತ್ರಿಸಲಾಗದೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ KA-29-EE-4240 ನಂಬ್ರದ ಇನ್ನೊಂದು ಮೋಟಾರು ಸೈಕಲಿಗೆ ಢಿಕ್ಕಿಪಡಿಸಿದ್ದು ಕಾರು ಫುಟ್ ಪಾತ್ ಮೇಲೆ ಹತ್ತಿ ನಿಂತಿರುತ್ತದೆ. ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲಿನಿಂದ ಕಾಂಕ್ರೀಟ್ ರಸ್ತೆಗೆ ಬಿದ್ದು ಕೈಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಪಿರ್ಯಾದಿದಾರರ ತಂದೆ ಢಿಕ್ಕಿಯ ರಭಸಕ್ಕೆ ಮೇಲಕ್ಕೆ ಎಸೆಯಲ್ಪಟ್ಟು ಕಾರಿನ ಮುಂಭಾಗದ ಗಾಜಿಗೆ ಬಿದ್ದು ಬಳಿಕ ರಸ್ತೆಗೆ ಬಿದ್ದ ಕಾರಣ ತಲೆಯ ಮೇಲ್ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾದವರನ್ನು ಅಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ಸಾಗಿಸಿದ್ದು, ಗಂಭೀರ ಗಾಯಗೊಂಡ ಪಿರ್ಯಾದಿದಾರರ ತಂದೆ ವೀರಪ್ಪ ವೀರಭದ್ರಪ್ಪ ಹಾಲಿಗೇರಿ ರವರು MICU ನಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಕಾರು ಚಾಲಕ ವಿನೋದ್ ಎಂಬವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

Urva PS

ಪಿರ್ಯಾದಿಗೆ ಫೇಸ್ ಬುಕ್ ಮುಖಾಂತರ ಪರಿಚಯವಾದ ರಂಜಿತ ಶೆಟ್ಟಿ,  ಎಂಬಾತನೊಂದಿಗೆ  ಸ್ನೇಹ  ಬೆಳೆದು, ಇಬ್ಬರು ಪರಸ್ಪರ  ಅನೋನ್ಯತೆಯಿಂದ ಇದ್ದು, ಆ ಸಮಯ ಪಿರ್ಯಾದಿದಾರರ ಖಾಸಗಿ ಫೋಟೊಗಳನ್ನು ಆರೋಪಿ ರಂಜಿತ ಶೆಟ್ಟಿ ಎಂಬಾತನು ಪಿರ್ಯಾದಿದಾರರಿಗೆ  ತಿಳಿಯದಂತೆ ಆತನ ಮೊಬೈಲನಲ್ಲಿ ಫೊಟೋ  ಮತ್ತು ವಿಡಿಯೋ ತೆಗೆದಿದ್ದು, ಈ ವಿಚಾರವು ಪಿರ್ಯಾದಿದಾರರಿಗೆ ತಿಳಿದ ನಂತರ ಪಿರ್ಯಾದಿದಾರರು ರಂಜಿತ್  ಶೆಟ್ಟಿಯಿಂದ ದೂರವಾದಾಗ ಆರೋಪಿತನು ತನ್ನ ಹತ್ತಿರ ಇದ್ದ ಪಿರ್ಯಾದಿದಾರರ ಖಾಸಗಿ ಪೋಟೋ ಮತ್ತು ವಿಡೀಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪಿರ್ಯಾದಿದಾರರಿಗೆ “ರಂಡೇ, ಬೇವರ್ಸಿ, ಸೂಳೆ” ಎಂದು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರಿಂದ ಪ್ರತಿ ತಿಂಗಳು 20,000 ರಂತೆ ಹಣವನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡಿದ್ದುದ್ದಲ್ಲದೇ, ಪಿರ್ಯಾದಿದಾರರು  ತಾನು ಕರ್ತವ್ಯ ನಿರ್ಹಸುತ್ತಿದ್ದ ಸಂಸ್ಥೆಯ ಇ-ಮೇಲ್ಗೆ ಹಾಗೂ ಸಹೋದ್ಯೋಗಿಗಳ  ಮೊಬೈಲ್ ಗೆ ಪಿರ್ಯಾದಿದಾರರ ಖಾಸಗಿ ಪೋಟೋ ಮತ್ತು ವೀಡೀಯೋಗಳನ್ನು ಕಳಿಸಿ ಮಾನಸಿಕವಾಗಿ ಹಿಂಸೆಯನ್ನು ನೀಡರುವುದಲ್ಲದೇ, ಪಿರ್ಯಾದಿದಾರರ ತಾಯಿ  ವಾಸ  ಇರುವ ಮನೆಗೆ ತೆರಳಿ ಪಿರ್ಯಾದಿದಾರರ ತಾಯಿಯಲ್ಲಿ ನಿಮ್ಮ ಮಗಳಿಗೆ ನನ್ನೊಂದಿಗೆ ಕ್ವಾಂಟಾಕ್ಟನಲ್ಲಿ ಇರುವಂತೆ ಹೇಳಿ, ಇಲ್ಲದಿದ್ದಲ್ಲಿ ನಿಮ್ಮನ್ನು ಮುಗಿಸುತ್ತೇನೆಂದು ಬೆದರಿಕೆ ಹಾಕಿರುತ್ತಾನೆ ಎಂಬಿತ್ಯಾದಿ.

Mangalore East PS

ಪಿರ್ಯಾದಿ Sathvik ತಂದೆಯ ಬಾಬ್ತು ಮೋಟಾರು ಸೈಕಲ್ KA-20-E-7869 Yamaha RX 100 ನೇಯದನ್ನು ಪಿರ್ಯಾದಿದಾರರು ಪ್ರತಿದಿನದಂತೆ ತನ್ನ ಮನೆಯಾದ ಬಿಜೈನಿಂದ ಬಲ್ಠಠದವರೆಗೆ ಮೋಟಾರು ಸೈಕಲಿನಲ್ಲಿ ಹೋಗಿ ಗೋಲ್ಡ್ ಫಿಂಚ್ ಹೋಟೆಲ್ ಬಳಿ ಮೋಟಾರು ಸೈಕಲನ್ನು ಪಾರ್ಕಿಂಗ್ ಮಾಡಿ ನಂತರ ಬಸ್ಸಿನಲ್ಲಿ ತಾನು ವಿಧ್ಯಾಭ್ಯಾಸ ಮಾಡುವ ಸಹ್ಯಾದ್ರಿ ಕಾಲೇಜು ಅಡ್ಯಾರ್ ಇಲ್ಲಿಗೆ ಪ್ರತಿದಿನ ಬಸ್ಸಿನಲ್ಲಿ ಪ್ರಯಾಣಿಸಿತ್ತಿರುವುದಾಗಿದೆ, ಅದೇ ರೀತಿ ದಿನಾಂಕ 09-06-2023 ರಂದು 08:30 ಘಂಟೆಗೆ ಪಾರ್ಕ್ ಮಾಡಿ ಕಾಲೇಜಿಗೆ ಹೋಗಿ ವಾಪಸ್ಸು ಬಂದು ಸಂಜೆ  ಸುಮಾರು 4:45 ಘಂಟೆಗೆ ಗೋಲ್ಡ್ ಫಿಂಚ್ ಹೋಟೆಲಿನ ಮುಂಭಾಗ ಪಾರ್ಕ್ ಮಾಡಿದ್ದ ಮೋಟಾರ್ ಸೈಕಲ್ ಸ್ಥಳದಲ್ಲೆ ಇಲ್ಲದೇ ಇದ್ದು ಸುತ್ತಾ ಮುತ್ತಾ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗದೆ ಇದ್ದು ಯಾರೋ ಕಳ್ಳತನ ಮಡಿರುವುದಾಗಿದೆ ಆದುದರಿಂದ ಕಳೆದು ಹೋದ ನನ್ನ ತಂದೆಯ ಬಾಬ್ತು ಮೋಟಾರು ಸೈಕಲನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿಕೆ.

Mangalore North PS

 ಪಿರ್ಯಾದಿದಾರರಾದ ರಮೇಶ್ ಭೂಮರತ್ತಿ ರವರು ದಿನಾಂಕ:11.06.2023 ರಂದು 2 ನೇ ಪಾಳಿಯಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದ ಬಗ್ಗೆ ಸಂಜೆ 5:00 ಗಂಟೆಯಿಂದ  ಮಂಗಳೂರು  ಸಿಟಿ ಸೆಂಟರ್ ಬಳಿ ಕರ್ತವ್ಯದಲ್ಲಿದ್ದು ಮಂಗಳೂರು ಸಿಟಿ ಸೆಂಟರ್  ರಿಕ್ಷಾ ಪಾರ್ಕಿಂಗ್ ಎದುರುಗಡೆ ರಸ್ತೆಯಲ್ಲಿ ವಾಹನ  ದಟ್ಟಣೆ ಕೂಡಿದನ್ನು ನೋಡಿದ  ಪಿರ್ಯಾದಿದಾರರು ರಾತ್ರಿ ಸುಮಾರು 19:00 ಗಂಟೆಯ ಸಮಯಕ್ಕೆ ಸಿಟಿ ಸೆಂಟರ್ ನ ಪಾರ್ಕಿಂಗ್ ಸ್ಥಳದ ಎದುರುಗಡೆ ತಲುಪುತಿದ್ದಂತೆ, ಅಬ್ದುಲ್ ರೆಹಮಾನ್ ಎಂಬುವರು ಪಿರ್ಯಾದಿದಾರರನ್ನು ಉದ್ದೆಶೀಸಿ ನೀನು ಪೊಲೀಸಾ? ಬೇವರ್ಸಿ,ಸೂಳೆ ಮಗನೆ ಎಂದು ಬೈಯುತ್ತಾ ಪಿರ್ಯಾದಿದಾರರ ಬಿಳಿ ಬಣ್ಣದ ಸಮವಸ್ತ್ರವನ್ನು ಕೈಯಿಂದ ಎಳೆದು ಪಿರ್ಯಾದಿದಾರರ ಎದೆಯ ಭಾಗಕ್ಕೆ ಮುಷ್ಟಿಯಿಂದ ಯದ್ವ ತದ್ವ ಗುದ್ದಿ ನೋವುನ್ನುಂಟು ಮಾಡಿ ಪಿರ್ಯಾದಿದಾರರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ,ಪಿರ್ಯಾದಿದಾರರಿಗೆ ಅಬ್ದುಲ್ ರೆಹಮಾನ್ ಎಂಬುವರು ಹಲ್ಲೆ ನಡೆಸಿ ನೋವುಂಟುವಾದ ಬಗ್ಗೆ ವಿಚಾರ ತಿಳಿದ ಸಂಚಾರ ಠಾಣೆಯ ದಿನೇಶ್ ನಾಯ್ಕ ನೇರವರು ಎಂಬುವರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Konaje PS

ದಿನಾಂಕ 11.06.2023 ರಂದು ಪಿರ್ಯಾದಿ ಅಶೋಕ್ ಪಿಎಸ್ಐ ಕೊಣಾಜೆ ಪೊಲೀಸ್ ಠಾಣೆರವರಿಗೆ ಸಮಯ ಸುಮಾರು 16.00 ಗಂಟೆಗೆ ನರಿಂಗಾನ ಗ್ರಾಮದ ಬೋಳ ಎಂಬಲ್ಲಿರುವ ಲವ-ಕುಶ ಕಂಬಳದ ಬಳಿ ರಸ್ತೆಯ ಬದಿಯಲ್ಲಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು/ದ್ರವ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ 17.30 ಸದ್ರಿ ಸ್ಥಳಕ್ಕೆ ತೆರಳಿ ದಾಳಿ ಮಾಡಿ ಆರೋಪಿಗಳಾದ 1) ಪಿ ಆರೀಫ್ @ ಹ್ಯಾರೀಸ್ (40 ವರ್ಷ),  ವಾಸ: ಗ್ರೀನ ವೀವ್ ಅಪಾರ್ಟಮೆಂಟ್ ಪ್ಲ್ಯಾಟ್ ನಂಬ್ರ 104, ದೇರಳಕಟ್ಟೆ ಅಂಚೆ, ಬೆಳ್ಮ ಗ್ರಾಮ, ಉಳ್ಳಾಲ ತಾಲೂಕು, ಖಾಯಂ ವಿಳಾಸ: ಪೆರಿಬೈಲ್ ಹೌಸ್, ಉಚ್ಚಿಲ, ಸೋಮೇಶ್ವರ ಪಂಚಾಯತ್, ಉಳ್ಳಾಲ ತಾಲೂಕು 2) ಅಬ್ದುಲ್ ರಶೀದ್ @ ರಶೀದ್ (41 ವರ್ಷ),  ವಾಸ: ಫಲಾಹ ಸ್ಕೂಲ್ ಎದುರು, ಕೆ.ಸಿ ರೋಡ್, ತಲಪಾಡಿ ಗ್ರಾಮ ಮತ್ತು ಅಂಚೆ, ಉಳ್ಳಾಲ ತಾಲೂಕು ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 1) ಕೆಎ 19 ಹೆಚ್ ಡಿ 0392 ನಂಬ್ರದ ಸ್ಕೂಟರ್-1,  2) ತಲಾ 5 ಗ್ರಾಂ ಎಂಡಿಎಂಎ ಇರುವ ಪ್ಯಾಕೇಟ್-4, 3) ಡಿಜಿಟಲ್ ತೂಕ ಮಾಪನ -1, 4) ಮೊಬೈಲ್ ಗಳು-3, ಹಾಗೂ 5) ಸಣ್ಣ ಸಣ್ಣ ಪ್ಲಾಸ್ಟಿಕ್ ಕವರ್ ಇರುವ ಸಣ್ಣ ಪ್ಲಾಸ್ಟಿಕ್ ಪ್ಯಾಕೇಟ್-1 , 6) ಕಡು ನೀಲಿ ಬಣ್ಣದ ಪೌಚ್-1, 7) ನಗದು ರೂ 500/-  ಇವುಗಳನ್ನು  ವಶಕ್ಕೆ ಪಡೆದುಕೊಂಡಿರುವುದಾಗಿ ಸ್ವಾಧೀನಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 106,500/- ರೂ ಆಗಿರುವುದಾಗಿ ಸದ್ರಿ ಆರೋಪಿಗಳ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Traffic North Police Station

ಪಿರ್ಯಾದಿ Fakrudhin  ತಾನು ಚಾಲಕನಾಗಿ ಕೆಲಸ ಮಾಡುತ್ತಿದ್ದ  ಡೆಲ್ಟಾ ರೆಡಿಮಿಕ್ಸ್ ಕಂಪೆನಿಯ ಕಾಂಕ್ರೀಟ್ ರೆಡಿಮಿಕ್ಸರ್ ವಾಹನ ನಂಬ್ರ KA-21-B-8561 ನೇದನ್ನು  ಈ ದಿನ ದಿನಾಂಕ:11-06-2023 ರಂದು ಬೈಕಂಪಾಡಿಯಿಂದ ಹೊರಟು ಪಾವಂಜೆಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಶಾಲೆಯ ಕೆಲಸ ನಡೆಯುತ್ತಿರುವ ಸೈಟಿಗೆ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 05:45 ಗಂಟೆಗೆ ಪಾವಂಜೆ ಜಂಕ್ಷನಿನ ತೆರೆದ ಡಿವೈಡರ್ ಬಳಿ  ವಾಹನದ ಬಲಗಡೆಯ ಇಂಡಿಕೇಟರನ್ನು ಹಾಕಿ ನಿಧಾನವಾಗಿ ಉಡುಪಿ-ಮಂಗಳೂರು ರಾ.ಹೆ-66 ರಲ್ಲಿ ಟರ್ನ್ ತೆಗೆದು ಮುಂದೆ ಚಲಾಯಿಸುತ್ತಿದ್ದಂತೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬಸ್ಸು ನಂಬ್ರ KA-51-AA-3333 ನೇದನ್ನು ಅದರ ಚಾಲಕ ಮಂಜುನಾಥ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಕಾಂಕ್ರೀಟ್ ಮಿಕ್ಸರ್ ವಾಹನವು ರಸ್ತೆಗೆ ಅಡ್ಡ ಬಿದ್ದಿದ್ದು ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಕುತ್ತಿಗೆಗೆ,ಹೊಟ್ಟೆಗೆ ಮತ್ತು ಬೆನ್ನಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಹಾಗೂ ಅಪಘಾತ ಪಡಿಸಿದ ಬಸ್ಸಿನ ಚಾಲಕ ಮಂಜುನಾಥ ಮತ್ತು ಬಸ್ಸಿನಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳು ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.ಈ ಅಪಘಾತದಿಂದ ಕಾಂಕ್ರೀಟ್ ಮಿಕ್ಸರ್ ವಾಹನ ಹಾಗೂ ಬಸ್ಸಿಗೆ ಕೂಡಾ ಜಖಂ ಆಗಿರುತ್ತದೆ ಎಂಬಿತ್ಯಾದಿ.

Surathkal PS

ದಿನಾಂಕ 11-06-2023 ರಂದು ಪಿರ್ಯಾದಿ ಪ್ರದೀಪ್ ಟಿ.ಆರ್ ಪಿ.ಎಸ್.ಐ ರವರು ರೌಂಡ್ಸ್ ಮಾಡುತ್ತಾ, ಸಂಜೆ  5-30 ಗಂಟೆಗೆ ಮುಕ್ಕ ಡಿಕ್ಸಿ ವೇಬ್ರಿಡ್ಜ್ ಬಳಿ ತಲುಪುತ್ತಿದ್ದಂತೇ ಎರಡು ದ್ವೀಚಕ್ರ ವಾಹನದಲ್ಲಿ 4 ಜನರು ಕುಳಿತುಕೊಂಡು 4 ಜನರು ಸಿಗರೇಟ್ ಎಳೆಯುತ್ತಾ ಇದ್ದ  1)  ಪ್ರೀತಮ್ ಪ್ರಾಯ: 31 ವಾಸ: ಡೋರ್ ನಂಬ್ರ: 76/ಎಂ-55, ಶ್ರೀ ದೇವಿ ಕೃಪಾ, ಮಧ್ಯ ಪೋಸ್ಟ್, ಕಾಟಿಪಳ್ಳ, ಮಂಗಳೂರು, 2) ಸುಕುಮಾರ  ವಾಸ: 1-76ಎಂ/45, ಮಧ್ಯ ದೇವಸ್ಥಾನದ ಬಳಿ, ಮಧ್ಯ ಪೋಸ್ಟ್, ಕಾಟಿಪಳ್ಳ, ಮಂಗಳೂರು, 3) ನಿತ್ಯಾನಂದ ಪ್ರಾಯ: 30 ವಾಸ: 2-66-ಎ, ಪ್ರಗತಿ ನಗರ, ಮಧ್ಯ ಪೋಸ್ಟ್, ಕಾಟಿಪಳ್ಳ, ಮಂಗಳೂರು. 4) ಜೀವನ್ ಪ್ರಾಯ: 28 ಅನಿಲ ಹೌಸ್, ತಡಂಬೈಲು, ಸುರತ್ಕಲ್, ಮಂಗಳೂರು. ವಶಕ್ಕೆ ಪಡೆದು ವಿಚಾರಿಸಲಾಗಿ ಅವರುಗಳು  ಗಾಂಜಾವನ್ನು ಸಿಗರೇಟಿಗೆ ಮಿಶ್ರಣ ಮಾಡಿ  ಸೇದುತ್ತಿದ್ದುದಾಗಿ ತಿಳಿದಂತೆ ಗಾಂಜಾವನ್ನು ಎಳೆದಿರುವ ಬಗ್ಗೆ ಖಚಿತಪಡಿಸಿಕೊಳ್ಳುವರೇ ನಾಲ್ಕು ಜನರನ್ನು ಕುಂಠಿಕಾನ ಎ.ಜೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡಾಗ  ನಾಲ್ಕು ಜನರು ನಿಷೇಧಿತ ಅಮಲು ಪದಾರ್ಥವಾದ ಗಾಂಜಾವನ್ನು ಸೇವಸಿರುವುದಾಗಿ ದೃಢ ಪಟ್ಟಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ  ಕೋರಿಕೆ.

Surathkal PS

ದಿನಾಂಕ 11-06-2023 ರಂದು ಸಂಜೆ 3.30 ಗಂಟೆಗೆ ಪಿರ್ಯಾದಿದಾರರಾದ ಮಲ್ಲಿಕಾರ್ಜುನ ಬಿರಾದರ್ ಪಿ.ಎಸ್.ಐ ರವರಿಗೆ ಠಾಣಾ ಸಿಬ್ಬಂದಿಯಿಂದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ,ಸುರತ್ಕಲ್ ಗ್ರಾಮದ, ಮುಕ್ಕ ಎಂಬಲ್ಲಿರುವ ಹೊಟೇಲ್ ಪಾಪಿಲೋನ್ ಎಂಬ ಹೆಸರಿನ ಲಾಡ್ಜ್ ನಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಜೂಜಾಟ  ನಡೆಯುವ ಬಗ್ಗೆ ಮಾಹಿತಿ ಲಭಿಸಿದಂತೆ ಮೇಲ್ಕಾಣಿಸಿದ ಹೊಟೇಲ್ ಪಾಪಿಲೋನ್ ಗೆ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ 07 ಜನರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ

ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಜೂಜಾಟ ಆಡಿದ್ದಾಗಿ ತಪ್ಪೊಪ್ಪಿಕೊಂಡಿರುತ್ತಾರೆ, ಅವರುಗಳಿಗೆ ಮಂಜುನಾಥ ಎಂಬವರು ಲಾಡ್ಜ್ ನ ರೂಂ ಬುಕ್ ಮಾಡಿ  ಇಸ್ಪಿಟ್ ಆಟ ಆಡಿಸುತ್ತಿದ್ದು, ಸದ್ರಿ ಮಂಜುನಾಥ ಹೊರಗೆ ಹೋಗಿದ್ದಾಗಿ  ತಿಳಿಸಿರುತ್ತಾರೆ. ಹಿಡಿದು ನಿಲ್ಲಿಸಿದ 07 ಜನರರಾದ. 1) ಲಾಲ್ ಸಾಬ್, 2) ಅಮೀರ್ ಗನಿಸಾಬ್ 3) ದಸ್ತಗೀರ್ ಸಾಬ್ 4) ಸಿದ್ದಣ್ಣ 5) ಮೊಹಮ್ಮದ್ ರಫೀಕ್ 6) ಪರಶುರಾಮ 7) ಜಿತೇಂದ್ರ ಹಿರಾಸಿಂಗ್ ಎಂಬವರುಗಳನ್ನು ಹಾಗೂ ಅವರಿಗೆ  ಇಸ್ಪಿಟ್ ಜೂಜಾಟವನ್ನು ನಡೆಸಲು ಕೊಠಡಿಯನ್ನು ಒದಗಿಸಲಾದ ಬಾಬು ಚಂದ್ರಶೇಖರ್ ಶೆಟ್ಟಿ ಹಾಗೂ ರಕ್ಷಿತ್ ರವರುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಶದಲ್ಲಿ ಜೂಜಾಟಕ್ಕೆ ಉಪಯೋಗಿಸಿದ ರೂ. 26020/ ನಗದು ಹಣವನ್ನು 52 ಇಸ್ಪೀಟ್ ಎಲೆಗಳನ್ನು ಹಾಗೂ ನೆಲಕ್ಕೆ ಹಾಸಲು ಉಪಯೋಗಿಸಿದ ಬೆಡ್ ಶೀಟ ನ್ನು ಹಾಗೂ  ಆರೋಪಿಗಳ ವಶದಲ್ಲಿದ್ದ  9 ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆದಿರುವುದಾಗಿದೆ. ಸದ್ರಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಕೋರಿಕೆ.

Ullal PS     

ದಿನಾಂಕ: 11-06-2023 ರಂದು ಮದ್ಯಾಹ್ನ ಸುಮಾರು  10.30 ಗಂಟೆಗೆ ಉಳ್ಳಾಲ ತಾಲೂಕು ಮುನ್ನೂರು ಗ್ರಾಮದ ಮದನಿ ನಗರ ಎಂಬಲ್ಲಿ ಇರ್ಷಾದ್ ಮೊಹಿದ್ದಿನ್ (33) ವಾಸ: ಕುತ್ತಾರು ಪದವು ಮನೆ ಸಣ್ಣ ಮದಕ ಮುನ್ನೂರು ಗ್ರಾಮ ಉಳ್ಳಾಲ ತಾಲೂಕು ಯುವಕ ಯಾವುದೋ ನಶೆ ಪದಾರ್ಥವನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ತೂರಾಡಿ ಕೊಂಡಿರುವವನನ್ನು ವಿಚಾರಿಸಲಾಗಿ ಆತನು ನಶೆಯಲ್ಲಿದ್ದು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವುದಾಗಿ ತಿಳಿಸಿದ್ದು ದೃಡಪಡಿಸುವರೇ ಕೆ ಎಸ್ ಹೆಗ್ಡೆ ದೇರಳಕಟ್ಟೆ ಆಸ್ಪತ್ರೆಗೆ ಕಳುಹಿಸಿ ವರದಿಯನ್ನು ಪಡೆದುಕೊಂಡಿದ್ದು, ಈತನ ವಿರುದ್ದ ಮಾದಕ ವಸ್ತು ಸೇವನೆಯ ದೃಡಪಟ್ಟದುದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-08-2023 01:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080