Crime report in: Barke PS
ಪಿರ್ಯಾದಿದಾರರಾದ ಶ್ರೀಮತಿ ಭಾರತೀ ಕಾಮತ್ ಎಂಬವರ ಗಂಡನಾದ ನಾಮದೇವ ಕಾಮತ್ ಪ್ರಾಯ 52 ವರ್ಷ ಎಂಬವರು ಯಾರಾದರು ಅಡುಗೆ ಮಾಡಲು ಕರೆದರೆ ಹೋಗಿ ಅಡುಗೆ ಕೆಲಸ ಮಾಡುತ್ತಿದ್ದರು. ಅವರ ಗಂಡ ದಿನಾಂಕ:06.07.2023 ರಂದು ಮಧ್ಯಾಹ್ನ ಪಿರ್ಯಾದಿದಾರರಲ್ಲಿ ಕೇರಳದಲ್ಲಿ ಒಂದು ಮದುವೆ ಸಮಾರಂಭದ ಅಡುಗೆ ಕೆಲಸವಿದೆ ನಾನು ಹೋಗಿ ಭಾನುವಾರ ಅಂದರೆ ದಿನಾಂಕ:09.07.2023ರಂದು ವಾಪಸ್ಸು ಬರುತ್ತೇನೆಂದು ಹೇಳಿ ಮನೆಯಿಂದ ಹೋಗಿದ್ದು ಈವರೆಗೆ ಮನೆಗೆ ವಾಪಾಸ್ಸು ಬಂದಿರುವುದಿಲ್ಲ ಅವರು ಬಳಸುತ್ತಿದ್ದ ನೇ ಮೊಬೈಲ್ ನಂಬ್ರಗಳು ಸ್ವಿಚ್ ಆಫ್ ಆಗಿರುತ್ತವೆ. ಪಿರ್ಯಾದಿದಾರರು ಇಲ್ಲಿಯವರೆಗೂ ಅವರ ಸಂಬಂಧಿಕರ ಮನೆ ಹಾಗೂ ನೆರೆಕೆರೆಯವರಲ್ಲಿ ವಿಚಾರಿಸಿದಲ್ಲಿ ಈವರೆಗೆ ಅವರ ಗಂಡ ಪತ್ತೆಯಾಗಿರುವುದಿಲ್ಲ ಆದ್ದರಿಂದ ಕಾಣೆಯಾದ ಪಿರ್ಯಾದಿ ಗಂಡ ನಾಮದೇವ ಕಾಮತ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ ದೂರಿನ ಸಾರಾಂಶ.
ಕಾಣೆಯಾದ ವ್ಯಕ್ತಿಯ ಚಹರೆ.
- ಹೆಸರು:ನಾಮದೇವ ಕಾಮತ್
- ಪ್ರಾಯ:52 ವರ್ಷ
- ಮೈಬಣ್ಣ:ಎಣ್ಣೆಕಪ್ಪು ಮೈಬಣ್ಣ, ಸಪೂರ ಶರೀರ, ಕೋಲು ಮುಖ.
- ಮಾತನಾಡುವ ಭಾಷೆ:ಕನ್ನಡ, ಕೊಂಕಣಿ, ಹಿಂದಿ, ತುಳು.
- ವಿದ್ಯಾರ್ಹತೆ:4ನೇ ತರಗತಿ.
- ಧರಿಸಿದ್ದ ಬಟ್ಟೆ:ಕಪ್ಪು ಬಣ್ಣದ ಪ್ಯಾಂಟ್, ಕೈಯಲ್ಲಿ ಒಂದು ಕಪ್ಪು ಬಣ್ಣದ ಬ್ಯಾಗ್ ಇರುತ್ತದೆ.
Panambur PS
ಪಿರ್ಯಾದಿ GUTTEPPA ದಾರರು ಮಂಗಳೂರು ತಾಲೂಕು, ಪಣಂಬೂರು ಗ್ರಾಮದ ತಣ್ಣೀರುಬಾವಿ 2 ನೇ ಬೀಚ್ ಹತ್ತಿರ ಬಾಡಿಗೆ ಮನೆಯಲ್ಲಿ ವಾಸವಿದ್ದು, ಚಹಾ ಮಾರಾಟ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವುದಾಗಿದೆ. ದಿನಾಂಕ 11.07.2023 ರಂದು ಬೆಳಗ್ಗೆ 06:00 ಗಂಟೆಗೆ ಪಿರ್ಯಾದಿದಾರರು ಎದ್ದು ನೋಡಲಾಗಿ ಮನೆಯಲ್ಲಿ ಮಲಗಿದ್ದ ಅವರ ತಂದೆ ವಾಸಪ್ಪ ಪ್ರಾಯ:63 ವರ್ಷ ಎಂಬವರು ಮಲಗಿದಲ್ಲಿ ಇಲ್ಲದೇ, ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ವಾಸಪ್ಪನವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಕಳೆದ ಒಂದು ವರ್ಷದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಈ ಮೊದಲೂ ಊರು ಮನೆಯಿಂದ ಅವರು ಒಮ್ಮೆ ಹೇಳದೇ ಹೋಗಿ ಮರಳಿ ಬಂದಿರುತ್ತಾರೆ. ದಿನಾಂಕ 10.07.2023 ರಂದು ರಾತ್ರಿ ಮಲಗಿದವರು ದಿನಾಂಕ 11.07.2023 ರಂದು ಬೆಳಗ್ಗೆ ನೋಡುವಾಗ ಕಾಣೆಯಾಗಿದ್ದು, ಸ್ಥಳೀಯವಾಗಿ ಸ್ನೇಹಿತರಲ್ಲಿ ಊರಿನ ಸಂಬಂಧಿಕರಲ್ಲಿ ಕೇಳಿ, ಹುಡುಕಿ ಪತ್ತೆಯಾಗದೇ ಇದ್ದುದರಿಂದ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ.
Surathkal PS
ಪಿರ್ಯಾದಿದಾರರಾದ ಆಬಿಬ್ ಅಹಮದ್ ಸುರಲ್ಪಾಡಿ ರವರು ಮಂಗಳೂರು ತಾಲೂಕಿನ ಹೊಸಬೆಟ್ಟು ಜಂಕ್ಷನ್ ಬಳಿ ಇರುವ ಮೊಗವೀರ ಸಂಘದವರ ಕಟ್ಟಡದಲ್ಲಿ ಕಾರ್ ಮಾರ್ಟ್ ಎಂಬ ಹೆಸರಿನ ಕಚೇರಿಯನ್ನು ಇಟ್ಟು ಹಳೆಯ ವಾಹನಗಳ ಮಾರಾಟ ಮಾಡುವ ವ್ಯವಹಾರವನ್ನು ಮಾಡಿಕೊಂಡಿರವುದಾಗಿದೆ, ದಿನಾಂಕ 11-07-2023 ರಂದು ರಾತ್ರಿ 8:15 ಗಂಟೆ ಸುಮಾರಿಗೆ ಪಿರ್ಯಾದಿದಾರರು ಹಾಗೂ ಅವರ ಜೊತೆಯಲ್ಲಿದ್ದ ಸಿಬ್ಬಿಂದಿಗಳೊಂದಿಗೆ ಕಛೇರಿಗೆ ಲಾಕ್ ಮಾಡಿ ಹೋಗಿದ್ದು ದಿನಾಂಕ 12-07-2023 ರಂದು ಬೆಳಿಗ್ಗೆ 09:15 ಗಂಟೆ ಸುಮಾರಿಗೆ ಸಿಬ್ಬಂದಿಯಾದ ಕಬೀರ್ ರವರು ಬಂದು ನೋಡಿದಾಗ ಯಾರೇ ಕಳ್ಳರು ಯಾವುದೇ ಸೊತ್ತಿನಿಂದ ಕಚೇರಿ ಮುಂಭಾಗದ ಡೋರಿನ ಗ್ಲಾಸ್ ನ್ನು ಹೊಡೆದು ಪುಡಿ ಮಾಡಿ ಒಳ ಪ್ರವೇಶಿಸಿ ಡ್ರಾವರಿನಲ್ಲಿದ್ದ ಕಾರುಗಳ ಕೀ ಯನ್ನು ಉಪಯೋಗಿಸಿಕೊಂಡು ಅಲ್ಲೇ ಪಕ್ಕದಲ್ಲಿ ವಾಹನಗಳ ಶೋರೂಮ್ ಮಾದರಿಯಲ್ಲಿ ನಿಲ್ಲಿಸಿದ್ದ ವಾಹನಗಳ ಪೈಕಿ ಸುಮಾರು 6 ಲಕ್ಷ ಮೌಲ್ಯದ Swift Car No KA-19-MK-7252 ಹಾಗೂ ಸುಮಾರು 9 ಲಕ್ಷ ಮೌಲ್ಯದ Creta Car No KA-19-MH-7654 ಹಾಗೂ ಕಚೇರಿಯ ಒಳಗೆ ಇದ್ದ 4000 ರೂ ಮೌಲ್ಯದ HP ಕಂಪೆನಿಯ ಪ್ರಿಂಟರ್ ಹಾಗೂ 10000 ರೂ ಮೌಲ್ಯದ HP ಕಂಪೆನಿಯ Laptop ಹಾಗೂ One Plus ಮೊಬೈಲ್ ಹಾಗೂ ಕಚೇರಿಯಲ್ಲಿ ದಾಖಲಾತಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ.
Moodabidre PS
ದಿನಾಂಕ 11.07.2023 ರಂದು 16.00 ಗಂಟೆಗೆ ಮೂಡಬಿದ್ರೆ ತಾಲೂಕು ಮಾರ್ಪಾಡಿ ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲ್ಲಿರುವ ನಿರ್ಜನ ಪ್ರದೇಶದಲ್ಲಿ ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ನಂದು ಕೃಷ್ಣ ಜಿ ಪ್ರಾಯ 21 ವರ್ಷ, ವಾಸ; ಕರಿಕಾಟಿಲ್ ಹೌಸ್, ಟಿ.ಒ ನಾರಾತ್, ಕಣ್ಣೂರು ಜಿಲ್ಲೆ, ಕೆರಳ ರಾಜ್ಯ ಎಂಬಾತನನ್ನು ವಶಕ್ಕೆ ಪಡೆದಲ್ಲಿ ಆತನು ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದುದರಿಂದ ಆತನನ್ನು ವೈದ್ಯಾಧಿಕಾರಿಯವರು ಎ. ಜೆ ಆಸ್ಪತ್ರೆ ಕುಂಟಿಕಾನ, ಮಂಗಳೂರು ತಾಲೂಕು ಇಲ್ಲಿ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ದೃಢಪಟ್ಟಿದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.
2) ದಿನಾಂಕ 11.07.2023 ರಂದು 17.30 ಗಂಟೆಗೆ ಮೂಡಬಿದ್ರೆ ತಾಲೂಕು ಹೊಸಬೆಟ್ಟು ಗ್ರಾಮದ ಮಾಸ್ತಿಕಟ್ಟೆ-ತೋಡಾರು ಹೋಗುವ ದಾರಿ ಮಧ್ಯದಲ್ಲಿರುವ ನಿರ್ಜನ ಪ್ರದೇಶದಲ್ಲಿ ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಅಭಿಷೇಕ್ ಕೆ ವಿ ಪ್ರಾಯ 21 ವರ್ಷ, ವಾಸ; ಕುಲೋತ್ತ್ ಒಲಪಿಲ್ ಹೌಸ್, ವಾಗಂ, ಕಣ್ಣೂರು ಜಿಲ್ಲೆ, ಕೆರಳ ರಾಜ್ಯ ಎಂಬಾತನನ್ನು ದಿನಾಂಕ: 11.07.2023 ರಂದು 18.00 ಗಂಟೆಯ ಸಮಯಕ್ಕೆ ವಶಕ್ಕೆ ಪಡೆದಲ್ಲಿ ಆತನು ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದುದರಿಂದ ಆತನನ್ನು ವೈದ್ಯಾಧಿಕಾರಿಯವರು ಎ. ಜೆ ಆಸ್ಪತ್ರೆ ಕುಂಟಿಕಾನ, ಮಂಗಳೂರು ತಾಲೂಕು ಇಲ್ಲಿ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ದೃಢಪಟ್ಟಿದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.
3) ದಿನಾಂಕ 11.07.2023 ರಂದು 18.30 ಗಂಟೆಗೆ ಮೂಡಬಿದ್ರೆ ತಾಲೂಕು ಪುತ್ತಿಗೆ ಗ್ರಾಮದ ಮುಲ್ಕಿ ಕ್ರಾಸ್ ಎಂಬಲ್ಲಿರುವ ನಿರ್ಜನ ಪ್ರದೇಶದಲ್ಲಿ ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಸಾಯಿಕೃಷ್ಣ ನಂಬಿಯಾರ್ ಪ್ರಾಯ 21 ವರ್ಷ, ತಂದೆ: ಸತೀಶನ್ ಎ ಪಿ, ವಾಸ; ಪುದಿಯ ಮೀಟಿಲ್ ಹೌಸ್, ಕರಾಪೀರ್, ಕಣ್ಣೂರು ಜಿಲ್ಲೆ, ಕೆರಳ ರಾಜ್ಯ ಎಂಬಾತನನ್ನು ದಿನಾಂಕ: 11.07.2023 ರಂದು 19.00 ಗಂಟೆಯ ಸಮಯಕ್ಕೆ ವಶಕ್ಕೆ ಪಡೆದಲ್ಲಿ ಆತನು ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದುದರಿಂದ ಆತನನ್ನು ವೈದ್ಯಾಧಿಕಾರಿಯವರು ಎ. ಜೆ ಆಸ್ಪತ್ರೆ ಕುಂಟಿಕಾನ, ಮಂಗಳೂರು ತಾಲೂಕು ಇಲ್ಲಿ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ದೃಢಪಟ್ಟಿದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.
4) ದಿನಾಂಕ 11.07.2023 ರಂದು 19.30 ಗಂಟೆಗೆ ಮೂಡಬಿದ್ರೆ ತಾಲೂಕು ಬಡಗಮಿಜಾರು ಗ್ರಾಮದ ಬಂಗಬೆಟ್ಟು ಎಂಬಲ್ಲಿರುವ ನಿರ್ಜನ ಪ್ರದೇಶದಲ್ಲಿ ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಶನಾನ್ ಸಿದ್ದಿಕ್ ಪ್ರಾಯ 22 ವರ್ಷ, ವಾಸ; ಟಿ ಸಿ ಹೌಸ್, ನಡುವಿನಂಗಡಿ, ತಿರೂರು, ಮಲಪುರಂ ಜಿಲ್ಲೆ, ಕೆರಳ ರಾಜ್ಯ ಎಂಬಾತನನ್ನು ದಿನಾಂಕ: 11.07.2023 ರಂದು 20.00 ಗಂಟೆಯ ಸಮಯಕ್ಕೆ ವಶಕ್ಕೆ ಪಡೆದಲ್ಲಿ ಆತನು ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದುದರಿಂದ ಆತನನ್ನು ವೈದ್ಯಾಧಿಕಾರಿಯವರು ಎ. ಜೆ ಆಸ್ಪತ್ರೆ ಕುಂಟಿಕಾನ, ಮಂಗಳೂರು ತಾಲೂಕು ಇಲ್ಲಿ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ದೃಢಪಟ್ಟಿದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.