Crime Reported in : Mangalore Traffic West PS
ದಿನಾಂಕ 11-08-2022 ರಂದು ಪಿರ್ಯಾದುದಾರ DEVIPRASAD ಬದ್ರಿಯಾ ಜಂಕ್ಷನ್ ಬಳಿ ಸಮವಸ್ತ್ರದಲ್ಲಿ ಕರ್ತವ್ಯ ದಲ್ಲಿ ಇರುವ ಸಮಯ ಸುಮಾರು 05.59 ಗಂಟೆಗೆ ಬದ್ರಿಯಾ ಜಂಕ್ಷನ್ ಕಡೆಯಿಂದ ಉತ್ತರ ಪೊಲೀಸ್ ಠಾಣೆಯ ಬಂದರು ರಸ್ತೆಯ ಕಡೆಗೆ KL-48-F-5629 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೀರಾ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ದ್ವಿ ಚಕ್ರ ವಾಹನದಲ್ಲಿ ಸವಾರ ಹಾಗೂ ಸಹಸವಾರರು ಹೆಲ್ಮೆಟ್ ಧರಿಸದೇ ಚಾಲಾಯಿಸಿಕೊಂಡು ಬರುತ್ತಿದ್ದವರ ವೀಡಿಯೋ ಮತ್ತು ಫೂಟೊವನ್ನು ಸಿಬ್ಬಂದಿಯವರ ಮೊಬೈಲ್ ಫೋನ್ ನಿಂದ ತೆಗೆದಿದ್ದು ಸದ್ರಿ ದ್ವಿ ಚಕ್ರ ಸವಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಂಬಿತ್ಯಾದಿ
Crime Reported in : Mangalore Traffic East PS
ಪಿರ್ಯಾದಿದಾರ KARUNESH KUMAR ದಿನಾಂಕ 11-08-2022 ರಂದು ಪಾಂಡೇಶ್ವರ ಯುನಿಯನ್ ಬ್ಯಾಂಕಿನ ಹತ್ತಿರ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ ಸಮಯ ಸುಮಾರು 13.15 ಗಂಟೆಗೆ ಎ.ಬಿ.ಶೆಟ್ಟಿ ಜಂಕ್ಷನ್ ಕಡೆಯಿಂದ ರೊಸರಿಯೋ ಚರ್ಚ್ ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-HC-1421 ನಂಬ್ರದ ಸ್ಕೂಟರ್ ಸವಾರನು ತನ್ನ ಸ್ಕೂಟರಿನಲ್ಲಿ ಇಬ್ಬರು ಸಹ ಸವಾರರನ್ನು ಕುಳ್ಳಿರಿಸಿಕೊಂಡು ಮೂವರೂ ತಲೆಗೆ ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯತನದಿಂದ ತನ್ನ ಪ್ರಾಣ ಹಾಗೂ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಕಂಡು ಪಿರ್ಯಾದಿದಾರರು ಸದ್ರಿ ಸ್ಕೂಟರನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿ ಸೂಚಿಸಿದಾಗ ಸ್ಕೂಟರ್ ಸವಾರನು ತನ್ನ ಸ್ಕೂಟರನ್ನು ಸ್ಥಳದಲ್ಲಿ ನಿಲ್ಲಿಸದೇ ಫಾರಂಮಾಲ್ ಮಾರ್ಗವಾಗಿ ರೊಸರಿಯೋ ಕಡೆಗೆ ಸವಾರಿ ಮಾಡಿಕೊಂಡು ಮುಂದೆ ಹೋಗಿದ್ದು, ಪಿರ್ಯಾದಿದಾರರು ಜೊತೆಯಲ್ಲಿದ್ದ ಸಿಬ್ಬಂದಿಯವರ ಮೊಬೈಲ್ ನಲ್ಲಿ ವೀಡಿಯೋ ಹಾಗೂ ಪೋಟೋ ತೆಗೆಸಿರುತ್ತಾರೆ. ಆದ್ದರಿಂದ KA-19-HC-1421 ಸ್ಕೂಟರ್ ಸವಾರ ಹಾಗೂ ಸಹ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ
2) ಪಿರ್ಯಾದಿದಾರ LAKSHMAN BILLAVA ದಿನಾಂಕ 11-08-2022 ರಂದು ಜ್ಯೋತಿ KMC ಆಸ್ಪತ್ರೆಯ ಬಳಿ ಕರ್ತವ್ಯದಲ್ಲಿದ್ದಾಗ ಸಮಯ ಸುಮಾರು 16.15 ಗಂಟೆಗೆ ಅಂಬೇಡ್ಕರ್ ಸರ್ಕಲ್ ಕಡೆಯಿಂದ ಹಂಪನಕಟ್ಟೆ ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-EB-6123 ನೇ ನಂಬ್ರದ ಸ್ಕೂಟರ್ ಸವಾರನು ತನ್ನ ಸ್ಕೂಟರಿನಲ್ಲಿ ಇಬ್ಬರು ಸಹ ಸವಾರರನ್ನು ಕುಳ್ಳಿರಿಸಿಕೊಂಡು ಮೂವರೂ ತಲೆಗೆ ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯತನದಿಂದ ತನ್ನ ಪ್ರಾಣ ಹಾಗೂ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಕಂಡು ಪಿರ್ಯಾದಿದಾರರು ಸದ್ರಿ ಸ್ಕೂಟರನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿ ಸೂಚಿಸಿದಾಗ ಸ್ಕೂಟರ್ ಸವಾರನು ತನ್ನ ಸ್ಕೂಟರನ್ನು ಸ್ಥಳದಲ್ಲಿ ನಿಲ್ಲಿಸದೇ ಹಂಪನಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಮುಂದೆ ಹೋಗಿದ್ದು, ಪಿರ್ಯಾದಿದಾರರು ಜೊತೆಯಲ್ಲಿದ್ದ ಸಿಬ್ಬಂದಿಯವರ ಮೊಬೈಲ್ ನಲ್ಲಿ ವೀಡಿಯೋ ಹಾಗೂ ಪೋಟೋ ತೆಗೆಸಿರುತ್ತಾರೆ. ಆದ್ದರಿಂದ KA-19-EB-6123 ಸ್ಕೂಟರ್ ಸವಾರ ಹಾಗೂ ಸಹ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ
3) ಪಿರ್ಯಾದಿದಾರಾದ ನಿತಿನ್ ಕುಮಾರ್ ಕೆ.ವಿ ರವರು ಈ ದಿನ ದಿನಾಂಕ 11-08-2022 ರಂದು ಬೆಳಿಗ್ಗೆ ಸುಮಾರು 9.30 ಗಂಟೆಗೆ KA-19-HH-9509 ನಂಬ್ರದ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ತಿಲಕ್ ಎಂಬುವರನ್ನು ಹಿಂಬದಿ ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಎಕ್ಕೂರು ಕಡೆಯಿಂದ ನಂತೂರು ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮಾರು ರಸ್ತೆಯಲ್ಲಿ ಹೋಗುತ್ತಾ ಪಂಪ್ ವೆಲ್ ಪ್ಲೈಓವರ್ ಮೇಲೆ ಮೈತ್ರಿ ಹಾರ್ಡ್ ವೇರ್ ಮುಂಭಾಗಕ್ಕೆ ಬಂದು ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂಬದಿಯಿಂದ KA-03-NG-3618 ನಂಬ್ರದ ಕಾರನ್ನು ಅದರ ಚಾಲಕ ಪುನೀತ್ ಎಂಬಾತನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ವೇಗವಾಗಿ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ರಸ್ತೆ ಎಡಬದಿಯ ಗೋಡೆಗೆ ಡಿಕ್ಕಿಪಡಿಸಿ ಬಳಿಕ ರಸ್ತೆಯ ಎಡಭಾಗ ಚಲಿಸುತ್ತಿದ್ದ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರ ತಿಲಕ್ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎರಡೂ ಕೈಗಳಿಗೆ ಮತ್ತು ಬೆನ್ನಿಗೆ ತರಚಿದ ಗಾಯ, ಎಡ ಕೈ ಮಣಿಗಂಟಿನ ಬಳಿ ಗುದ್ದಿದ ಗಾಯಗಳಾಗಿದ್ದು, ಸಹ ಸವಾರ ತಿಲಕ್ ರವರಿಗೆ ಎರಡೂ ಕೈಗಳಿಗೆ ತರಚಿದ ಗಾಯ ಮತ್ತು ಬಲ ಕಾಲಿನ ಪಾದದ ಗಂಟಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಎ.ಜೆ. ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಸದ್ರಿ ಅಪಘಾತದಿಂದ ಪಿರ್ಯಾದಿದಾರರ ಸ್ಕೂಟರ್ ಕೂಡ ಜಖಂಗೊಂಡಿದ್ದು, ಅಪಘಾತದ ಬಗ್ಗೆ ಕಾರು ಚಾಲಕ ಪುನೀತ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.
4) ಪಿರ್ಯಾದಿದಾರಾದ ಸುನೀಲ್ ರವರು ದಿನಾಂಕ 09-08-2022 12.00 ಗಂಟೆಗೆ KA-19-EQ-1897 ನಂಬ್ರದ ಸ್ಕೂಟರ್ ನಲ್ಲಿ ಹರಿಣಾಕ್ಷ ಎಂಬುವರನ್ನು ಹಿಂಬದಿ ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಕೆಪಿಟಿ ಕಡೆಯಿಂದ ಕುಂಟಿಕಾನ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮಾರು ರಸ್ತೆಯಲ್ಲಿ ಹೋಗುತ್ತಾ ಕೆ.ಎಸ್.ಆರ್.ಟಿ.ಸಿ (ಡಿಪೋ) ವರ್ಕ್ ಶಾಪ್ ಎದುರು ಕುಂಟಿಕಾನಕ್ಕೆ ಹೋಗಲಿರುವ ಸರ್ವೀಸ್ ರಸ್ತೆಯ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂಬದಿಯಿಂದ KA-19-MJ-8456 ನಂಬ್ರದ ಕಾರನ್ನು ಅದರ ಚಾಲಕ ಲಕ್ಷ್ಮಣ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರನ್ನು ಬಲಗಡೆಯಿಂದ ಓವರ್ ಟೇಕ್ ಮಾಡುತ್ತಾ ಸರ್ವೀಸ್ ರಸ್ತೆಗೆ ತೆರಳಲು ಒಮ್ಮೆಲೇ ಎಡಕ್ಕೆ ಚಲಾಯಿಸಿದ ಕಾರಣ ಸ್ಕೂಟರಿಗೆ ಕಾರಿನ ಹಿಂಭಾಗದ ಡೋರ್ ಡಿಕ್ಕಿಯಾದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರ ಹರಿಣಾಕ್ಷ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ತಲೆಗೆ, ಹಣೆಗೆ ಮತ್ತು ಬಲ ಕಾಲಿನ ಸಣ್ಣ ಬೆರಳಿಗೆ ತರಚಿದ ಗಾಯಗಳಾಗಿದ್ದು, ಸಹ ಸವಾರ ಹರಿಣಾಕ್ಷ ರವರಿಗೆ ತಲೆಗೆ ರಕ್ತಗಾಯ ಹಾಗೂ ಮುಖ ಮತ್ತು ಕೈಗಳಲ್ಲಿ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಎ.ಜೆ. ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಸಹ ಸವಾರನು ಒಳರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಅಪಘಾತದ ಬಗ್ಗೆ ಕಾರು ಚಾಲಕ ಲಕ್ಷ್ಮಣ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.
Crime Reported in : Konaje PS
ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 11.08.2022 ರಂದು ಪಿರ್ಯಾದಿದಾರ Mallikarjun Biradar ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸುಮಾರು 10-15 ಗಂಟೆಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ನಡುಪದವು ಎಂಬಲ್ಲಿರುವ ಪಿ.ಎ ಕಾಲೇಜು ಬಳಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಆಶಿಶ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.
Crime Reported in : Mangalore Traffic North PS
ಪಿರ್ಯಾದಿದಾರ Yogish ದಿನಾಂಕ 11-08-2022 ರಂದು ಕೆಂಜಾರು ಶ್ರೀ ದೇವಿ ಕಾಲೇಜಿನ ಬಳಿ ಕರ್ತವ್ಯದಲ್ಲಿದ್ದಾಗ ಸಂಜೆ ಸಮಯ ಸುಮಾರು 17:40 ಗಂಟೆಗೆ KA-21-U-1045 ನಂಬ್ರದ ಸ್ಕೂಟರಿನಲ್ಲಿ ಅದರ ಸವಾರನು ತಲೆಗೆ ಹೆಲ್ಮೆಟ್ ಧರಿಸದೆ ಹಿಂಬದಿಯಲ್ಲಿದ್ದ ಇಬ್ಬರೂ ಸಹ ಸವಾರರನ್ನು ಕುಳ್ಳಿರಿಸಿಕೊಂಡು ಅವರೂ ಕೂಡ ತಲೆಗೆ ಹೆಲ್ಮೆಟ್ ಧರಿಸದೇ ಕೆಂಜಾರು ಶ್ರೀದೇವಿ ಕಾಲೇಜು ಕಡೆಯಿಂದ ಬಜ್ಪೆ ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದವರನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚನೆ ನೀಡಿದರೂ ನನ್ನ ಸೂಚನೆಯನ್ನು ಧಿಕ್ಕರಿಸಿ ಸ್ಕೂಟರನ್ನು ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಜ್ಪೆ ಕಡೆಗೆ ಹೋಗಿರುತ್ತಾರೆ ಎಂಬಿತ್ಯಾದಿ.
2) ಪಿರ್ಯಾದಿದಾರ Vishwanatha N ದಿನಾಂಕ 12-08-2022 ರಂದು ಮುಕ್ಕ NITK ಟೋಲ್ ಗೇಟ್ ಬಳಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಸಮಯ ಸುಮಾರು 10:44 ಗಂಟೆಗೆ KA-19-HC-3283 ನಂಬ್ರದ ಸ್ಕೂಟರ್ ಅದರ ಸವಾರನು ಹಿಂಬದಿಯಲ್ಲಿ ಸಹ ಸವಾರರಿಬ್ಬರನ್ನು ಕುಳ್ಳಿರಿಸಿಕೊಂಡು ಮೂವರೂ ತಲೆಗೆ ಹೆಲ್ಮೆಟ್ ಧರಿಸದೇ NITK ಟೋಲ್ ಗೇಟ್ ಕಡೆಯಿಂದ ಮುಕ್ಕ ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ನಿಲ್ಲಿಸಲು ಸೂಚನೆ ನೀಡಿದರೂ ಸೂಚನೆಯನ್ನು ಧಿಕ್ಕರಿಸಿ ಸದ್ರಿ ಸ್ಕೂಟರನ್ನು ಅದರ ಸವಾರ ಸ್ಥಳದಲ್ಲಿ ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಮುಕ್ಕ ಕಡೆಗೆ ಹೋಗಿರುತ್ತಾರೆ ಎಂಬಿತ್ಯಾದಿ.
Crime Reported in : Mangalore Traffic South PS
ದಿನಾಂಕ 11.08.2022 ರಂದು ಪಿರ್ಯಾದಿದಾರ SANTHOSH PADIL ಸಂಜೆ 5.37 ಗಂಟೆಗೆ ಪ್ಯಾರಿಸ್ ಜಂಕ್ಷನ್ ಬಳಿ ಕರ್ತವ್ಯದಲ್ಲಿರುವಾಗ ಅಬ್ಬಕ್ಕ ಸರ್ಕಲ್ ಕಡೆಯಿಂದ ಪ್ಯಾರಿಸ್ ಜಂಕ್ಷನ್ ಕಡೆಗೆ ಸ್ಕೂಟರ್ ನಂಬ್ರ KA-19-EZ-0933 ನೇದನ್ನು ಅದರ ಸವಾರ ಇಬ್ಬರೂ ಸಹಸವಾರರನ್ನು ಕುಳ್ಳಿರಿಸಿಕೊಂಡು, ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ಸ್ಕೂಟರನ್ನು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಹೋಗಿರುತ್ತಾನೆ ಎಂಬಿತ್ಯಾದಿ.
2) ದಿನಾಂಕ 11.08.2022 ರಂದು ಪಿರ್ಯಾದಿದಾರ YASHAVANTHA ಸಂಜೆ 5.06 ಗಂಟೆಗೆ ಉಳ್ಳಾಲ ಬೈಲ್ ಬಳಿ ಕರ್ತವ್ಯದಲ್ಲಿರುವಾಗ ಮಾಸ್ತಿಕಟ್ಟೆ ಕಡೆಯಿಂದ ತೊಕ್ಕೊಟ್ಟು ಕಡೆಗೆ ಸ್ಕೂಟರ್ ನಂಬ್ರ KA-19-EZ-6747 ನೇದನ್ನು ಅದರ ಸವಾರ ಇಬ್ಬರೂ ಸಹಸವಾರರನ್ನು ಕುಳ್ಳಿರಿಸಿಕೊಂಡು, ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ಸ್ಕೂಟರನ್ನು ತೀರಾ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಹೋಗಿರುತ್ತಾನೆ ಎಂಬಿತ್ಯಾದಿ
3) ದಿನಾಂಕ:12-08-2022 ರಂದು ಪಿರ್ಯಾದಿದಾರರಾದ ಗೋಪಾಲ್ ಪೂಜಾರಿ ರವರು ಮತ್ತು ಅವರ ಜೋತೆ ಕೆಲಸ ಮಾಡುವ ಎಮ್ ಡಿ ವಿಕ್ಕಿಕಾನ್,ಶಮೀಮ್ ಹಾಗೂ ದಿಲ್ ಜನ್ ಎಂಬುವರು ಒಟ್ಟಿಗೆ ಸೇರಿ ಜಪ್ಪಿನಮೊಗರು ಪ್ರೆಸ್ಟಿಜ್ ಶಾಲೆ ಎದುರು ಸಮಯ ಸುಮಾರು ಬೆಳಿಗ್ಗೆ 7-15 ಗಂಟೆಗೆ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗಿರುವ ರಾ.ಹೆ-66 ರ ರಸ್ತೆಯ ಎಡಬದಿಯಲ್ಲಿ ಇರುವ ಹುಲ್ಲನ್ನು ಕಟ್ಟಿಂಗ್ ಮಾಡಲು ತೆರೆಳಿ ಕಟ್ಟಿಂಗ್ ಮಾಡುವ ಮೊದಲು ತಲಪಾಡಿಯಿಂದ ಮಂಗಳೂರು ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲಸದ ಹತ್ತಿರ ಯಾರು ಬರದಂತೆ ಕೋನ್ ಮತ್ತು ರೆಡ್ ಪ್ಲಾಗ್ ಹಾಕಿ ಕೆಲಸ ಮಾಡುತ್ತಿರುವಾಗ ಶಮೀಮ್ ಹಾಗೂ ದಿಲ್ ಜನ್ ರಸ್ತೆಯ ಎಡಬದಿಯಲ್ಲಿರುವ ಹುಲ್ಲನ್ನು ಕಟ್ಟಿಂಗ್ ಮಾಡುತ್ತಿದ್ದು ಎಮ್ ಡಿ ವಿಕ್ಕಿಕಾನ್ ರಸ್ತೆಯ ಎಡಬದಿಯಲ್ಲಿರುವ ಕ್ರಾಶ್ ಗ್ರಾರ್ಡ್ ಹತ್ತಿರ ಹಾರೆಯಲ್ಲಿ ಹುಲ್ಲನ್ನು ಒಟ್ಟುಗೂಡಿಸುತ್ತಾ ಇದ್ದರು ಪಿರ್ಯಾದಿದಾರರು ವಿಕ್ಕಿಕಾನ್ ಗಿಂತ ಸುಮಾರು 20 ಅಡಿ ದೂರದಲ್ಲಿ ನೀರು ಹೋಗಲು ಹಾರೆಯಲ್ಲಿ ಮಣ್ಣು ತೆಗೆಯುತ್ತಿರುವಾಗ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ನೀಲಿ ಬಣ್ಣದ ಗೂಡ್ಸ್ ಟೆಂಪೋ ವೊಂದನ್ನು ಅದರ ಚಾಲಕ ಪಿರ್ಯಾದಿದಾರರ ರೆಡ್ ಪ್ಲಾಗ್ ಮತ್ತು ಕೋನ್ ಗಳನ್ನು ಲೆಕ್ಕಿಸದೇ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ಇಟ್ಟಿದ ಕೋನ್ ಗೆ ಡಿಕ್ಕಿ ಪಡಿಸಿ ನಂತರ ವಿಕ್ಕಿಕಾನ್ ಗೆ ಡಿಕ್ಕಿ ಪಡಿಸಿ ಹಾಗೇ ಮುಂದಕ್ಕೆ ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿ ಟೆಂಪೋವನ್ನು ನಿಲ್ಲಿಸದೇ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ ಇದರ ಪರಿಣಾಮ ಪಿರ್ಯಾದಿದಾರರಿಗೆ ಬಲಗೈ ಅಂಗೈಗೆ ರಕ್ತಗಾಯ ಹಾಗೂ ಎಡಬದಿ ಸೊಂಟಕ್ಕೆ ಮೂಳೆ ಮುರಿತದ ಗಾಯ ಹಾಗೂ ವಿಕ್ಕಿಕಾನ್ ರವರಿಗೆ ಬಲಬದಿ ಹಣೆಗೆ ಮುಖಕ್ಕೆ,ಎದೆಗೆ, ತಲೆಗೆ ಮತ್ತು ಸೊಂಟಕ್ಕೆ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು ಕೂಡಲೇ ಅಲ್ಲಿ ಸೇರಿದ ಜನರು ಶಮೀಮ್ ಮತ್ತು ದಿಲ್ ಜನ್ ಸೇರಿ ರಸ್ತೆಯ ಬದಿಗೆ ತಂದು ಉಪಚರಿಸಿ ಅಪಘಾತ ಸ್ಥಳಕ್ಕೆ ಬಂದ ಅವರ ರೈಟರ್ ಶ್ರೀಕಾಂತ್ ರವರು ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರನ್ನು ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಶಮೀಮ್ ಮತ್ತು ದಿಲ್ ಜನ್ ರವರು ವಿಕ್ಕಿಕಾನ್ ರವರನ್ನು ಚಿಕಿತ್ಸೆ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ವಿಕ್ಕಿಕಾನ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.
Crime Reported in : Ullal PS
ಉಳ್ಳಾಲ ತಾಲೂಕು ಕಿನ್ಯ ಗ್ರಾಮದ ಮೀಂಪ್ರಿ ಹಝ್ರತ್ ಹುಸೈನ್್ ಮುಸ್ಲಿಯಾರ್ ಮಸೀದಿ ಬಳಿಯ ಡೋರ್ ನಂ. 1-345/9 ರಲ್ಲಿನ ವಾಸಿ ಫಿರ್ಯಾದಿದಾರ Azeema Kausar ಗಂಡ ಇಬ್ರಾಹಿಂ @ ಅಸ್ಗರ್ ಎಂಬವರು ದಿನಾಂಕ. 25-6-2022 ರಂದು 10-00 ಗಂಟೆಗೆ ತಾನು ಕೊಣಾಜೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಮತ್ತೆ 19-30 ಗಂಟೆಗೆ ಫಿರ್ಯಾದಿದಾರರಿಗೆ ಪೋನ್ ಮಾಡಿ ತಾನು ಕುಂದಾಪುರಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಹೋದವರು ವಾಪಾಸು ಬಾರದೇ ಇದ್ದುದಲ್ಲದೆ ಅವರ ಮೊಬೈಲ್ ಪೋನ್ ಕೂಡಾ ಸ್ವಿಚ್ ಅಪ್ ಬರುತ್ತಿದ್ದು, ಕಾಣೆಯಾದವರನ್ನು ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಈ ತನಕ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ ಕಾಣೆಯಾದವರನ್ನು ಪತ್ತೆ ಹಚ್ಚಿ ಕೊಡುವಂತೆ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.