ಅಭಿಪ್ರಾಯ / ಸಲಹೆಗಳು

Crime Report in Mangalore North PS                                                 

ದಿನಾಂಕ: 12.08.2023 ಪಿರ್ಯಾದಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ವಿನಾಯಕ ತೋರಗಲ್ ಇವರು ರೌಂಡ್ಸ್ ಕರ್ತವ್ಯ ಮಾಡುತ್ತಾ ಉತ್ತರ ಧಕ್ಕೆ ತಲುಪಿದಾಗ ಉತ್ತರ ಧಕ್ಕೆ ಬಳಿ ಒಬ್ಬಾತನು ಅಮಲುಕೋರನಾಗಿ ತೂರಾಡುತ್ತಿದ್ದು ಆತನನ್ನು ವಿಚಾರಿಸಿದಾಗ ಆತನು ಆಶೀಕ್ ರಹುಮಾನ್.ಎಮ್ ಪ್ರಾಯ:27 ವರ್ಷ ತಂದೆ: ಮೊಹಮ್ಮದ್ ಅಶ್ರಫ್ ವಾಸ: ಪೊಲಿಮಟ್ಟಿ ನಾರ್ತ, ಅಲಿ ಮೊಹಮ್ಮದ್ ರೋಡ್ ಅಳಪುಳ್ಳ  ಜಕ್ರಿಯಾ ಬಝಾರ್ ಕೇರಳ ರಾಜ್ಯ ಎಂಬುದಾಗಿ ತಿಳಿಸಿದ್ದು ಆತನಲ್ಲಿ ಯಾಕೆ ತೂರಾಡುತ್ತಿದ್ದಿ ಎಂದು ಕೇಳಲಾಗಿ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ.ಸದ್ರಿ ಆಶೀಕ್ ರಹುಮಾನ್.ಎಮ್ ನನ್ನು ,ಅವರ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಗೆ ಸಿಬ್ಬಂದಿಗಳ  ಭದ್ರಿಕೆಯಲ್ಲಿ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಿದಲ್ಲು, ಎ.ಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ ಅಶೀಕ್ ರಹುಮಾನ್.ಎಮ್ (27) ಎಂಬಾತನು Tetrahydracannabinoid(Marijuana) ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ತಿಳಿಸಿ ವರದಿಯನ್ನು ನೀಡಿರುತ್ತಾರೆ. ನಂತರ ಸದರಿ ಅಶೀಕ್ ರಹುಮಾನ್.ಎಮ್ ನನ್ನು ಎ.ಜೆ. ಆಸ್ಪತ್ರೆಯಿಂದ ಠಾಣೆಗೆ ಕರೆತಂದು ಆತನ ವಿರುದ್ದ ಕ್ರಮಕ್ಕಾಗಿ ಮದ್ಯಾಹ್ನ  12.00 ಗಂಟೆಯಿಂದ 12.30 ಗಂಟೆ ತನಕ ವರದಿಯನ್ನು ತಯಾರಿಸಿ ಅಶೀಕ್ ರೆಹಮಾನ್ ಎಮ್ ನ ವಿರುದ್ದ ಠಾಣಾ ಅ.ಕ್ರ. 90/2023 ಕಲಂ 27 (ಬಿ) ಎನ್.ಡಿ.ಪಿ.ಎಸ್. ಕಾಯ್ದೆರಂತೆ ಪ್ರಕರಣ ದಾಖಲಿಸಿಕೊಂಡಿರುತ್ತೆನೆ ಎಂಬಿತ್ಯಾದಿ ಸಾರಾಂಶ.

Konaje PS

 ದಿನಾಂಕ:11-08-2023 ರಂದು ಪಿರ್ಯಾದಿ Ashok - PSI ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ 11-00 ಗಂಟೆಗೆ  ಉಳ್ಳಾಲ ತಾಲೂಕು ದೇರಳಕಟ್ಟೆ ಎಂಬಲ್ಲಿಗೆ ತಲುಪಿದಾಗ ರಸ್ತೆಯ ಬದಿಯಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿತರಾದ 1)  ಮೊಹಮ್ಮದ್ ಫಯೀಜ್ ಡಿ ಪ್ರಾಯ 23 ವರ್ಷ ತಂದೆ: ಅಬ್ದುಲ್ ಅಜೀದ್ ಡಿ ವಾಸ: 5-147/1 ರಹಮತ್ ಮಂಜಿಲ್ ಕಣಚೂರು ಆಸ್ಪತ್ರೆ ಹತ್ತಿರ ಕೋಟೇಕಾರ್ ಗ್ರಾಮ, ದೇರಳ ಕಟ್ಟೆ, ಉಳ್ಳಾಲ ತಾಲೂಕು, 2) ಫಾಝಿಲ್ ಇಬ್ರಾಹಿಂ ಪ್ರಾಯ 26 ವರ್ಷ ತಂದೆ: ಅಬ್ದುಲ್ ಅಜೀದ್ ಡಿ ವಾಸ: 5-147/1 ರಹಮತ್ ಮಂಜಿಲ್ ಕಣಚೂರು ಆಸ್ಪತ್ರೆ ಹತ್ತಿರ ಕೋಟೇಕಾರ್ ಗ್ರಾಮ, ದೇರಳ ಕಟ್ಟೆ, ಉಳ್ಳಾಲ ತಾಲೂಕು, ಎಂಬವರು ಮಾದಕ ವಸ್ತುವನ್ನು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುವುರಿಂದ ಮುಂದಿನ ಕ್ರಮದ ಬಗ್ಗೆ ರಾತ್ರಿ 11.30 ಗಂಟೆಗೆ ವಶಕ್ಕೆ ಪಡೆದುಕೊಂಡು ಎ.ಜೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಗಳು AMPHETAMINE, METHAMPHETAMINE, TETRAHYDRACANNABINOID (MARIJUANA) ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

Konaje PS

 ದಿನಾಂಕ:11-08-2023 ರಂದು ಪಿರ್ಯಾದಿ Nagaraj S - PSI ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ 11.30 ಗಂಟೆಗೆ  ಉಳ್ಳಾಲ ತಾಲೂಕು ದೇರಳಕಟ್ಟೆ ಎಂಬಲ್ಲಿಗೆ ತಲುಪಿದಾಗ ರಸ್ತೆಯ ಬದಿಯಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಯುಸೂಫ್ ಇರ್ಷಾದ್ ಪ್ರಾಯ 24 ವರ್ಷ ತಂದೆ: ಇಬ್ರಾಹಿಂ ವಾಸ: ಗ್ರೀನ್ ಗ್ರೌಂಡ್ ಫ್ಲಾಟ್ ದೇರಳ ಕಟ್ಟೆ, ಉಳ್ಳಾಲ ತಾಲೂಕು ಎಂಬಾತನು ಮಾದಕ ವಸ್ತುವನ್ನು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುವುರಿಂದ ಮುಂದಿನ ಕ್ರಮದ ಬಗ್ಗೆ ರಾತ್ರಿ 12.00 ಗಂಟೆಗೆ ವಶಕ್ಕೆ ಪಡೆದುಕೊಂಡು ಎ.ಜೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು  Positive for AMPHETAMINE, METHAMPHETAMINE, TETRAHYDRACANNABINOID (MARIJUANA)   ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

Traffic South Police Station      

 ದಿನಾಂಕ 12-08-2023 ರಂದು ಪಿರ್ಯಾದಿ MOHAMMAD SHAFHI  ಅಣ್ಣ ನೌಶಾದ್ ಎಂಬಾತನು ತನ್ನ ಸ್ಕೂಟರ್ ನಂಬ್ರ KA-19-EZ-2084 ನೇ ನಂಬ್ರದ ಸ್ಕೂಟರ್ ನಲ್ಲಿ ಸಹಸವಾರನಾಗಿ ತನ್ನ ತಂದೆ ಅಬ್ಬಾಸ್ (58)ಎಂಬವರನ್ನು ಕುಳ್ಳಿರಿಸಿಕೊಂಡು ತೊಕ್ಕೊಟ್ಟು ಕಡೆಯಿಂದ ಕುತ್ತಾರ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸುಮಾರು 6.30 ಗಂಟೆಗೆ ಚೆಂಬುಗುಡ್ಡೆಯ ಹಸೈನರ್ ಎಂಬವರ ಕಟ್ಟಿಗೆ ಡಿಪೋ ಬಳಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಕುತ್ತಾರು ಕಡೆಯಿಂದ ತೊಕ್ಕೊಟ್ಟು ಕಡೆಗೆ KA 19-MJ-6603  ನೇ ನಂಬ್ರದ ಕಾರನ್ನು ಅದರ ಚಾಲಕನಾದ ಸೆಲ್ವಿನೋ ಆರ್ ಫೆರ್ನಾಂಡೀಸ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತಿರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಸ್ಕೂಟರ್ ನ ಮುಂದಿನ ಬಲಭಾಗಕ್ಕೆ ಢಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಸವಾರ ಹಾಗೂ ಸಹಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದುಸ್ಕೂಟರ್ ಸವಾರನಬಲಕಾಲಿನ ತೊಡೆಯ ಬಳಿ ಮೂಳೆ ಮುರಿತದ ಗಮಭೀರ ಸ್ವರೂಪದ ಗಾಯ, ಬಲಕಣ್ಣಿನ ಮೇಲ್ಭಾಗದಲ್ಲಿ ಚರ್ಮಹರಿದ ರಕ್ತ ಗಾಯ ಮೂಗಿನ ಮೇಲೆ ರಕ್ತಗಾಯವಾಗಿದ್ದು, ಸಹಸವಾರ ಅಬ್ಬಾಸ್ ರವರಿಗೆ ಎರಡೂ ಕಾಲಿಗೆ ಮೂಳೆ ಮುರಿತದ ಗಂಭೀರ್ ಸ್ವರೂಪದ ಗಾಯವಾಗಿ ಸೊಂಟದ ಎರಡೂ ಬದಿ ಗುದ್ದಿದ ಗಾಯವಾಗಿದ್ದವರನ್ನು ಅಲ್ಲಿ ಸೇರಿದ ಸಾರ್ವಜನಿಕರುಕೂಡಲೇ ವಾಹನವೊಂದರಲ್ಲಿ ನೌಶಾದ್ ನನ್ನು ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಹಾಗೂ ಸಹಸವಾರ ಅಬ್ಬಾಸ್ ರವರನ್ನು ಯೇನಾಪೋಯ ಅಸ್ಪತ್ರೆಗೆ ದಾಖಲಿಸಿದ್ದು, ಯೇನಾಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅಬ್ಬಾಸ್ ರವರು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 10.15 ಗಂಟೆಗೆ ಮೃತಪಟ್ಟಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 21-08-2023 02:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080