ಅಭಿಪ್ರಾಯ / ಸಲಹೆಗಳು

Crime Report in  Traffic North Police Station

ದಿನಾಂಕ 10-09-2023 ರಂದು ಪಿರ್ಯಾದಿ Ranjitha ದಾರರ ತಂದೆ ಗಂಗಾಧರ್ ಆಚಾರ್ಯ ರವರು ಅವರ ಬಾಬ್ತು KA-19-Y-2830 ನಂಬ್ರದ ಸ್ಕೂಟರಿನಲ್ಲಿ ಸಂಜೆ ಸಮಯ ಸುಮಾರು 4:00 ಗಂಟೆಗೆ ಸುರತ್ಕಲಿನ ಗೋವಿಂದ್ ದಾಸ್ ಜಂಕ್ಷನ್ ಕಡೆಯಿಂದ ಹೋಗುತ್ತಾ ಹೋಟೆಲ್ ಸೂರಜ್ ಜಂಕ್ಷನ್  ಬಳಿಗೆ ತಲುಪುತ್ತಿದ್ದಂತೆ ಅವರ ಹಿಂದಿನಿಂದ KL-79-A-3496 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ Salson Sunil ಎಂಬಾತನು ದುಡುಕುತನ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಗಂಗಾಧರ್ ಆಚಾರ್ಯ ರವರ ಸ್ಕೂಟರಿನ ಹಿಂಬದಿಯ ಬಲಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಗಂಗಾಧರ್ ಆಚಾರ್ಯ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಹಣೆಗೆ, ಕೆನ್ನೆಗೆ, ಬಲಕೈಗೆ, ಎರಡೂ ಕಾಲಿನ ಮೊಣಗಂಟುಗಳಿಗೆ, ಬಲಕಾಲಿನ ಹೆಬ್ಬೆರಳಿಗೆ ಚರ್ಮ ತರಚಿದ ಗಾಯ, ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ರಕ್ತಗಾಯ, ಬಲಕೈ ಮೊಣಗಂಟಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ಅಲ್ಲದೇ ಮೋಟಾರ್ ಸೈಕಲ್ ಸವಾರಿನಿಗೂ ಗಾಯವಾಗಿದ್ದು, ಗಾಯಗೊಂಡವರು ಸುರತ್ಕಲಿನ ಪದ್ಮಾವತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಗಂಗಾಧರ್ ಆಚಾರ್ಯ ರವರು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆಯ K S Hegde ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.    

Moodabidre PS

ದಿನಾಂಕ 12.09.2023 ರಂದು ಪಿರ್ಯಾದಿದಾರರಾದ ತೇಜಸ್ ರವರು ಬೆಳಿಗ್ಗೆ ಮನೆಯಿಂದ ಕಾಲೇಜಿಗೆ ಹೋಗಲು ಹೊರಟಾಗ ಅವರ ಅಜ್ಜಿಯಾದ ನೀಲಮ್ಮರವರು ಮೂಡಬಿದ್ರೆಗೆ ಆಸ್ಪತ್ರೆಗೆ ಹೋಗಲೆಂದು ಅವರ ಜೊತೆ ಹೊರಟಿದ್ದು, ತೇಜಸ್ ಮತ್ತು ನೀಲಮ್ಮರವರು ಮನೆಯಿಂದ ಮುಖ್ಯ ರಸ್ತೆಗೆ ಬಂದು ಮಾರೂರು ಗ್ರಾಮದ ಕುಂಟೋಡಿ ಎಂಬಲ್ಲಿ ಬಸ್ಸಿಗಾಗಿ ಬೆಳಿಗ್ಗೆ 09.00 ಗಂಟೆ ಸಮಯಕ್ಕೆ ಕಾಯುತ್ತಾ ಇದ್ದು, ಆ ಸಮಯದಲ್ಲಿ ಸಾಯಿ ಟ್ರಾವೆಲ್ಸ್ ಹೆಸರಿನ KA19AC2855 ನಂಬ್ರದ ಬಸ್ಸು ಬಂದಿದ್ದು, ತೇಜಸ್ ಹಿಂದಿನ ಬಾಗಿಲಿನಿಂದ ಬಸ್ಸನ್ನು ಹತ್ತಿದ್ದು, ನೀಲಮ್ಮರವರು ಮುಂದಿನ ಬಾಗಿಲಿನಿಂದ ಬಸ್ಸನ್ನು ಹತ್ತುತಿದ್ದಂತೆ ಬಸ್ಸಿನ ನಿರ್ವಾಹಕ ಅಶೋಕ ಎಂಬಾತನು ಒಮ್ಮೆಲೆ ಬಸ್ಸು ಮುಂದೆ ಚಲಾಯಿಸಲು ವಿಶಿಲ್ ಊದುತ್ತಿದ್ದಂತೆ ಬಸ್ಸಿನ ಚಾಲಕ ಪ್ರಸನ್ನ ಎಂಬಾತನು ಒಮ್ಮೆಲೆ ಬಸ್ಸನ್ನು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ನೀಲಮ್ಮರವರು ಬಸ್ಸಿನಿಂದ ಕೆಳಗೆ ಬಿದ್ದು ತಲೆಯ ಹಿಂಬದಿಗೆ ಗಂಭೀರ ರೀತಿಯ ಗಾಯವಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದವರು ಆಸ್ಪತ್ರೆಗೆ ಸಾಗಿಸುವಾಗ ಮೃತ ಪಟ್ಟಿರುವುದಾಗಿ ಸಾರಾಂಶ

Panambur PS

ಪಿರ್ಯಾದಿ Sudeep M V ದಾರರಿಗೆ ದಿನಾಂಕ:11-09-2023 ರಂದು ಮಧ್ಯಾಹ್ನ 2-45 ಗಂಟೆಗೆ ದೊರೆತ ಮಾಹಿತಿಯಂತೆ ಮಂಗಳೂರು ನಗರದ ಪಣಂಬೂರು ಬೀಚ್ ನ ಮುಖ್ಯದ್ವಾರದ ಬಲ ಬದಿಯಿರುವ ಪಾರ್ಕಿಂಗ್ ಸ್ಥಳದ ಪರಿಸರದಲ್ಲಿ  ನಾಲ್ವರು ವ್ಯಕ್ತಿಗಳು ಅಂಬರ್ ಗ್ರೀಸ್ ಎಂಬ ಬೆಲೆಬಾಳುವ ವನ್ಯ ಜೀವಿ ಉತ್ಪನ್ನವನ್ನು ಬೆನ್ನಿನಲ್ಲಿ ಹಾಕಿಕೊಂಡಿರುವ ಬ್ಯಾಗಿನಲ್ಲಿ ತುಂಬಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದಾಗಿ ಬಂದ ಮಾಹಿಯನ್ನಾಧರಿಸಿಕೊಂಡು ಪಿರ್ಯಾದಿದಾರರು ಸಿಸಿಬಿ ಘಟಕದ ಸಿಬ್ಬಂದಿಗಳು ಸಂಜೆ 4-15 ಗಂಟೆಗೆ ಮಂಗಳೂರಿನ ಪಣಂಬೂರು ಬೀಚ್ ನ ಮುಖ್ಯದ್ವಾರದ ಬಲ ಬದಿಯಿರುವ ಪಾರ್ಕಿಂಗ್ ಸ್ಥಳದ ಬಳಿ ಧಾಳಿ ಮಾಡಿದಾಗ ಓಡಿ ಹೋಗಲು ಪ್ರಯತ್ನಿಸಿದ 4 ಜನರ ಪೈಕಿ 3 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರಲ್ಲಿ ಓಡಿ ಹೋದವನ ಬಗ್ಗೆ ವಿಚಾರಿಸಲಾಗಿ ಅವನು ಹೆಸರು ರವಿ ಎಂಬುವುದಾಗಿ  ಜಯಕರನು ತಿಳಿಸಿದ್ದು, ಆರೋಫಿತರ ಪೈಕಿ ಜಯಕರನಲ್ಲಿರುವ ವಸ್ತುವಿನ ಬಗ್ಗೆ ವಿಚಾರಿಸಿಕೊಂಡಾಗ ಆತನು ತನ್ನ ಬ್ಯಾಗ್ನಲ್ಲಿ ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ಎಂಬ ಬೆಲೆಬಾಳುವ ವಸ್ತು ಇರುವುದಾಗಿ ತಿಳಿಸಿದಂತೆ ಪರಿಶೀಲಿಸಿಕೊಂಡಲ್ಲಿ ಈ ಬ್ಯಾಗಿನಲ್ಲಿದ್ದ  900 ಗ್ರಾಂ ಅಂಬರ್ ಗ್ರೀಸ್ ವಶಕ್ಕೆ ಪಡೆದುಕೊಂಡಿದ್ದು, ಇದರ ಅಂದಾಜು ಮೌಲ್ಯ ರೂಪಾಯಿ 90 ಲಕ್ಷ ಆಗಬಹುದು. ಅಲ್ಲದೆ ಈ ಕೃತ್ಯಕ್ಕೆ ಉಪಯೋಗಿಸಿದ ಜಯಕರ ಎಂಬಾತನ ವಶದಲ್ಲಿದ್ದ VIVO ಕಂಪೆನಿಯ ನೀಲಿ ಬಣ್ಣದ ಟಚ್ ಸ್ಕ್ರೀನ್ ಮೊಬೈಲ್ ಪೋನು, ಇದರ ಅಂದಾಜು ಮೌಲ್ಯ ರೂ.10,000/- ಆಗಬಹುದು. ಆರೋಪಿ ಆದಿತ್ಯ ಎಂಬಾತನ ವಶದಲ್ಲಿದ್ದ  VIVO ಕಂಪೆನಿಯ ಆಕಾಶ ನೀಲಿ ಬಣ್ಣದ ಟಚ್ ಸ್ಕ್ರೀನ್ ಮೊಬೈಲ್ ಪೋನು ಇದರ ಅಂದಾಜು ಮೌಲ್ಯ ರೂ.15,000/- ಆಗಬಹುದು. ನಂತರ ಆರೋಪಿ ಲೋಹಿತ್ ಎಂಬಾತನ ವಶದಲ್ಲಿದ್ದ OPPO ಕಂಪೆನಿಯ ನೀಲಿ ಬಣ್ಣದ ಟಚ್ ಸ್ಕ್ರೀನ್ ಮೊಬೈಲ್ ಪೋನು ಇದರ ಅಂದಾಜು ಮೌಲ್ಯ ರೂ.10,000/- ಆಗಬಹುದು ಹಾಗೂ ನಂತರ ಓಡಿ ಹೋದ ಆರೋಪಿ ರವಿ ಬಾಬ್ತು ಕೃತ್ಯಕ್ಕೆ ಬಳಸಿದ ಗ್ರೇ ಬಣ್ಣದ  KA-20-V-2646 ನಂಬ್ರದ ಸುಜುಕಿ ಕಂಪೆನಿಯ ಮೋಟಾರ್ ಬೈಕು ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂ.50,000/- ಆಗಬಹುದು. ಈ ಮೇಲಿನ ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 90,85,750/- ಆಗಬಹುದು ಎಂಬಿತ್ಯಾದಿ.

Bajpe PS

ದಿನಾಂಕ 08.09.2023 ರಂದು ಮಧ್ಯಾಹ್ನ 12.15 ಗಂಟೆಗೆ ರಜಿನಿಕಾಂತ್ ಶೆಟ್ಟಿ ರವರ ಜೊತೆಯಲ್ಲಿ KA19 HF0222 ಮೊಟಾರ್ ಸೈಕಲ್ ನಲ್ಲಿ ಸಹ ಸವಾರನಾಗಿ ಹೋಗುತ್ತಿರುವಾಗ ರಜಿನಿಕಾಂತ್ ರವರು ಮೊಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಸುತ್ತಿದ್ದು, ಮಂಗಳೂರು ತಾಲೂಕು ಕಟೀಲು ದೇವರಗುಡ್ಡೆ ಎಂಬಲ್ಲಿ ಮೊಟಾರ್ ಸೈಕಲ್ ಸ್ಕಿಡ್ ಆಗಿ ಬಿದ್ದಿದ್ದು, ಇದರಿಂದ ಪಿರ್ಯಾದಿದಾರರು ರಸ್ತೆಯ ಎಡಬದಿಗೆ ಇರುವ ಸುಮಾರು 25 ಅಡಿ ಗುಂಡಿಗೆ ಬಿದ್ದಿದ್ದು, ಎರಡು ಕೈಗಳಿಗೆ ಹಾಗೂ ಕಾಲುಗಳಿಗೆ ತೀವ್ರ ತರಹದ ಗಾಯವಾಗಿದ್ದು, ಗಾಯಗೊಂಡವರನ್ನು ಪಿರ್ಯಾದಿದಾರರ ಪರಿಚಯದವರು ಕಟೀಲಿನ ದುರ್ಗಾಪರಮೇಶ್ವರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಆದುದರಿಂದ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರು ನೀಡಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 12-09-2023 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080