ಅಭಿಪ್ರಾಯ / ಸಲಹೆಗಳು

Crime Report in  Mangalore East Traffic PS

ದಿನಾಂಕ 11-10-2023 ರಂದು ಪಿರ್ಯಾದಿದಾರರಾದ ಶೇಖ್ ಇಬ್ರಾಹಿಮ್ ರವರು ಎ ಜೆ ಆಸ್ಪತ್ರೆ ಬಳಿಯ ಹೋಟೆಲ್ ಹೈವೆ ಎದುರುಗಡೆ ನಿಂತುಕೊಂಡಿದ್ದ ವೇಳೆ ಬಾರೆಬೈಲ್ ಕ್ರಾಸ್ ಕಡೆಯಿಂದ ಎ ಜೆ ಆಸ್ಪತ್ರೆ ಎದುರುಗಡೆಯಾಗಿ ಕುಂಟಿಕಾನ ಕಡೆಗೆ KA-19-AD-6285 ನೊಂದಣಿ ನಂಬ್ರದ ಎಲೆಕ್ಟ್ರಿಕಲ್ ಆಟೋರಿಕ್ಷಾವನ್ನು ಅದರ ಚಾಲಕ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು 19:50 ಗಂಟೆಗೆ ಎ ಜೆ ಆಸ್ಪತ್ರೆ ಎದುರುಗಡೆಯ ಕೆನರಾ ಬ್ಯಾಂಕ್ ಎ ಟಿ ಎಮ್ ಬಳಿ ರಸ್ತೆಗೆ ಬಂದು ತಲುಪಿದ ವೇಳೆ ಆಟೋ ರಿಕ್ಷಾದ ಹಿಂದುಗಡೆಯಿಂದ ಎಂದರೆ ಬಾರೆಬೈಲ್ ಕ್ರಾಸ್ ಕಡೆಯಿಂದ ಎ ಜೆ ಆಸ್ಪತ್ರೆ ಎದುರುಗಡೆಯಾಗಿ ಕುಂಟಿಕಾನ ಕಡೆಗೆ KA-19-HJ-2761 ನೊಂದಣಿ ನಂಬ್ರದ ಸ್ಕೂಟರನ್ನು ಅದರ ಸವಾರ ಕೌಶಿಕ್ ರವರು ಸವಾರಿ ಮಾಡಿಕೊಂಡು ಬಂದು ಆಟೋ ರಿಕ್ಷಾದ ಹಿಂದುಗಡೆಗೆ ತಾಗಿ ಸ್ಕೂಟರ್ ಸಮೇತ ಡಾಮಾರು ರಸ್ತೆಯ ಬಲ ಬದಿಗೆ ಬಿದ್ದ ವೇಳೆ ಕುಂಟಿಕಾನ ಕಡೆಯಿಂದ ಎ ಜೆ ಆಸ್ಪತ್ರೆಯ ಎದುರುಗಡೆಯಾಗಿ ಬಾರೆಬೈಲ್ ಕ್ರಾಸ್ ಕಡೆಗೆ ಸಾಗಿರುವ ಸರ್ವಿಸ್ ರಸ್ತೆಯಲ್ಲಿ ಕೆ ರಮೇಶ ಎಂಬುವರು KA-19-MD-7779 ನೊಂದಣಿ ನಂಬ್ರದ ಕಾರನ್ನು ಅಜಾಗರುಕತೆಯಿಂದ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ರಸ್ತಯ ಮೇಲೆ ಬಿದ್ದಿದ್ದ ಸ್ಕೂಟರ್ ಸವಾರನ ತಲೆಯ ಭಾಗದ ಮೇಲೆ ಕಾರಿನ ಚಕ್ರವನ್ನು ಚಾಲಯಿಸಿಕೊಂಡು ಹೋದ ಪರಿಣಾಮ ಕೌಶಿಕ್ ರವರು ಗಂಭೀರವಾಗಿ ಗಾಯಗೊಂಡಿದ್ದು ಸಾರ್ವಜನಿಕರ ಸಹಾಯದಿಂದ   ಗಾಯಾಳುವನ್ನು  ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು ಆತನನ್ನು ಅಪಘಾತ ಸ್ಥಳದಿಂದ ಕರೆತರುವ ವೇಳೆ 20:02 ಗಂಟೆಗೆ  ಗಾಯಾಳು ಅದಾಗಲೆ ಮೃತ ಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿರುತ್ತಾರೆ ಎಂಬಿತ್ಯಾದಿ.

 CEN Crime PS

ದಿನಾಂಕ 11-10-2023 ರಂದು ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ರಾಜೇಂದ್ರ ಬಿ ಸಿಬ್ಬಂದಿಯವರೊಂದಿಗೆ ಮಂಗಳೂರು ನಗರದ ಕಮಿಷನರೇಟ್ ವ್ಯಾಪ್ತಿಯ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಂಜೆ 5-00  ಗಂಟೆಗೆ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಸಿಬ್ಬಂಧಿಯವರ ಜೊತೆ ಮಂಗಳೂರು ನಗರದ ಲಾಲ್ ಬಾಗ್  ಪರಿಸರದ ಸಾರ್ವಜನಿಕ ಸ್ಥಳಕ್ಕೆ ಬಂದಾಗ ಇಬ್ಬರು ಯುವಕರು ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿದಂತೆ ಕಂಡುಬಂದಿದ್ದು ಪಿಎಸ್ಐ ರವರು ಸಿಬ್ಬಂದಿಯವರ ಸಹಾಯದಿಂದ ವಿಚಾರಿಸಿದಲ್ಲಿ ಅವರುಗಳು ತನ್ನ ಹೆಸರು ಮೊಹಮ್ಮದ್ ರಾಹಿಲ್ (31) ವಾಸ: ಬೆಂಗ್ರೆ ರೋಡ್ ನಡ್ಸಾಲ್ ಗ್ರಾಮ ಪಡುಬಿದ್ರೆ ಅಂಚೆ, ಉಡುಪಿ ಜಿಲ್ಲೆ ಮತ್ತು  ಕಲಂದರ್ ಶಾಫಿ(31) ವಾಸ: ಮಸೀದಿ ಬಿಲ್ಡಿಂಗ್ ಕೇರಿ ನಡ್ಸಾಲ್ ಗ್ರಾಮ ಪಡುಬಿದ್ರೆ ಉಡುಪಿ ಹಾಲಿ ವಾಸ; 3ನೇ, ಮಹಡಿ ಜಯಲಕ್ಷ್ಮೀ ಅಪಾರ್ಟ್ಮೆಂಟ್ ಪಾದೆಬೆಟ್ಟು, ನಡ್ಸಾಲ್ ಗ್ರಾಮ ಪಡುಬಿದ್ರೆ ಅಂಚೆ, ಉಡುಪಿ ಜಿಲ್ಲೆ ಎಂಬುದಾಗಿ ತಿಳಿಸಿದ್ದು ಸದ್ರಿ ರವರನ್ನು ವಶಕ್ಕೆ ಪಡೆದು ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತರು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರದೊಂದಿಗೆ  ಠಾಣೆಗೆ ತಂದು ನೀಡಿದ ವರದಿಯನ್ನು ಸ್ವೀಕರಿಸಿಕೊಂಡು ಆರೋಪಿತರ ಮೇಲೆ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Traffic North Police Station       

ದಿನಾಂಕ 10-10-2023 ರಂದು ಪಿರ್ಯಾದಿ Veeresh Nimbappa Madivalar ದಾರರ ಮಾವನಾದ ಉಮೇಶ್ ರವರು ಹಾಗೂ ತಾಯಿ ರೇಣವ್ವ ರವರು ಎಂ.ಆರ್.ಪಿ.ಎಲ್ ನಲ್ಲಿ ಗಾರ್ಡನ್ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ಹೋಗುವರೇ ಪಿರ್ಯಾದಿದಾರರ ಮಾವನವರು ತಂದಿದ್ದ ಮಂಜುನಾಥ ಎಂಬವರ ಬಾಬ್ತು KA-19-HJ-8787 ನಂಬ್ರದ ಮೋಟಾರ್ ಸೈಕಲಿನಲ್ಲಿ ಪಿರ್ಯಾದಿದಾರರ ತಾಯಿ ರೇಣವ್ವ ರವರನ್ನು ಸಹ ಸವಾರೆಯಾಗಿ ಕುಳ್ಳಿರಿಸಿಕೊಂಡು ಎಂ.ಆರ್.ಪಿ.ಎಲ್ ಗೇಟ್ ನಿಂದ ಕೈಕಂಬ ಕಡೆಗೆ ಪಿರ್ಯಾದಿದಾರರ ಮಾವನಾದ ಉಮೇಶ್ ರವರು ದುಡುಕತನದಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಮಂಗಳ ಪೇಟೆ ಬಳಿ ತಲುಪುತ್ತಿದಂತೆ ಸಮಯ ಸುಮಾರು ಸಂಜೆ 5:00 ಗಂಟೆಗೆ ಮೋಟಾರ್ ಸೈಕಲ್ ಒಮ್ಮಲೇ ಸ್ಕೀಡ್ ಆದಂತೆ ಆಗಿ, ಪಿರ್ಯಾದಿದಾರರ ತಾಯಿಯವರು ಮೋಟಾರ್ ಸೈಕಲಿನಿಂದ ಜಾರಿ  ಕಾಂಕ್ರೀಟ್ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ತಾಯಿ ರೇಣವ್ವರವರ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ

Bajpe PS

ಪಿರ್ಯಾದಿGurappa kanthi PSI ದಾರರು ದಿನಾಂಕ 11.10.2023 ರಂದು ಸಂಜೆ ಸುಮಾರು 19.00 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಿರುವ ಸಮಯ   ಸುಮಾರು ರಾತ್ರಿ 20.00 ಗಂಟೆಗೆ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಸೇತುವೆಯ ಸ್ವಲ್ಪ ಹಿಂದುಗಡೆ ತಲುಪುತಿದ್ದಂತೆ ಮೂಡಬಿದ್ರೆ –ಮಂಗಳೂರು ರಾ, ಹೆದ್ದಾರಿಯಲ್ಲಿ ಮರಳು ತುಂಬಿರುವ ಟಿಪ್ಪರ್ ಲಾರಿಯೊಂದು ಪಿರ್ಯಾದಿದಾರರ ವಾಹನದ ಎದುರುಗಡೆಯಿಂದ ಬಂದಿದ್ದನ್ನು ಪಿರ್ಯಾದಿದಾರರ ಇಲಾಖಾ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿ ಗುರುಪುರ ಪಿಯು ಕಾಲೇಜ್ ಬಳಿ ಟಿಪ್ಪರ್ ಲಾರಿ ಚಾಲಕನಿಗೆ ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದಾಗ ಟಿಪ್ಪರ್ ಚಾಲಕ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಲಾರಿಯಿಂದ ಇಳಿದು ಓಡಿ ತಪ್ಪಿಸಿಕೊಂಡಿರುವುದಾಗಿದ್ದು ಪಿರ್ಯಾದಿದಾರರು ಟಿಪ್ಪರ್ ಲಾರಿಯ ಬಳಿ ಬಂದು ನೋಡಿದಾಗ ಅದರ ನೊಂದಣಿ ಸಂಖ್ಯೆ KA19-AB-2205 ಆಗಿದ್ದು ಟಿಪ್ಪರ್ ಲಾರಿಯ ಬಾಡಿಯ ಒಳಗಡೆ ನೋಡಿದ್ದು ಅದರ ಒಳಗೆ ಸುಮಾರು 1 ಯುನಿಟ್ ನಷ್ಟು ಮರಳು ತುಂಬಿಸಿರುವುದು ಕಂಡು ಬಂದಿರುತ್ತದೆ ಸದ್ರಿ ಟಿಪ್ಪರ್ ಲಾರಿಯ ಚಾಲಕನು ಅದರ ಮಾಲಕನ ಜೊತೆ ಸೇರಿ ಯಾವುದೇ ಪರವಾನಿಗೆಯಿಲ್ಲದೆ ಸರ್ಕಾರಕ್ಕೆ ರಾಜಧನವನ್ನು ಪಾವತಿ ಮಾಡದೇ ಎಲ್ಲಿಂದಲೋ ಸರ್ಕಾರಿ ಸ್ವತ್ತಾದ ಮರಳನ್ನು ಗಣಿಗಾರಿಕೆ ನೆಡೆಸಿ ಕಳುವು ಮಾಡಿ ಸಾಗಾಟ ಮಾಡಿರುವುದಾಗಿದ್ದು ಮರಳು ಸಮೇತ ಟಿಪ್ಪರ್ ಲಾರಿಯನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಠಾಣೆಗೆ ತರಲಾಗಿದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 12-10-2023 03:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080