ಅಭಿಪ್ರಾಯ / ಸಲಹೆಗಳು

Crime Report in : Mangalore South PS

ಪಿರ್ಯಾದಿದಾರರಾದ ಮನೋಜ್ ರವರು KA-19-ML 3382 ನೇ ನಂಬ್ರದ ಹುಂಡೈ ಗ್ರಾಂಡ್ ನಿಯೋಸ್ ಐ 10 ಕಾರಿನ ನೊಂದಣಿ ಮಾಲಕರಾಗಿರುತ್ತಾರೆ. ಪಿರ್ಯಾದಿದಾರರ ಕಾರನ್ನು ಪಿರ್ಯಾದಿಯ ಸ್ನೇಹಿತ ಗುರುಪುರ ನಿವಾಸಿ ರೋಹಿತ್ ಎಂಬಾತನು, ಪಿರ್ಯಾದಿದಾರರಲ್ಲಿ ತನ್ನ ಸ್ನೇಹಿತನ ತಂದೆ  ಬೆಂಗಳೂರಿನಲ್ಲಿ ಸರಕಾರಿ ಉದ್ಯೋಗಿಯಾಗಿದ್ದು, ಅವರು ಹೊಸ ಇಲೆಕ್ಟ್ರಿಕ್ ಕಾರು ಖರೀದಿಸುವರೇ  ಕಾರು ಬುಕ್ ಮಾಡಿರುತ್ತಾರೆ. ಅಲ್ಲಿಯ ತನಕ ಅವರಿಗೆ ಉಪಯೋಗಿಸಲು ಕಾರನ್ನು ನೀಡುವಂತೆ ಕೇಳಿದ್ದು,ರೋಹಿತ್ ರವರ ಮಾತನ್ನು ನಂಬಿ 2023 ನೇ ಆಗಸ್ಟ್ 9 ರಂದು ಪಿರ್ಯಾದಿ ಮನೋಜ ರವರು   KA-19-ML 3382 ನೇ ನಂಬ್ರದ ಕಾರನ್ನು ರೋಹಿತ್ ರವರಿಗೆ ನೀಡಿರುತ್ತಾರೆ. ಪಿರ್ಯಾದಿದಾರರು ಸೆಪ್ಟಂಬರ್ ತಿಂಗಳಲ್ಲಿ ಕಾರು ವಾಪಾಸು ನೀಡುವಂತೆ ರೋಹಿತ್ ನಲ್ಲಿ ಕೇಳಿದಾಗ, ಪಿರ್ಯಾದಿಯ ಕಾರನ್ನು ತನ್ನ ಸ್ನೇಹಿತನ ತಂದೆಯವರು ಕೆಲಸ ಮಾಡುವ ಕಂಪೆನಿಗೆ ಅಟಾಚ್ ಮೆಂಟ್ ಆಗಿದ್ದು, 2023 ನೇ ಅಕ್ಟೋಬರ್ 9 ರಂದು ನೀಡುವುದಾಗಿ ತಿಳಿಸಿದ್ದು ಪಿರ್ಯಾದಿದಾರರು ಪದೇ ಪದೇ ಕಾರನ್ನು ಕೇಳಿದಾಗ ಪಿರ್ಯಾದಿದಾರರಿಗೆ ಕಾರನ್ನು ಕೊಡುವುದಾಗಿ ನಂಬಿಸಿ, ಬಳಿಕ ಪಿರ್ಯಾದಿದಾರರಿಗೆ ಭರತ್ ಎಂಬಾತನನ್ನು ಮೊಬೈಲ್ ಕರೆ ಮೂಲಕ ಪರಿಚಯಿಸಿ ಭರತ್ ನಲ್ಲಿ ಮಾತನಾಡಿಸಿ, ಭರತ್ ಮತ್ತು ರೋಹಿತ್ ರವರು ಪಿರ್ಯಾದಿದಾರರಲ್ಲಿ ಮಾತನಾಡುತ್ತ ಕಾರನ್ನು ವಾಪಾಸು ನೀಡುವುದಾಗಿ ಪಿರ್ಯಾದಿದಾರರನ್ನು ನಂಬಿಸಿ,   ಪಿರ್ಯಾದಿದಾರರಿಗೆ ರೋಹಿತ್ ಮತ್ತು ಭರತ್ ಜೊತೆ ಸೇರಿ ಕಾರನ್ನು ಪಿರ್ಯಾದಿದಾರರಿಗೆ ವಾಪಾಸು ಕೋಡದೇ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತಾರೆ.

Mangalore Rural PS

ದಿನಾಂಕ: 11-12-2023 ರಂದು 17.30 ಗಂಟೆಗೆ ಮಂಗಳೂರು ತಾಲೂಕು ಮಲ್ಲೂರು  ಗ್ರಾಮದ ಮಲ್ಲೂರು ಕ್ರಿಕೇಟ್ ಮೈಧಾನದ ಬಳಿ    ಅಮಲು ಪದಾರ್ಥ ಸೇವನೆ  ಮಾಡಿದಂತೆ ಕಂಡು ಬಂದ ಮಹಮ್ಮದ್ ಪೌಜನ್ (23 ವರ್ಷ) ವಾಸ: ಫಲ್ಗುಣಿ ಶಾಲೆಯ ಬಳಿ ಮಲ್ಲೂರು ಮಂಗಳೂರು ತಾಲೂಕು.  ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

CEN Crime PS

 “Mohammad Riyaz” ಎಂಬ ನಕಲಿ ಫೇಸ್ ಬುಕ್ ಖಾತೆಯಲ್ಲಿ FACEBOOK ACCOUNT ಹೊಂದಿರುವ ವ್ಯಕ್ತಿಯು ದಿನಾಂಕ 10-12-2023 ರಂದು ಕರ್ನಾಟಕ ಸರಕಾರದ ವಿಧಾನ ಸಭಾ ಸಭಾಧ್ಯಕ್ಷರಾದ ಶ್ರೀ ಯು.ಟಿ.ಖಾದರ್ ಇವರ ಭಾವ ಚಿತ್ರವನ್ನು ಎಡಿಟ್ ಮಾಡಿ “ಅವರ ಭಾವಚಿತ್ರಕ್ಕೆ ಸಾವರ್ಕರ್ ಹಾಕಿರುವ ಟೋಪಿಯನ್ನು ಹಾಕಿ “ ನಾನು ಸಾವರ್ಕರ್ ಅಭಿಮಾನಿ ಖಾದರ್ಕರ್” ಎಂಬುದಾಗಿ ಹಾಗೂ, “ಆತ ಬ್ರಿಟಿಷರೊಂದಿಗೆ ಕ್ಷಮಾಪಣಾ ಪತ್ರ ಬರೆದರೆ ಈತ ಸಂಘಿಗಳೆದುರು ಮಂಡಿಯೂರಿದ.…. “ಸಭಾದ್ಯಕ್ಷ”, ಎಂಬುದಾಗಿ ಹಾಗೂ ಇಷ್ಟೇ… ಅದ್ಯಾವ ಪರಿಸ ಹೇಳಿ, ಚಪ್ಪಲಿ ನೆಕ್ಕಿ ಸಾವರ್ಕರ್ನ ಫೋಟೋವನ್ನು ಇಟ್ಟು ಜೋಡಿಸುತ್ತಿದ್ದ ಪರಿಸರ.. …. ಚುನಾವಣೆಯಲ್ಲಿಲ ಕೇಳ್ತಿದ್ರಲ್ಲಾ SDPI ಯಾಕೆ ಒಬ್ಬ ಮುಸ್ಲಿಂ MLA ವಿರುದ್ಧ ಸ್ಪರ್ದೆ ಮಾಡುವುದು ಅಂತ.. ನೋಡಿ ಉತ್ತರ ಸ್ಪಷ್ಟವಿದೆ ದೇಶದ್ರೋಹಿ, ಸಂವಿಧಾನ ವಿರೋಧಿ, ಜಾತ್ಯಾತೀತ ವಿರೋಧಿ, ಕೋಮುವಾದಿ RSS ಜೊತೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಜೋಡಿಸಲು ಹೊರಟಿರುವುದಕ್ಕೆ… ಎಂದಾದರು ಒಂದು ದಿನ SDPI ಅದರೊಳಗೆ ಲಗ್ಗೆ ಇಟ್ಟರೆ ಕಿತ್ತು ಬಿಸಾಕಿಯೆ ಬಿಸಾಕಲು ಸದನದಲ್ಲಿ ಹೋರಾಟ ಮಾಡಿಯೇ ಮಾಡುತ್ತೇವೆ. ಅದ್ಯಾವ ವ್ಯಕ್ತಿ ಸಭಾದ್ಯಕ್ಷ ಆಗಿದ್ದರೂ ಕೂಡಾ. ಈ ಸಭಾದ್ಯಕ್ಷರಿಗೆ ಚಾಲೆಂಜ್ ಕಿತ್ತು ಬಿಸಾಕಿ, ಟಿಪ್ಪು ಭಾವಚಿತ್ರ ಧಮ್ಮಿದ್ದರೆ ಅಳವಡಿಸಿ… ರಿಯಾಜ್ ಕಡಂಬು ಎಂದು ಬರೆದು ಪೋಸ್ಟ್ ಮಾಡಿರುವುದಲ್ಲದೇ  “Mohammad Musthafa” ಎಂಬ  ನಕಲಿ ಫೇಸ್ ಬುಕ್  ಖಾತೆಯಲ್ಲಿ “ವೇಷಧಾರಿ” ಎಂಬುದಾಗಿ ಬರೆದು ಶ್ರೀ ಯು.ಟಿ.ಖಾದರ್ ಇವರ ಭಾವ ಚಿತ್ರವನ್ನು ಹಾಕಿರುವುದು ಕಂಡು ಬಂದಿರುತ್ತದೆ.  ಆದ್ದರಿಂದ “Mohammad Riyaz”  ಮತ್ತು “Mohammad Musthafa” ಎಂಬ  ಎಂಬ  ನಕಲಿ ಫೇಸ್ ಬುಕ್ ಅಥವಾ ಅವರದೇ ನೈಜ ಫೇಸ್ ಬುಕ್  ACCOUNT ದಾರರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶಗಳನ್ನು ಕಳುಹಿಸುವ ಮೂಲಕ  ಕೋಮು ಭಾವನೆ ಕೆರಳಿಸುವಂತೆ ಮಾಡಲು ಉದ್ದೇಶ ಪೂರ್ವಕವಾಗಿ  ಪೋಸ್ಟ್ ಗಳನ್ನು ಹಾಕಿರುವುದು ಕಂಡು ಬಂದಿರುವುದರಿಂದ  “Mohammad Riyaz”  ಮತ್ತು “Mohammad Musthafa” ಎಂಬ    ಫೇಸ್ ಬುಕ್ ACCOUNT ದಾರರ  ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

ದಿನಾಂಕ 30/10/2023 ರಂದು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 (Pocso) Mangalore ದಕ್ಷಿಣ ಕನ್ನಡದಲ್ಲಿ ವಿಚಾರಣೆಯಲ್ಲಿರುವ ಪ್ರಕರಣದ 3 ನೇ ಆರೋಪಿ ರಫೀಕ ಎಂಬುವವನಿಗೆ ಜಾಮೀನಿಗೆ ಶ್ಯೂರಿಟಿ ನೀಡಿರುವ ಸದರಿ ದೂರಿನಲ್ಲಿ 1 ಆರೋಪಿ ಯಾಗಿರುವ ಉಮರಬ್ಬ ಮೊಹಿನುದ್ದಿನ್ (50) ತಂದೆ-ಮೊಹಿದ್ದಿನ್ ಬ್ಯಾರಿ, ವಾಸ-7 ಸಲ್ವ ಕಾಟೇಜ್ ಕೊರಂಟಿ ಕಟ್ಟೆ ರೋಡ್, ಆಳ್ನೂರು ಮಸೀದಿ ಬಳಿ, ಚಂದ್ರನಗರ 108 ಕಲ್ತೂರು, ಉಡುಪಿ ಈತನು ಅದೇ ಪ್ರಕರಣದ  ರಲ್ಲಿ 4&5 ನೇ ಆರೋಪಿತ ಸಾರಮ್ಮ ಮತ್ತು ಆಯಿಷಾಬಾನು ರವರಿಗೂ ಜಾಮೀನು ಶ್ಯೂರಿಟಿ ನೀಡಿದ್ದು ದಿನಾಂಕ 26/07/2022 ರಲ್ಲಿ ನೀಡಿದ ಈತನ ಆಧಾರ್ ಕಾರ್ಡ್ ಆಧಾರ್ ನಂಬ್ರ 590486562819 ಆಗಿರುತ್ತದೆ. ಮತ್ತು ದಿನಾಂಕ 30/10/2023 ರಂದು ನೀಡಿದ ಅದೇ ವ್ಯಕ್ತಿಯ ಆಧಾರ್ ಕಾರ್ಡ್ ನಂಬ್ರ 281486566519 ಆಗಿರುತ್ತದೆ. ಈ ಬಗ್ಗೆ SSMA ಯಲ್ಲಿ ಪರಿಶೀಲಿಸಲಾಗಿದ್ದು ಆರೋಪಿತನು ಇದೇ ರೀತಿ ಬೇರೆ ಬೇರೆಯ ಸುಮಾರು 14 ಪ್ರಕರಣಗಳಿಗೆ ( ದಕ್ಷಿಣ ಕನ್ನಡ, ಉಡುಪಿ & ಬೆಂಗಳೂರುಗಳಲ್ಲಿ) ಬೇರೆ ಬೇರೆ ಆರೋಪಿತರಿಗೆ ಜಾಮೀನು ಶ್ಯೂರಿಟಿ ದಾರನಾಗಿರುವುದಾಗಿ ಕಂಡುಬಂದಿರುತ್ತದೆ. ಸದ್ರಿ ದೂರಿನಲ್ಲಿ 2 ನೇ ಆರೋಪಿತನಾಗಿರುವ ಮೊಯಿದ್ದಿನ್ ನಾಸೀರ್ (46) ತಂದೆ-ಮೊಹಮ್ಮದ್ , ವಾಸ- ಎಂ.ಜೆ.ಎಂ-11 ಕಸಬಾ ಬೇಂಗ್ರೆ ಕೂಳೂರು ಮಂಗಳೂರು 575103 ಎಂಬಾತನು ಇದೇ ತರಹದ ಶ್ಯೂರಿಟಿ ದಾರನಾಗಿದ್ದು ದಿನಾಂಕ 06/11/2023 ರಂದು ಆತನ ಜಾಮೀನು ಶ್ಯೂರಿಟಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದ್ದು ಬೇರೆ ಬೇರೆ ಪ್ರಕರಣಗಳಲ್ಲಿ ಆರೋಪಿತರಾಗಿರುವ 5 ವ್ಯಕ್ತಿಗಳಿಗೆ ನಕಲಿ ಆಧಾರ್ ಕಾರ್ಡ್ ಮತ್ತು ನಕಲಿ ಆರ್.ಟಿ.ಸಿ ಬಳಸಿಕೊಂಡು ಶ್ಯೂರಿಟಿದಾರರಾಗಿರುವುದು ಕಂಡುಬಂದಿರುತ್ತದೆ.

Mangalore East PS

ಫಿರ್ಯಾದಿದಾರರಾದ ಯಲ್ಲಪ್ಪ ಹ.ಗೌಡರ ಪ್ರಾಯ 48 ವರ್ಷ ತಂದೆ: ಹನುಮಗೌಡ ಕ. ಗೌಡರ ವಾಸ: ಕದ್ರಿ ಕೈಬಟ್ಟಲು C/O  ವಸಂತ ಕುಮಾರ ಶಕ್ತಿ ಅಪಾರ್ಟ್ ಮೆಂಟ್ ಕದ್ರಿ  ಈ ಮೇಲಿನ ವಿಳಾಸದವರಾಗಿದ್ದು, ಅವರ ಪುತ್ರನಾದ  ಬೊಮ್ಮಣ್ಣ .ಯ. ಗೌಡರ ಪ್ರಾಯ 19 ವರ್ಷ ಎಂಬಾತನು  ಕೆ, ಪಿ, ಟಿ  ಬಳಿ ಇರುವ  I T I ಕಾಲೇಜ್ ನಲ್ಲಿ 2 nd Year Electrical  ವಿದ್ಯಾಭ್ಯಾಸ ಮಾಡುತ್ತಿದ್ದು.  ದಿನಾಂಕ:10/12/2023 ರಂದು  ಸಾಯಂಕಾಲ 6 ಘಂಟೆಗೆ ಕಂಕನಾಡಿ ಬಳಿಯಿರುವ ಫಿರ್ಯಾದಿದಾರರ ಸಂಬಂಧಿಕರಾದ ಲಕ್ಷ್ಮಣರವರ ಮನೆಯಲ್ಲಿ ಹುಟ್ಟು ಹಬ್ಬದ  ಔತಣಕೂಟ ಮುಗಿಸಿ ರಾತ್ರಿ 8:40 ಘಂಟೆಗೆ ಫಿರ್ಯಾದಿದಾರರ ಅಣ್ಣನ ಮಗನಾದ ಮಂಜುನಾಥ ಅ ಗೌಡರ ಕಾರಿನಲ್ಲಿ ಕದ್ರಿ ದ್ವಾರದವರೆಗೂ ಬಂದು ಅಲ್ಲಿ ಅವನನ್ನು ಇಳಿಸಿ ಹೋಗಿದ್ದು, ನಂತರ ಮನೆಗೆ ಹೋಗದೆ ತನ್ನ ಮೊಬೈಲ್ ಪೋನ್ ಅನ್ನು ಸ್ವಿಚ್ ಆಪ್ ಮಾಡಿಕೊಂಡು ಕಾಣೆಯಾಗಿರುತ್ತಾನೆ. ಪಿರ್ಯಾದಿದಾರರು ನೆರೆಕೆರೆ ಮತ್ತು  ಸಂಬಂಧಿಕರ ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ತಡವಾಗಿ ಈ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ.

Traffic North Police Station                       

ಪಿರ್ಯಾದಿ Mohammed Afnan ದಾರರು ದಿನಾಂಕ 09-12-2023 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-20-EA-8475 ರಲ್ಲಿ ಮನೆಯಿಂದ ಕೆಲಸದ ಬಗ್ಗೆ ಮಂಗಳೂರು ಕಡೆಗೆ ಹೋಗುತ್ತಿದ್ದ ಸಮಯ ಸುಮಾರು ರಾತ್ರಿ 9:45 ಗಂಟೆಗೆ ಮಂಗಳೂರು ಕೊಟ್ಟಾರ ಚೌಕಿ ಜಂಕ್ಷನ್ ಬಳಿ ತಲುಪಿದಾಗ ಕೊಟ್ಟಾರ ಸರ್ವೀಸ್ ರಸ್ತೆಯ ಪ್ಲೈಓವರ್ ಕೆಳಗಿರುವ ತೆರೆದ ಡಿವೈಡರ್ ಜಾಗದಿಂದ KA-19-AA-0714 ನಂಬರಿನ ಆಟೋ ರಿಕ್ಷಾವನ್ನು ಅದರ ಚಾಲಕ ಮಕ್ಕಣ್ಣ ಪಾಟೀಲ್ ಎಂಬಾತನು ಯಾವುದೇ ಸೂಚನೆಯನ್ನು ನೀಡದೆ ಆಕಾಶಭವನ ಕಡೆಗೆ ಹೋಗುವ ಸಲುವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಬಲಕೈ ಮಣಿಗಂಟಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಎಡಕಾಲಿನ ಪಾದಕ್ಕೆ ಚರ್ಮ ಹರಿದ ರೀತಿಯ ಗಾಯವಾಗಿದ್ದು ಅಲ್ಲದೆ ತಲೆಯ ನೆತ್ತಿಗೆ ಚರ್ಮ ಹರಿದ ಗಾಯವಾಗಿದ್ದು ಗಾಯಾಳು ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 12-12-2023 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080