ಅಭಿಪ್ರಾಯ / ಸಲಹೆಗಳು

Crime Report in :   Mangalore East PS              

ದಿನಾಂಕ: 11-01-2024 ರಂದು 9-15 ಗಂಟೆಗೆ ಶ್ರೀಮತಿ ಗೀತಾ, ಗಂಡ: ಹಣಮಂತ ಪೂಜಾರಿ ಎಂಬವರು ಎಂಬವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನಲ್ಲಿ, ಫಿರ್ಯಾದುದಾರರು ಗಂಡ ಮತ್ತು 2 ಜನ ಮಕ್ಕಳೊಂದಿಗೆ ಆರ್ಟಿಕ್ ಫರ್ನಿಚರ್ ಶಾಫ್ ಹತ್ತಿರ ವಿವೇಕಾನಂದ ನಗರ, ನಂತೂರು, ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಸುಮಾರು 10 ವರ್ಷಗಳಿಂದ ವಾಸ್ತವ್ಯವಿದ್ದು  ಹೆಲ್ಪರ್ ಕೆಲಸ ಮಾಡಿಕೊಂಡಿದ್ದು, ಗಂಡನಾದ ಹಣಮಂತಪ್ಪ ಪೂಜಾರಿ, ಪ್ರಾಯ: 39 ವರ್ಷ, ತಂದೆ : ಕನಕಪ್ಪ ಪೂಜಾರಿ, ವಾಸ : ಇಟಿಗಿ ಗ್ರಾಮ, ರೋಣ ತಾಲೂಕು, ಗದಗ ಜಿಲ್ಲೆ ರವರು ದಿನಾಂಕ: 10-01-2024 ರಂದು ಎಂದಿನಂತೆ ಹೆಲ್ಪರ್ ಕೆಲಸಕ್ಕೆ ಹೋಗಿದ್ದವರು ಸಂಜೆ 07:00 ಗಂಟೆಗೆ ಮನೆಗೆ ಬರುವಾಗ ವಿಪರೀತ ಕುಡಿದುಕೊಂಡು ಬಂದಿದ್ದವರು ಮನೆಯಲ್ಲಿ ಪುನಃ ಕುಡಿದಿರುತ್ತಾರೆ. ನಂತರ ಊಟ ಮಾಡಿ ಮನೆಯಲ್ಲಿ ಎಲ್ಲರೊಂದಿಗೆ ಮಲಗಿರುತ್ತಾರೆ. ನಂತರ ನಾವೆಲ್ಲರೂ ಮಲಗಿರುವಾಗ ರಾತ್ರಿ ವೇಳೆ ಯಾವಾಗ ಎದ್ದು ಹೊರಗಡೆ ಹೋದವರು ಬೆಳಗಿನ ಜಾವ ಸುಮಾರು 02:00 ಗಂಟೆಗೆ ಎಚ್ಚರವಾದಾಗ ಗಂಡ ಪಕ್ಕದಲ್ಲಿರದೇ ಇದ್ದು ನಾನು ಎದ್ದು ಮನೆಯ ಬಾಗಿಲು ತೆರೆದು ಹೊರಗಡೆ ಗೇಟಿನ ಬಳಿ ನೋಡಿದಾಗ ಅಲ್ಲಿ ಮಲಗಿದ್ದವರು ಕುಡಿತದಿಂದ ವಾಂತಿ ಮಾಡಿಕೊಂಡು ಮಾತನಾಡದ ಸ್ಥಿತಿಯಲ್ಲಿ ಇದ್ದವರನ್ನು ಕಂಡು ನನ್ನ ಗಂಡನ ಅಣ್ಣನಾದ ವಿನಾಯಕನಿಗೆ ಪೋನ್ ಮಾಡಿ ವಿಷಯ ತಿಳಿಸಿದೆ. ನಂತರ ನಾನು ಮತ್ತು ವಿನಾಯಕನು 108 ಅಂಬುಲೆನ್ಸ್ ಕರೆ ಮಾಡಿ ನನ್ನ ಗಂಡನನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಚಿಕಿತ್ಸೆಗೆ ಕರೆದುಕೊಂಡು ಹೋಗಿರುತ್ತೇವೆ. ಅಲ್ಲಿ ಪರೀಕ್ಷೀಸಿದ ವೈದ್ಯರು ಆತ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ನನ್ನ ಗಂಡ ದಿನಾಲು ವಿಪರೀತ ಕುಡಿತದ ಚಟ ಉಳ್ಳವರಾಗಿದ್ದು ಇದರಿಂದಲೋ ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಆದುದರಿಂದ ನನ್ನ ಗಂಡನ ಮೃತ ದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಂಡು ಮೃತ ದೇಹವನ್ನು ಮುಂದಿನ ಕಾರ್ಯಕ್ಕೆ ಬಿಟ್ಟು ಕೊಡಬೇಕಾಗಿ ಎಂಬಿತ್ಯಾದಿಯಾಗಿದ್ದ ನೀಡಿದ್ದ ದೂರನ್ನು ಸ್ವೀಕರಿಸಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು

     ತನಿಖೆಯ ಸಮಯ ಹಣಮಂತಪ್ಪ ಪೂಜಾರಿ ರವರ ಮೃತದೇಹದ ಮೇಲೆ ಪಂಚರ ಸಮಕ್ಷಮ ಶವ ಪಂಚನಾಮೆಯನ್ನು ನಡೆಸಿ ಮೃತದೇಹವನ್ನು ವೈದ್ಯಕೀಯ ಶವ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮುಂದೆ ಠಾಣಾ ಸಿಬ್ಬಂದಿ ಮೂಲಕ ಹಾಜರುಪಡಿಸಿದ್ದು, ವೈದ್ಯಕೀಯ ಶವ ಪರೀಕ್ಷೆ ನಡೆಸಿರುವ ವೈದ್ಯರು ಮೃತನ ಕುತ್ತಿಗೆಯನ್ನು ಒತ್ತಿ ಹಿಡಿದು ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ  ಎಂದು ಶವ ಪರೀಕ್ಷಾ ವರದಿ ನೀಡಿರುತ್ತಾರೆ. ವಿಚಾರಣೆಯ ಸಮಯ ಮೃತನ ಸರಿಯಾದ ಹೆಸರು ಹನುಮಂತಪ್ಪ ಪೂಜಾರಿ, ಪ್ರಾಯ: 29 ವರ್ಷ, ತಂದೆ: ಕನಕಪ್ಪ ಪೂಜಾರಿ, ವಾಸ: ನಂ. 402, ಅನ್ನ ದಾನೇಶ್ವರಿ ಮಠದ ಬಳಿ, ಇಟಗಿ ಗ್ರಾಮ, ರೋಣ ತಾಲೂಕು, ಗದಗ ಜಿಲ್ಲೆ ಎಂದು ತಿಳಿದು ಬಂದಿದ್ದು, ಮೃತ ಹನುಮಂತಪ್ಪ ಪೂಜಾರಿ ಇವನನ್ನು ಯಾರೋ ಯಾವುದೋ ಉದ್ದೇಶಕ್ಕೆ ಕುತ್ತಿಗೆಯನ್ನು ಒತ್ತಿ ಹಿಡಿದು ಉಸಿರು ಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬಿತ್ಯಾದಿ.

Konaje PS

ಪಿರ್ಯಾದಿದುದಾರರು ಖಾಸಗೀ ಬ್ರಾಂಕ್ ನ ನಿರ್ದೇಶಕರಾಗಿದ್ದು  ಪಿರ್ಯಾದಿದುದಾರರ ಮನೆಗೆ ಆರೋಪಿ ಜಯಕಿರಣ @ ಕಿನ್ನ ಎಂಬಾತನು ಇತರ ಗೂಂಡಾಗಳನ್ನು ಕರೆದುಕೊಂಡು ಬಂದು 15 ದಿನಗಳ ಹಿಂದೆ ಮನೆಗೆ ಅಕ್ರಮ ಪ್ರವೇಶ ಮಾಡಿಕೊಂಡು 2 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಒಡ್ಡಿರುತ್ತಾನೆ, ಹಾಗೂ 50 ಲಕ್ಷ ಹಣ ಮುಂಗಡ ನೀಡುವಂತೆ ಒತ್ತಾಯಿಸಿರುತ್ತಾನೆ. ಹಣ ನೀಡದೇ ಇದ್ದರೆ ನಕಲಿ ಸಿಡಿಯನ್ನು ಸೃಷ್ಟಿಸಿ ಅದನ್ನು ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿರುತ್ತಾನೆ. ಆರೋಪಿ ಜಯಕಿರಣ @ ಕಿನ್ನನ ಅಣ್ಣ ಪ್ರಜ್ವಲ್ ಗಟ್ಟಿ ದಿನಾಂಕ: 12-01-2024 ರಂದು ಬೆಳಗ್ಗೆ 08.11 ಗಂಟೆಯ ಸಮಯಕ್ಕೆ ಆತನ ಮೊಬೈಲ್ ನಂಬ್ರ: 6360191346  ದಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರ: ಗೆ ಕರೆ ಮಾಡಿ ಆರೋಪಿ ಜಯಕಿರಣ@ ಕಿನ್ನ ಎಂಬಾತನು ಹೇಳಿದಂತೆ 2 ಕೋಟಿ ರೂಪಾಯಿ ಹಣವನ್ನು ನೀಡುವಂತೆ ಒತ್ತಾಯಿಸುತ್ತಿರುತ್ತಾನೆ. ಆರೋಪಿಗಳು ಪಿರ್ಯಾದಿದಾರರನ್ನು ಹಪ್ತ ಹಣಕ್ಕಾಗಿ ಬೆದರಿಕೆ ಒಡ್ಡಿರುತ್ತಾರೆ ಎಂಬಿತ್ಯಾದಿ.

 

Konaje PS   

ದಿನಾಂಕ:12-01-2024 ರಂದು ಸಮಯ 20:50 ಗಂಟೆಗೆ ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ ನಾಟೇಕಲ್ ಜಂಕ್ಷನ್ನ ಸಾರ್ವಜನಿಕ ಬಸ್ಸು ನಿಲ್ದಾಣದ  ಬಳಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ನವಾಜ್ ಪ್ರಾಯ 25 ವರ್ಷ,  ವಾಸ: ಕುಚ್ಚಿಗುಡ್ಡೆ, ಮಂಜನಾಡಿ ಗ್ರಾಮ, ಮಂಗಳಾತಿ ಅಂಚೆ, ಮಂಗಳೂರು ತಾಲೂಕು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ 21.00 ಗಂಟೆಗೆ ವಶಕ್ಕೆ ಪಡೆದುಕೊಂಡು ನಾಟೇಕಲ್ ಕಣಚೂರು ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು MARIJUANA(THC),BENZODIANZEPINES(BZO),METHAMPHETAMINE(MET) ಎಂಬ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಡಪಟ್ಟಿರುವ ಮೇರೆಗೆ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂಬಿತ್ಯಾದಿ.

Kankanady Town PS

ಪಿರ್ಯಾದು Anushree S ದಾರರು ಮಂಗಳ ಮುಖಿಯಾಗಿದ್ದು ಭಿಕ್ಷಾಟನೆ ವೃತ್ತಿ ಮಾಡಿಕೊಂಡಿರುವುದಾಗಿದೆ. ಸದ್ರಿಯವರ ಜೊತೆ ಉಳ್ಳಾಲ ಬೈಲ್ ಬಾಡಿಗೆ ಮನೆಯಲ್ಲಿ ವಾಸವಾಗಿರುವ ದಾವಣಗೆರೆ ಹರಿಹರ ನಿವಾಸಿ ತಲಾಶ್ @ ರೋಶಿನಿ ಮಂಗಳ ಮುಖಿಯಾಗಿದ್ದು ಸದ್ರಿಯವರು ದಿನಾಂಕ:08-01-2024 ರಂದು ರಾತ್ರಿ ಮಂಗಳೂರಿಗೆ ಕಾರ್ಯ ನಿಮಿತ್ತ ಬಂದು ವಾಪಾಸ್ಸು ಉಳ್ಳಾಲ ಕಡೆಗೆ ಹೋಗುತ್ತಿದ್ದಾಗ ಮಳೆ ಬರುವ ಸಮಯ ಜೆಪ್ಪಿನ ಮೊಗರು ಗ್ಯಾರೇಜ್ ಬಳಿ ನಿಲ್ಲುವುದಾಗಿ ತಿಳಿಸಿ ಹೋದವರು ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ವಾಪಾಸ್ಸು  ರೂಮ್ ಗೂ ಬಾರದೇ,ಹರಿಹರದ ತನ್ನ ಮನೆಗೂ ಹೋಗದೇ  ಈವರಗೂ ಪತ್ತೆಯಾಗಿರುವುದಿಲ್ಲ. . ಆದುದ್ದರಿಂದ ಕಾಣೆಯಾದ ತಲಾಶ್ @ ರೋಶಿನಿ ಮಂಗಳ ಮುಖಿಯನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 13-01-2024 11:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080