ಅಭಿಪ್ರಾಯ / ಸಲಹೆಗಳು

Traffic North Police Station   

ದಿನಾಂಕ 11-02-2023 ರಂದು ಪಿರ್ಯಾದಿ Bolar Chandrashekar Salian ಅವರ ಬಾಬ್ತು KA-19-MC-6017 ನಂಬ್ರದ ಕಾರಿನಲ್ಲಿ ತಾನು ಕೆಲಸ ಮಾಡುವ ಸಂಸ್ಥೆಗೆ ಸಂಬಂಧಿಸಿದ ಕೆಲಸದ ಬಗ್ಗೆ ಬೈಕಂಪಾಡಿ ಕಡೆಯಿಂದ ಸುರತ್ಕಲ್ ಕಡೆಗೆ ಹೋಗುತ್ತಾ ಗೋವಿಂದದಾಸ ಜಂಕ್ಷನಿನ ಮಹಾಲಿಂಗೇಶ್ವರ ದೇವಸ್ಥಾನದ ಎದುರು ತಲುಪುತ್ತಿದ್ದಂತೆ ಸಾಯಂಕಾಲ ಸಮಯ ಸುಮಾರು 6:50 ಗಂಟೆಗೆ ಪಿರ್ಯಾದಿದಾರರ ಕಾರಿನ ಹಿಂದಿನಿಂದ ಅಂದರೆ, ಕುಳಾಯಿ ಕಡೆಯಿಂದ ಸುರತ್ಕಲ್ ಕಡೆಗೆ KA-35-C-4675 ನಂಬ್ರದ 12 ಚಕ್ರದ ಲಾರಿಯನ್ನು ಅದರ ಚಾಲಕನಾದ ಅಬ್ದುಲ್ ಖಾದರ್ ಎಂಬಾತನು ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ NH-66ನೇ ಡಾಮಾರು ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂದಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ತನ್ನ ಕಾರಿನ ನಿಯಂತ್ರಣ ತಪ್ಪಿ,ಕಾರು ಎದುರು ಎಡಬದಿಗೆ ಚಲಿಸಿ ಡಾಮಾರು ರಸ್ತೆಯ ಎಡಬದಿಯಲ್ಲಿರುವ ತಗ್ಗು ಜಾಗಕ್ಕೆ ಎಡ ಮಗ್ಗುಲಾಗಿ ಮಗುಚಿ ಬಿದ್ದಿರುತ್ತದೆ. ಅಪಘಾತ ಪಡಿಸಿದ ಲಾರಿಯ ಚಾಲಕನು ಅಪಘಾತ ಸ್ಥಳದಲ್ಲಿ ತನ್ನ ಗೂಡ್ಸ್ ಲಾರಿಯನ್ನು ನಿಲ್ಲಿಸದೇ ಸ್ವಲ್ಪ ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಎಂಬಿತ್ಯಾದಿ.                      

Traffic South Police Station    

ಪಿರ್ಯಾದಿ ಶ್ರೀ ಅಂಕಿತ್ ಸಿಂಗ್ (17 ವರ್ಷ) ರವರು ದಿನಾಂಕ: 12-02-2023 ರಂದು ಮಂಗಳೂರಿನಿಂದ ಬಸ್ಸಿನಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ವರೆಗೆ ಬಂದಿದ್ದು ನಂತರ ಬಸ್ಸಿನಿಂದ ಇಳಿದು ರೂಮ್ ಆದ ಗಣೇಶ್ ಮಂದಿರದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 6-30 ಗಂಟೆಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೆಳಗೆ ತಿರುವಿನ ಬಳಿ ಪಿರ್ಯಾದಿದಾರರು ರಸ್ತೆ ದಾಟುತ್ತಿರುವಾಗ ತೊಕ್ಕೊಟ್ಟು ಓಳಪೇಟೆ ಕಡೆಯಿಂದ ಗಣೇಶ್ ನಗರ ಕಡೆಗೆ ಮಿನಿ ಲಾರಿ ನಂಬ್ರ: KL-13-T-1210 ನೇದನ್ನು ಅದರ ಚಾಲಕ  ಹರಿಶ್ಚಂದ್ರ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಿನಿ ಲಾರಿಯ ಚಕ್ರವು ಪಿರ್ಯಾದಿದಾರರ ಬಲಕಾಲಿನ ಪಾದದ ಮೇಲೆ ಹರಿದು ಗಂಭೀರ ಸ್ವರೂಪದ ಗಾಯವಾಗಿದ್ದು ಅಲ್ಲಿ ಸೇರಿದ ಜನರು ವಾಹನವೊಂದರಲ್ಲಿ ಚಿಕಿತ್ಸೆ ಬಗ್ಗೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಪಿರ್ಯಾದಿದಾರರ ಅಣ್ಣನಾದ ಹಮನ್ ಸಿಂಗ್ ಹಾಗೂ ಇತರರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಲ್ಲಿ ಅಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು  ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

Mangalore East Traffic PS                                                 

ಪಿರ್ಯಾದಿ ವಿಠಲ್ ಪರಸಪ್ಪ ಹಿರೇತಳವಾರ, ಪ್ರಾಯ: 21 ವರ್ಷ ಎಂಬುವರು ನೊಂದಣಿ ಸಂಖ್ಯೆ: KA-19-AB-6407 ನೇ ಲಾರಿಯೊಂದರಲ್ಲಿ ಕಸ ಎತ್ತುವ ಕೆಲಸ ಮಾಡಿಕೊಂಡಿದ್ದು ಈ ದಿನ ದಿನಾಂಕ 12/02/2023 ರಂದು ಬೆಳಿಗ್ಗೆ 08-00 ಗಂಟೆಗೆ ತಮ್ಮೊಂದಿಗೆ ಕಸ ಎತ್ತುವ ಮಹಾಗುಂಡಪ್ಪ ರವರೊಂದಿಗೆ ಮಂಗಳೂರು ರಾ.ಹೆದ್ದಾರಿ 73  ಕುಲಶೇಖರ ಕೈಕಂಬ ಬಳಿಯ ಭಾರತ್ ಪ್ರಿಂಟರ್ಸ್ ಕಟ್ಟಡದ ಬಳಿ ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದ ಕಸವನ್ನು ಎತ್ತಿ ತಮ್ಮ ಲಾರಿಯಲ್ಲಿ ತುಂಬಿಸುತ್ತಿರುವಾಗ ಮರೋಳಿ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ಕಾರು ನೊಂದಣಿ ಸಂಖ್ಯೆ: KA-19-MC-6372 ನೇಯದನ್ನು ಅದರ ಚಾಲಕನು ತನ್ನ ಮುಂಭಾಗದಲ್ಲಿದ್ದ ಟ್ರಕ್ಕೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ವೇಗವಾಗಿ ದುಡುಕುತನ, ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯಲ್ಲಿ ತೀರಾ ಎಡಕ್ಕೆ ಚಲಾಯಿಸಿಕೊಂಡು ಬಂದಿದ್ದು ಅದು ಚಾಲಕನ ನಿಯಂತ್ರಣ ತಪ್ಪಿರುವುದನ್ನು ಕಂಡು ಪಿರ್ಯಾದಿದಾರರು ಕೂಡಲೇ ಬದಿಗೆ ಸರಿಯುವಷ್ಟರಲ್ಲಿ ಕಾರು ಪಿರ್ಯಾದಿದಾರರೊಂದಿಗೆ ಕಸ ಎತ್ತುದ್ದಿದ್ದ ಮಹಾಗುಂಡಪ್ಪ ರವರಿಗೆ ಢಿಕ್ಕಿಯಾಗಿದ್ದು ಈ ಢಿಕ್ಕಿ ರಭಸಕ್ಕೆ ಮಹಾಗುಂಡಪ್ಪ ರವರು ಸುಮಾರು 5 ಅಡಿ ದೂರ ಮುಂದಕ್ಕೆ ಎಸೆಲ್ಪಟ್ಟು ರಸ್ತೆಯ ಬದಿಯಲ್ಲಿದ್ದ ಕಲ್ಲುಗಳಿಗೆ ಬಿದ್ದಿರುತ್ತಾರೆ, ನಂತರ ಕಾರು ಕಸದ ಲಾರಿಯ ಹಿಂಭಾಗಕ್ಕೆ ಢಿಕ್ಕಿಯಾಗಿ ನಿಂತಿರುತ್ತದೆ, ಈ ಕೂಡಲೆ ಪಿರ್ಯಾದಿದಾರರು ಗಾಯಾಳುವನ್ನು ಎಬ್ಬಿಸಿ ಲಾರಿ ಚಾಲಕ ಗುರುವಪ್ಪ ರವರ ಸಹಾಯದಿಂದ ಉಪಚರಿಸಿ ಆಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಮಹಾಗುಂಡಪ್ಪ ರವರ ಎಡ ಕಾಲಿನ ಹೆಬ್ಬರಳಿನ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿರುತ್ತಾರೆ. ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Urva PS

ಪಿರ್ಯಾದಿ  Yathish Arun Devadiga ಬಾಬ್ತು KA 19 AC 8076 ನೇ ಆಟೋ ರಿಕ್ಷಾವನ್ನು ಚೇತನ್ ರವರಿಗೆ ದುಡಿಯಲು ನೀಡಿದ್ದು ಚೇತನ್ ರವರು ಸದ್ರಿ ಆಟೋ ರಿಕ್ಷಾವನ್ನು ಮಂಗಳೂರು ನಗರದಲ್ಲಿ ಬಾಡಿಗೆಗೆ ಓಡಿಸುತ್ತಿದ್ದು  ದಿನಾಂಕ 11-02-2023 ರಂದು ರಾತ್ರಿ 09-40 ಗಂಟೆಗೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಿಕಾನ ಜಿಲ್ಲು ಆಟೋ ಗ್ಯಾಸ್ ಪಂಪ್ ನಲ್ಲಿ ಪಾರ್ಕ್ ಮಾಡಿ ಮನೆಗೆ ಹೋಗಿದ್ದು ದಿನಾಂಕ 12-02-2023 ರಂದು ಬೆಳಿಗ್ಗೆ 06-00 ಗಂಟೆಗೆ ಬಂದು ನೋಡಿದಾಗ ಪಾರ್ಕ್ ಮಾಡಿದ ಸ್ಥಳದಲ್ಲಿ ಆಟೋ ರಿಕ್ಷಾ ಇರಲಿಲ್ಲ. ಆದ್ದರಿಂದ ಪಿರ್ಯಾದಿದಾರರ ಬಾಬ್ತು ಆಟೋ ರಿಕ್ಷಾವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಈ ರಿಕ್ಷಾದ ಅಂದಾಜು ಮೌಲ್ಯ ಸುಮಾರು 50,000/- ರೂ ಆಗಬಹುದು. ಎಂಬಿತ್ಯಾದಿ.

Traffic North Police Station

ಪಿರ್ಯಾದಿ Jayaprakash ಈ ದಿನ ದಿನಾಂಕ 12-02-2023 ರಂದು ತನ್ನ ಹೆಂಡತಿಯ ಬಾಬ್ತು KA-19-EU-4574 ನಂಬ್ರದ ಸ್ಕೂಟರಿನಲ್ಲಿ ಎಸ್ ಕೋಡಿಗೆ ಹೋದವರು ವಾಪಾಸು ಪಡುಪಣಂಬೂರು ಮಾರ್ಗವಾಗಿ ರಾ ಹೆ 66 ರ ಉಡುಪಿ-ಮಂಗಳೂರು ರಸ್ತೆಯಲ್ಲಿ ಬರುತ್ತಿದ್ದ ಸಮಯ 12:00 ಗಂಟೆಗೆ ಹಳೆಯಂಗಡಿ ಜಂಕ್ಷನ್ ಬಳಿ KA-19-AB-3938 ನಂಬ್ರದ ಲಾರಿಯನ್ನು ಅದರ ಚಾಲಕ ಮದನ್ ಪಾಲ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಬಲ ಭಾಗಕ್ಕೆ ಲಾರಿಯ ಮುಂಭಾಗದ ಎಡ ಭಾಗ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ನಂತರ ಲಾರಿಯನ್ನು ಅದರ ಚಾಲಕ ಮುಂದಕ್ಕೆ ಚಲಾಯಿಸಿದ ಪರಿಣಾಮ ಲಾರಿಯ ಹಿಂಭಾಗದ ಎರಡನೆ ಚಕ್ರ ಸ್ಕೂಟರಿಗೆ ಮತ್ತೆ ಡಿಕ್ಕಯಾಗಿ ಸ್ಕೂಟರನ್ನು ಸ್ವಲ್ಪ ದೂರು ಎಳೆದುಕೊಂಡು ಹೋಗಿದ್ದು ಈ ಅಪಘಾತದಿಂದ ಪಿರ್ಯಾದಿದಾರರ ಎಡ ಮತ್ತು ಬಲ ಕಾಲಿನ ಹೆಬ್ಬರಳುಗಳ ಬಳಿ, ಎಡ ಕಾಲಿನ ಮೊಣಕಾಲಿನ ಬಳಿ, ಎಡ ಕಾಲಿನ ಪಾದದ ಬಳಿ ಗುದ್ದಿದ ರೀತಿಯ ರಕ್ತಗಾಯ ಹಾಗೂ ಬಲ ತೋಳು ಮತ್ತು ಸೊಂಟದ ಎಡಭಾಗದ ಬಳಿ ಗುದ್ದಿದ ರೀತಿಯ ಗಾಯವಾಗಿ ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Traffic North Police Station       

ಪಿರ್ಯಾದಿ Mrs. Laxmi Mallikarjuna Karannavar ದಿನಾಂಕ 12-02-2023 ರಂದು ಸುರತ್ಕಲ್ ಮಾರ್ಕೇಟ್ ಗೆ ಹೋಗುವ ಸಲುವಾಗಿ ತಾನು ವಾಸ ಮಾಡಿಕೊಂಡಿರುವ ಫಾಯಜ್ ಕಾಂಪ್ಲೆಕ್ಸ್ ನಿಂದ ಕೆಳಗಿಳಿದು ಬಸ್ಸಿಗೆ ಹೋಗುವರೆ ರಸ್ತೆಯನ್ನು ದಾಟುತ್ತಾ ರಸ್ತೆಯ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ತಲುಪುವ ಸಮಯ 12:20 ಗಂಟೆಗೆ ದ್ವಿಚಕ್ರ ವಾಹನವೊಂದನ್ನು ಅದರ ಸವಾರನು ಹಿಂಬದಿಯಲ್ಲಿ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಕೈಕಂಬ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು, ಈ ವೇಳೆ ಅಪಘಾತ ಪಡಿಸಿದ ದ್ವಿ ಚಕ್ರ ವಾಹನವು ಪಿರ್ಯಾದಿದಾರರ ಎಡ ಕೈ ಮೇಲೆ ಹಾದು ಹೋಗಿ ಅವರ ಎಡ ಮುಂಗೈ ಮತ್ತು ಎಡಕೈ ತೋರು ಬೆರಳಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಅಪಘಾತ ಪಡಿಸಿದ ವಾಹನವನ್ನು ಸವಾರನು ಅಲ್ಲಿ ನಿಲ್ಲಿಸದೇ ಪರಾರಿಯಾಗಿದ್ದು ವಾಹನದ ನಂಬ್ರ ಹಾಗೂ ಸವಾರನ ಹೆಸರು ತಿಳಿದಿರುವುದಿಲ್ಲ ಎಂಬಿತ್ಯಾದಿ.

Traffic South Police Station

ದಿನಾಂಕ:12-02-2023 ರಂದು ಸಂಜೆ ಸಮಯ ಪಿರ್ಯಾದಿ  ಜಿತಿನ್ ಕೆ.ಜೆ (26 ವರ್ಷ) ರವರು ಅವರ ಬಾಬ್ತು ಮೋಟರ್ ಸೈಕಲ್ ನಂಬ್ರ KL-79-A-1480 ನೇದರಲ್ಲಿ ಸವಾರರಾಗಿಯು ಮತ್ತು ಅವರ ಸ್ನೇಹಿತ ವಿಷ್ಣು ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಪಿಎ ಕಾಲೇಜಿನಿಂದ ದೇರಳಕಟ್ಟೆ ಕಡೆಗೆ ಸವಾರಿಮಾಡಿಕೊಂಡು ಹೋಗುತ್ತಿರುವಾಗ ಸಂಜೆ ಸಮಯ ಸುಮಾರು 07:00 ಗಂಟೆಗೆ ನಾಟೇಕಲ್ ಜಂಕ್ಷನ್ ತಲುಪಿದಾಗ ಹಿಂದಿನಿಂದ ಅಪರಿಚಿತ ದ್ವಿಚಕ್ರ ವಾಹನ ಸವಾರನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿತ್ತಿದ್ದ ಮೋಟರ್ ಸೈಕಲ್ ಗೆ ಡಿಕ್ಕಿ ಪಡಿಸಿ ನಂತರ ತನ್ನ ವಾಹನವನ್ನು ನಿಲ್ಲಿಸದೆ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ, ಈ ಅಪಘಾತದಿಂದ ಮೋಟರ್ ಸೈಕಲ್ ಸವಾರ ಜಿತಿನ್ ಕೆ.ಜೆ ಹಾಗೂ ಸಹ ಸವಾರ ವಿಷ್ಣು ರವರು ಮೋಟರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಜಿತಿನ್ ರವರಿಗೆ ಎಡ ಕಾಲಿನ ಮೂಳೆ ಮುರಿತದ ಗಾಯ ಹಾಗೂ ಸಹ ಸವಾರ ವಿಷ್ಣುರವರಿಗೆ ಬಲ ಭುಜಕ್ಕೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ದಾಖಲಾಗಿರುವುದಾಗಿದೆ, ಎಂಬಿತ್ಯಾದಿ.

Surathkal PS

ದಿನಾಂಕ 11-02-2023 ರಂದು ಪಿರ್ಯಾದಿ ಪಪ್ಪು ಸಹಾನಿ ರವರು ಹೊಸಬೆಟ್ಟುವಿನ ಬಾಡಿಗೆ ರೂಮಿನಲ್ಲಿ ರವಿಂದರ್, ರಂಜಿತ್, ಸುರೇಶ್, ಮನೋಜ್, ಸನೋಜ್ ರವರುಗಳೊಂದಿಗೆ ರಾತ್ರಿ 8:30 ಗಂಟೆಗೆ ಇದ್ದು ಪಿರ್ಯಾದಿ ಕೋಳಿ ಮಾಂಸವನ್ನು ತಂದುಕೊಟ್ಟಾಗ ಸನೋಜ್ ಮತ್ತು ರವಿಂದರ್ ರವರುಗಳು ಕೋಳಿ ಪದಾರ್ಥ ಮಾಡಿಕೊಡವಂತೆ ತಿಳಿಸಿದಕ್ಕೆ ಪಿರ್ಯಾದಿಯು ನಾನು ನಿನ್ನೆ ದಿನ ಅಡುಗೆ ಮಾಡಿದ್ದೆನೆ ಇವತ್ತು ನೀವೂ ಯಾರಾದರೂ ಅಡುಗೆ ಮಾಡಬೇಕು ಯಾವಾಗಲು ಅಡುಗೆ ಮಾಡಲು ನಿಮ್ಮ ಕೆಲಸದವನು ಅಲ್ಲ ಎಂದು ಹೇಳಿದಕ್ಕೆ ಸನೋಜ್, ರವಿಂದರ್, ಮನೋಜ್ ರವರುಗಳು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಬಳೆಯಿಂದ ಮುಖಕ್ಕೆ ಹಿಗ್ಗಾಮುಗ್ಗಾ ಹೊಡೆದು ಗಲ್ಲಕ್ಕೆ, ಹಣೆಗೆ, ಬಲ ಕಣ್ಣಿನ ಬಳಿ ಗಾಯವಾಗಿ ಜೋರು ಬೆಬ್ಬೊ ಹೊಡೆದಾಗ ಪಿರ್ಯಾದಿಯ ರಕ್ಷಣೆಗೆ ಚೋಟುಕುಮಾರ್ ಮತ್ತು ಮಣ್ಣುಕುಮಾರ್ ರವರುಗಳು ಬಂದಾಗ ಅವರಿಗೂ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನೀವೂ ಇವನ ರಕ್ಷಣೆಗೆ ಬಂದರೆ ನಿಮ್ಮನ್ನು ಕೊಂದೆ ಬಿಡುತ್ತೇವೆ ಎಂದು ಹೇಳುತ್ತಾ ಸನೋಜ್ ನು ಅಲ್ಲೆ ಇದ್ದ ಕಬ್ಬಿಣದ ರಾಡಿನಿಂದ ಚೋಟು ಕುಮಾರಿನ ತಲೆಗೆ ಜೋರಾಗಿ ಹೊಡೆದುದ್ದರಿಂದ ಚೋಟುಕುಮಾರ್ ಪ್ರಜ್ಞಾ ಹೀನನಾಗಿ ನೆಲಕ್ಕೆ ಬಿದ್ದಿದ್ದು ಉಳಿದ ಇಬ್ಬರೂ ಆರೋಪಿಗಳು ಮಣ್ಣುಕುಮಾರನಿಗೆ ಬಳೆಯಿಂದ ಮತ್ತು ಸನೋಜ್ ನು ರಾಡಿನಿಂದ ಮುಖಕ್ಕೆ ಹಲ್ಲೆ ಮಾಡಿ ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿಯುತ್ತಿದ್ದಾಗ ಅಲ್ಲಿ ಜನ ಸೇರುವುದನ್ನು ಕಂಡ ಆರೋಪಿಗಳು ಇಲ್ಲಿ ಜನ ಸೇರಿದ್ದಾರೆ ನಿಮ್ಮನ್ನು ಹೀಗೆ ಬಿಟ್ಟು ಹೋಗುತ್ತಿದ್ದೇವೆ ಮುಂದಕ್ಕೆ ನಮ್ಮ ಸುದ್ದಿಗೆ ಬಂದರೆ ನಿಮ್ಮನ್ನು ಕೊಲ್ಲೆದೇ ಬಿಡುವುದಿಲ್ಲ ಎಂದು ಗದರಿಸಿ ಹೋಗಿರುವುದಾಗಿದೆ, ಆರೋಪಿಗಳೆಲ್ಲರೂ ಪಿರ್ಯಾದಿ ಹಾಗೂ ಚೋಟುಕುಮಾರ್ ಮತ್ತು ಮಣ್ಣುಕುಮಾರನನ್ನು ಕೋಲೆ ಮಾಡುವ ಉದ್ದೇಶದಿಂದಲೆ ಈ ಹಲ್ಲೆಯನ್ನು ಮಾಡಿರುವುದು ಎಂಬಿತ್ಯಾದಿಯಾಗಿದೆ.

Kankanady Town PS        

ಪಿರ್ಯಾದಿ Anil Kumar ದಾರರ ತಂದೆ ಕೆ ಸದಾನಂದ ಪ್ರಾಯ:73 ವರ್ಷ ಇವರು ಪೆಟ್ರೋಲ್ ಬಂಕ್ ನಲ್ಲಿ ಕೆಲಸಮಾಡುತ್ತಿದ್ದು ಸುಮಾರು 03 ವರ್ಷದ ಹಿಂದೆ ನಿವೃತಿಗೊಂಡು ಮನೆಯಲ್ಲಿರುವುದಾಗಿದೆ. ಇವರಿಗೆ ಸಕ್ಕರೆ ಖಾಯಿಲೆ ಮತ್ತು ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು ಖಾಯಿಲೆ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು. ಹಾಗೂ ಇವರಿಗೆ ಇತ್ತೀಚಿಗೆ ನಿದ್ರಾಹೀನತೆಯಿಂದ ಬಳಲುತ್ತಿದ್ದು ನೆನಪಿನ ಶಕ್ತಿ ಕಡಿಮೆಯಾಗಿರುತ್ತದೆ. ಪಿರ್ಯಾದುದಾರರ ತಂದೆ ಕೆ ಸದಾನಂದ ರವರು ಪ್ರತಿದಿನ ಮನೆಯ ಹತ್ತಿರದಲ್ಲಿರುವ ಮರೋಳಿಯ ಸೂರ್ಯನಾರಾಯಣ ದೇವಾಲಯಕ್ಕೆ ಹೋಗಿ  ವಾಪಾಸು ಮನೆಗೆ ಬರುತ್ತಿದ್ದು ದಿನಾಂಕ 11-02-2023 ರಂದು ರಾತ್ರಿ ಸುಮಾರು 7-00 ಗಂಟೆಗೆ ಮರೋಳಿಯ ಸೂರ್ಯನಾರಾಯಣ ದೇವಸ್ಥಾನಕ್ಕೆಂದು ಅವರ ತನ್ನ K19 EF4609  ನೇ ಸ್ಕೂಟರ್ ನಲ್ಲಿ ಹೋದವರು ತುಂಬಾ ಸಮಯವಾದರು ವಾಪಾಸು ಮನೆಗೆ ಬಂದಿರುವುದಿಲ್ಲ. ನಂತರ ಪಿರ್ಯಾದುದಾರರು ದೇವಸ್ಥಾನದ ಸುತ್ತಮುತ್ತ ಮತ್ತು ಮನೆಯ ಸುತ್ತಮುತ್ತಲ್ಲಿನ ಪರಿಸರದಲ್ಲಿ ಹುಡುಕಾಡಿ ನಂತರ 12-02-2023 ಬೆಳಗ್ಗೆ ಪುನಃ ಮನೆಯ ಸುತ್ತಮುತ್ತಿಲ್ಲಿನ ಪರಿಸರದಲ್ಲಿ ಹುಡುಕಾಡಿ ಹಾಗೂ ಸಂಬಂಧಿಕರ ಮನೆಗೆ ಪೋನ್ ಕರೆಯನ್ನು ಮಾಡಿ ವಿಚಾರಿಸಿದ್ದು ಪಿರ್ಯಾದುದಾರರ ತಂದೆ ಕೆ ಸದಾನಂದ ರವರು ಬಂದಿರುವುದಿಲ್ಲವಾಗಿ ತಿಳಿಸಿದ್ದು ನಂತರ ಮಂಗಳೂರಿನ ಪರಿಸರದಲ್ಲಿ ಹುಡುಕಾಡಿದ್ದು ಎಲ್ಲಿವೂ ಪತ್ತೆಯಾಗಿರುವುದಿಲ್ಲ ಆದುದ್ದರಿಂದ ನಾಪತ್ತೆಯಾದ ಪಿರ್ಯಾದುದಾರರ ತಂದೆ ಕೆ ಸದಾನಂದ ರವರನ್ನು.ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 13-02-2023 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080