ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Barke PS

ಈ ಪ್ರಕರಣದ ಸಂಕ್ಷೀಪ್ತ ಸಾರಾಶಂವೇನೆಂದರೆ, ಮಂಗಳೂರು ಜಿಲ್ಲಾ ಕಾರಾಗೃಹದ ವಿಚಾರಣಾ ಬಂದಿ ಸಂಖ್ಯೆ:18410 ಅಖಿಲ್ ತಂದೆ: ಆನಂದ.ಎಂ ಎಂಬಾತನ ಪ್ಯಾಂಟ್ ಜೇಬಿನಲ್ಲಿ ಅನುಮಾನಾಸ್ಪದವಾಗಿ ಸಿಮ್ ಕಾರ್ಡ್-01 ಬಚ್ಚಿಟ್ಟುಕೊಂಡಿರುವುದು ಕಂಡುಬಂದಿರುವುದರಿಂದ, ಈತನ ಮೇಲೆ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂಬಿತ್ಯಾದಿಯಾಗಿ 

Barke PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 13-02-2024 ರಂದು ಬರ್ಕೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಉಲ್ಲಾಸ್.ಎಮ್  ತಮ್ಮ ಸಿಬ್ಬಂದಿ ಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ ಮಂಗಳೂರು ನಗರದ ಲಾಲ್ ಬಾಗ್ ಬಸ್ ನಿಲ್ದಾನದ ಬಳಿ ತಲುಪಿದಾಗ ಅನೀಶ್ ಪ್ರಾಯ 33 ವರ್ಷ ತಂದೆ: ಜಯರಾಜ್ ವಾಸ:ಲಕ್ಷ್ಮೀ ಕಂಪೌಂಡ್, ಮಾರಿಗುಡಿ ದೇವಸ್ಥಾನದ ಹತ್ತಿರ ಮಂಗಳೂರು ಎಂಬಾತನು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ಇವರನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ವೈದ್ಯಕೀಯ ತಪಾಸಣೆಯ ಬಗ್ಗೆ ಹಾಜರು ಪಡಿಸಿಸದ್ದು   ವೈಧ್ಯಕೀಯ ತಪಾಸಣೆಯನ್ನು ಮಾಡಿ “Methamphetamine” “Tetrahydracannabinoid (Marijuana)” POSITIVE”  ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಬರ್ಕೆ ಪೊಲೀಸ್ ಠಾಣಾ ಅ.ಕ್ರ 15/2024 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ

 

Barke PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 13-02-2024 ರಂದು ಬರ್ಕೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ನಾಗೇಶ್ ಎಸ್ ಹಸ್ಲರ್ ಇವರು ಸಿಬ್ಬಂದಿ ಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ ನಗರದ ಲೇಡಿಹಿಲ್ ಬಸ್ಸು ನಿಲ್ದಾಣದ ಬಳಿ ತಲುಪಿದಾಗ ಬ್ರಿಯಾನ್ ಪ್ರಾಯ 37 ವರ್ಷ ತಂದೆ:ಆಲ್ ಫಾನ್ಸ್, ವಾಸ:ರಾಮ ಶಕ್ತಿ ಮಿಷನ್ ಬಳಿ, ಶಕ್ತಿ ನಗರ, ಮಂಗಳೂರು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ಮಂಗಳೂರು ಏ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ವೈದ್ಯಕೀಯ ತಪಾಸಣೆಯ ಬಗ್ಗೆ ಹಾಜರು ಪಡಿಸಿಸದ್ದು   ವೈಧ್ಯಕೀಯ ತಪಾಸಣೆಯನ್ನು ಮಾಡಿ ವೈದ್ಯರು “Tetrahydracannabinoid (Marijuana)” POSITIVE”  ಎಂಬುದಾಗಿ ದೃಡಪತ್ರವನ್ನು ನೀಡಿದ್ದು, ಆಪಾದಿತನ ವಿರುದ್ದ ಬರ್ಕೆ ಪೊಲೀಸ್ ಠಾಣಾ ಅ.ಕ್ರ 16/2024 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ.

 

Mangalore East Traffic PS                 

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ SANTHOSH MANJUNATH KUMBAR ಇವರು ದಿನಾಂಕ 13-02-2024 ರಂದು ಮದ್ಯಾಹ್ನ ನೋಂದಣಿ ಸಂಖ್ಯೆ KA19D8227 ನೇ ನಂಬ್ರದ ಬಸ್ಸಿನಲ್ಲಿ ಮಂಗಳಾದೇವಿ ಕಡೆಯಿಂದ ಸ್ಟೆಟ್ ಬ್ಯಾಂಕ್ ಕಡೆಗೆ ಪ್ರಯಾಣಿಸಿಕೊಂಡು ಬರುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 12:50 ಗಂಟೆಗೆ ಎ ಬಿ ಶೆಟ್ಟಿ ಜಂಕ್ಷನ್ ಬಳಿ ತಲುಪ್ಪುತ್ತಿದ್ದಂತೆ ಬಸ್ಸ್ ಚಾಲಕ ವೀರಣ್ಣ ಎಂಬಾತನು ಜಂಕ್ಷನಿನಲ್ಲಿ ರಸ್ತೆ ದಾಟುತಿದ್ದ ಪಾದಾಚಾರಿಗಳನ್ನು ಗಮನಿಸದೆ ಅಪಾಯಕಾರಿಯಾದ ರೀತಿಯಲ್ಲಿ ಅಡ್ಡಾ ದಿಡ್ಡಿಯಾಗಿ ತೀರಾ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿದರಿಂದ ನೆಹರು ಮೈದಾನದ ಫುಟಪಾತ ಕಡೆಗೆ ಹೋಗಲೆಂದು ರಸ್ತೆಯ ಇನ್ನೋಂದು ಬದಿಯಿಂದ ರಸ್ತೆ ದಾಟುತ್ತ ನಡೆದುಕೊಂಡು ಬರುತ್ತಿದ್ದ ಪಾದಾಚಾರಿ ಈಶ್ವರ ಪ್ರಾಯ 60 ವರ್ಷ ಎಂಬವರಿಗೆ ಡಿಕ್ಕಿ ಪಡಿಸಿದ್ದು ಈ ಡಿಕ್ಕಿಗೆ ಪಾದಾಚಾರಿಯು ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯಗೊಂಡಿದ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬಿತ್ಯಾದಿ

 

Mangalore Rural PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ Francis Cutinho  ದಾರರ ಬಾಬ್ತು ಟಿಪ್ಪರ್ ಹಾಗೂ ಹಿಟಾಚಿ, ಮಹಿಂದ್ರ ಡೋಜರ್, ವಾಹನಗಳ ಚಾಲಕರು  ಎಂದಿನಂತೆ ಸದ್ರಿ ವಾಹನಗಳನ್ನು ಯಾರ್ಡ್ ನಲ್ಲಿ ನಿಲ್ಲಿಸಿ ವಾಹನಗಳ ಬೀಗದ ಕೈಯನ್ನು ನನ್ನಲ್ಲಿ ನೀಡಿ  ಹೋಗಿದ್ದು, ಆ ವೇಳೆ ಸದ್ರಿ ಟಿಪ್ಪರ್ ಮತ್ತು ಹಿಟಾಚಿ, ಹಾಗೂ ಮಹಿಂದ್ರ ಡೋಜರ್ ವಾಹನದಲ್ಲಿದ್ದ ಬ್ಯಾಟರಿಗಳು ಯಥಾ ಸ್ಥಿತಿಯಲ್ಲಿದ್ದವು. ಮರುದಿನ ದಿನಾಂಕ 12-02-2024 ರಂದು ಬೆಳಿಗ್ಗೆ 8-00 ಗಂಟೆಗೆ ಪಿರ್ಯಾದಿದಾರರು ಯಾರ್ಡಿಗೆ ಬಂದಾಗ ಅಲ್ಲಿ ನಿಲ್ಲಿಸಿದ್ದ ವಾಹನಗಳ ಪೈಕಿ 1)KA 19 B 2296, ಮತ್ತು 2)KA 19 B 4209 .ನಂಬ್ರದ ಟಿಪ್ಪರ್ ಲಾರಿಗಳ 2 ಬ್ಯಾಟರಿಗಳು ಮತ್ತು Hyundai ಕಂಪನಿಯ ಹಿಟಾಚಿ ವಾಹನದ ಮೊಡಲ್ R140LC-9 ನಂಬ್ರ ವಾಹನದ 2 ಬ್ಯಾಟರಿಗಳು ಹಾಗೂ  1)KA 19 D 1130, ಮತ್ತು 2)KA 19 D 2853 ನಂಬ್ರದ ಮಹೀಂದ್ರ ಡೋಜರ್  ನ 2 ಬ್ಯಾಟರಿಗಳು ಅಳವಡಿಸಿದ್ದ ಸ್ಥಳದಲ್ಲಿ ಬ್ಯಾಟರಿಗಳು ಇರಲಿಲ್ಲವಾಗಿದ್ದು, .ಸದ್ರಿ ಬ್ಯಾಟರಿಗಳನ್ನು ಯಾರೋ ಕಳ್ಳರು  ದಿನಾಂಕ:11-02-2024 ರಂದು ಸಂಜೆ 6-00 ಗಂಟೆಯ ನಂತರ ದಿನಾಂಕ:12/2/2024 ರಂದು ಬೆಳಿಗ್ಗೆ 08-00 ಗಂಟೆಯ ಮದ್ಯಾವಧಿಯಲ್ಲಿ,  ಬ್ಯಾಟರಿಯ ವಯರ್ ಕನೆಕ್ಷನನ್ನು ಕಿತ್ತು ತೆಗೆದು  ಬ್ಯಾಟರಿಗಳನ್ನು ಕಳವು ಮಾಡಿ ಕೊಂಡು ಹೋಗಿರುವುದಾಗಿದೆ. ಅಂದಾಜು ಮೌಲ್ಯ 44,000/-ಆಗಬಹುದು.

 

 

Traffic North Police

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Wilson Joyel DSouza   ಇವರು  ದಿನಾಂಕ 13-02-2024 ರಂದು ಉಡುಪಿಯ ಚರ್ಚ್ ನಲ್ಲಿ ನಡೆಯುವ ಪ್ರೇಯರ್ ಮೀಟಿಂಗಿಗೆ ಅನಿಲ್, ಜೋಸ್ಲಿನ್, ಪ್ರೀಮಲ್ ಮತ್ತು ವೆನೀಶಾ ಎಂಬವರ ಜೊತೆಗೆ ಕಾರು ನಂಬ್ರ KA-19ME-1107 ರಲ್ಲಿ ಕುಳಿತುಕೊಂಡು ಮಂಗಳೂರುನಿಂದ ಉಡುಪಿಗೆ ಹೋಗುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 07:20 ಗಂಟೆಗೆ ಕೊಲ್ನಾಡು ಬೈಪಾಸ್ ಬಳಿ ತಲುಪುತ್ತಿದ್ದಂತೆಯೇ ಮುಂದಿನಿಂದ ಎಡಬದಿಯಲ್ಲಿ ಚಲಿಸುತ್ತಿದ್ದ ಟೈಲರ್ ಅಳವಡಿಸಿದ ಟ್ರಾಕ್ಟರ್ ದಿಢೀರನೆ ಬಲಬದಿಗೆ ಬಂದಾಗ ಕಾರು ಚಾಲಕ ವಿಲ್ಸನ್ ರೋಶನ್ ರವರು ನಿರ್ಲಕ್ಷತನದಿಂದ ಒಮ್ಮೆಲೇ ಕಾರಿನ ಬ್ರೇಕ್ ಹಾಕಿದ ಪರಿಣಾಮ ಕಾರು ಹತೋಟಿ ತಪ್ಪಿ ಎಡಬದಿಗೆ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೆನೀಶಾರವರ ಹಣೆಗೆ ಮತ್ತು ಮೂಗಿಗೆ ತರಚಿದ ರಕ್ತಗಾಯ, ಕುತ್ತಿಗೆಯ ಹಿಂಭಾಗ ಗುದ್ದಿದ ರೀತಿಯ ಗಾಯ, ಪ್ರೀಮಲ್ ರವರ ಬೆನ್ನು ಮೂಳೆಯ ಬಳಿ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಕಾರಿನಲ್ಲಿದ್ದ ಪಿರ್ಯಾದಿದಾರರು, ಅನಿಲ್, ಜೋಸ್ಲಿನ್ ಮತ್ತು ಕಾರು ಚಾಲಕ ವಿಲ್ಸನ್ ರೋಶನ್ ರವರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಎಂಬಿತ್ಯಾದಿ

 

Traffic North Police Station                                                  

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Praveen Karkera  ಇವರ ಸಹೋದರ ಹರೀಶ್ ಕರ್ಕೇರಾ (63 ವರ್ಷ) ಎಂಬವರು ಈ ದಿನ ದಿನಾಂಕ 13-02-2024 ರಂದು ಹೊಸಬೆಟ್ಟು ಪಡ್ಡೆಯಲ್ಲಿರುವ ಪಿರ್ಯಾದಿದಾರರ ಮನೆಗೆ ಬಂದವರು ವಾಪಾಸ್ಸು ಮನೆ ಕಡೆಗೆ ನಡೆದುಕೊಂಡು ಹೋಗುತ್ತಾ ಮದ್ಯಾಹ್ನ ಸಮಯ ಸುಮಾರು 3:15 ಗಂಟೆಗೆ ಮಂಗಳೂರಿನಿಂದ ಉಡುಪಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯನ್ನು ಹೊಸಬೆಟ್ಟು ಜಂಕ್ಷನ್ ಬಳಿ ದಾಟುತ್ತಿರುವಾಗ ಮಂಗಳೂರು ಕಡೆಯಿಂದ ಗ್ಯಾಸ್ ಟ್ಯಾಂಕರ್ ಲಾರಿ ನಂಬ್ರ  KA-01-AD-2930 ನೇಯದನ್ನು ಅದರ ಚಾಲಕ ಆರ್.ರಮೇಶ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಹರೀಶ್ ಕರ್ಕೇರಾರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಹರೀಶ್ ಕರ್ಕೇರಾರವರು ಡಾಮಾರು ರಸ್ತೆಗೆ ಬಿದ್ದು ಅವರ ತಲೆಗೆ ಗಂಬೀರ ಸ್ವರೂಪದ ರಕ್ತ ಗಾಯ, ಬಲ ತೊಡೆಯಲ್ಲಿ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

 

Kankanady Town PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೆಂದರೆ, ಪ್ರಕರಣದ  ಪಿರ್ಯಾದಿ Smt Dhanavanthi ಇವರು ದಿನಾಂಕ 13-02-2024 ರಂದು ಸಂಜೆ ತನ್ನ ಮನೆಯಿಂದ ಪರಮ ಜ್ಯೋತಿ ಮಂದಿರಕ್ಕೆ ಎಳನೀರು ತೆಗೆದುಕೊಂಡು ಹೋಗುತ್ತಿರುವ ಸಮಯ,  ಮಂಗಳೂರು ತಾಲೂಕು ಬಜಾಲ್ ಗ್ರಾಮದ ಜೆ ಎಮ್ ರೋಡ್ ಜಂಕ್ಷನ್ ಬಳಿ ತಲುಪಿದಾಗ ಸಮಯ ಸುಮಾರು 17-30 ಗಂಟೆಗೆ ಫಿರ್ಯಾದಿದಾರರ ಎದುರಿನಿಂದ ಜೆ ಎಮ್ ರೋಡ್ ರಸ್ತೆಯಲ್ಲಿ  ಕಪ್ಪು ಬಣ್ಣದ ಮೋಟಾರ್ ಸೈಕಲ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ಆರೋಪಿಗಳು,  ಪರಮಜ್ಯೋತಿ ಭಜನಾ ಮಂದಿರ ಕಡೆಗೆ ಹೋಗಿ ವಾಪಸ್ಸು ಹಿಂತಿರುಗಿ ಫಿರ್ಯಾದಿದಾರರ ಹತ್ತಿರ ನಿಧಾನವಾಗಿ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಬಂದು,  ಸಹ ಸವಾರ ಫಿರ್ಯಾದಿದಾರರ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ  ಸರಕ್ಕೆ ಕೈ ಹಾಕಿದಾಗ,   ಪಿರ್ಯಾದಿದಾರರು ನೆಲಕ್ಕೆ ಬಿದ್ದಿದ್ದು,  ನಂತರ ಆರೋಪಿಗಳಿಬ್ಬರು ಸೇರಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಜೆ.ಎಮ್ ರಸ್ತೆಯ ಕಡೆಗೆ ಹೋಗಿರುವುದಾಗಿದೆ. ಈ ಪರಿಣಾಮ ಪಿರ್ಯಾದಿದಾರರಮೂಗಿನ ಬಳಿ ಹಾಗೂ ತುಟಿಗೆ ರಕ್ತ ಗಾಯವಾಗಿದ್ದು, ಪಿರ್ಯಾದಿದಾರರು ಶಾಫಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಸುಲಿಗೆಯಾದ ಚಿನ್ನದ ಸರ 16 ಗ್ರಾಂನದ್ದಾಗಿದ್ದು, ಅಂದಾಜು ಮೌಲ್ಯ 80,000/- ರೂ ಆಗಬಹುದು. ಆರೋಪಿಗಳು ಸುಮಾರು 25 ರಿಂದ 30 ವರ್ಷ ಪ್ರಾಯದವರಾಗಿರುತ್ತಾರೆ. ಎಂಬಿತ್ಯಾದಿಯಾಗಿರುತ್ತದೆ

ಇತ್ತೀಚಿನ ನವೀಕರಣ​ : 15-02-2024 10:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080