ಅಭಿಪ್ರಾಯ / ಸಲಹೆಗಳು

CEN Crime PS

ಪಿರ್ಯಾದಿದಾರರ ಮೊಬೈಲ್ ವಾಟ್ಸಾಫ್ ಖಾತೆಗೆ ನೇ ದಿನಾಂಕ 04-03-2023 ರಂದು ಯಾರೋ ಅಪರಿಚಿತರ ವ್ಯಕ್ತಿಯ 9710449035 ಮೊಬೈಲ್ ನಂಬ್ರದಿಂದ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬರುತ್ತದೆ. ಸದ್ರಿ ಸಂದೇಶವು ಗೂಗಲ್ ಗೆ ಲಿಂಕ್ ಆಗಿದ್ದು ಸದ್ರಿ ಜಾಬ್ ನ ರೇಟಿಂಗ್ ಕೂಡಾ ಇರುತ್ತದೆ ಮತ್ತು ಸದ್ರಿ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರಿಗೆ ಟೆಲಿಗ್ರಾಂ ಆಪ್ ನ್ನು ಡೌನ್ ಲೋಡ್ ಮಾಡಲು ತಿಳಿಸಿದಂತೆ, ಪಿರ್ಯಾದಿದಾರರು ಸದ್ರಿ ಟೆಲಿಗ್ರಾಂ ಆಫ್ ನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಅದರಲ್ಲಿ ಪಿರ್ಯಾದಿದಾರರಿಗೆ ಹಣವನ್ನು ಆನ್ ಲೈನ್ ಮೂಲಕ ದ್ವಿಗುಣ ಮಾಡಲು 3 ಟಾಸ್ಕ್ ಮಾಡಲು ತಿಳಿಸಿದ್ದು, ಮೊದಲಿಗೆ ಸದ್ರಿ ವ್ಯಕ್ತಿಗೆ ರೂಪಾಯಿ 150/- ಹಣವನ್ನು ನಂತರ 2000/- ಹಣವನ್ನು ಹಾಕಲು ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರಿಗೆ 2,800/- ಹಣವು ವಾಪಾಸ್ಸು ಬಂದಿರುತ್ತದೆ. ಇದನ್ನು ನಂಬಿದ ಪಿರ್ಯಾದಿದಾರರು ನಂತರ  ಆರೋಪಿಯು ತಿಳಿಸಿದಂತೆ ಮತ್ತು ಕಳುಹಿಸಿಕೊಟ್ಟಂತಹ http://sk2.gfjfg456.one/- ಈ ಲಿಂಕ್ ನ್ನು ಒತ್ತಿದರು. ಅದರಲ್ಲಿ ಪಿರ್ಯಾದಿದಾರರ ಹೆಸರಿನಲ್ಲಿ  ಖಾತೆ ರಚಿಸಲು  ವಿವರನ್ನು ನಮೂದಿಸುವಂತೆ ತಿಳಿಸಿದಾಗ, ಪಿರ್ಯಾದಿದಾರರು  ಆರೋಪಿಯ ಮಾತನ್ನು ನಂಬಿ ಆರೋಪಿ ತಿಳಿಸಿದಂತೆ user name:shwe22  ಎಂದು ಕ್ರಿಯೇಟ್ ಮಾಡಿ, ಅದರ ಪಾಸ್ ವರ್ಡ್ Rajesh@26  ಎಂಬುದಾಗಿ ನಮೂದಿಸಿರುತ್ತಾರೆ.  ಬಳಿಕ ಆರೋಪಿಯು ಆ ಖಾತೆಗೆ ರೂಪಾಯಿ 2800/- ನ್ನು ಕಳುಹಿಸುವಂತೆ ತಿಳಿಸಿದ್ದು, ಅದನ್ನು ಪಿರ್ಯಾದಿದಾರರು ಪಾವತ್ತಿಸುತ್ತಾರೆ. ನಂತರ UPI ID basant2233@barodampay ನ್ನು ಕಳುಹಿಸಿ 9000/- ನ್ನು ಕಳುಹಿಸುವ ಟಾಸ್ಕ್ ನೀಡಿದಂತೆ, ಅದಕ್ಕೆ ಪಿರ್ಯಾದಿದಾರರು ರೂಪಾಯಿ 9000/- ವನ್ನು ಕಳುಹಿಸಿರುತ್ತಾರೆ. ನಂತರ ಇದೇ ಟಾಸ್ಕ್ ನ್ನು ಮುಂದುವರಿಸಲು ಆರೋಪಿಯು Account No. 923020001700077 and IFSC No. UTIB0004994 ವನ್ನು ನೀಡಿ ರೂಪಾಯಿ 25,000/- ವನ್ನು ಹಾಕಲು ತಿಳಿಸಿದಂತೆ ಪಿರ್ಯಾದಿದಾರರು ಹಣವನ್ನು ಹಾಕಿರುತ್ತಾರೆ. ಆ ಬಳಿಕ ಆರೋಪಿಯು ವಿವಿಧ ಬ್ಯಾಂಕ್ ಗಳ ಖಾತೆ ನಂಬರ್ ಮತ್ತು ಐಎಫ್.ಎಸ್.ಸಿ ಕೋಡ್ ನೀಡಿ ಅರ್ಜಿದಾರರಿಂದ ದಿನಾಂಕ 04-03-2023 ರಿಂದ 08-03-2023ರ ವರೆಗೆ ಪಿರ್ಯಾದಿದಾರರ ಐಸಿಐಸಿಐ ಬ್ಯಾಂಕ್ ಖಾತೆ ನಂಬರ್  ನೇದರಿಂದ ಆರೋಪಿತನ ಏಕ್ಸೀಸ್ ಬ್ಯಾಂಕ್, ಐಡಿಎಫ್ ಸಿ, ಯಸ್ ಬ್ಯಾಂಕ್  ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 15,34,000/- ಹಣವನ್ನು ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Traffic South Police Station              

ದಿನಾಂಕ:12-03-2023 ರಂದು ಪಿರ್ಯಾದಿದಾರರಾದ ಅಬ್ದುಲ್ ಹಮೀದ್ (72 ವರ್ಷ) ರವರು ಕಣ್ಣಿನ ಪರೀಕ್ಷೆಗಾಗಿ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಲು ಮನೆಯಾದ ನಾಗೂರಿಯಿಂದ ಪಡೀಲ್ ಕಡೆಗೆ ಪಿರ್ಯಾದಿದಾರರು ಅವರ ಬಾಬ್ತು ಸ್ಕೂಟರ್ ನಂಬ್ರ KA-19-HL-9474 ನೇದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 06:00 ಗಂಟೆಗೆ ರಾ.ಹೆ-73 ರ ಫಸ್ಟ್ ನ್ಯೂರೋ ಆಸ್ಪತ್ರೆಯ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಪಡೀಲ್ ಕಡೆಯಿಂದ ಬಿ.ಸಿ ರೋಡ್ ಕಡೆಗೆ ಹೋಗುತ್ತಿದ್ದ ಕಾರು ನಂಬ್ರ KA-19-MM-1510 ನೇದನ್ನು ಅದರ ಚಾಲಕರಾದ ಶ್ರೀಮತಿ ಉಮಾಭಟ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಸ್ಕೂಟರ್ ನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದರು ಈ ಅಪಘಾತದ ಪರಿಣಾಮ ಅವರ ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿ ಮೂಳೆ ಮುರಿತವಾಗಿರುತ್ತದೆ, ಕೂಡಲೇ ಪಿರ್ಯಾದಿದಾರರನ್ನು ಅಪಘಾತಪಡಿಸಿದ ಕಾರಿನ ಚಾಲಕರು ಅಪಘಾತ ಪಡಿಸಿದ ಕಾರಿನಲ್ಲಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ಪಿರ್ಯಾದಿದಾರರನ್ನು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

2) ದಿನಾಂಕ:12-03-2023 ರಂದು ಪಿರ್ಯಾದಿದಾರರ ತಮ್ಮನಾದ ಮೊಹಮ್ಮದ್ ಫಾರೂಕ್ (37 ವರ್ಷ) ರವರು ಮೋಟಾರ್ ಸೈಕಲ್ ನಂಬ್ರ: KA-19-HG-9647 ನೇದನ್ನು ಸವಾರಿಕೊಂಡು ಮುಡಿಪು ಕಡೆಯಿಂದ ದೇರಳಕಟ್ಟೆ ಕಡೆಗೆ ಬರುತ್ತಿರುವ ಸಮಯ ಸುಮಾರು ರಾತ್ರಿ 7-30 ಗಂಟೆಗೆ ಅಸೈಗೋಳಿ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಮೊಹಮ್ಮದ್ ಫಾರೂಕ್ ನ್ನು ಮೋಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ಮೋಟಾರ್ ಸೈಕಲ್ ನ ನಿಯಂತ್ರಣ ಕಳೆದುಕೊಂಡು ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು ಆತನ ಎಡಕೈಗೆ ಮೂಳೆ ಮುರಿತದ ಗಾಯ,ತಲೆಗೆ ಗುದ್ದಿದ ರೀತಿಯ ಗಂಭೀರ ಸ್ವರೂಪದ ಗಾಯ ಹಾಗೂ ಮೂಗಿಗೆ ರಕ್ತ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿದ್ದು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

Ullal PS

ದಿನಾಂಕ. 12-3-2023 ರಂದು ಮುಂಜಾನೆ 6-15ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕು ಕೋಟೆಕಾರು ಗ್ರಾಮದ ಕೋಟೆಕಾರು    ಸರಕಾರಿ  ಪ್ರೌಢಶಾಲೆಯ ಎದುರು ಇರುವ ಖಾಲಿ ಜಾಗದಲ್ಲಿ ಪ್ಲಾಸ್ಟಿಕ್ಚೀಲದಲ್ಲಿತುಂಬಿಸಿದ್ದ ಸುಮಾರು 250 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನಆರೋಪಿಯಾದ ಆಸೀಫ್ (40) ಎಂಬತಾನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗಿರಾಕಿಗಳಿಗೆ ಮಾರಟ ಮಾಡಲು ಕೈಯಲ್ಲಿ ಹಿಡಿದುಕೊಂಡು ನಿಂತುಕೊಂಡಿರುವುದಾಗಿ  ಬಂದ  ಖಚಿತ ಮಾಹಿತಿ ಮೇರೆಗೆ ಪ್ರಕರಣದ ಫಿರ್ಯಾದಿದಾರರಾದ ಕೃಷ್ಣ ಕೆ.ಹೆಚ್ಪಿಎಸ್ಐ ಉಳ್ಳಾಲ ಠಾಣೆ ರವರು ಸಿಬ್ಬಂದಿಗಳಾದ  ಅಕ್ಬರ್ ಯಡ್ರಾಮಿರವರನ್ನು ಮತ್ತು ಅಶೋಕ್  ಜೊತೆಯಲ್ಲಿ ಕರೆದುಕೊಡು  ಪತ್ತೆ ಹಚ್ಚಿದ್ದು ಸದ್ರಿ  250 ಗ್ರಾಂ ತೂಕದ ಮಾದಕ ವಸ್ತು ಗಾಂಜಾದ ಅಂದಾಜು ಮೌಲ್ಯ ರೂ.10000 /- ಆಗಬಹುದು ಎಂಬಿತ್ಯಾದಿ. ಈ ಬಗ್ಗೆ  ಆರೋಪಿಯ ವಿರುದ್ಧ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ. 

 Konaje PS

ಪಿರ್ಯಾದಿ Satish Pol ದಾರರು ಸುಮಾರು 5 ವರ್ಷಗಳಿಂದ IL&FS ಕಂಪೆನಿಯಲ್ಲಿ ಎಡ್ಮಿನ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ಸದ್ರಿ ಸಂಸ್ಥೆಯ ಕೋಚಿ ಕೂಟಾಂಡ  ಬೆಂಗಳೂರು ಮಂಗಳೂರು ಪ್ರೋಜೆಕ್ಟ್ ನ ಕಾಮಗಾರಿಯು ಮಂಗಳೂರು ತಾಲೂಕು ಹರೇಕಳ ಗ್ರಾಮದ ಇನ್ನೋಳಿ ಎಂಬಲ್ಲಿ ಮೇ 2019 ರಿಂದ ಮೇ ಫೆಬ್ರವರಿ 20 ರವರೆಗೆ ನಡೆದಿರುತ್ತದೆ. ಆ ಸಮಯ ಸೈಟಿನಲ್ಲಿ ಕಾಮಗಾರಿ ಮಾಡಲು ಸಾಮಗ್ರಿಗಳನ್ನು ಇಡಲಾಗಿರುತ್ತದೆ. ಮಾರ್ಚ್ 2020 ರಿಂದ ಮಾರ್ಚ್ 21 ರವರೆಗೆ ಮೆಂಟೆನೆನ್ಸ್ ಅವಧಿಯಿದ್ದು ಬಳಿಕ ಕೋವಿಡ್-19 ಇದ್ದುದರಿಂದ ಹರೇಕಳ ಗ್ರಾಮದ ಇನ್ನೋಳಿ ಎಂಬ ಸೈಟಿನಲ್ಲಿ ಕಾರ್ಯನಿರ್ವಹಿಸುವರೇ ಇಟ್ಟಿದ್ದ 1)Break tank – 01 no 2)24 Inches carbon steel pipe - 45 Meter 3)6 Inches carbon steel pipe -700 Meter 4)Mud Mate- 03 Nos ಸಾಮಗ್ರಿಗಳನ್ನು ಸಾಗಿಸಲು ಸಾಧ್ಯವಾಗಿರುವುದಿಲ್ಲ ಈ ಸೊತ್ತುಗಳನ್ನು ದಿನಾಂಕ 03-10-2021 ರಿಂದ 31-12-2021 ಮದ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತುಗಳ ಅಂದಾಜು ಮೌಲ್ಯ 30 ಲಕ್ಷ ಆಗಬಹುದು. ಕಳವಾದ ಸೊತ್ತುಗಳ ಬಗ್ಗೆ ಸೈಟಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ, ಸಬ್ ಕಾಂಟ್ರ್ಯಾಕ್ಟರ್ ವರಲ್ಲಿ ವಿಚಾರಿಸಿದರೂ ಈವರೆಗೂ ಪತ್ತೆಯಾಗದೇ ಇರುವುದರಿಂದ ಹಾಗೂ IL&FS ಕಂಪೆನಿಯ ಮೇಲಾಧಿಕಾರಿಯವರಲ್ಲಿ ಚರ್ಚಿಸಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ  ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 13-03-2023 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080