ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

CEN Crime PS

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ SMT. MAMATHA S  ಇವರು ಅಂಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ:08-11-2019 ರಂದು ಪಿರ್ಯಾದಿದಾರರ ಜಿ ಮೇಲ್ ಐಡಿ mharsha23@gmail.com ನೇದಕ್ಕೆ joseph.g@70trades.com ಎಂಬ ಮೇಲ್ ನಿಂದ ಸಂದೇಶ ಬಂದಿದ್ದು 70 trades ಕಂಪೆನಿಯಾ ಪರಿಚಯ ಮಾಡಿಸಿ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದೆಂದು ಹೇಳಿ  ಪಿರ್ಯಾದಿದಾರರನ್ನು ಕಂಪೆನಿಗೆ ಜಾಯಿನ್ ಮಾಡಿಸಿ ಪಿರ್ಯಾದಿದಾರರಿಂದ ರೂ.16,000 ಗಳನ್ನು ಹೂಡಿಕೆ ಮಾಡಿಸಿರುತ್ತಾರೆ. ನಂತರ 4 ತಿಂಗಳ ನಂತರ ಪಿರ್ಯಾದಿದಾರು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಮೇತಾ ವಾಪಾಸ್ಸು ನೀಡಿರುತ್ತಾರೆ.  ಈ ಸಮಯದಲ್ಲಿ 70 Trades  ಕಂಪೆನಿಯಲ್ಲಿ ಜೋಸೆಫ್ ರವರು ಪರಿಚಯವಾಗಿದ್ದು ಆತನ ಇನ್ನೊಂದು ಫರ್ಮ್ ನ ಎಂಡಿ ಸಿಂಥೆಲ್ ಎಂಬವರನ್ನು ಪರಿಚಯ ಮಾಡಿದ್ದು ಆತನು ಪಿರ್ಯಾದಿದಾರರಿಗೆ ವಿದೇಶದಲ್ಲಿ ತನ್ನ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿ  ವೀಸಾವನ್ನು ಕೂಡಾ ತಾನೆ ಮಾಡಿಕೊಡುವುದಾಗಿ ಆಫರ್ ನ್ನು ನೀಡಿದ್ದು ಅದಕ್ಕಾಗಿ ಪಿರ್ಯಾದಿದಾರರು ಅವರ ಎಲ್ಲಾ ದಾಖಲಾತಿಗಳನ್ನು ನೀಡಿರುತ್ತಾರೆ ಅದಕ್ಕಾಗಿ 2,50,000/- ರೂಗಳನ್ನು ನೀಡಬೇಕಾಗಿ ತಿಳಿಸಿದ್ದು, ಪಿರ್ಯಾದಿದಾರರಿಗೆ ಅಷ್ಟು ಹಣವನ್ನು ಒಮ್ಮೇಲೇ ನೀಡಲು ಸಾಧ್ಯವಾಗದ ಕಾರಣ ಹಂತ ಹಂತವಾಗಿ ನೀಡಲು ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು 2,50,000/- ರೂ ಗಳನ್ನು ಅವರ ಹೆಚ್ ಡಿ ಎಫ್ ಸಿ ಬ್ಯಾಂಕ್ ಖಾತೆ ಯಿಂದ ದಿನಾಂಕ:15-01-2021 ರಂದು  ಹಂತ ಹಂತವಾಗಿ ವರ್ಗಾವಣೆ ಮಾಡಿರುತ್ತಾರೆ.2023 ಜನವರಿಯಲ್ಲಿ ರಲ್ಲಿ ವೀಸಾ  ರೆಡಿಯಾಗಿದ್ದು ಪ್ಯಾಸೆಂಜರ್ ಕ್ಯಾಪಾಸಿಟಿ ತೋರಿಸಬೆಕೆಂದು ಪಿರ್ಯಾದಿದಾರರಿಗೆ ಸಿಂಥೆಲ್ ತಿಳಿಸಿದ್ದು ಅದಕ್ಕಾಗಿ ಹೆಚ್ಚಿನ ಹಣವನ್ನು ಪಾವತಿಸಬೇಕೆಂದು ತಿಳಿಸಿದ್ದು ಅವರು ಕಳುಹಿಸಿಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ದಿನಾಂಕ:15-01-2021 ರಿಂದ ದಿನಾಂಕ:11-10-2023 ರವರೆಗೆ ಒಟ್ಟು 10,35,500/- ರೂಗಳನ್ನು ವರ್ಗಾಯಿಸಿಕೊಂಡು ವೀಸಾವನ್ನು ನೀಡದೆ ಹಣವನ್ನು ವಾಪಾಸ್ಸು ನೀಡದೆ ಪಿರ್ಯಾದಿದಾರರಿಗೆ ಮೋಸಗೊಳಿಸಿರುತ್ತಾರೆ ಎಂಬಿತ್ಯಾದಿ

 

Traffic North Police

 ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Shivagangavva Nagappa Jyalavadagi ಇವರು ದಿನಾಂಕ 13/03/2024 ರಂದು ಬೆಳಿಗ್ಗೆ ಧೆರೆಬೈಲ್ ಕೊಂಚಾಡಿಯ ಮಧರಾ ಅಪಾರ್ಟಮೆಂಟ್ ಕಡೆಗೆ ಪಿರ್ಯಾದಿದಾರರು ಹಾಗೂ ಅವರ ಪರಿಚಯದ ಕರಿಯಪ್ಪ ಎಂಬುವರೊಂದಿಗೆ ನಡೆದು ಕೊಂಡು ಬರುತ್ತಿರುವಾಗ ಸಮಯ ಸುಮಾರು 12.30 ಗಂಟೆಗೆ Vrindavan Nursury School ಹತ್ತಿರ ತಲುಪುತ್ತಿದ್ದಂತೆ ಎದುರಿನಿಂದ KA-19-AE-3393 ನಂಬ್ರದ Bajaj Maxima 3 Wheeler Auto ಟೆಂಪೋ ವಾಹನದ ಚಾಲಕ Ibrahim Kaleel ಎಂಬುವರು ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರಾ ಬಲಬದಿಗೆ ಬಂದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಯ ಎಡ ಬದಿಯಲ್ಲಿದ್ದ ತೋಡಿಗೆ ಬಿದ್ದಿದ್ದು ಈ ಅಪಘಾತದಿಂದ ಪಿರ್ಯಾದಿದಾರರಿಗೆ ಬಲಕೈಯ ಮೊಣಗಂಟಿನ ಕೆಳಗೆ ಗುದ್ದಿದ ಗಾಯವಾಗಿದ್ದು,ಬಲಬದಿಯ ಭುಜದ ಹತ್ತಿರ ಹಾಗೂ ಎದೆಗೆ ಗುದ್ದಿದ ಗಾಯವಾಗಿದು ಹಾಗೂ ಹಣೆಯ ಮೇಲೆ ಗುದ್ದಿದ ರಕ್ತಯವಾಗಿದ್ದು ಅಲ್ಲಲ್ಲಿ ತರಚಿದ ಗಾಯವಾಗಿ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

Traffic South Police Station.

ಪಿರ್ಯಾದಿ MOHAMMAD BASHEER ಇವರು  ದಿನಾಂಕ:13-03-2024 ರಂದು ಬೆಳಿಗ್ಗೆ 5-45 ಗಂಟೆಗೆ ಕಲ್ಲಾಪು ನಲ್ಲಿರುವ ಮಸೀದಿಗೆ ರಾ.ಹೆ 66 ಮಂಗಳೂರಿನಿಂದ ತೊಕ್ಕೊಟ್ಟು ಹೋಗುವ ರಸ್ತೆಯ ಪಕ್ಕದಲ್ಲಿ ನಿಂತಿರುವ ಸಮಯ ಪಂಪವೆಲ್ ಕಡೆಯಿಂದ ತಲಪಾಡಿ ಕಡೆಗೆ ಹೋಗುತ್ತಿರುವ KA-19-HP-2124 ನೇ ಸ್ಕೂಟರ್ ಸವಾರ ಶಬೀರ್ (36) ರವರು ತನ್ನ ಸ್ಕೂಟರ್ ನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಿಂತಿರುವ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸದ ಪರಣಾಮ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟಿರುತ್ತಾರೆ.ಆಗ ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಸ್ಕೂಟರ್ ಸವಾರ್ ಪಿರ್ಯಾದಿದಾರರನ್ನು ಉಪಚರಿಸಿರುತ್ತಾರೆ.ಪಿರ್ಯಾದಿದಾರರಿಗೆ ಉಂಟಾದ ಗಾಯವನ್ನು ನೋಡಲಾಗಿ ಪಿರ್ಯಾದಿದಾರರ ಎಡಕಾಲಿಗೆ ಮೂಳೆ ಮುರಿತದ ಹಾಗೂ ತಲೆಗೆ ಗುದ್ದಿದ ಗಾಯ, ಬಲಕಾಲಿಗೆ ತರಚಿದ ಗಾಯವಾಗಿದ್ದು ನಂತರ ಆಟೋವೊಂದರಲ್ಲಿ ಕರೆದುಕೊಂಡು ಬಂದು ಸಹರಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾಧಿ

 

Traffic South Police Station                        

ಪಿರ್ಯಾದಿ YADAV  ಇವರು ದಿನಾಂಕ:11-03-2024 ರಂದು ರಾತ್ರಿ 9.30  ಗಂಟೆಗೆ ನಾಗಮೂಲೆ ಬುಬ್ಬುಸ್ವಾಮಿ ಜಾತ್ರೆಗೆ ನಡೆದುಕೊಂಡು ಹೋಗುತ್ತಿರುವ ಸಮಯ ಹರೇಕಳ DYFI ಬಸ್ಸುನಿಲ್ದಾಣದ ಸ್ವಲ್ಪ ಮುಂದೆ ಗ್ರಾಮ ಚಾವಡಿ ಹೋಗುವ ರಸ್ತೆಯಲ್ಲಿ KA-19-EY-6626 ನೇ ಬೈಕ್ ಸವಾರ ಮಹಮ್ಮದ್ ಇಕ್ಬಾಲ್ ರವರು ತಮ್ಮ  ಬೈಕನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು  ನಡೆದು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ್ದ ಪರಿಣಾಮ ಪಿರ್ಯಾದಿದಾರರು ಆಯಾ ತಪ್ಪಿ ರಸ್ತೆಗೆ ಬಿದ್ದಿದ್ದು ಎಡಕಾಲಿನ ಬಳಿಯ ಗಂಟಿನ ಬಳಿಗೆ ಗಾಯವಾಗಿರುತ್ತದೆ. ಆಗ ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಬೈಕ್ ಸವಾರ್ ಪಿರ್ಯಾದಿದಾರರನ್ನು ಉಪಚರಿಸಿರುತ್ತಾರೆನಂತರ ಆಟೋವೊಂದರಲ್ಲಿ ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಯೆನಾಪೋಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.

 

Traffic South Police Station                                 

ಪಿರ್ಯಾದಿ ಉಮೇಶ್ ಶೆಟ್ಟಿ (61) ರವರು  ದಿನಾಂಕ:13-03-2024 ರಂದು ಬೆಳಿಗ್ಗೆ ಸಮಯ ಸುಮಾರು 05:30 ಗಂಟೆಗೆ ಕೋಟೆಕಾರು ಬೀರಿ ಜಂಕ್ಷನ್ ನಲ್ಲಿ  ರಾ.ಹೆ 66 ಮಂಗಳೂರು ಕಡೆಯಿಂದ  ತಲಪಾಡಿ ಕಡೆಗೆ ಹೋಗುವ  ರಸ್ತೆಯನ್ನು ದಾಟುತ್ತಿರುವ ಸಮಯ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಕಾರೊಂದನ್ನು ಅದರ  ಚಾಲಕನು ದುಡುಕುತನ ಹಾಗೂ ನಿರ್ಲಕ್ಷದಿಂದ ಚಲಾಯಿಸಿಕೊಂಡು  ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದು ಇದರ ಪರಿಣಾಮ ಪಿರ್ಯಾದಿದಾರರು  ರಸ್ತೆಗೆ ಎಸೆಯಲ್ಪಟ್ಟ ತಲೆಗೆ ಗಂಭೀರ ಸ್ವರೂಪದ ಗಾಯ ಹಾಗೂ ಎಡಗಾಲಿನ ಬೆರಳಿಗೆ ರಕ್ತಗಾಯವಾದವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ಆಟೋರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ  ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Mulki PS

ಪಿರ್ಯಾದಿ Shriketh Sapaliga ಇವರ ತಂದೆಯಾದ ರವೀಂದ್ರ ಸಫಳಿಗ ಪ್ರಾಯ 62 ವರ್ಷ ಎಂಬವರು ಮುಲ್ಕಿ ತಾಲೂಕು ಮನ್ನಬೆಟ್ಟು ಗ್ರಾಮದ ಉಲ್ಲಂಜೆ ಎಂಬಲ್ಲಿ  ಒಬ್ಬಂಟಿಯಾಗಿ ವಾಸವಾಗಿರುತ್ತಾರೆ ಇವರಿಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ದಿನಾಂಕ 02-03-2024 ರಂದು ಬೆಳಗ್ಗೆ 10-30 ಗಂಟೆಗೆ  ಹೋದವರು   ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ   ಎಂಬಿತ್ಯಾದಿಯಾಗಿರುತ್ತದೆ.

ಕಾಣೆಯಾದವರ ವಿವರ

ರವೀಂದ್ರ ಸಫಳಿಗ,  ಪ್ರಾಯ 62 ವರ್ಷ

ರವೀಂದ್ರ ಸಫಳಿಗ,  ಪ್ರಾಯ 62 ವರ್ಷ

ಸಾಧಾರಣ ಶರೀರ, ಎಣ್ಣೆ ಕಪ್ಪು ಮೈಬಣ್ಣ, ಎತ್ತರ 5’7, ಕನ್ನಡ, , ತುಳು, ಬಾಷೆ ಮಾತನಾಡುತ್ತಾರೆ,

ಮನೆಯಿಂದ ತೆರಳುವಾಗ ತಿಳಿ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್, ಬೂದು ಬಣ್ಣದ ಪ್ಯಾಂಟ್ ಹಾಗೂ ಕುತ್ತಿಗೆಯಲ್ಲಿ ಕಪ್ಪು ಬಣ್ಣದ ಕಟೀಲು ದೇವರ ಪದಕ ಲಾಕೆಟ್ ಧರಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 13-03-2024 10:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080