ಅಭಿಪ್ರಾಯ / ಸಲಹೆಗಳು

 

CEN Crime PS

 ದಿನಾಂಕ 07-01-2023 ರಂದು ಪಿರ್ಯಾದಿದಾರರಿಗೆ ಯಾರೋ ಅಪರಿಚಿತರ ವ್ಯಕ್ತಿಯು ಇನ್ಸ್ ಸ್ಟಾ ಗ್ರಾಮ್ ಮೂಲಕ ಪರಿಚಯವಾಗಿರುತ್ತಾರೆ. ನಂತರ ಸದ್ರಿ ವ್ಯಕ್ತಿಯು +447452358476 ಮೊಬೈಲ್  ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರ  ನೇದಕ್ಕೆ ಚ್ಯಾಟಿಂಗ್ ಮಾಡಲು ಪ್ರಾರಂಭಿಸಿರುತ್ತಾರೆ ನಂತರ ಪಿರ್ಯಾದಿದಾರರಲ್ಲಿ ಮದುವೆಯ ಪ್ರಸ್ತಾವನೆಯನ್ನು ಮಾಡಿರುತ್ತಾರೆ. ಪಿರ್ಯಾದಿದಾರರು ಆತನ ಮಾತಿಗೆ ಮರುಳಾಗಿ ಒಪ್ಪಿ ಚ್ಯಾಟಿಂಗ್ ಮಾಡಿರುತ್ತಾರೆ. ದಿನಾಂಕ 26-01-2023 ರಂದು ಆರೋಪಿಯು ತನ್ನ ಹುಟ್ಟಿದ ದಿನ ಎಂದೂ, ತನ್ನ ತಂದೆ ತಾಯಿ ಪಿರ್ಯಾದಿದಾರರನ್ನು ಮದುವೆಯಾಗಲು ಒಪ್ಪಿರುವುದಾಗಿಯೂ ತಿಳಿಸಿ ಅದರ ಪ್ರಯುಕ್ತ 1 ಕೆ.ಜಿ ಬಂಗಾರದ ಗಟ್ಟಿ, ರೂಪಾಯಿ 60,00,00 ಹಣ, ಪೌಚ್, ಹಾಗೂ ಇತರ ಸಲಕರಣಗಳನ್ನು ಸ್ಕಾಟ್ಲೆಂಟ್ ನಿಂದ ಕೊರಿಯರ್ ಮೂಲಕ ಕಳುಹಿಸಿರುವುದಾಗಿ ಫೋಟೋವನ್ನು  ಪಿರ್ಯಾದಿದಾರರಿಗೆ ಕಳುಹಿಸಿರುತ್ತಾರೆ.  ಇದಾದ ಮರುದಿನ ಮೊಬೈಲ್ ನಂಬ್ರ: +919667175286 ದಿಂದ ಡೆಲ್ಲಿ ಕಸ್ಟಂ ಅಧಿಕಾರಿಯೆಂದು ಕರೆ ಮಾಡಿ ಪಿರ್ಯಾದಿದಾರರಿಗೆ ಆರೋಪಿಯು ಕಳುಹಿಸಿದ ವಸ್ತುವಿನ ಬಗ್ಗೆ ಕಸ್ಟಂ ಚಾರ್ಜ್ ಕಟ್ಟಬೇಕೆಂದು ತಿಳಿಸಿದಂತೆ ಪಿರ್ಯಾದಿದಾರರು ಮೊದಲಿಗೆ ರೂಪಾಯಿ 75,000/- ವನ್ನು ಕಳುಹಿಸಿರುತ್ತಾರೆ. ನಂತರ ಆರೋಪಿತರು ಸದ್ರಿ ವಸ್ತುವಿನ ಬಗ್ಗೆ ಹಲವಾರು ಚಾರ್ಜಸ್ ಹಣವನ್ನು ಪಾವತ್ತಿಸಬೇಕೆಂದು ನಂಬಿಸಿ ದಿನಾಂಕ 26-01-2023 ರಿಂದ 03-03-2023 ರವರೆಗೆ ಹಂತ ಹಂತವಾಗಿ ರೂಪಾಯಿ 47,13,000/- ವನ್ನು ಗೂಗಲ್ ಪೇ, IMPS, NEFT, RTGS ಮೂಲಕ ವರ್ಗಾಯಿಸಿಕೊಂಡು ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ 

 

Mangalore East Traffic PS           

 ಪಿರ್ಯಾದಿದಾರರಾದ ಬಾನು ಭಕ್ತ್  ಕುಕಯ (54 ವರ್ಷ) ರವರು  ದಿನಾಂಕ 07-04-2023 ರಂದು ರಾತ್ರಿ ಸಮಯ ಸುಮಾರು 7.50 ಗಂಟೆಗೆ ಫಳ್ನೀರ್ ಸಿಟಿ ಫಾರ್ಮಾ ಮೆಡಿಕಲ್ ನ ಎದುರುಗಡೆ  ರಸ್ತೆ ದಾಟುತ್ತಿದ್ದಾಗ ಆವೇರಿ ಜಂಕ್ಷನ್ ಕಡೆಯಿಂದ ಪಳ್ನೀರು ಕಡೆಗೆ KL-60-0117 ನೊಂದಣಿ ನಂಬ್ರದ ಕಾರೊಂದನ್ನು ಅದರ ಚಾಲಕ ಜೇಮ್ಸ್ ಕುಟ್ಟಿ ಜೋಸೆಫ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ  ಪಿರ್ಯಾದಿದಾರರು ರಸ್ತೆಗೆ ಬಿದ್ದು,  ಬಲಕಾಲಿನ ಮೊಣಗಂಟಿಗೆ, ಬಲಕಾಲಿನ  ಮಣಿಗಂಟಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾದವರನ್ನು ಅಪಘಾತಪಡಿಸಿದ ಕಾರು ಚಾಲಕ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

    

 Mangalore East PS

ಪಿರ್ಯಾದಿದಾರರು ಸಹಾಯಕ ಇಂಜಿನಿಯರ್ ನೀರುಮಾರ್ಗ ಮೆಸ್ಕಾಂ ಶಾಖೆಯಲ್ಲಿ ಶಾಖಾಧಿಕಾರಿಯಾಗಿದ್ದು. ದಿನಾಂಕ: 09/03/2023 ರಂದು ಬೆಳಿಗ್ಗೆ ಸುಮಾರು 07:29 ಗಂಟೆಗೆ ಕುಲಶೇಖರ ಕೋರ್ಡೆಲ್ ಚರ್ಚ್ ಬಳಿ ಹಾದು ಹೋಗಿರುವ 11 ಕೆವಿ ಕುಡುಪು ಫೀಡರ್ (ಕುಲಶೇಖರ್ ಉಪ-ಕೇಂದ್ರ) ದ ಕಂಬಕ್ಕೆ KA-35-D-3179 ನೇ ಸಂಖ್ಯೆಯ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಜಖಂಗೊಂಡಿದ್ದು, ಲಾರಿ ಚಾಲಕನು ಡಿಕ್ಕಿ ಪಡಿಸಿದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೆ ಪರಾರಿಯಾಗಿರುತ್ತಾನೆ. ಇದರಿಂದಾಗಿ ಮೆಸ್ಕಾಂ ಕಂಪನಿಗೆ ಸುಮಾರು ರೂ. 28,884/- ಗಳಷ್ಟು ನಷ್ಟವುಂಟಾಗಿರುತ್ತದೆ. ಆದ್ದರಿಂದ ಸದ್ರಿ ಲಾರಿ ಚಾಲಕ ಹಾಗೂ  ಸದ್ರಿ ಲಾರಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಎಂಬಿತ್ಯಾದಿಯಾಗಿರುತ್ತದೆ.

Mangalore South PS                    

ಮಂಗಳೂರು ದಕ್ಷಿಣ ಪೊಲೀಸು ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಶೀತಲ್ ಅಲಗೂರು ದಿನಾಂಕ 13-04-2023 ರಂದು ಬೆಳಿಗ್ಗೆ 05-00 ಗಂಟೆಗೆ ಮಂಗಳೂರು ನಗರದ ವೆಲೆನ್ಸಿಯಾ ಸುವರ್ಣ ಲೇನ್ ಬಳಿಯ He-D- Wells  ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಸೈಯದ್ ರೋಷನ್ ಎಂಬಾತನು ಸುಮಾರು 1 ಕೆ.ಜಿ ಗಿಂತಲೂ ಅಧಿಕ ಪ್ರಮಾಣದ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ತನ್ನ ವಶದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಲಭ್ಯವಾಗಿರುತ್ತದೆ. ಆರೋಪಿತ ಸೈಯ್ಯದ್ ರೋಷನ್ ವಿರುದ್ದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

Moodabidre PS  

ಪಿರ್ಯಾದಿದಾರರ ತಂದೆ 55 ವರ್ಷ ಪ್ರಾಯದ ಈಶ್ವರ ಎಂಬುವರು ಪ್ರತಿ ದಿನವೂ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆಂದು ಹೋಗಿ ಬರುತ್ತಿದ್ದವರು ದಿನಾಂಕ: 09-04-2023 ರಂದು ಬೆಳಗ್ಗೆ 07.00 ಗಂಟೆಗೆ ತನ್ನ ಮನೆಯಿಂದ ಯಾರಿಗೂ ಹೇಳದೇ ಎಲ್ಲಿಗೋ ತೆರಳಿದವರು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿದ್ದು, ಪಿರ್ಯಾದಿದಾರರು ಮತ್ತು ಮನೆಯವರೆಲ್ಲಾ ಸೇರಿ ಹುಡುಕಾಡಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ   ಕಾಣೆಯಾದವರ ಚಹರೆ: 

ಹೆಸರು:ಈಶ್ವರ 55 ವರ್ಷ ಪ್ರಾಯ

ಮೈಬಣ್ಣ: ಎಣ್ಣೆಕಪ್ಪು ಮೈಬಣ್ಣ

ಮುಖ: ದುಂಡು ಮುಖ, ಕಪ್ಪು ಮೀಸೆ

ಎತ್ತರ: 5.3 ಅಡಿ   

ಜಾತಿ: ಭೋವಿ      

ಧರಿಸಿದ ಉಡುಪು: ನೀಲಿ ಬಣ್ಣದ ಅರ್ಧತೋಳಿನ ಶರ್ಟ್, ಕಪ್ಪು ಪ್ಯಾಂಟ್

Mangalore East Traffic PS                                              

 ಪಿರ್ಯಾದಿದಾರರಾದ ಅಣ್ಣಪ್ಪ ನಾಯ್ಕ ಎಸ್ ಜಿ (26) ರವರು ದಿನಾಂಕ 12-04-2023 ರಂದು ಕೆ ಪಿ ಟಿ ಜಂಕ್ಷನ್ ಬಳಿ ಎಳನೀರು ವ್ಯಾಪಾರ ಮಾಡಿಕೊಂಡಿದ್ದಾಗ ಪ್ರತಿ ದಿನದಂತೆ ಈ ದಿನವು ಕೂಡ ಪಿರ್ಯಾದಿದಾರರ ಪರಿಚಯದ ಕಮಲಾಕ್ಷ ಎಂಬವರು ತನ್ನ ಮನೆಯಿಂದ ವಾಕಿಂಗ್ ಮಾಡಿಕೊಂಡು ಬಂದಿದ್ದು, ಪಿರ್ಯಾದಿದಾರರನ್ನು ಮಾತನಾಡಿಸಿಕೊಂಡು ನಂತರ ಸಮಯ ಸುಮಾರು 19:15 ಗಂಟೆಗೆ ಕೆಪಿಟಿ ಕಡೆಯಿಂದ ಎಸ್ ಕೆ ಎಸ್ ಅಪಾರ್ಟಮೆಂಟ್ ಕಡೆಗೆ ಸಾಗಿರುವ ರಸ್ತೆಯ ಬಳಿ ಇರುವ   ಗಣೇಶ ಬಸ್ಸ್  ಯಾರ್ಡ್ ಎದುರುಗಡೆಯಿಂದ ಡಿವೈಡರ್ ದಾಟಿಕೊಂಡು ರಾ.ಹೆ 66 ರ ಎಸ್ ಕೆ ಎಸ್ ಅಪಾರ್ಟಮೆಂಟ್ ಕಡೆಯಿಂದ ಕೆ ಪಿ ಟಿ ಜಂಕ್ಷನ್ ಕಡೆಗೆ ಸಾಗಿರುವ ರಸ್ತೆಯ ಅಂಚಿಗೆ ಬಂದು ತಲುಪ್ಪುತ್ತಿದ್ದಂತೆ ಎಸ್ ಕೆ ಎಸ್ ಅಪಾರ್ಟಮೆಂಟ್ ಕಡೆಯಿಂದ ಕೆ ಪಿ ಟಿ ಜಂಕ್ಷನ್ ಕಡೆಗೆ ನಂಬ್ರ ತಿಳಿಯದ ಬಿಳಿ ಬಣ್ಣದ ಕಾರೊಂದನ್ನು ಅದರ ಚಾಲಕ ಅಪಾಯಕಾರಿಯಾಗಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ನಿರ್ಲಕ್ಷತನದಿಂದ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಕಮಲಾಕ್ಷ (67) ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿಯವರು ರಸ್ತೆಗೆ ಬಿದ್ದಿದ್ದು, ಅಪಾಘತ ಪಡಿಸಿದ ಕಾರು ಚಾಲಕ ತನ್ನ ಕಾರನ್ನು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿರುತ್ತಾನೆ ಅಪಘಾತದಲ್ಲಿ ಕಮಲಾಕ್ಷರವರಿಗೆ ತಲೆ ಎಡ ಭಾಗದಲ್ಲಿ ಗುದ್ದಿದ ನಮೂನೆಯ ರಕ್ತ ಗಾಯ, ಹೊಟ್ಟೆಯ ಎಡ ಭಾಗದಲ್ಲಿ ಗುದ್ದಿದ ಮತ್ತು ಆಳವಾದದ ರಕ್ತ ಗಾಯ, ಎಡ ಕೈ ಕೋಲು ಕೈ ಬಳಿ ಗುದ್ದಿದ ರಕ್ತ ಗಾಯ, ಬಲ ಕೈ ಮೊಣಗಂಟು ಬಲಕಾಲಿನ ಹೆಬ್ಬೆರಳು ಎಡ ಕಾಲಿನ ಮಣಿ ಗಂಟಿನ ಬಳಿ ತರಚು ಗಾಯಗಳಾಗಿದ್ದು ಸ್ಥಳ ದಲ್ಲಿಯೆ ಮೃತ ಪಟ್ಟಿರುವುದಾಗಿದೆ ಎಂಬಿತ್ಯಾದಿ.

 

Mangalore East Traffic PS           

ಪಿರ್ಯಾದುದಾರರಾದ ನಾಗೇಶ್ ಎ.ಪಿ ರವರು ದಿನಾಂಕ 12/04/2023 ರಂದು ತಮ್ಮ ಬಾಬ್ತು ಆಟೋ ರಿಕ್ಷಾ ನೋಂದಣಿ ಸಂಖ್ಯೆ KA-19-AB-8075 ನೇಯದನ್ನು ಚಲಾಯಿಸಿಕೊಂಡು ಕೈಕಂಬ ಕಡೆಯಿಂದ ನಂತೂರು ಕಡೆಗೆ ಇರುವ ರಾ.ಹೆ 73 ನೇಯದರಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 03-15 ಗಂಟೆಗೆ ಬಿಕರ್ನಕಟ್ಟೆ ಬಳಿಯ ದೋಹಾ ಸುಪರ್ ಬಜಾರ್ ಕಟ್ಟಡದ ಬಳಿ ತಲುಪುತ್ತಿದ್ದಂತೆ ಅವರ ಹಿಂಭಾಗದಲ್ಲಿ ಬರುತ್ತಿದ್ದ ಲಾರಿ ನೊಂದಣಿ ಸಂಖ್ಯೆ: KA-41-D-0375 ನೇಯದನ್ನು ಅದರ ಚಾಲಕ ಪುನೀತ್ ಎಂಬಾತನು ದುಡುಕುತನ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಾ ಆಟೋರಿಕ್ಷಾವನ್ನು ಬಲ ಭಾಗದಿಂದ ಓವರ್ ಟೇಕ್ ಮಾಡುವ ಭರದಲ್ಲಿ ಆಟೋರಿಕ್ಷಾದ ಬಲ ಹಿಂಭಾಗಕ್ಕೆ ಢಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾವು ಮುಂಭಾಗದಲ್ಲಿ ಹೋಗುತ್ತಿದ್ದ ಬಸ್ಸೊಂದಕ್ಕೆ ಢಿಕ್ಕಿಯಾಗಿ ಪಲ್ಟಿಯಾಗಿ ರಸ್ತೆಗೆ ಬಿದ್ದಿದ್ದು ಇದರಿಂದ ಪಿರ್ಯಾದಿದಾರರ ಎಡಕಿವಿಗೆ ರಕ್ತಗಾಯ, ಎಡಕಿವಿಯ ಮೇಲೆ ತಲೆಗೆ ತರಚಿದ ಗಾಯ, ಹಾಗೂ ಬೆನ್ನಿನ ಕೆಳಭಾಗದಲ್ಲಿ ತರಚಿದ ಗಾಯಗಳಾಗಿದ್ದು ಕೊಲಾಸೋ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ, ಹಾಗೂ ಆಟೋರಿಕ್ಷಾದ ಹಿಂಭಾಗ ಮತ್ತು ಮುಂಭಾಗ ಜಖಂಗೊಂಡಿರುತ್ತದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 21-08-2023 12:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080