ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore East Traffic PS    

             

ಪಿರ್ಯಾದಿದಾರರಾದ ಸತೀಶ್ ಭಟ್ ರವರ ಮಗ ಅರವಿಂದರವರು ದಿನಾಂಕ 12-04-2024 ರಂದು  KA-19-AA-4666 ನೇ ನಂಬ್ರದ ಬಸ್ಸಿನಲ್ಲಿ  ಶಕ್ತಿನಗರದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11:00 ಗಂಟೆಗೆ ಕುಲಶೆಖರ ಕೈಕಂಬ ದಲ್ಲಿರುವ ಪೆಟ್ರೋಲ್ ಪಂಪ್ ನಿಂದ ಸ್ವಲ್ಪ ಮುಂದೆ ಬಸ್ಸು ತಲುಪ್ಪುತ್ತಿದ್ದಂತೆ ಬಸ್ಸ್ ಚಾಲಕ ಮುಕೇಶ್ ಅಡ್ಡಾ ದಿಡ್ಡಿಯಾಗಿ ಅಜಾಗರೂಕತೆಯಿಂದ ಬಸ್ಸು ಚಲಾಯಿಸಿದರಿಂದ ಬಸ್ಸಿನಲ್ಲಿದ್ದ ಅರವಿಂದರವರು ಬಸ್ಸಿನ ಬಾಗಿಲಿನಿಂದ ರಸ್ತೆಗೆ ಬಿದ್ದು ಗಾಯಗೊಂಡವರನ್ನು  ನಗರದ ಕೋಲಾಸೋ ಆಸ್ಪತ್ರೆಗೆ  ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿದ್ದಾಗ, ಕೋಲಾಸೋ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ತಲೆಗೆ ಒಳ ಪೆಟ್ಟಾಗಿದ್ದು ಎಂದು ತಿಳಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ

 

 

Traffic North Police Station 

                       

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Ranjan ಇವರ ಸಹೋದರ ರಕ್ಷಣ್ (21 ವರ್ಷ) ಎಂಬವರು ಈ ದಿನ ದಿನಾಂಕ 13-04-2024 ರಂದು ತನ್ನ ಸ್ನೇಹಿತ ನಿಕಿತ್ ಎಂಬವರ ಬಾಬ್ತು ಸ್ಕೂಟರ್ ನಂಬ್ರ KA-19-HM-3466 ನೇಯದನ್ನು ಸವಾರಿ ಮಾಡಿಕೊಂಡು ಬೈಕಂಪಾಡಿ ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 10:15 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಣಂಬೂರು MCF ಅಮೋನಿಯ ಪ್ಲಾಂಟಿನ ಎರಡನೇ  ಗೇಟಿನ ಎದರು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಂತಯೇ ಹಿಂದಿನಿಂದ ಅಂದರೆ ಕೂಳೂರು ಕಡೆಯಿಂದ ಪಣಂಬೂರು ಕಡೆಗೆ ಲಾರಿ ನಂಬ್ರ KA-19-B-2065 ನೇಯದನ್ನು ಅದರ ಚಾಲಕ ಪಿ.ಎ. ಖಾದರ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ರಸ್ತೆಯ ಎಡಬದಿಗೆ ಚಲಾಯಿಸಿಕೊಂಡು ಬಂದು ರಕ್ಷಣ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿನ ಬಲ ಭಾಗದ ಹ್ಯಾಂಡಲಿಗೆ ಡಿಕ್ಕಿ ಪಡಿಸಿದ ಪರಿಣಾಮ ರಕ್ಷಣ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಲಾರಿಯ ಎದುರಿನ ಎಡಭಾಗದ ಚಕ್ರವು ರಕ್ಷಣ್ರವರ ಬಲ ಕೋಲು ಕಾಲಿನ ಮೇಲೆ ಹರಿದು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ರಕ್ತ ಗಾಯ, ಅಲ್ಲದೇ ಕೈ, ಕಾಲಿಗೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಗಾಯಾಳು ರಕ್ಷಣ್ ರವರನ್ನು ಚಿಕಿತ್ಸೆಯ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ

 

 

Traffic South Police Station

               

ಪಿರ್ಯಾದಿದಾರರಾದ ಅಂಟೋನಿ ಲೂವೀಸ್ ಮೆನೆಜಸ್ (51) ರವರು ತನ್ನ ಬಾಬ್ತು KA-19EU-2887 ನೇ ಸ್ಕೂಟರ್ ನಲ್ಲಿ  ತನ್ನ ನೆರೆಕೆರಯವರಾದ ಹೆನ್ರಿ ಜೊಸ್ಸಿ ಮೊಂತೇರೊ (50) ರವರನ್ನು ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಮಂಗಳಜ್ಯೋತಿ  ಮಾರ್ಗವಾಗಿ ಕುಲಶೇಖರಕ್ಕೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 7.00 ಗಂಟೆಗೆ ಕುಡುಪು ದೇವಸ್ಥಾನದ ಬಳಿಯ ಸಾರ್ವಜನಿಕ ರಸ್ತೆಯಲ್ಲಿ  ಹೋಗುತ್ತಿದ್ದಂತೆ ಎದುರು ಕಡೆಯಿಂದ  ಅಂದರೆ ಕುಲಶೇಖರ ಕಡೆಯಿಂದ ವಾಮಂಜೂರು ಕಡೆಗೆ  KA-19-EL-4155  ನೇ ಮೋಟಾರು ಸೈಕಲ್ ಸವಾರ ನೀಲ್ ರೋಲ್ವಿನ್ ಡಿಸೋಜಾ ರವರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ  ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಎರಡು ಕೈಕಾಲುಗಳಿಗೆ ತರಚಿದ ರಕ್ತ ಗಾಯ, ಹೆನ್ರಿ ಜೊಸ್ಸಿ ಮೊಂತೇರೊ ರವರ ತಲೆಯ ಹಿಂಬದಿಗೆ ಗುದ್ದಿದ ರಕ್ತಗಾಯ, ಎರಡು ಕೈಗಳಿಗೆ ತರಚಿದ ರಕ್ತಗಾಯ, ಬಲಕಾಲಿನ ತೊಡೆ ಹಾಗೂ ಪಾದದ ಮೂಳೆ ಮುರಿತದ ಗಾಯವಾಗಿದ್ದು, ಮೋಟಾರು ಸೈಕಲ್ ಸವಾರ ನೀಲ್ ರೋಲ್ವಿನ್ ಡಿಸೋಜಾ ರವರಿಗೂ ಗಾಯವಾಗಿದ್ದು, ಗಾಯಾಳುಗಳು ಪಾದರ್  ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಎಂಬಿತ್ಯಾದಿ

 

 

Traffic South Police Station   

                              

 ಈ ಪ್ರಕರಣದ ಸಾರಾಂಶವೆನೇಂದರೆ ದಿನಾಂಕ 13-04-2024 ರಂದು ಸಂಜೆ ಸಮಯ ಸುಮಾರು 6.45 ಗಂಟೆಗೆ ಸೀಮಂತ ಕಾರ್ಯಕ್ರಮದ ಬಗ್ಗೆ ಅಗತ್ಯ ಕೆಲಸಕ್ಕಾಗಿ KA 19 ES 6990 ನೇ ಸ್ಕೂಟರ್ ನಲ್ಲಿ ಪಿರ್ಯಾದಿ Nithesh Kumar ಇವರು  ಹಾಗೂ ತನ್ನ ಪತ್ನಿ ರಾಜೇಶ್ವರಿ ರವರನ್ನು ಸಹಸವಾರಳಾಗಿ ಕುಳ್ಳಿರಿಸಿಕೊಂಡು ಪನೀರ್ ಚರ್ಚ್ ಬಳಿಯ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಪಿರ್ಯಾದಿದಾರರ ಹಿಂದಿನಿಂದ KA 19 C 4588 ನೇ ಟಾಟಾ 407 ವಾಹನದ ಚಾಲಕ ಶೇಖರ ಎಂಬುವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರರ ಪತ್ನಿ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲಕೈ, ಬುಜಕ್ಕೆ, ಮೊಣಕೈ ಗಂಟಿಗೆ ಮತ್ತು ಬಲಕೈಗೆ ತರಚಿದ ರಕ್ತಗಾಯಮತ್ತು ತೆಲೆಗೆ ಗುದ್ದಿದ ಗಾಯವಾಗಿದ್ದು, ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದು, ವೈಧ್ಯರು ಪರೀಕ್ಷಿಸಿ  ಚಿಕಿತ್ಸೆ ನೀಡಿ ಪಿರ್ಯಾದುದಾರರ ಪತ್ನಿಯವರನ್ನು ಒಳರೋಗಿಯಾಗಿ ದಾಖಲಿಸಿರುತ್ತಾರೆ ಮತ್ತು ಪಿರ್ಯಾದುದಾರರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ ಎಂಬಿತ್ಯಾದಿ

 

Traffic South Police Station     

                   

ಈ ಪ್ರಕರಣದ ಸಾರಾಂಶವೆನೇಂದರೆ ಪಿರ್ಯಾದಿ B M Pushparaj ಇವರು  ದಿನಾಂಕ 13-04-2024 ರಂದು ಕೆಲಸ ಮುಗಿಸಿಕೊಂಡು ಮನೆಗೆ ತಮ್ಮ ಬಾಬ್ತು KA 20 P 7089 ನೇ ಕಾರಿನಲ್ಲಿ ಹೊರಟು ತೋಕ್ಕೊಟ್ಟು ಜಂಕ್ಷನ್ ತಲುಪಿ ಕೊಲ್ಯ ಕಡೆಗೆ ಹೋಗುವರೇ ಸಮಯ ಸುಮಾರು 21.45 ಗಂಟೆಗೆ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಂತೆ ತೋಕ್ಕೊಟ್ಟು ಸಂಮೃದ್ದಿ ಬಿಲ್ಡಿಂಗ್ ಬಾಟಾ ಶೊ ರೂಂನ ಎದುರುಗಡೆ ತಲಪುತ್ತಿದ್ದಂತೆ ಬಾಟಾ ಶೊ ರೂಂನ ಎದುರುಗಡೆ ಪಾರ್ಕ್ ಮಾಡಿದ್ದ KA 19 MK 0623 ನೇ ಕಾರಿನ ಚಾಲಕಿ ಫಾತಿಮಾ ಹಣ ಎಂಬುವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ತನ್ನ ಕಾರನ್ನು ಇಮ್ಮೇಲೆ ಮುಖ್ಯ ರಸ್ತೆ ಬಂದ ಪರಿಣಾಮ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಮುಂಭಾಗದ ಎಡ ಬದಿಯ ಬಂಪರ್ ಗೆ, ಹೆಡ್ ಲೈಟ್, ಮುಂಭಾಗದ ಎಡ ಚಕ್ರ ಡ್ಯಾಮೇಜ್ ಆಗಿರುತ್ತದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 15-04-2024 09:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080