ಅಭಿಪ್ರಾಯ / ಸಲಹೆಗಳು

Traffic North Police Station

ಪಿರ್ಯಾದಿ LABEED AHEMED P P (20 ವರ್ಷ) ರವರು ದಿನಾಂಕ: 08-05-2023 ರಂದು ತನ್ನ ತಂದೆಯ ಬಾಬ್ತು KL-13-AF-1848 ನಂಬ್ರದ ಮೊಟಾರ್ ಸೈಕಲಿನಲ್ಲಿ MOHAMAD MIDHLAJ ಎಂಬಾತನನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ತನ್ನ ಕಾಲೇಜಿನಿಂದ A4 ಶೀಟ್ ಪೇಪರ್ ತರುವ ಸಲುವಾಗಿ ಕುಂಟಿಕಾನ ಜಂಕ್ಷನ್ ಕಡೆಗೆ ಹೋಗುತ್ತಾ ಮದ್ಯಾಹ್ನ ಸುಮಾರು 12:00 ಗಂಟೆಗೆ ಕುಂಟಿಕಾನ ಸರ್ವೀಸ್ ರಸ್ತೆಯ D ಮಾರ್ಟ್ ಸಮೀಪ ಸಮೀಪಿಸುತ್ತಿದ್ದಂತೆ ಕರುಣಾಕರ ಎಂಬಾತನು KA-21-M-4983 ನಂಬ್ರದ ಮಾರುತಿ ಓಮಿನಿ ಕಾರನ್ನು ಕುಂಟಿಕಾನ ಜಂಕ್ಷನ್ ಕಡೆಯಿಂದ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು D ಮಾರ್ಟ್ ಒಳಗೆ ಹೋಗುವ ಸಲುವಾಗಿ ಯಾವುದೇ ಸೂಚನೇ ನೀಡದೇ ಒಮ್ಮೆಲೇ ಬಲಬದಿಗೆ ತಿರುಗಿಸಿ ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರ MOHAMAD MIDHLAJ ರವರು ಮೋಟಾರ್ ಸೈಕಲ್ ಸಮೇತ ಸರ್ವೀಸ್ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿನ ತೊಡೆಯ ಭಾಗಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಸೊಂಟದ ಬಲಬದಿ ಹಾಗೂ ಬಲಕಾಲಿನ ಮೊಣಗಂಟಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಅಲ್ಲದೇ ಸಹಸವಾರ MOHAMAD MIDHLAJ ನಿಗೆ ಬಲಕೈಗೆ ಗುದ್ದಿದ ರೀತಿಯ ಗಾಯಗೊಳ್ಳಲು ಕಾರಣನಾಗಿರುತ್ತಾನೆ ಎಂಬಿತ್ಯಾದಿ ಸಾರಾಂಶ.

Traffic North Police Station                                             

ಪಿರ್ಯಾದಿ Smt Mamatha Shetty ಗಂಡನಾದ ದಿನೇಶ್ ಶೆಟ್ಟಿ (53 ವರ್ಷ) ರವರು ದಿನಾಂಕ: 11-05-2023 ರಂದು ಅವರ ಬಾಬ್ತು KA-19-HF-4383 ನಂಬ್ರದ ಬುಲೆಟ್ ಮೋಟಾರ್ ಸೈಕಲಿನಲ್ಲಿ ಕಿನ್ನಿಗೋಳಿ ಕಡೆಯಿಂದ ಮನೆ ಕಡೆಗೆ ಬರುತ್ತಾ ರಾತ್ರಿ ಸಮಯ ಸುಮಾರು 10:30 ಗಂಟೆಗೆ ಕಿನ್ನಿಗೋಳಿಯ ನಂದಿನಿ ಮಿಲ್ಕ್ ಬೂತ್  (ಕಾಪಿಕಾಡ್) ಬಳಿ ಸಮೀಪಿಸುತ್ತಿದ್ದಂತೆ ಕಟೀಲು ಕಡೆಯಿಂದ ಕಿನ್ನಿಗೋಳಿ ಕಡೆಗೆ KA-19-ML-5130 ನಂಬ್ರದ ಕಾರನ್ನು ಅದರ ಚಾಲಕ ABDUL KHADER ಎಂಬಾತನು ತುಂಬಾ ಫಾಸ್ಟ್ ಆಗಿ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಗಂಡ ದಿನೇಶ್ ಶೆಟ್ಟಿ ಯವರು ಮೋಟಾರ್ ಸೈಕಲ್ ಎಸೆಯಲ್ಪಟ್ಟು ಬಿದ್ದು ದಿನೇಶ್ ಶೆಟ್ಟಿಯವರಿಗೆ ಎರಡೂ ಕೈಗಳು, ಬಲಕೈ ಭುಜ, ಅಲ್ಲೆಯ ನಾಲ್ಕು ಎಲುಬುಗಳು, ಹಾಗೂ ಸೊಂಟದ ಬಲಬದಿ ಅಲ್ಲಲ್ಲಿ ಮೂಳೆ ಮುರಿತಗೊಂಡ ಗಂಬೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

Kavoor PS

ದಿನಾಂಕ:12/05/2023 ರಂದು ಬೆಳಿಗ್ಗೆ 11-೦೦ ಗಂಟೆಗೆ ಠಾಣೆಯಲ್ಲಿರುವಾಗ ಪಿರ್ಯಾದಿ RAGHU NAYAK ಬಾತ್ಮಿದಾರರಿಂದ ದೂರವಾಣಿಗೆ ಕರೆಯೊಂದು ಬಂದಿದ್ದು ಬಾತ್ಮಿದಾರರು ಪಿರ್ಯಾದಿದಾರರಲ್ಲಿ ಪಡುಶೆಡ್ಡೆ ರೇಲ್ವೆ ಅಂಡರ್ ಪಾಸ್ ಬಲಭಾಗದಲ್ಲಿ ಮರವೂರು ರೈಲ್ವೆ ಬ್ರಿಡ್ಜ್ ಕಡೆಗೆ ಹೋಗುವ ಮಣ್ಣು ರಸ್ತೆಯ ಪಕ್ಕದಲ್ಲಿ ಸುಮಾರು 30 ರಿಂದ 35 ವರ್ಷದ ಯುವಕರಿಬ್ಬರೂ ಯಾವುದೋ ಮಾದಕ ವಸ್ತುವನ್ನು ಇರಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಕಾಯುತ್ತಿರುವುದಾಗಿ ಮಾಹಿತಿ ನೀಡಿದಂತೆ ಸದ್ರಿ ಸ್ಥಳಕ್ಕೆ ಬೆಳಿಗ್ಗೆ ಸುಮಾರು 11.45 ಗಂಟೆಗೆ ತಲುಪುತ್ತಿದ್ದಂತೆ ಸ್ಕೂಟರ್ ಪಕ್ಕದಲ್ಲಿ ನಿಂತುಕೊಂಡಿದ್ದ ಯುವಕರಿಬ್ಬರೂ ಇಲಾಖಾ ವಾಹನವನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಕೂಡಲೇ ಸಿಬ್ಬಂದಿಗಳ ಸಹಾಯದಿಂದ ಅವರಿಬ್ಬರನ್ನು ಸುತ್ತುವರೆದು ಹಿಡಿದು ಆವರುಗಳನ್ನು ವಿಚಾರಿಸಿದಲ್ಲಿ ಸದ್ರಿ ಯುವಕರು ತಮ್ಮ ಹೆಸರು 1) ಇಮ್ರಾನ್ ಮತ್ತು 2) ರಮೀಜ್ ಎಂಬುದಾಗಿ ತಿಳಿಸಿರುತ್ತಾರೆ. ಎಂ.ಡಿ.ಎಂ.ಎ ಮಾದಕ ವಸ್ತುವನ್ನು ತೂಕ ಮಾಡಿ ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ತೂಕ ಮಾಪಕ ತಂದಿರುವುದಾಗಿ ಹಾಗೂ ಗಿರಾಕಿಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿರುತ್ತಾರೆ. ಅವರಿಬ್ಬರನ್ನು ಮಧ್ಯಾಹ್ನ 12.00 ಗಂಟೆಗೆ ವಶಕ್ಕೆ ಪಡೆದು ದಸ್ತಗಿರಿ ಕ್ರಮ ಜರೂಗಿಸಿ ನಂತರ ಎಂ.ಡಿ.ಎಂ.ಎ ಇರುವ ಪ್ಯಾಕೆಟ್ ನ್ನು ಡಿಜಿಟಲ್ ತೂಕ ಮಾಪಕ ಯಂತ್ರದಲ್ಲಿ ತೂಕ ಮಾಡಿ ನೋಡಿದಲ್ಲಿ ಜಿಪ್ ಕವರ್ ಸೇರಿ 09.36 ಗ್ರಾಂ ತೂಕದ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕಂಡು ಬಂದಿದ್ದು, ಇದರ  ಅಂದಾಜು ಮೌಲ್ಯ ಸುಮಾರು 27000/- ರೂಪಾಯಿ ಆಗಬಹುದು. ನಂತರ ಬಿಳಿ ಬಣ್ಣದ ನೊಂದಾಂಣಿ ಸಂಖ್ಯೆ ಕೆಎ.19 ಇ.ಟಿ.-1643 ಆಕ್ಟಿವಾ ಸ್ಕೂಟರ್ ಇದ್ದು ಇದರ ಅಂದಾಜು ಮೌಲ್ಯ 25೦೦೦/- ರೂಪಾಯಿ ಆಗಬಹುದು.  ಮುಂದಿನ ಕ್ರಮದ ಬಗ್ಗೆ ಮೇಲಿನ ಎಲ್ಲಾ ಸೊತ್ತುಗಳನ್ನು ಸ್ವಾಧೀನಪಡಿಸಿಳ್ಳಲಾಯಿತು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ, ಎಂಬಿತ್ಯಾದಿ.

 

Kankanady Town PS

ಪ್ರಕರಣದ ಪಿರ್ಯಾದಿ Mahammed ಮೊದಲನೇಯ ಪತ್ನಿ ಸುಮಾರು 14 ವರ್ಷಗಳ ಹಿಂದೆ  ಮೃತ ಪಟ್ಟ ಬಳಿಕ ಝೀನತ್ ಎಂಬವರನ್ನು ಮದುವೆಯಾಗಿರುತ್ತಾರೆ.   ಝೀನತ್ ರವರಿಗೆ ಮೊದಲು ಮಹಮ್ಮದ್ ಶರೀಫ್ ರವರ ಜೊತೆ ಮದುವೆಯಾಗಿದ್ದು,  ಅದರಲ್ಲಿ ನಿಯಾಲ್ ಹಾಗೂ ನೀಶಾ ಎಂಬ ಇಬ್ಬರು ಮಕ್ಕಳಿದ್ದರು. ನಿಯಾಲ್   (19 ವರ್ಷ) ಸೀಟ್ ವೆಲ್ಡಿಂಗ್ ಕೆಲಸ ಮಾಡಿಕೊಂಡು ಪಿರ್ಯಾದಿದಾರರ ಜೊತೆಯೇ  ವಾಸವಾಗಿದ್ದನು. ದಿನಾಂಕ 02-05-2023 ರಂದು ಸಂಜೆ 5-00 ಗಂಟೆ ಸುಮಾರಿಗೆ ನಿಯಾಲ್ ಮನೆಯಿಂದ  ಜ್ಯುಪಿಟರ್ ಸ್ಕೂಟರಿನಲ್ಲಿ ಹೋದವನು    ದಿನಾಂಕ 06-05-2023 ರಂದು ರಾತ್ರಿ 7-30 ಗಂಟೆಗೆ ಮನೆಗೆ ಬಂದು ಎರಡು ಶರ್ಟ್ ತೆಗೆದುಕೊಂಡು ಹೋಗಿರುತ್ತಾನೆ.  ದಿನಾಂಕ 07-05-2023 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಯಾವುದೋ ಒಂದು ನಂಬರಿನಿಂದ ನಿಯಾಲ್  ಪಿರ್ಯಾದಿದಾರರಿಗೆ  ಕರೆ ಮಾಡಿ  ತಾನು ಇಲಿಪಾಷಣ ಕುಡಿದಿದ್ದೇನೆ. ಉಡುಪಿಯಲ್ಲಿದ್ದೇನೆ.  ಎಂದು ಹೇಳಿದ್ದು,  ಪಿರ್ಯಾದಿದಾರರು ಆತನ ಮಾತನ್ನು ನಂಬದೆ  ಮನೆಗೆ ಬಾ ಎಂದು ಹೇಳಿರುತ್ತಾರೆ.   ಮಧ್ಯ ರಾತ್ರಿ  12-30 ಗಂಟೆಗೆ ಪಿರ್ಯಾದಿದಾರರ ಪರಿಚಯದ ಜುನೈದ್ ಎಂಬವನು ಪೋನ್ ಮಾಡಿ, ನಿಯಾಲ್ ಮತ್ತು ಆತನ ಪ್ರಿಯತಮೆ ಸಫ್ರೀನಾ (22)  ಇಲಿಪಾಷಣ ಸೇವಿಸಿ    ಮಂಗಳೂರಿನ ದೇರಳ ಕಟ್ಟೆಯಲ್ಲಿರುವ ಏನಪೋಯಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಚಾರ ತಿಳಿದು,  ದಿನಾಂಕ:08-05-2023 ರಂದು ಬೆಳಿಗ್ಗೆ   ಆಸ್ಪತ್ರೆಗೆ  ಹೋಗಿ ನೋಡಿದಾಗ, ನಿಯಾಲ್ ಹಾಗೂ  ಸಫ್ರೀನಾ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.               ನಿಯಾಲ್ ನ ಸ್ನೇಹಿತ  ಅಬ್ದುಲ್ ಸಮದ್  ಗೆ  ದಿನಾಂಕ 07-05-2023 ರಂದು ರಾತ್ರಿ 9-30 ಗಂಟೆಗೆ  ನಿಯಾಲ್ ಫೋನ್ ಮಾಡಿ, ನಿಯಾಲ್ ಹಾಗೂ ಸಫ್ರೀನಾ   ರಾತ್ರಿ 8-30 ಗಂಟೆಗೆ  ಪಂಪ್ ವೆಲ್   ಬಳಿ ಇಲಿಪಾಷಣ ಸೇವಿಸಿರುವ ವಿಚಾರ ತಿಳಿಸಿ, ದೇರಳಕಟ್ಟೆಗೆ ಅಬ್ದುಲ್ ಸಮದ್ ರವರ ಬಳಿ  ರಾತ್ರಿ 11-00 ಗಂಟೆಗೆ ಬಂದವರನ್ನು  ಅಬ್ದುಲ್ ಸಮದ್ ರವರು ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.  ಇಲಿಪಾಷಣ ಕುಡಿದ  ನಂತರ ನಿಯಾಲ್,  ಜುನೈದ್ ಗೆ ಬ್ಯಾರಿ ಭಾಷೆಯಲ್ಲಿ  ವಾಯೀಸ್ ಮೆಸೇಜ್ ನ್ನು ವಾಟ್ಸಪ್ ಮುಖಾಂತರ ಕಳುಹಿಸಿಕೊಟ್ಟಿದ್ದು, ಈ ವಾಯೀಸ್ ಮೆಸೇಜ್ ನಲ್ಲಿ ನನ್ನ ಪ್ರೀತಿಯನ್ನು ಯಾರೂ ಸಪೋರ್ಟ್ ಮಾಡಲಿಲ್ಲ. ಇಲಿ ಪಾಷಣ ಸೇವಿಸಿದ್ದೇವೆ.  ಜೀವಕ್ಕೆ. ಮರಣ  ಆದರೆ, ನಮ್ಮ ಮರಣಕ್ಕೆ  ಬಾರೆಕಾಡ್ ನ ಸಲಾಂ ಮತ್ತೆ ಮೊಯಿದಿನ್ ಮಗ  ಅನ್ವರ್ ರವರು ಕಾರಣರಾಗಿರುತ್ತಾರೆ.  ಅದಕ್ಕೆ ನ್ಯಾಯ ನೀವು ತೆಗೆದು ಕೊಡಬೇಕು. ಇತ್ಯಾದಿಯಾಗಿ ಇರುತ್ತದೆ.   ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಯಾಲ್   ದಿನಾಂಕ 12-05-2023 ರಂದು ಮುಂಜಾನೆ 05:58 ಗಂಟೆಗೆ  ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿರುತ್ತಾನೆ.  ಅದೇ ದಿನ    ಸಂಜೆ ಸಮಯ ಸಫ್ರೀನಾ (22) ಳು  ಚಿಕಿತ್ಸೆಗೆ ಸ್ಪಂದಿಸದೇ  ಮೃತ ಪಟ್ಟಿರುತ್ತಾರೆ.   ನಿಯಾಲ್ ಮತ್ತು  ಸಫ್ರೀನಾ  ಪರಸ್ಪರ ಪ್ರೀಸುತ್ತಿರುವುದಕ್ಕೆ ಬಾರೆಕಾಡ್ ನ ಸಲಾಂ ಮತ್ತೆ ಮೊಯಿದಿನ್  ಮಗ  ಅನ್ವರ್ ರವರು  ಹಿಂಸೆ ನೀಡಿರುವ ಪರಿಣಾಮದಿಂದ  ಅವರಿಬ್ಬರು   ಆತ್ಮಹತ್ಯೆ  ಮಾಡಲು  ಮನನೊಂದು ಇಲಿ ಪಾಷಣ  ಸೇವಿಸಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ.

Mangalore South PS  

ಪಿರ್ಯಾದಿ ಕೆ. ಮುಜೀಬ್ ಸೈಯದ್, ಪ್ರಾಯ 46 ವರ್ಷ ಎಂಬವರು ದಿನಾಂಕ 12-05-2023 ರಂದು  ಬೆಳಿಗ್ಗೆ 10-00 ಗಂಟೆಗೆ ಮನೆಯಿಂದ ತನ್ನ ಮಗಳು ಪಾತಿಮಾ ಸಹಲಳನ್ನು ವೈದ್ಯಕೀಯ ಚಿಕಿತ್ಸೆ ಬಗ್ಗೆ KA 19 ML 4730 ನೊಂದಣಿ ಸಂಖ್ಯೆಯ ಕಾರಿನಲ್ಲಿ ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ  ವೈಧ್ಯರ ಅಪಾಯಿಮೆಂಟ್ ಪಡೆದುಕೊಂಡು ವಾಪಾಸು ಅತ್ತಾವರದಲ್ಲಿರುವ ಮ್ಯಾಕ್ ಎಡ್ರಾಸ್ ಅಪಾರ್ಟಮೆಂಟ್ ಬಳಿಗೆ ಬಂದು ಮಗಳಿಗೆ ತಿಂಡಿ ಖರೀದಿಸಿ, ವಾಪಾಸು ತನ್ನ ಕಾರಿನ ಬಳಿಗೆ ಬೆಳಿಗ್ಗೆ ಸಮಯ 10-45 ಗಂಟೆಯ ಸುಮಾರಿಗೆ ಬಂದಾಗ, ಪಿರ್ಯಾದಿದಾರರ ಕಾರಿನ ಹಿಂಭಾಗ KL 14 ನಂಬ್ರದ ಕಾರು ನಿಂತಿದ್ದು, ಆ ಕಾರಿನಿಂದ ಪಿರ್ಯಾದಿದಾರರಿಗೆ ನೋಡಿ ಪರಿಚಯವಿರುವ ನೌಫಾಲ್ ಎಂಬಾತನು ಇಳಿದು ಪಿರ್ಯಾದಿದಾರರ ಬಳಿಗೆ ಬಂದು, ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ನಿಮ್ಮಲ್ಲಿ ಮಾತನಾಡಲು ಇದೆ, ನನ್ನ ಕಾರನ್ನು ಫಾಲೋ ಮಾಡುವಂತೆ ಹೇಳಿದನು. ಪಿರ್ಯಾದಿದಾರರು ಆರೋಪಿ ಹೇಳಿದಂತೆ ಆರೋಪಿಯ ಕಾರಿನ ಹಿಂದುಗಡೆ ತನ್ನ ಕಾರನ್ನು ಚಲಾಯಿಸಿಕೊಂಡು, ಹೋಗುತ್ತಾ ಎಸ್.ಎಲ್ ಮಥಾಯಿಸ್ ರಸ್ತೆಯಲ್ಲಿರುವ ಪಾರ್ಕ್ ಬಳಿ ತಲುಪಿದಾಗ ಆರೋಪಿಯು ತನ್ನ ಕಾರನ್ನು ನಿಲ್ಲಿಸಿ, ಕಾರಿನಿಂದ ಇಳಿದು ಪಿರ್ಯಾದಿದಾರರ ಕಾರಿನ ಬಳಿ ಬಂದು ಪಿರ್ಯಾದುದಾರರನ್ನು ಕಾರಿನಿಂದ ಕೆಳಗೆ ಇಳಿಸಿ ಆತನು ಪಿರ್ಯಾದಿದಾರರ ಕಾರಿನ ಡ್ರೈವಿಂಗ್ ಸೀಟ್ ನಲ್ಲಿ ಕುಳಿತು. ಪಿರ್ಯಾದುದಾರರನ್ನು ಪಕ್ಕದ ಸೀಟ್ ನಲ್ಲಿ ಕುಳ್ಳಿರಿಸಿ ಕಾರಿನ ಡೋರ್ ಲಾಕ್ ಮಾಡಿ, ಪಿರ್ಯಾದಿದಾರರನ್ನುದ್ದೇಶಿಸಿ “ನೀನು ದುಬೈಯಲ್ಲಿ ತುಂಬಾ ಹಣ ಸಂಪಾದನೆ ಮಾಡುತ್ತಿದ್ದೀಯಾ, ನನಗೆ 5 ಲಕ್ಷ ರೂಪಾಯಿ ಹಣ ಹಾಗೂ ಒಂದು ಕಾರನ್ನು ನೀಡುವಂತೆ ಒತ್ತಾಯ ಮಾಡಿದ್ದು ಪಿರ್ಯಾದುದಾರರು ನಿರಾಕರಿಸಿದಾಗ ನೌಪಾಲ್ ನು ಆತನಲ್ಲಿದ್ದ ಪಿಸ್ತೂಲ್ ತೆಗೆದು ಪಿರ್ಯಾದುದಾರರನ್ನು ಹೆದರಿಸಿ ಒತ್ತಾಯದಿಂದ ಪಿರ್ಯಾದಿದಾರರ ಬಳಿಯಿದ್ದ VIVO ಕಂಪನಿಯ ಮೊಬೈಲ್ ಸೆಟ್-01 ಪಿರ್ಯಾದುದಾರರ ಮಗಳಲ್ಲಿದ್ದ ಓಪೋ ಕಂಪನಿಯ ಮೊಬೈಲ್ ಸೆಟ್-01 ಪಿರ್ಯಾದಿದಾರಲ್ಲಿದ್ದ ನಗದು ಹಣ 18,000/- ಹಣವನ್ನು ಬಲತ್ಕಾರದಿಂದ ಕಿತ್ತುಕೊಂಡು ಪುಚ್ಚ ಎಂಬಾತನ ಜೊತೆ ಪಿರ್ಯಾದಿದಾರರನ್ನು ವಿವಿಧ ಕಡೆ ಸುತ್ತಾಡಿಸಿ ವಾಪಾಸು ಪಿರ್ಯಾದಿದಾರರ ಪ್ಲಾಟ್ ಬಳಿಗೆ ಬಂದು ಹೆಂಡತಿ ಮಕ್ಕಳನ್ನು ಹತ್ತಿರಕ್ಕೆ ಬರಮಾಡಿಸಿ ಅವರನ್ನು ಕೂಡ ಒತ್ತಾಯದಿಂದ ಕಾರಿನಲ್ಲಿ ಕುಳ್ಳಿರಿಸುವಂತೆ ಒತ್ತಾಯ ಮಾಡಿದಾಗ ಅವರುಗಳು ನಿರಾಕರಿಸಿದ್ದು ಈ ವೇಳೆ ಪಿರ್ಯಾದಿದಾರರು ಕೂಡಲೇ ಕಾರಿನಿಂದ ಇಳಿದು ತನ್ನ ಮಗಳನ್ನು ಕೂಡ ಕೆಳಗೆ ಇಳಿಸಿರುತ್ತಾರೆ. ನಂತರ ನೌಪಾಲ್ ಪಿರ್ಯಾದಿದಾರರ KA 19 ML 4730 ನೊಂದಣಿ ಸಂಖ್ಯೆಯ ಕಾರಿನೊಂದಿಗೆ ಹಾಗೂ ಪುಚ್ಚ ಎಂಬಾತನು ಕೆಲ್ 14 ನಂಬ್ರದ ಕಾರಿನಲ್ಲಿ ಪರಾರಿಯಾಗಿರುತ್ತಾರೆ. ಆರೋಪಿಗಳು ಪಿರ್ಯಾದಿದಾರರಿಂದ ಸುಲಿಗೆ ಮಾಡಿಕೊಂಡು ಹೋದ ಸೊತ್ತಿನ ಒಟ್ಟು  ಅಂದಾಜು ಮೌಲ್ಯ ರೂ 6,58,000/- ಆಗಬಹುದು. ಎಂಬಿತ್ಯಾದಿಯಾಗಿರುತ್ತದೆ.

                                 

 

                                 

 

 

ಇತ್ತೀಚಿನ ನವೀಕರಣ​ : 21-08-2023 12:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080