Crime report in Mangalore East Traffic PS
ಪಿರ್ಯಾದಿ ರಾಜಪ್ಪ, ಪ್ರಾಯ-50 ವರ್ಷ ಎಂಬವರು ಈ ದಿನ ದಿನಾಂಕ: 12/06/2023 ರಂದು ತನ್ನ ಶ್ರೀಮತಿಯಾದ ಶಾಂತಮ್ಮ ಪ್ರಾಯ-55 ವರ್ಷ ಎಂಬವರನ್ನು ತನ್ನಾ ಬಾಬ್ತು KA-19-EW-1487 ನೇ ಸ್ಕೂಟರ್ ನಲ್ಲಿ ಹಿಂಬದಿ ಸವಾರಿಣಿಯಾಗಿ ಕುಳ್ಳಿರಿಸಿಕೊಂಡು ಕದ್ರಿ ಅಭಿಮಾನ್ ಗಾರ್ಡನ್ ನಿಂದ ಹೊರಟು ನಂತೂರು ಮಾರ್ಗವಾಗಿ ಮರೋಳಿ ಕಡೆಗೆ ಹೋಗುತ್ತಾ ರಾ.ಹೆ 73 ರಲ್ಲಿ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ತಲುಪುತ್ತಿದ್ದಂತೆ, ಸಮಯ ಸುಮಾರು 12:40 ಗಂಟೆಗೆ ಪಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ ನಂತೂರು ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ಹಾದು ಹೋಗಿರುವ ರಾ.ಹೆ 73 ರಲ್ಲಿ KA-19-AD-8079 ನೇ ನಂಬ್ರದ ನಿರ್ಮಲಾ ಎಂಬ ಹೆಸರಿನ ಖಾಸಗಿ ಬಸ್ಸನ್ನು ಅದರ ಚಾಲಕ ನಿರ್ಲಕ್ಷತನ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಶಾಂತಮ್ಮ ರವರು ವಾಹನ ಸಮೇತ ರಸ್ತೆಗೆ ಬಿದ್ದು ಶಾಂತಮ್ಮಳ ಬಲಕಾಲು ಮಣಿಗಂಟಿನ ಬಳಿ ಮೂಳೆ ಮುರಿತದ ಗಾಯವುಂಟಾಗಿದ್ದು, ಪಿರ್ಯಾದಿದಾರರಿಗೆ ಬಲಕಾಲು ಮಣಿಗಂಟಿನ ಬಳಿ ಬಲವಾದ ಗುದ್ದಿದ ಗಾಯ, ಬಲಕಾಲು ಪಾದದ ಮೇಲೆ ರಕ್ತ ಗಾಯ, ಎಡಕಾಲು ಮೊಣಗಂಟಿನ ಮೇಲೆ ತರಚಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಅಪಘಾತಪಡಿಸಿದ ಬಸ್ಸಿನ ಚಾಲಕ ಮತ್ತು ನಿರ್ವಾಹಕನು ಅಟೋ ರಿಕ್ಷಾವೊಂದರಲ್ಲಿ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿಯ ವೈದ್ಯರು ನಮ್ಮನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಅಪಘಾತ ಪಡಿಸಿದ KA-19-AD-8079 ನೇ ಬಸ್ಸು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.
Mulki PS
ಪಿರ್ಯಾದಿ Smt Manorama Henry ಆಕೆಯ ಮಕ್ಕಳಾದ ಅನಿಟಾ ಸೋನ್ಸ್ ಮತ್ತು ಸ್ಯಾಂಡ್ರಾ ಬಂಗೇರ ರವರು ಜಾಗದ ವಿಚಾರದಲ್ಲಿ ಗಲಾಟೆ ಮಾಡುತ್ತಾ ದಿನಾಂಕ: 12-06-2023 ರಂದು ಮದ್ಯಾಹ್ನ ಸುಮಾರು 12-30 ಗಂಟೆಗೆ ಪಿರ್ಯಾಧಿದಾರರು ಮನೆಯ ಅಡುಗೆ ಮನೆಯಲ್ಲಿದ್ದ ಸಮಯ ಮಗಳು ಅನಿಟಾ ಸೋನ್ಸ್ ಳು ಪಿರ್ಯಾಧಿಯ ಮನೆಯ ಅಡುಗೆ ಕೋಣೆಯೊಳಗೆ ಬಂದು ದುರುಗುಟ್ಟಿ ನೋಡಿ ಅಕ್ರಮವಾಗಿ ತಡೆದು ನಿಲ್ಲಿಸಿ ಅವಳ ಕೈಯಲ್ಲಿದ್ದ ನಾಯಿಗೆ ಊಟ ಹಾಕುವ ತಟ್ಟೆಯನ್ನು ತೆಗೆದು ಪಿರ್ಯಾದಿದಾರರ ಬಲ ಕೈ ಭುಜಕ್ಕೆ ಬಲವಾಗಿ ಹೊಡೆದುದಲ್ಲದೇ “ ನೀನು ಸೂಳೆ, ಎಂದು ಅವಾಚ್ಯ ಶಬ್ದಗಳಿಂದ ಬೈದು “ ನಿಮ್ಮನ್ನು ಕೊಂದೆ ಹೋಗುವುದು ” ಎಂದು ಜೀವ ಬೆದರಿಕೆ ಒಡ್ಡಿರುತ್ತಾಳೆ. ಇದೇ ವೇಳೆ ಮನೆಯ ಹೊರಗೆ ನಿಂತಿದ್ದ ಇನ್ನೊಬ್ಬ ಮಗಳು ಸ್ಯಾಂಡ್ರಾ ಬಂಗೇರಳು ಮನೆಗೆ ಕೇಬಲ್ ಬಿಲ್ ಕಲೆಕ್ಷನ್ ಗೆ ಬಂದಿದ್ದ ಇಕ್ಬಾಲ್ ಎಂಬವನಲ್ಲಿ ಪಿರ್ಯಾಧಿಯನ್ನು ಉದ್ದೇಶಿಸಿ “ಅವಾಚ್ಯ ಶಬ್ದಗಳಿಂದ ಬೈದು ಮೊನ್ನೆ ಕೇಸು ನೀಡಿದ್ದಿ, ಪೋನ್ ಮಾಡಿದಾಗ ಕೈಯನ್ನು ತಿರುಚಿ ನೋವನ್ನುಂಟು ಮಾಡಿದ್ದು, ಮಗಳು ಅನಿಟಾ ಸೋನ್ಸ್ ನ ಕೆಲಸದವರು ಪಿರ್ಯಾಧಿದಾರರ ಜಾಗದಲ್ಲಿರುವ ಶೆಡ್ ನಲ್ಲಿ ವಾಸವಾಗಿದ್ದು, ಅವರನ್ನು ಶೆಡ್ ಬಿಟ್ಟು ಹೋಗುವಂತೆ ಫಿರ್ಯಾಧಿದಾರರು ಈ ಹಿಂದೆ ಅನಿಟಾ ಸೋನ್ಸ್ ಳಲ್ಲಿ ತಿಳಿಸಿದಾಗ ಆಕೆಯು ಕೆಲಸದವರನ್ನು ಹೇಗೆ ಶೆಡ್ ನಿಂದ ಹೊರಗೆ ಕಳುಹಿಸುತ್ತೀ, ನಿನ್ನನ್ನು ನೋಡುತ್ತೇನೆ” ಎಂದು ಬೆದರಿಕೆ ಒಡ್ಡಿರುವ ಬಗ್ಗೆ ಪಿರ್ಯಾಧಿಯ ಸಾರಾಂಶ.
Mulki PS
ದಿನಾಂಕ 12-06-2023 ರಂದು ಬೆಳಗ್ಗೆ 17-25 ಗಂಟೆಗೆ ಮುಲ್ಕಿ ತಾಲೂಕು ಅತಿಕಾರಿ ಬೆಟ್ಟು ಗ್ರಾಮದ ಕಕ್ವ ಎಂಬಲ್ಲಿ ಕೃಷ್ಣ ಎಂಬವರ ಮನೆಯ ಬಳಿ ಆರೋಪಿತರಾದ 1] ಡೇವಿಡ್ ಕಾಲಿನ ಡಿಸೋಜ, ಮೂರುಕಾವೇರಿ, 2] ವಿನೋಧ್ ಕಿಲ್ಪಾಡಿ, 3] ಸತೀಶ್ ಮುಂಡ್ಕೂರು, 4] ಸಂತೋಷ ಶೆಟ್ಟಿ ಸಿಮಂತೂರು, 5] ಪ್ರಶಾಂತ್ ಎಕ್ಕಾರು, 6] ಶಶಿ @ ಸತೀಶ ಸೀಮಂತೂರು, 7] ಮಹೇಶ್ ಕವತ್ತಾರು, 8] ಜೇಮ್ಸ್ ಕುಳಾಯಿ, 9] ಹರೀಶ್ ಹೆಜಮಾಡಿ, 10] ಪ್ರತಾಪ್ ಶೆಟ್ಟಿ ಕಿನ್ನಿಗೋಳಿ , 11] ಶರಣಪ್ಪ ಲಿಂಗಪ್ಪಯ್ಯಕಾಡು, 12] ವಿಠಲ ಕಾಂಜರಕಟ್ಟೆ, 13] ಧೀರಜ್ ಶೆಟ್ಟಿ ಶಿಮಂತೂರು ಎಂಬವರುಗಳು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ಆಡುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ವಿಧ್ಯಾಧರ್ ಡಿ ಬಾಯ್ಕೇರಿಕರ್ ಮತ್ತು ಪಿಎಸ್ಐ ಶ್ರೀ ವಿನಾಯಕ ತೊರಗಲ್ ರವರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿತರುಗಳು ಇಸ್ಪೀಟು ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 1,17,310/ ರೂಪಾಯಿ, ಇಸ್ಪೀಟು ಎಲೆಗಳು, ಇಸ್ಪೀಟು ಆಟ ಆಡಲು ನೆಲಕ್ಕೆ ಹಾಸಿದ್ದ ನೀಲಿ ಬಣ್ಣದ ಬಟ್ಟೆಯನ್ನು ಪಂಚರುಗಳ ಸಮಕ್ಷಮ ಸ್ವಾಧೀನಪಡಿಸಿಕೊಂಡು ಕಾನೂನು ಕ್ರಮಕ್ಕಾಗಿ ದೂರು ನೀಡಿದ್ದು ಸ್ವೀಕರಿಸಿ ಪ್ರಕರಣ ದಾಖಾಲಿಸಿರುವುದು ಎಂಬಿತ್ಯಾದಿ.
Urva PS ULLAS MAHALE
ದಿನಾಂಕ 12-06-2023 ರಂದು ಸಮಯ 18:00 ಬಿಜೈ ಆನೆಗುಂಡಿ ಜಂಕ್ಷನ್ ನ ಸಾರ್ವಜನಿಕ ಸ್ಥಳದಲ್ಲಿ ಒರ್ವ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡು ಸಿಗರೇಟನ್ನು ಸೇದುತ್ತಿದ್ದ ಶೇಕ್ ಫಜೀಲ್ ಉಲ್ ರೆಹಮಾನ, ಪ್ರಾಯ:24 ವರ್ಷ, ವಾಸ:8--13-933/1, ತಂಡಲ್ ಶಾಬಾನ್ ಕಾಂಪೌಂಡ್ ಕುದ್ರೋಳಿ ಮುಂದೆ ಜಾಮೀಯಾ ಮಸೀದಿ ಕೋಡಿಯಾಲ್ ಬೈಲ್ ಮಂಗಳೂರು ಎಂಬಾತನನ್ನು ವಿಚಾರಿಸಿದಾಗ ಆತನ ಬಾಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬಂದಿದ್ದುರಿಂದ ಈತನನ್ನು ವಶಕ್ಕೆ ಪಡೆದು ಕುಂಟಿಕಾನ ಎ ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರಲ್ಲಿ ಪರೀಕ್ಷೆಗೊಳಪಡಿಸಿದ್ದು, ವೈದ್ಯರು ಆರೋಪಿತನನ್ನು ವೈದ್ಯಕೀಯ ತಪಾಸಣೆ ನಡೆಸಿ ಈತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪಡಿಸಿರುವುದರಿಂದ ಈತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.
CEN Crime PS
ದಿನಾಂಕ 11-06-2023 ರಂದು ಪಿರ್ಯಾದಿದಾರರ ಮೊಬೈಲ್ ನಂಬ್ರ: ನೇದಕ್ಕೆ ಮೊಬೈಲ್ ನಂಬ್ರ: +9038144987 ನೇದರಿಂದ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದಾಗಿಯೂ ಕೆವೈಸಿ ಅಪ್ ಡೇಟ್ ಮಾಡಬೇಕೆಂದು ಎಂಬುದಾಗಿ ಸಂದೇಶ ಬಂದಿರುತ್ತದೆ. ನಂತರ ದಿನಾಂಕ 11-06-2023 ರಂದು ಪಿರ್ಯಾದಿದಾರರು ಅಪರಿಚಿತ ವ್ಯಕ್ತಿ 9632237297 ನಂಬ್ರಗೆ ಕರೆ ಮಾಡಿ ಫಿರ್ಯಾದಿದಾರರ ಕೆನರಾ ಬ್ಯಾಂಕ್ ಕಸ್ಟಮರ್ ಐಡಿ, ATM ಕಾರ್ಡ್ ವಿವರ ಮತ್ತು ಅಕೌಂಟ್ ವಿವರ ನೀಡುವಂತೆ ತಿಳಿಸಿದ್ದು ಅದರಂತೆ ಕಸ್ಟಮರ್ ಐಡಿ, ATM ಕಾರ್ಡ್ ವಿವರ ಮತ್ತು ಅಕೌಂಟ್ ವಿವರ ಆ ವ್ಯಕ್ತಿಗೆ ತಿಳಿಸಿದ್ದು ನಂತರ ಆ ವ್ಯಕ್ತಿಯು ಫಿರ್ಯಾದಿದಾರರಿಗೆ ಮೊಬೈಲ್ ಗೆ ಸ್ವೀಕೃತವಾದ ಒಟಿಪಿ ಯನ್ನು ಶೇರ್ ಮಾಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ಆ ಒಟಿಪಿ ಯನ್ನು ಆ ವ್ಯಕ್ತಿಗೆ ತಿಳಿಸಿರುತ್ತಾರೆ. ಪಿರ್ಯಾದಿದಾರರು ಒಟಿಪಿ ನೀಡಿದ ಕೂಡಲೇ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ನಂಬ್ರ: ನೇದರಿಂದ ರೂಪಾಯಿ 99,999/- ಹಣವನ್ನು ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ. ಅಪರಿಚಿತ ವ್ಯಕ್ತಿಯ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಒಟಿಪಿ ಯನ್ನು ಪಡೆದುಕೊಂಡು ಪಿರ್ಯಾದಿದಾರರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.
CEN Crime PS
ದಿನಾಂಕ 12-06-2023 ರಂದು ಸಮಯ 15-00 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ನಂಬ್ರ ನೇದಕ್ಕೆ ಯಾರೋ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬ್ರ +918961179386ನೇದರಿಂದ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದಾಗಿಯೂ ಕೆವೈಸಿ ಅಪ್ ಡೇಟ್ ಮಾಡಬೇಕೆಂದು ಎಂಬುದಾಗಿ ಸಂದೇಶ ಬಂದಿರುತ್ತದೆ. ಅದರಲ್ಲಿ ಕಸ್ಟ್ ಮರ್ ಕೇರ್ ನಂಬ್ರ +918961253425 ಎಂಬುದಾಗಿ ನಮೂದು ಆಗಿರುತ್ತದೆ. ನಂತರ ಪಿರ್ಯಾದಿದಾರರು ಆ ಕಸ್ಟ್ ಮರ್ ಕೇರ್ ಮೊಬೈಲ್ ನಂಬ್ರಗೆ ಕರೆ ವಿಚಾರಿಸಿದಾಗ ಆ ವ್ಯಕ್ತಿಯು ನಾನು ಕೆನರಾ ಬ್ಯಾಂಕ್ ಕೆವೈಸಿ ಅಪ್ ಡೇಟ್ ಮಾಡುವ ಅಧಿಕಾರಿ ಎಂದು ತಿಳಿಸಿ ನಂತರ ಆ ವ್ಯಕ್ತಿಯು ಫಿರ್ಯಾದಿದಾರರ ಕೆನರಾ ಬ್ಯಾಂಕ್ ವಿವರಗಳನ್ನು ತಿಳಿಸಿ ಮತ್ತು ಆಧಾರ್ ಕಾರ್ಡ್ ನಂಬ್ರವನ್ನು ನೀಡುವಂತೆ ತಿಳಿಸಿದ್ದು ಅದರಂತೆ ಫಿರ್ಯಾದಿದಾರರು ಆಧಾರ್ ಕಾರ್ಡ್ ನಂಬ್ರದ ವಿವರವನ್ನು ಆ ವ್ಯಕ್ತಿಗೆ ತಿಳಿಸಿದ್ದು ನಂತರ ಆ ವ್ಯಕ್ತಿಯು ಫಿರ್ಯಾದಿದಾರರಿಗೆ ಮೊಬೈಲ್ ಗೆ ಸ್ವೀಕೃತವಾದ ಒಟಿಪಿ ಯನ್ನು ಶೇರ್ ಮಾಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ಆ ಒಟಿಪಿ ಯನ್ನು ಆ ವ್ಯಕ್ತಿಗೆ ತಿಳಿಸಿರುತ್ತಾರೆಪಿರ್ಯಾದಿದಾರರು ಒಟಿಪಿ ನೀಡಿದ ಕೂಡಲೇ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ನಂಬ್ರ ನೇದರಿಂದ ರೂಪಾಯಿ 1,75,000/- ಹಣವನ್ನು ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ. ಅಪರಿಚಿತ ವ್ಯಕ್ತಿಯ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಒಟಿಪಿ ಯನ್ನು ಪಡೆದುಕೊಂಡು ಪಿರ್ಯಾದಿದಾರರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.
CEN Crime PS
ದಿನಾಂಕ 28-05-2023 ರಂದು ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ನಲ್ಲಿ ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ಫಿರ್ಯಾದಿದಾರರ ವಾಟ್ಸಪ್ ನಂಬ್ರ ನೇದಕ್ಕೆ +212721900249 ನೇದರ ವಾಟ್ಸಾಫ್ ನಂಬ್ರನಿಂದ ಟೆಲಿಗ್ರಾಮ್ ಲಿಂಕ್ ಕಳುಹಿಸಿದಂತೆ ಫಿರ್ಯಾದುದಾರರು ಅಪರಿಚಿತ ವ್ಯಕ್ತಿಯ ಮಾತು ನಂಬಿ ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ ನೀಡಿದ ಟಾಸ್ಕ್ ನಂತೆ ದಿನಾಂಕ 28-05-2023 ರಿಂದ ದಿನಾಂಕ 01-06-2023 ವರೆಗ ಕ್ರಮವಾಗಿ 5,000/-, 20,000/-, 70,000/-, 120,000/- ಹಣವನ್ನು ತನ್ನ AXIS ಬ್ಯಾಂಕ್ ಖಾತೆ ನಂಬ್ರ ನೇದರಿಂದ ಹಂತ ಹಂತ ವಾಗಿ ಒಟ್ಟು 215,000/- ರೂ.ಗಳನ್ನು ಕಳುಹಿಸಿರುತ್ತಾರೆ. ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿ ಟೆಲಿಗ್ರಾಂ ಆಪ್ ನ ಲಿಂಕ್ ಮೂಲಕ ಪಾರ್ಟ್ ಟೈಂ ಜಾಬ್ ಗಾಗಿ ಒಟ್ಟು 2,15,000 ರೂಪಾಯಿ ಹಣವನ್ನು ವರ್ಗಾಯಿಸಿಕೊಂಡು ಪಿರ್ಯಾದಿದಾರರಿಗೆ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.
Bajpe PS
ದಿನಾಂಕ 12-06-2023 ರಂದು 18:00 ಗಂಟೆಗೆ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಗಂಜಿಮಠ ಕೈಗಾರಿಕಾ ಪ್ರದೇಶ ಸಮೀಪ ರಿಯಾಝ್ ಪ್ರಾಯ 36 ವರ್ಷ ವಾಸ: ಕಣ್ಣೂರಿ ಹೌಸ್ ಶಿಬ್ರಿಕೆರೆ ಅಂಚೆ ಬಡಗ ಎಡಪದವು ಗ್ರಾಮ ಮಂಗಳೂರು ತಾಲೂಕು ಏನೋ ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದಿದ್ದು ಆತನನ್ನು ವಿಚಾರಿಸಲಾಗಿ ನಾನು ಸೀಗರೇಟ್ ಒಳಗೆ ಗಾಂಜಾ ತುಂಬಿಸಿ ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದು ತಜ್ಞ ವೈಧ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿದ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ
Mangalore South PS
ದಿನಾಂಕ 02-06-2023 ರಂದು 21-00 ಗಂಟೆಯಿಂದ ದಿನಾಂಕ 03-06-2023 ರಂದು 00-45 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಪೊರಂ ಪಿಜಾ ಮಹಲ್ ನ ದ್ಚಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರ PRASHIN P.P. ಆರ್. ಸಿ. ಮಾಲಕತ್ವದ KL 13 Y 5978, ನೊಂದಣಿ ಸಂಖ್ಯೆಯ MD2A13EZ4CCC05007 ಚೆಸಿಸ್ ನಂಬ್ರದ, DKZCCC04845 ಇಂಜೀನ್ ನಂಬ್ರದ 2012 ನೇ ಮೋಡಲ್ ನ ಕಪ್ಪು ಬಣ್ಣದ ಅಂದಾಜು ರೂಪಾಯಿ 20,000/- ಬೆಲೆ ಬಾಳುವ ಬಜಾಜ್ ಪಲ್ಸರ್ 220 ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರು ಕಳವಾದ ದ್ಚಿಚಕ್ರ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿಯಾಗಿರುತ್ತದೆ.
Ullal PS
12-06-2023 ರಂದು 4-30 ಗಂಟೆಗೆ ಮಂಗಳೂರು ನಗರದ ಕುಂಪಳದ ಬೈಪಾಸ್ ಬಳಿ ರಸ್ತೆಬದಿಯಲ್ಲಿ ಸೌಶಿತ್ ಪ್ರಾಯ 27 ವರ್ಷ, ವಾಸ: ಅಮ್ಮಾ ನಿಲಯ, ಕೆರೆಬೈಲ್, ಪೆರ್ಮನ್ನೂರುಗ್ರಾಮ, ತೊಕ್ಕೊಟ್ಟು ಉಳ್ಳಾಲ ತಾಲೂಕು, ಮಂಗಳೂರು ಎಂಬಾತನು ಗಾಂಜಾ ಸೇವನೆ ಮಾಡಿ ರುವವನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಿಸಿದಲ್ಲಿ ಮಾಧಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಈತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ, ಮಾಧಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ, ಮಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಹಾಜರುಪಡಿಸಿರುವುದು ಪ್ರಕರಣದ ಸಾರಾಂಶ ಎಂಬಿತ್ಯಾದಿ.