ಅಭಿಪ್ರಾಯ / ಸಲಹೆಗಳು

Crime Reported in Barke PS

ದಿನಾಂಕ 13-07-2023 ರಂದು ಮದ್ಯಾಹ್ನ 14-15 ಗಂಟೆಗೆ ಮಂಗಳೂರು ನಗರದ ಲಾಲ್ ಭಾಗ್ ಬಸ್ಸು ನಿಲ್ದಾಣದ ಬಳಿ ಯುವಕನೊಬ್ಬನು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು  ವಿಚಾರಿಸಿದಾಗ ತಡವರಿಸುತ್ತಾ ಯುವಕನು ತನ್ನ ಹೆಸರು ಸುನಿಲ್ ರಿನ್ಸನ್ ಡ್ಯಾನ್ಸಿ ಡಿಸೋಜಾ ಪ್ರಾಯ 29 ವರ್ಷ ವಾಸ: 3-19 ತಣ್ಣೀರುಬಾವಿ ನಾಯರ್ ಕುದರು ಮಂಗಳೂರು ಎಂಬುದಾಗಿ,  ಗಾಂಜಾ ಸೇವನೆ ಮಾಡಿರುವುದಾಗಿ ಆತನು ಒಪ್ಪಿಕೊಂಡಿರುತ್ತಾನೆ. ಆತನನ್ನು ಮಂಗಳೂರು ನಗರದ ಕುಂಟಿಕಾನದ ಎ.ಜೆ ಆಸ್ಪತ್ರೆಯ ವೈಧ್ಯರು ಯುವಕನನ್ನು ವೈಧ್ಯಕೀಯ ತಪಾಸಣೆಯನ್ನು ಮಾಡಿ ವೈದ್ಯರು “Tetrahydracannabinoid (Marijuana) POSITIVE”  ಎಂಬುದಾಗಿ ದೃಡಪತ್ರವನ್ನನು ನೀಡಿದ್ದು, ಆಪಾದಿತನ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ ಎಂಬಿತ್ಯಾದಿಯಾಗಿರುತ್ತದೆ.

Traffic South Police Station

ಫಿರ್ಯಾದಿ MOHAN ದಾರರು ದಿನಾಂಕ: 13/07/2023ರಂದು KA-19-EJ-6560 ನೇ ಹೊಂಡಾ ಆಕ್ಟಿವಾದಲ್ಲಿ ಅವರ ಪತ್ನಿ ನಳಿನಿಯವರನ್ನು  ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಹೊರಟು ಕೆಂಬಾರು ಕ್ರಾಸ್ ರೋಡಿನಿಂದ ಪಡೀಲ್ ಕಡೆಗೆ ಹೋಗಲು ಮುಖ್ಯ ರಸ್ತೆಯ MACCHIS ಹೋಟೆಲ್ ಮುಂಭಾಗ  ತಲುಪಿದಾಗ ಸಮಯ ಸುಮಾರು 09-00 ಗಂಟೆಗೆ KSRTC ಬಸ್ ನಂ. KA-19-F-3182 ನೇದರ ಚಾಲಕ ಧರ್ಮರಾಜು ಎಂಬವರು ದುಡುಕುತನ ಮತ್ತು ನಿರ್ಲಕ್ಷತನದಿಂದ ಬಸ್ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಸ್ಕೂಟರಿನ ಹಿಂಬಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿದಾರರು ಮತ್ತು ಅವರ ಪತ್ನಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಫಿರ್ಯಾದಿದಾರರ ಪತ್ನಿಗೆ ಎಡ ಮೊಣಕೈಗೆ ರಕ್ತಗಾಯವಾಗಿದ್ದು, ಫಿರ್ಯಾದಿದಾರರಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ. ಫಿರ್ಯಾದಿದಾರರು ಪತ್ನಿ ನಳಿನಿಯವರನ್ನು ಆಟೋರಿಕ್ಷಾದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

CEN Crime PS

ದಿನಾಂಕ: 12-07-2023 ರಂದು ಸಂಜೆ 11.25 ಗಂಟೆಯಿಂದ 13:30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮೊಬೈಲ್ ಸಂಖ್ಯೆ: ನೇಯದಕ್ಕೆ 8807644259ನೇ ನಂಬ್ರದಿಂದ ಪಿರ್ಯಾದಿದಾರರ  ಕೆನರಾ ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಆಗದೆ ಇದ್ದು ಖಾತೆ ಸ್ಥಗಿತಗೊಳ್ಳುವುದಾಗಿ ತಿಳಿಸಿ ಪಿರ್ಯಾದಿದಾರರ ಮೊಬೈಲ್ ನಂಬರ್ ಗೆ ಮೆಸೇಜ್ ಬಂದಿದ್ದು  ಇದನ್ನು ಗಮನಿಸಿದ ಪಿರ್ಯಾದಿದಾರರು ಕೆಲ ಸಮಯದ ನಂತರ ಯಾರೋ ಅಪರಿಚಿತ ವ್ಯಕ್ತಿಯು 8818957730 ನೇದರಿಂದ ಬ್ಯಾಂಕ್ ಅಧಿಕಾರಿ ಎಂದು ಅರಿಚಯಿಸಿಕೊಂಡು ಪಿರ್ಯಾದಿದಾರರ ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ವಿಳಾಸವನ್ನು ಆತನೇ ತಿಳಿಸಿದ್ದರಿಂದ ನಾನು ಆತನು ಬ್ಯಾಂಕ್ ಅಧಿಕಾರಿ ಆಗಿರಬಹುದೆಂದು ನಂಬಿ ಕೆ.ವೈ.ಸಿ ಅಪ್ಡೇಟ್ ಮಾಡುವ ಬಗ್ಗೆ ನನ್ನ ಮೊಬೈಲ್ ಗೆ ಸ್ವೀಕೃತವಾದ ಒಟಿಪಿ ಯನ್ನು ತಿಳಿಸುವಂತೆ ಆತನು ಪಿರ್ಯಾದಿದಾರರ ಕೇಳಿಕೊಂಡಿದ್ದು ಅದರಂತೆ ನಾನು ಮೊಬೈಲ್ ಗೆ ಸ್ವೀಕೃತವಾದ  ಎಲ್ಲಾ ಒಟಿಪಿ ಗಳನ್ನು ಆತನಿಗೆ ತಿಳಿಸಿರುತ್ತೇನೆ, ನಂತರ ನಾನು ಕರೆಯನ್ನು ಮುಕ್ತಾಯಗೊಳಿಸಿ, ಮೊಬೈಲ್ ಪರಿಶೀಲಿಸಿದಲ್ಲಿ ನನ್ನ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ 2,74,749/- ಕಡಿತಗೊಂಡಿರುದು ತಿಳಿದು ಬಂದಿರುತ್ತದೆ. ಆದುದರಿಂದ ನನಗೆ ಮೋಸ ಮಾಡುವ ಉದ್ದೇಶದಿಂದ  ಬ್ಯಾಂಕ್ ಅಧಿಕಾರಿಯ ಹೆಸರಿನಲ್ಲಿ ಕರೆಮಾಡಿ ನನ್ನ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡು ನನ್ನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ: ನೇಯದರಿಂದ ಅನಧಿಕೃತವಾಗಿ ರೂ 2,74,749/-ಹಣವನ್ನು ಆನ್ ಲೈನ್ ಮೂಲಕ ಮೋಸದಿಂದ ವರ್ಗಾಯಿಸಿಕೊಂಡು  ಆನ್ ಲೈನ್ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Barke PS  

ದಿನಾಂಕ: 12-07-2023 ಮಧ್ಯಾಹ್ನ 15-00 ಗಂಟೆಗೆ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ  ಮಣ್ಣಗುಡ್ಡ ಬರ್ಕೆ ಬ್ರಿಡ್ಜ್ ಬಳಿ, ಸಾರ್ವಜನಿಕ ಸ್ಥಳದಲ್ಲಿ ಪ್ರಶಾಂತ್ ಹಾಗೂ ಆತನ ಸ್ನೇಹಿತರು ಜನರಿಂದ ಹಣವನ್ನು ಪಡೆದುಕೊಂಡು ಮಟ್ಕ ದಂಧೆಯನ್ನು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ, ಮಣ್ಣಗುಡ್ಡೆಯ ಬರ್ಕೆ ಬ್ರಿಡ್ಜ್ ಬಳಿ 1). ಪ್ರಶಾಂತ್ ಪ್ರಾಯ: 48 ವರ್ಷ ವಾಸ: ರಾಮ ಮೇಸ್ತ್ರಿ ಕಂಪೌಂಡ್ ಬರ್ಕೆ ಮಂಗಳೂರು, ಮಣ್ಣಗುಡ್ಡೆ, ಮಂಗಳೂರು 2). ಅನೀಲ್ ಪ್ರಾಯ: 47 ವರ್ಷ ವಾಸ: ಉರ್ವ ಹೋಯ್ಗೆ ಬೈಲ್, ಗುರುಂಪೆ ಮಂಗಳೂರು 03). ದಿನೇಶ್ ಕುಮಾರ್ ಪ್ರಾಯ: 47 ವರ್ಷ ವಾಸ: ಶೇಡಿಗುರಿ, ದಂಬೆಲ್, ಅಶೋಕನಗರ, ಮಂಗಳೂರು 4). ಉದಯ ಪ್ರಾಯ: 35 ವರ್ಷ ಬರ್ಕೆ, ಮಂಗಳೂರು ಎಂಬುವರು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಧಂಧೆಯನ್ನು ನಡೆಸುತ್ತಿದ್ದವರನ್ನು ವಶಕ್ಕೆ ತೆಗದುಕೊಂಡು ಆರೋಪಿಗಳು ಮಟ್ಕಾ ಚೀಟಿ ಬರೆದು ಸಾರ್ವಜನಿಕರಿಂದ ಸಂಗ್ರಹಿಸಿದ ಒಟ್ಟು ನಗದು ಹಣ ರೂ: 12480/- (2) ಮೊಬೈಲ್ ಪೋನ್ ಗಳು-5 (3) ಮಟ್ಕಾ ಬರೆದ ಚೀಟಿ-4, (4) ಬಾಲ್ ಪೆನ್-3 ನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 02:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080