ಅಭಿಪ್ರಾಯ / ಸಲಹೆಗಳು

Crime Report in  Mangalore East Traffic PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ ಮಾರುತಿ ಹಾರೋಗೇರಿ ಎಂಬವರು ದಿನಾಂಕ: 09/10/2023 ರಂದು ತನ್ನ  ಬಾಬ್ತು KA-26-EE-4772 ನೇ ಮೋಟಾರು ಸೈಕಲ್ ನಲ್ಲಿ ರೇಣುಕಾ (30 ವರ್ಷ) ಮತ್ತು ಅವರ ಮಗಳು ಶೃತಿ @ ಯಲ್ಲಕ್ಕ (7ವರ್ಷ) ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ವಾಮಂಜೂರು ಕಡೆಯಿಂದ ಪಂಪ್ ವೆಲ್ ಗೆ ಕೂಲಿ ಕೆಲಸಕ್ಕಾಗಿ ಹೋಗುತ್ತಿರುವಾಗ ನಂತೂರು ಬಳಿಯ ತಾರೇತೋಟ ಹೈವೇ ಜನರಲ್ ಸ್ಟೋರ್ ಅಂಗಡಿಯ ಎದುರುಗಡೆ ತಲುಪುತ್ತಿದ್ದಂತೆ ಬೆಳಿಗ್ಗೆ ಸಮಯ ಸುಮಾರು 09:00 ಗಂಟೆಗೆ ನಂತೂರು ಜಂಕ್ಷನ್ ಕಡೆಯಿಂದ ಬರುತ್ತಿದ್ದ KA-19-MK-8839 ನೇ ನಂಬ್ರದ ಕಾರನ್ನು ಅದರ ಚಾಲಕ ರವಿಶಂಕರ ಎಂಬಾತನು ನಿರ್ಲಕ್ಷತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿಯನ್ನು ಎಡಬದಿಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಒಮ್ಮೇಲೆ ಎಡಕ್ಕೆ ಚಲಾಯಿಸಿದ ಪರಿಣಾಮ ಕಾರು  ಪಿರ್ಯಾದಿದಾರರ ಮೋಟಾರು ಸೈಕಲ್ ನ  ಹ್ಯಾಂಡಲ್ ಗೆ ಡಿಕ್ಕಿಯಾದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಯ ಬಲಗಡೆಗೆ ಬಿದ್ದಿದ್ದು, ಸಹಸವಾರಳಾದ ರೇಣುಕಾ ಮತ್ತು ಮಗಳು ಶೃತಿ @ ಯಲ್ಲಕ್ಕ ರವರು ರಸ್ತೆಯ ಎಡಭಾಗಕ್ಕೆ ಬಿದ್ದು ಗಾಯಗೊಂಡವರನ್ನು ಅಪಘಾತಪಡಿಸಿದ ಕಾರಿನ ಚಾಲಕನು ಅದೇ ಕಾರಿನಲ್ಲಿ ಚಿಕಿತ್ಸೆಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರ ಬಲಕೈಯ ಕೋಲು ಕೈಗೆ ಮತ್ತು ಬಲಗಡೆ ಸೊಂಟಕ್ಕೆ ರಕ್ತಗಾಯ, ರೇಣುಕಾ ರವರಿಗೆ ಎಡಕೈಯ ಕೋಲು ಕೈ, ಎರಡೂ ಕಾಲಿನ ಮೊಣಗಂಟಿಗೆ, ಮುಖಕ್ಕೆ, ಬಲಕೈ ಮೊಣಗಂಟಿಗೆ ಮತ್ತು ಕೋಲು ಕೈಗೆ ರಕ್ತಗಾಯ, ಬಲಗಡೆ ಭುಜಕ್ಕೆ ಗುದ್ದಿದ ನಮೂನೆಯ ಒಳನೋವು ಹಾಗೂ ಮಗಳು ಶೃತಿ @ ಯಲ್ಲಕ್ಕ ರವರಿಗೆ ಎರಡೂ ಕಾಲಿನ ಮೊಣಗಂಟಿಗೆ ರಕ್ತಗಾಯ, ಬಲಕೈಯ ತಟ್ಟಿಗೆ ಹಣೆಗೆ, ಮೂಗಿಗೆ ರಕ್ತ ಗಾಯವಾಗಿರುವುದಾಗಿ ತಿಳಿಸಿ ಚಿಕಿತ್ಸೆಯನ್ನು ನೀಡಿರುವುದಾಗಿದೆ. ಅಪಘಾತಪಡಿಸಿದ ಕಾರಿನ ಚಾಲಕ ರವಿಶಂಕರ ರವರು ಚಿಕಿತ್ಸೆಯ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದುದರಿಂದ ಪಿರ್ಯಾದಿದಾರರು ಪೊಲೀಸರಲ್ಲಿ ಪ್ರಕರಣ ದಾಖಲಿಸುವ ಅಗತ್ಯವಿಲ್ಲವೆಂದು ತಿಳಿಸಿದ್ದು, ನಂತರ ಚಿಕಿತ್ಸಾ ವೆಚ್ಚವು ಜಾಸ್ತಿಯಾಗಿರುವುದರಿಂದ ಕಾರಿನ ಚಾಲಕನು ಚಿಕಿತ್ಸಾ ವೆಚ್ಚವನ್ನು ನೀಡಲು ನಿರಾಕರಿಸಿದ್ದರಿಂದ ಈ ದಿನ ಪಿರ್ಯಾದಿದಾರರು ಠಾಣೆಗೆ ಬಂದು ತಡವಾಗಿ ದೂರನ್ನು ನೀಡುತ್ತಿರುವುದಾಗಿದೆ. ಈ ಅಪಘಾತಕ್ಕೆ KA-19-MK-8839 ನೇ ಕಾರಿನ ಚಾಲಕ ರವಿಶಂಕರ ರವರ ನಿರ್ಲಕ್ಷತನ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬಿತ್ಯಾದಿ.

Crime Report in   Mulki PS:

ಈ ಪ್ರಕರಣದ ಸಾರಾಂಶವೆನೆಂದರೆ, ಪಿರ್ಯಾದಿದಾರಾದ ಹನುಮಮ್ಮ ಇವರು KA-32-P-3984ನೇ ನೋಂದಣಿ ಸಂಖ್ಯೆಯ ಮಾರುತಿ ಸ್ವೀಪ್ಟ್ ಕಾರಿನ ನೋಂದಣಿ ಮಾಲಕರಾಗಿದ್ದು, ದಿನಾಂಕ:17-12-2022 ರಂದು ಪಿರ್ಯಾದಿದಾರರ ಗಂಡನ ಪರಿಚಯದ ಅಶೋಕ್ ಹೆಚ್ ಮಾದರ್ ಎಂಬಾತನು ಪಿರ್ಯಾದಿದಾರರ ಮನೆಗೆ ಬಂದು ತನ್ನ ಸ್ವಂತ ಊರಾದ ರೋಣ ಎಂಬಲ್ಲಿಗೆ ತನ್ನ ಸಂಬಂಧಿಕರ ಮದುವೆಗೆ ಹೋಗಲೆಂದು ಮತ್ತು ಒಂದು ವಾರದಲ್ಲಿ ವಾಪಾಸ್ಸು ನೀಡುವುದಾಗಿ ಪಿರ್ಯಾದಿದಾರರನ್ನು ಮತ್ತು ಪಿರ್ಯಾದಿದಾರರ ಗಂಡನನ್ನು ನಂಬಿಸಿ ಪಿರ್ಯಾದಿದಾರರ KA-32-P-3984ನೇ ನೋಂದಣಿ ಸಂಖ್ಯೆಯ ಮಾರುತಿ ಸ್ವೀಪ್ಟ್ ಕಾರನ್ನು ಪಡೆದುಕೊಂಡು ಹೋಗಿ ಈವರೆಗೆ ಕಾರನ್ನು ವಾಪಾಸ್ಸು ನೀಡದೇ ಮೋಸ ಮಾಡಿರುವುದಾಗಿದೆ ಮತ್ತು ಪಿರ್ಯಾದಿದಾರರ ಕಾರಿನ ಅಂದಾಜು ಮೌಲ್ಯ 4 ಲಕ್ಷ ಆಗಬಹುದು ಎಂಬಿತ್ಯಾದಿಯಾಗಿದೆ.

Crime Report in  Moodabidre  PS

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ 08-10-2023 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 13-10-2023 ರಂದು ಬೆಳಿಗ್ಗೆ 9.30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಪುತ್ತಿಗೆ ಗ್ರಾಮ ಮೂಡಬಿದ್ರೆ ಯಲ್ಲಿರುವ ಪಿರ್ಯಾದಿ ಸುನೀಲ ಸಮಗಾರ ರ ಮಾವ ರತ್ನಾಕರ ಗೌಡ ರವರ ಮನೆಯ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿ ಬೆಡ್ ರೂಂ ನಲ್ಲಿದ್ದ ಕಬ್ಬಿಣದ ಕಪಾಟುಗಳನ್ನು ಒಡೆದು ಅದರಲ್ಲಿದ್ದ 3000/- ರೂ ನಗದು ಹಣ ಹಾಗೂ ದೇವರ ಕೋಣೆಯ ಡಬ್ಬಿಯಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

Crime Report in    Ullal PS

ಪ್ರಕರಣದ ಸಾರಾಂಶವೇನೆಂದರೆ ದಿನಾಂಕ. 13-10-2023 ರಂದು ಬೆಳಿಗ್ಗ 7-15 ಗಂಟೆಯ ಸಮಯಕ್ಕೆ ಉಳ್ಳಾಲ ಗ್ರಾಮದ ಪಾಂಡೇಲ್ ಪಕ್ಕ ಹೊಳೆಬದಿಯಿಂದ ಸಾಮಾನ್ಯ ಮರಳನ್ನು KA 18 B 9444 ನೇ ಮೆರೂನ್ ಹಾಗೂ  ಹಳದಿ ಬಣ್ಣದ ಈಚರ್ ವಾಹನಕ್ಕೆ ತುಂಬಿಸುತ್ತಿದ್ದಾರೆಂದು ಪಿರ್ಯಾದಿದಾರರಾದ ಸಂತೋಷ್ ಕುಮಾರ್ ರವರು ಹಿತಿ ಬಂದ ಮೇರೆಗೆ ಸ್ಳಳಕ್ಕೆ ಸಿಬ್ಬಂದಿಗಳ ಜೊತೆಯಲ್ಲಿ ದಾಳಿ ಮಾಡಿದಾಗ ಟಿಪ್ಪರ್ ಚಾಲಕ ಮೊಹಮ್ಮದ್ ಅಜ್ಮಾಲ್ ಹಾಗೂ ಮರಳು ತುಂಬಿಸುತ್ತಿದ್ದ ಮೊಹಮ್ಮದ್ ಹಾಗೂ ಬದ್ರುದ್ದೀನ್ ನನ್ನು ವಶಕ್ಕೆ ಪಡೆದು ಆಸಮಯ ಸ್ಥಳದಲ್ಲಿ ಮರಳನ್ನು ತುಂಬಿಸುತ್ತಿದ್ದ ಸ್ಥಳದಿಂದ ಕೋಟೆಪುರ ನೌಫಾಲ್ ಎಂಬುವವನು  ಪರಾರಿಯಾಗಿರುತ್ತಾನೆ. ವಶಪಡಿಸಿಕೊಂಡ ಟಿಪ್ಪರಿನ ಲಾರಿಯ ಅಂದಾಜು ಮೌಲ್ಯರೂ,2,50,000/- ಮತ್ತು ಸಾಮಾನ್ಯ ಮರಳಿನ ಅಂದಾಜು ಮೌಲ್ಯ ರೂ.500/- ಆಗಬಹುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 13-10-2023 08:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080