ಅಭಿಪ್ರಾಯ / ಸಲಹೆಗಳು

Crime Report in  : Traffic North Police Station                                   

ದಿನಾಂಕ 13.11.2023 ರಂದು ಮುಂಜಾನೆ ಸಮಯ ಸುಮಾರು 01:00 ಗಂಟೆಗೆ ಸ್ಕೂಟರ್ ನಂಬ್ರ KA-19HJ-1663 ನೇಯದನ್ನು ಅದರ ಸವಾರನು ಸುರತ್ಕಲ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ರ ಸರ್ವೀಸ್ ರಸ್ತೆಯಿಂದ ಸವಾರಿ ಮಾಡಿಕೊಂಡು ಬಂದು ಸುರತ್ಕಲ್ ಸೂರಜ್ ಹೊಟೇಲ್ ಬಳಿಯ ತೆರೆದ ಡಿವೈಡರ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸ್ಕೂಟರನ್ನು ಸವಾರಿ ಮಾಡಿಕೊಂಡು ರಸ್ತೆಯನ್ನು ದಾಟುತ್ತಾ ರಸ್ತೆಯ ಬಲಭಾಗಕ್ಕೆ ತಲುಪುತ್ತಿದ್ದಂತೆಯೇ  ಸುರತ್ಕಲ್ ಕಡೆಯಿಂದ ಎನ್.ಐ.ಟಿ.ಕೆ. ಕಡೆಗೆ ಕಾರು ನಂಬ್ರ GJ-04EE-0352 ನೇಯದನ್ನು ಅದರ ಚಾಲಕಿ ಆಯುಷಿ ಜೆ. ಶರ್ಮಾ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರನು ಸ್ಕೂಟರಿನಿಂದ ಎಸೆಯಲ್ಪಟ್ಟು ಕಾರಿನ ಮುಂದಿನ ಗ್ಲಾಸ್ ಮೇಲೆ ಬಿದ್ದು ರಸ್ತೆಗೆ ಬಿದ್ದ ಪರಿಣಾಮ  ಸ್ಕೂಟರ್ ಸವಾರನ ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ರಕ್ತಗಾಯ, ಮೂಗಿಗೆ ರಕ್ತ ಗಾಯ, ಮತ್ತು ಬೆನ್ನಿಗೆ ತರಚಿದ ಗಾಯವಾಗಿದ್ದು ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.

Konaje PS

ದಿನಾಂಕ:13-11-2023 ರಂದು ಬೆಳಗ್ಗೆ 09.00 ಗಂಟೆಗೆ ಉಳ್ಳಾಲ ತಾಲೂಕು ಬಾಳೆಪುಣಿ ಗ್ರಾಮದ ಮುದಂಗಾರ ಕಟ್ಟೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಶ್ರವಣ್ ಎಮ್, ಪ್ರಾಯ: 20 ವರ್ಷ,  ವಾಸ: ಬಾಕ್ರಬೈಲ್ ಹೌಸ್, ಪಾತೂರು ಅಂಚೆ, ವರ್ಕಾಡಿ ಗ್ರಾಮ, ಕಾಸರಗೋಡು, ಕೇರಳ ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ಬೆಳಗ್ಗೆ 10.00 ಗಂಟೆಗೆ ವಶಕ್ಕೆ ಪಡೆದುಕೊಂಡು ಮಂಗಳೂರು ಕೆ,ಎಸ್, ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು Positive for TETRAHYDROCANNABINOL ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ. 

CEN Crime PS

ಪಿರ್ಯಾದಿದಾರರ ಮಗಳು   ಸುಮಾರು  ಒಂದು  ವರ್ಷದಿಂದ  BINANCE  ಎಂಬ   ಆಪ್ ನಲ್ಲಿ  ಕ್ರಿಪ್ಟೋ ಕರೆನ್ಸಿಯಲ್ಲಿ  ಹಣ  ಹೂಡಿಕೆ ಮಾಡುತ್ತಿದ್ದು , ದಿನಾಂಕ:19-07-2023 ರಂದು   USDT  ಯಲ್ಲಿ  ಹಣ ಹೂಡಿಕೆ  ಮಾಡಿ  ಕ್ರಿಪ್ಟೋ ಕರೆನ್ಸಿಯನ್ನು  ಖರೀದಿಸಲು  ಸೆಲರ್ ಹುಡುಕುತ್ತಿರುವ  ಸಂಧರ್ಭ    ಸಫಿಕುಲ್  ಮೋಮಿನ್  ಎಂಬುವವರು   ಯು ಎಸ್ ಡಿ  ಟಿಯನ್ನು  ಮಾರಾಟ  ಮಾಡುತ್ತಿರುವುದು  ಕಂಡುಬಂದಿದ್ದು  ಅದರಂತೆ  ಪಿರ್ಯಾದಿದಾರರ  ಮಗಳು   ಅವರಲ್ಲಿದ್ದ  ಯು ಎಸ್ ಡಿ  ಟಿಯನ್ನು   ಕೊಂಡುಕೊಳ್ಳಲು  ಪಿರ್ಯಾದಿದಾರರ ಕರ್ನಾಟಕ ಬ್ಯಾಂಕ್  ಖಾತೆ   ನಂನೇದ್ದರಿಂದ  ರೂ   . 40,000/-ಹಣವನ್ನು  ಗೂಗಲ್  ಪೇ  ಮುಖೇನ    ಆತನ  UPI  ID  : 896118suniomerchant@nsdl ಗೆ  ಹಣವನ್ನು  ವರ್ಗಾಯಿಸಿದ್ದು , ಈ ಬಗ್ಗೆ  ಆತನಲ್ಲಿ ಹಲವು ಬಾರಿ    ಯು ಎಸ್ ಡಿಟಿಯನ್ನು   ನೀಡುವಂತೆ  ವಿನಂತಿಸಿದರೂ, ಯು ಎಸ್ ಡಿಟಿಯನ್ನು   ನೀಡದೆ  ಹಣವನ್ನು  ವಾಪಾಸ್ಸು  ಮಾಡದೇ  ಮೋಸ ಮಾಡಿ  ವಂಚಿಸಿರುವುದಾಗಿದೆ. ಎಂಬಿತ್ಯಾದಿಯಾಗಿದೆ.

Urva PS

ದಿನಾಂಕ 11-11-2023 ರಂದು ಪ್ರಕರಣದ ಪಿರ್ಯಾದಿ ಅಶೋಕ್ ಪೂಜಾರಿಯವರು ರಾತ್ರಿ ಸಮಯ ಸುಮಾರು 10-00 ವೇಳೆಗೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿಯಲ್ಲಿರುವ ಕೋಸ್ಟಲ್ ಬಾರ್ ನಿಂದ ಮಧ್ಯ ಖರೀದಿ ಮಾಡಲು ಹೋಗಿದ್ದ ಸಮಯ ಕೋಸ್ಟಲ್ ಬಾರ್ ನ ಕೌಂಟರ್ ಬಳಿ ಪಿರ್ಯಾದಿದಾರರಿಗೆ ನೋಡಿ ಪರಿಚಯದ ಅನೂಪ್ ಮತ್ತು ರೀತು ರವರೊಳಗೆ ಯಾವುದೋ ವಿಚಾರದಲ್ಲಿ ಮಾತಿನ ಚಕಮಕಿ ನಡೆಯುತ್ತಿದ್ದು ಇದನ್ನು ಕಂಡ ಪಿರ್ಯಾದಿದಾರರು ಅವರಲ್ಲಿ ಬಾರಿನ ಒಳಗಡೆ ಗಲಾಟೆ ಮಾಡಬೇಡಿ ಹೊರಗಡೆ ಹೋಗಿ ಎಂದು ಹೇಳಿದಾಗ ಪಿರ್ಯಾದಿದಾರರಿಗು ಆರೋಪಿ ರೀತು ರವರಿಗೂ ಮಾತಿನ ಚಕಮಕಿ ನಡೆದು ಪಿರ್ಯಾದಿದಾರರಿಗೆ ಆರೋಪಿ ರೀತು ವಿನಃ ಕಾರಣ “ ಬೇವರ್ಸಿ ರಂಡೆ ಮಗ ” ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದಾಗ ಪಿರ್ಯಾದಿದಾರರು ಆರೋಪಿಯನ್ನು ದೂರಕ್ಕೆ ತಳ್ಳಿದ್ದು ಆ ಸಮಯ ಕೋಪಗೊಂಡ ಆರೋಪಿ ರೀತು ಕೌಂಟರ್ ನಲ್ಲಿದ್ದ ಬಿಯರ್ ಬಾಟಲಿಯನ್ನು ತೆಗೆದು ಪಿರ್ಯಾದಿದಾರರ ತಲೆಗೆ ಹೊಡೆದಿದ್ದು ಅದೇ ಸಮಯ ಆತನ ಜೊತೆಗಿದ್ದ ಕೊಟ್ಟಾರ ಚೌಕಿಯ ವಿಶ್ವ ಎಂಬವನು ಕೂಡ ಸೋಡಾ ಬಾಟಲಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದು ತೀವ್ರ ಸ್ವರೂಪದ ರಕ್ತಗಾಯವನ್ನುಂಟು ಮಾಡಿರುವುದಲ್ಲದೇ ಆರೋಪಿಗಳ ಪೈಕಿ ರೀತು ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಬಿಯರ್ ಬಾಟಲಿಯ ಚೂರಿನಿಂದ ಪಿರ್ಯಾದಿದಾರರ ಕುತ್ತಿಗೆಗೆ ತಿವಿದಾಗ ಪಿರ್ಯಾದಿದಾರರು ತಲೆಯನ್ನು ಬಗ್ಗಿಸಿದ ಪರಿಣಾಮ ಬಾಟಲಿಯ ಏಟು ಪಿರ್ಯಾದಿದಾರರ ಕುತ್ತಿಗೆಯ ಬದಲು ತಲೆಗೆ ತಾಗಿ ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತದೆ. ಅಲ್ಲದೇ ಆರೋಪಿಗಳು ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ನೀನು ಸಾಯಲೇಬೇಕು ಎಂದು ಹೇಳಿ ಅದೇ ಬಿಯರ್ ಬಾಟಲಿ ಮತ್ತು ಸೋಡಾ ಬಾಟಲಿ ಚೂರಿನಿಂದ ಪಿರ್ಯಾದಿದಾರರ ತಲೆ, ಮುಖದ ಭಾಗಗಳಿಗೆ ಅಲ್ಲಲ್ಲಿ ತಿವಿದು ಕೊಲೆ ಮಾಡಲು ಪ್ರಯತ್ನಿಸಿರುವುದಲ್ಲದೇ, ಆರೋಪಿ ವಿಶ್ವನು ಸೋಡಾ ಬಾಟಲಿಯ ಖಾಲಿ ಟ್ರೇ ಯಿಂದ ಪಿರ್ಯಾದಿದಾರರ ತಲೆಗೆ, ಬೆನ್ನಿಗೆ ಮತ್ತು ಮುಖಕ್ಕೆ ಬಲವಾಗಿ ಹೊಡೆದು ರಕ್ತ ಗಾಯವನ್ನು ಗೊಳಿಸಿದ ಸಮಯ ಒಂದನೇ ಆರೋಪಿ ರೀತು ಪಿರ್ಯಾದಿದಾರರ ಕೈಯನ್ನು ಹಿಡಿದೆಳೆದು ನೆಲಕ್ಕೆ ದೂಡಿ ಹಾಕಿ ಪಿರ್ಯಾದಿದಾರರ ಸೊಂಟಕ್ಕೆ ಗುದ್ದಿದಂತ ನೋವುಂಟು ಮಾಡಿರುತ್ತಾನೆ. ಆರೋಪಿಗಳು ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಬಿಯರ್ ಬಾಟಲಿ ಹಾಗೂ ಸೋಡಾ ಬಾಟಲಿ ಮತ್ತು ಟ್ರೇ ಯಿಂದ ಹೊಡೆದ ಪರಿಣಾಮ ಪಿರ್ಯಾದಿದಾರರ ತಲೆ, ಮುಖ, ಬೆನ್ನಿನ ಭಾಗಗಳಲ್ಲಿ ಹಾಗೂ ಮೂಗಿನ ಮೂಳೆ ಮುರಿತದಂತಹ ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತದೆ ಎಂಬಿತ್ಯಾದಿ.

Panambur PS

ದಿನಾಂಕ: 12-11-2023 ರಂದು ಸಂಜೆ 18-00 ಗಂಟೆಗೆ ಠಾಣಾ ಸರಹದ್ದಿನ 62 ನೇ ತೋಕುರು ಗ್ರಾಮದ ತೊಕುರು ರೇಲ್ವೇ ಸ್ಟೇಷನ್ ಬಳಿ ಕಾಡುಪೊದೆಗಳು ಬೆಳೆದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅದೃಷ್ಟದ ಆಟವಾದ ಅಂದರ್ ಬಾಹರ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಮಾಹಿತಿಯು ದೊರೆತಂತೆ ಪರಿಶೀಲಿಸಿಕೊಂಡು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಸಮಯ 19-45 ಗಂಟೆಗೆ ದಾಳಿ ಮಾಡಿದ್ದು ಜೂಜಾಟದಲ್ಲಿ ಭಾಗಿಯಾದ 07 ಜನRajasab Nadaf(A1) Kantesh B Melinamani(A2)  Thimmanna Vaddar(A3) Kallappa(A4) Sharappa(A5)  Shivananda(A6) Viresh(A7) ಯುವಕರುಗಳು ಹಾಗೂ ಈ ಜೂಜಾಟಕ್ಕೆ ಉಪಯೋಗಿಸಿದ ರೂ. 5220/- ಹಣ, 52 ಇಸ್ಪೀಟು ಎಲೆಗಳು, 04 ಉರಿದ ಮೇಣದ ಬತ್ತಿ ಹಾಗೂ ಹಳೆಯ ನ್ಯೂಸ್ ಪೇಪರನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ಸದ್ರಿ 07 ಜನರ ವಿರುದ್ದ ಕಾನೂನು ಕ್ರಮಕ್ಕಾಗಿ ವರದಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 13-11-2023 05:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080