ಅಭಿಪ್ರಾಯ / ಸಲಹೆಗಳು

Crime Report in : Bajpe PS

ಪಿರ್ಯಾದಿದಾರರು ಮಂಗಳೂರು ತಾಲೂಕು ಬಜಪೆ ಗ್ರಾಮದ ಶಾಹಿಸ್ತಾ ಮಂಜೀಲ್ ಕೆ ಪಿ ನಗರ ಎಂಬಲ್ಲಿ ತಾಯಿ ಮತ್ತು ಹೆಂಡತಿ ಮಗನೊಂದಿಗೆ ವಾಸವಾಗಿದ್ದು ಪಿರ್ಯಾದಿದಾರರು ಸುಮಾರು 06 ವರ್ಷಗಳ ಹಿಂದೆ ಸುಳ್ಯದ ಯೂಸುಫ್ ಎಂಬುವರ ಮಗಳಾದ ಶೆರಿನಾ (24) ಎಂಬುವರನ್ನು ಹಿರಿಯರ ಮಾತುಕತೆಯೊಂದಿಗೆ ಪರಸ್ಪರ ಒಪ್ಪಿ ಮದುವೆಯಾಗಿದ್ದು 3 ವರ್ಷದ ಗಂಡು ಮಗುವಿದ್ದು ಪಿರ್ಯಾದಿದಾರರ ಹೆಂಡತಿ ಶರೀನಾಳು ಪುನಃ 5 ತಿಂಗಳ ಗರ್ಭಿಣಿಯಾಗಿರುತ್ತಾರೆ. ಪಿರ್ಯಾದಿದಾರರ ಜೊತೆ ಅನ್ಯೂನ್ಯವಾಗಿದ್ದು ,ದಿನಾಂಕ 11/12-12-2023 ರಂದು ರಾತ್ರಿ ಎಲ್ಲರೂ ಮಲಗಿಕೊಂಡಿದ್ದಾಗ ಸಮಯ ಸುಮಾರು ರಾತ್ರಿ 2.45 ಗಂಟೆಗೆ ಪಿರ್ಯಾದಿದಾರರ ಹೆಂಡತಿ ಶೆರಿನಾಳು  ತನ್ನ ಮಗನನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುತ್ತಾಳೆ ಈ ಬಗ್ಗೆ ಪಿರ್ಯಾದಿದಾರರು ಬೆಳಗ್ಗೆ 08.00 ಗಂಟೆಗೆ ಮನೆಯ ಎದುರಿನ ಸಿಸಿಟಿವಿ ಪುಟೇಜ್ ನೋಡಿದಾಗ ತಿಳಿದುಕೊಂಡರು ತಾನು ಮನೆ ಬಿಟ್ಟು ತಾಯಿ ಮನೆಗೆ ಹೋಗುತ್ತಿರುವುದಾಗಿ ಬ್ಯಾರಿ ಭಾಷೆಯಲ್ಲಿ ಚೀಟಿ ಬರೆದಿಟ್ಟು ಹೋಗಿದ್ದು ಪಿರ್ಯಾದಿದಾರರು ಶೆರಿನಾಳ ತಾಯಿಗೆ ಫೋನ್ ಮಾಡಿ ವಿಚಾರಿಸಿದ್ದು ಮತ್ತು ನೆರೆಕೆರ ನೆಂಟರ ಮನೆಯಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಆದ್ದರಿಂದ ದೂರು ನೀಡಿರುವುದಾಗಿದೆ

 

Moodabidre PS

ದಿನಾಂಕ 09-12-2023ರಂದು ಪಿರ್ಯಾದಿ B Yallappa ದಾರರು ಮತ್ತು ತನ್ನ ಕುಟುಂಬದವರು KA-51-C-4064 ನಂಬರಿನ ಬಸ್ಸಿನಲ್ಲಿ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆಂದು ಹೊರಟು ಸೌದತ್ತಿ, ಗೋಕರ್ಣ, ಆನೆಗುಡ್ಡೆ, ಮುರ್ಡೆಶ್ವರ, ಉಡುಪಿ, ಮಲ್ಪೆ ಬೀಚ್ ಕಡೆಗಳಲ್ಲಿ ಪ್ರವಾಸ ಮುಗಿಸಿ ದಿನಾಂಕ 12-12-2023 ರಂದು ಕಟೀಲು ದೇವಸ್ತಾನಕ್ಕೆ ತಲುಪಿ ಮಧ್ಯಾಹ್ನ ದೇವರ ದರ್ಶನ ಮುಗಿಸಿಕೊಂಡು ಸುಮಾರು 2:30 ಗಂಟೆಗೆ ಧರ್ಮಸ್ಥಳಕ್ಕೆ ಹೋಗಲು ಕಟೀಲಿನಿಂದ ಹೊರಟಿದ್ದು, ಸದ್ರಿ ಬಸ್ಸಿನಲ್ಲಿ ಮೂರುಕಾವೇರಿ ಎಂಬಲ್ಲಿಗೆ ತಲುಪಿ ಅಲ್ಲಿಂದ ಮೂಡಬಿದ್ರೆ ಮಾರ್ಗವಾಗಿ ಬರುತ್ತಾ ಸುಮಾರು 3:30 ಗಂಟೆಗೆ ಮೂಡಬಿದ್ರೆಯ ಕುದ್ರಿಪದವು ಬಳಿಯ ದಡ್ಡು ಕೋಡಿ ಎಂಬಲ್ಲಿಗೆ ತಲುಪುತಿದ್ದಂತೆ ತಿರುವು ರಸ್ತೆಯಲ್ಲಿ ಬಸ್ಸು ಚಾಲಕನಾದ ಹಬೀಬ್ ದಿಲ್ ಸಾಬ್ ಎಂಬಾತನು ಬಸ್ಸನ್ನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿದ ಪರಿಣಾಮ ಬಸ್ಸಿನ ಹಿಂಬದಿಯ ಡೋರಿನ ಬಳಿ ನಿಂತಿದ್ದ ಬದಲಿ ಚಾಲಕನಾದ ಪ್ರಸಾದ್ ಕೆ.ಬಿ ಎಂಬವರು ಬಸ್ಸಿನಿಂದ ಕೆಳಕ್ಕೆ ಎಸೆಯಲ್ಪಟ್ಟು, ಪ್ರಸಾದ್ ರವರ ಎಡ ಹಣೆಯ ಬಳಿ ಗುದ್ದಿದ ರೀತಿಯ ಗಾಯ ಮತ್ತು ಬೆನ್ನಿಗೆ ತರಚಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಕಲ್ಲಮುಂಡ್ಕೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪ್ರಸಾದ್ ನನ್ನು ಪರೀಕ್ಷಿಸಿದ ವೈಧ್ಯರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 13-12-2023 08:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080