ಅಭಿಪ್ರಾಯ / ಸಲಹೆಗಳು

Bajpe PS

ಪಿರ್ಯಾದಿ Krishna Rai  ದಿನಾಂಕ 13.02.2023 ರಂದು ಸುರತ್ಕಲ್ ನಲ್ಲಿ ಕೋಡಿಕೆರೆಯಲ್ಲಿ ಕೋಲವನ್ನು ಮುಗಿಸಿಕೊಂಡು ತಮ್ಮ ಪರಿಚಯದ ರಮೇಶ್ ಎಂಬುವರ ರೀಕ್ಷಾ ನಂ KA19AB3017ನೇ ದರಲ್ಲಿ ಸಮಯ ರಾತ್ರಿ 9.30 ಗಂಟೆಗೆ ಹೊರಟಿದ್ದು ರಾತ್ರಿ ಸುಮಾರು 10.30 ಗಂಟೆಗೆ ಮಂಗಳೂರು ತಾಲೂಕು ಮೂಡುಪೆರೆರಾ ಗ್ರಾಮದ ಈಶ್ವರ ಕಟ್ಟೆ ತಲುಪಿದಾಗ ರೀಕ್ಷಾದ ಚಾಲಕನಾದ ರಮೇಶ್ ಎಂಬುವರು ತಮ್ಮ ರೀಕ್ಷಾ ವನ್ನು ಅತೀವೇಗ ಮತ್ತು ಅಜಾಗಾರುಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ನಾಯಿಯೊಂದು ಒಮ್ಮೇಲೆ ಅಡ್ಡ ಬಂದಿದ್ದು ರಿಕ್ಷಾಚಾಲಕನು ಒಮ್ಮೆಲೆ ಬ್ರೇಕ್ ಹಾಕಿದಾಗ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಮಗಚಿ ಬಿದಿದ್ದು ಈ ಅಫಘಾತದಿಂದ ಪಿರ್ಯಾದಿದಾರರ ಹೆಂಡತಿಗೆ ಕೈ ಮತ್ತು ಭುಜಕ್ಕೆ  ತರಚಿದ ರಕ್ತಗಾಯ ಮತ್ತು ಗುದ್ದಿದ ಮೂಳೆ ಮುರಿತದ ಗಾಯಾಗಾಳಾಗಿದ್ದು ಪಿರ್ಯಾದಿದಾರರಿಗೆ ಎರೆಡು ಕೈಗಳಿಗೆ ತರಚಿದ ರಕ್ತಗಾಯವಾಗಿದ್ದು ರಿಕ್ಷಾ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ನಂತರ ಪಿರ್ಯಾದಿದಾರರ ಪತ್ನಿಯನ್ನು ಮಂಗಳೂರಿನ ಸಿಟಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

CEN Crime PS Mangaluru City

ಪಿರ್ಯಾದಿ  PROVIDENTCE BUILDERS & DEVELOPERS ನವರಿಂದ    ಪ್ಲಾಟ್ ಖರಿದಿಸುವರೆ ಮಾತುಕತೆ ನಡೆಸಿದ್ದು ದಿನಾಂಕ 26-06-2015 ರಂದು  PROVIDENTCE BUILDERS & DEVELOPERS ಎಂಬ ಸಂಸ್ಥೆಯ ಪಾಲುದಾರರಾದ ಆರೋಪಿ ಜೋನ್ ಸಿಲ್ವೆಸ್ಟರ್ ಸಲ್ದಾನ ತಂದೆ: ದಿ: ಲೂಯಿಸ್ ಸಲ್ದಾನ್ ಮತ್ತು ಜೀನ್ ರೂಪಾ ಸಲ್ದಾನ ಗಂಡ: ಜೋನ್ ಸಿಲ್ವೆಸ್ಟರ್ ಸಲ್ದಾನ ಎಂಬವರೊಂದಿಗೆ PROVIDENT DASHA ಎಂಬ ಹೊಸ ವಸತಿ ಸಮುಚ್ಚಯದ ಎರಡನೇ ಮಹಡಿಯ 003 ಮನೆಯನ್ನು ಖರೀದಿ ಮಾಡುವ ಬಗ್ಗೆ ಕರಾರು ಪತ್ರ  ಮಾಡಿಕೊಂಡಿರುತ್ತಾರೆ .  ನಂತರದಲ್ಲಿ ಹಂತ ಹಂತ ವಾಗಿ ಒಪ್ಪಂದದಂತೆ  ರೂ 26 ಲಕ್ಷ ಹಣವನ್ನು ಫಿರ್ಯಾದಿದಾರರು ಆರೋಪಿಗಳಿಗೆ ಪೂರ್ತಿಯಾಗಿ ನೀಡಿರುತ್ತಾರೆ. ಸದ್ರಿ ಕಟ್ಟಡ ನಿರ್ಮಾಣದ ಜಾಗವು ಆರೋಪಿ 3 ನೇ ಅನಿಲ್ ವೇಗಸ್ ತಂದೆ: ಅಲ್ಪಾನ್ಸೋ ವೇಗಸ್ ಮತ್ತು 4 ನೇ ಮಾವೀಸ್ ಎಸ್. ಜೆ.ವೇಗಸ್ ಗಂಡ: ಅನಿಲ್ ವೇಗಸ್ ರವರಿಗೆ ಸೇರಿರುವುದಾಗಿದೆ. ನಂತರದ ದಿನಗಳಲ್ಲಿ  ಫಿರ್ಯಾದಿದಾರರಿಗೆ ಒಪ್ಪಿಸಬೇಕಾದ ವಸತಿಯನ್ನು ಒಪ್ಪಿಸದೇ, ಆರೋಪಿ 1 ರಿಂದ 4 ನೇಯವರು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಪಿರ್ಯಾದಿರಾರಂತೆ ನಟಿಸಿ, ಸದ್ರಿ ವಸತಿಯನ್ನು ಪಿರ್ಯಾದಿದಾರರಿಗೆ ಯಾವುದೇ ಮಾಹಿತಿ ಇಲ್ಲದೇ ಇದನ್ನು ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಗೆ 2 ಕೋಟಿ ಗೆ ಅಡಮಾನ ಇರಿಸಿ, ಪಿರ್ಯಾದಿದಾರರಿಗೆ ಮೋಸ ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಆರೋಪಿಗಳೊಂದಿಗೆ ಈ ವಿಚಾರವನ್ನು ಕೇಳಿದಾಗ ಆರೋಪಿಗಳು  ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೇವ ಬೆದರಿಕೆ ಮಾಡಿರುವುದಾಗಿದೆ.

 

Traffic South Police Station

ದಿನಾಂಕ:13-02-2023 ರಂದು ಪಿರ್ಯಾದಿ ಅಯ್ಯಪ್ಪಯ್ಯ ಲೋಕಯ್ಯ ಹೀರೆಮಠ (45 ವರ್ಷ) ರವರು ಅವರ ಪಿಜಿಯಲ್ಲಿರುವ ಹುಡುಗ ಕ್ರಿಶ್ ನ ಜೊತೆ ವಳಚ್ಚಿಲ್ ನಿಂದ ಆಟೋ ರಿಕ್ಷಾ ನಂಬ್ರ KA-19-AC-5473 ನೇದನ್ನು ಬಾಡಿಗೆ ಮಾಡಿಕೊಂಡು ಪಡೀಲ್ ಮಾರ್ಗವಾಗಿ ಪಂಪವೆಲ್ ಕಡೆಗೆ ಬರುತ್ತಾ ಸಮಯ ಸಮಾರು ಬೆಳಿಗ್ಗೆ 11:30 ಗಂಟೆಗೆ ನಾಗೂರಿಯ ಅಮರ್ ಆಳ್ವ ಬಸ್ ಸ್ಟಾಪ್ ಹತ್ತಿರ ತಲುಪಿದಾಗ ಅವರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾದ ಎದುರಿನಿಂದ ಅಂದರೆ ಪಂಪವೆಲ್ ಕಡೆಯಿಂದ ಪಡೀಲ್ ಕಡೆಗೆ ಬರುತ್ತಿದ್ದ ಕಾರು ನಂಬ್ರ KA-19-AC-5056 ನೇದನ್ನು ಅದರ ಚಾಲಕ ಮಂಗಳೂರು ಜಂಕ್ಷನ್ ರೈಲ್ವೆ ಸ್ಟೇಷನ್ ಕಡೆಗೆ ಹೋಗಲು ತಿರುಗಿಸುತ್ತಿರುವಾಗ ಆ ಸಮಯ ಪಿರ್ಯಾದಿದಾರರು ಪ್ರಯಾಣಿಸುತ್ತಿರುವ ಆಟೋರಿಕ್ಷಾ ನಂಬ್ರ KA-19-AC-5473 ನೇದನ್ನು ಅದರ ಚಾಲಕ ಕಮಲಾಕ್ಷ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಕೊಂಡು ಹೋಗಿ ಸದ್ರಿ ಕಾರಿನ ಎದುರಿಗೆ ಆಟೋರಿಕ್ಷಾವನ್ನು ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾದಲ್ಲಿದ್ದ ಪಿರ್ಯಾದಿದಾರರಿಗೆ ಎಡ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ನಂತರ ಅವರ ಜೊತೆ ಇದ್ದ ಕ್ರಿಶ್  ಅವರನ್ನು ಚಿಕಿತ್ಸೆ ಬಗ್ಗೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ, ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 14-02-2023 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080