ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore East PS

ಈ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ Muneeshwari ಇವರು ತಮ್ಮ ಮಕ್ಕಳು ಮತ್ತು ತಂದೆ ತಾಯಿಯ ಜೊತೆಗೆ ವಾಸವಾಗಿದ್ದು ಅವರ ತಂದೆಯವರಾದ ಶ್ರೀ ಶಂಕರ್, ಪ್ರಾಯ 80 ವರ್ಷರವರು ಈ ಹಿಂದೆ ರಬ್ಬರ್ ಬೋರ್ಡ್ ನಲ್ಲಿ ಕೆಲಸ ಮಾಡಿ ನಿವೃತ್ತರಾಗಿರುತ್ತಾರೆ. ಸದ್ರಿಯವರು ದಿನಾಂಕ 14-02-2024 ರಂದು ಬೆಳಿಗ್ಗೆ ಸುಮಾರು 09.15 ಗಂಟೆಗೆ ಮನೆಯಿಂದ ಕಡಬಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿರುತ್ತಾರೆ. ಈ ರೀತಿ ಹೊರಟು ಹೋದವರು ನಂತರ ಅವರು ರಾತ್ರಿಯಾದರೂ ಕಡಬದಲ್ಲಿ ಇರುವ ಫಿರ್ಯಾದಿಯ ತಂಗಿಯ ಮನೆಗಾಗಲೀ ವಾಪಾಸು ಫಿರ್ಯಾದಿಯ ಮನೆಗಾಗಲೀ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗದ ಕಾರಣ, ಕಾಣೆಯಾದ ಅರ್ಜಿದಾರರ ತಂದೆಯವರನ್ನು ಪತ್ತೆಮಾಡಿಕೊಡಬೇಕಾಗಿ ಎಂಬಿತ್ಯಾದಿ.

 

Konaje PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:15-02-2024 ರಂದು ಪಿರ್ಯಾದಿ Puneeth M Gaonkar  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಮಧ್ಯಾಹ್ನ ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಗೌಸಿಯ ಮಸೀದಿ ಹತ್ತಿರ ತಲುಪಿದಾಗ ಇಬ್ಬರು ಯುವಕರು 1) ಮಹಮ್ಮದ್ ಮನ್ಸೂರ್ ಎಸ್ ಎಮ್, ಪ್ರಾಯ: 29 ವರ್ಷ, ತಂದೆ: ಎಸ್ ಎಮ್ ಅಬ್ದುಲ್ಲ ವಾಸ: #2-138 ಸಿ,ಅರ್ಕಾನ ಸಂಬಾರ್ ತೋಟ ಮನೆ ಬಂಟ್ವಾಳ ತಾಲೂಕು ಕುರ್ನಾಡ್ ಅಂಚೆ, ಪಜೀರು. ಮತ್ತು  2) ಮೂಸೆ ಕುಂಞ ಎಮ್ ತಂದೆ: ಉಮರ್ ಕುಂಞ, ವಾಸ: #2-147/ಇ ಸಂಬಾರ್ ತೋಟ ಮನೆ, ಪಜೀರ್ ಗ್ರಾಮ ಬಂಟ್ವಾಳ ತಾಲೂಕು,ಕುರ್ನಾಡು  ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಎಂಬವರನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ನಾಟೇಕಲ್ ಕಣಚೂರು ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಗಳು MARIJUANA(THC) ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

 

Mangalore East Traffic PS         

ಪಿರ್ಯಾದಿದಾರರಾದ ಪ್ರದೀಪ್ರವರ ಅಣ್ಣನಾದ ಪ್ರವೀಣ ಪ್ರಾಯ: 26 ವರ್ಷ ಎಂಬವರು ದಿನಾಂಕ: 14-02-2024 ರಂದು ಅವನ ಬಾಬ್ತು KA-19-HD-1667 ನಂಬ್ರದ ಮೋಟಾರ್ ಸೈಕಲಿನಲ್ಲಿ ಕುಂಟಿಕಾನ ದಿಂದ KPT ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 09:50  ಗಂಟೆಗೆ SKS ಅಪಾರ್ಟ್ ಮೆಂಟ್ ಜಂಕ್ಷನ್ ಸಮೀಪ ತಲುಪುವುದಕ್ಕೆ ಸುಮಾರು 150 ಮೀಟರ್ ಹಿಂದೆ NH 66ನೇ ಡಾಮಾರು ರಸ್ತೆಯಲ್ಲಿ ಪ್ರವೀಣ ರವರ ಮೋಟಾರು ಸೈಕಲಿನ ಹಿಂದಿನ ಬ್ರೇಕ್ ಕ್ಯಾಚ್ ಆದಂತೆ ಆಗಿ ತನ್ನ ಮೋಟಾರು ಸೈಕಲಿನ ನಿಯಂತ್ರಣ ತಪ್ಪಿ ಪ್ರವೀಣ ರವರು ಮೋಟಾರ್ ಸೈಕಲ್ ಸಮೇತ NH 66ನೇ  ಡಾಮಾರು ರಸ್ತೆಗೆ ಬಿದ್ದು, ಎಡಕಣ್ಣಿನ ಎಡಬದಿ, ಎಡಕೈ ಭುಜ, ಸೊಂಟದ ಎಡಬದಿ, ಬಲ ಕೈ ಮತ್ತು ಎರಡೂ ಕಾಲುಗಳಿಗೆ ಅಲ್ಲಲ್ಲಿ ತರಚಿದ ರೀತಿಯ ಗಾಯ, ಎದೆಯ ಎಡಬದಿ ಗುದ್ದಿದ ಒಳಗಾಯವಾಗಿ ಚಿಕಿತ್ಸೆಯ ಬಗ್ಗೆ AJ ಆಸ್ಪತ್ರೆಯಲ್ಲಿ ದಾಖಲಾಗಿ ರುತ್ತಾರೆ ಎಂಬಿತ್ಯಾದಿ

Traffic South Police

ಪಿರ್ಯಾದಿ Rajesha ಇವರು ದಿನಾಂಕ 14-02-2024 ರಂದು ತನ್ನ ಹೆಂಡತಿ ಸುಶ್ಮಿತಾಳನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ತನ್ನ ಬಾಬ್ತು KA 19 EF 1736 ನಂಬ್ರದ ಸ್ಕೂಟರಿನಲ್ಲಿ ಪಂಪ್ ವೆಲ್ ನಿಂದಾಗಿ ಪಡೀಲ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು 18-30 ಗಂಟೆಗೆ ಅಳಪೆ ಬಳಿ ತಲುಪುತ್ತಿದ್ದಂತೆ ರಸ್ತೆ ಎಡ ಬದಿಯಲ್ಲಿ ನಿಂತಿದ್ದ KA 19 MJ 8763 ನಂಬ್ರದ ಸ್ವಿಪ್ಟ್ ಕಾರನ್ನು ಅದರ ಚಾಲಕ ವಿನಯ್ ಬಿ ಆರ್ ದುಡುಕುತನ ಹಾಗು ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆಯನ್ನು ನೀಡದೆ ಇಂಡಿಕೇಟರ್ ಕೂಡ ಹಾಕದೆ ಒಮ್ಮೆಲೆ ಪಂಪ್ ವೆಲ್ ಕಡೆಗೆ ಬರುವರೇ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ಕಾರಿನ ಮುಂದಿನ ಎಡ ಬದಿಗೆ ಡಿಕ್ಕಿ ಹೊಡೆದು ಪಿರ್ಯಾದಿದಾರರು ಹಾಗು ಪಿರ್ಯಾದಿದಾರರ ಪತ್ನಿ ಸ್ಕೂಟರ್ ಸಮೇತ ಡಾಮರು ರಸ್ತೆಗೆ ಬಿದ್ದಿರುತ್ತಾರೆ. ಪಿರ್ಯಾದಿದಾರರಿಗೆ ತರಚಿದ ಗಾಯವಾಗಿರುತ್ತದೆ. ಮತ್ತು ಸಹ ಸವಾರಳಿಗೆ ಎಡ ಕೈ ಮಣಿಗಂಟಿಗೆ ಮೂಳೆ ಮುರಿತದ, ಗಾಯವಾಗಿರುತ್ತದೆ.ಗಾಯಾಳುಗಳನ್ನು ಅಪಘಾತಡಿಸಿದ ಅದೇ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಚಾಲಕನು ಮಂಗಳೂರಿನ ಕೊಲಾಸೊ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈಧ್ಯರು ಪಿರ್ಯಾದಿದಾರರನ್ನು ಹೊರ ರೋಗಿಯಾಗಿ ಹಾಗೂ ಸಹ ಸವಾರಳನ್ನು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಅಪಘಾತದಿಂದ ಕಾರು ಮತ್ತು ಸ್ಕೂಟರ್ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ 15-01-2024 ರಂದು ಪಿರ್ಯಾದಿ Yuvaraj Sadananda Poojary ಇವರ ಮೊಬೈಲಿಗೆ Instagram App ಮೂಲಕ ಬಂದ Stock Trading Ad ಎಂಬ ಲಿಂಕ್ ನ್ನು ಕ್ಲಿಕ್ ಮಾಡಿದ ಕೂಡಲೆ ಪಿರ್ಯಾದಿದಾರರ ವಾಟ್ಸ್ ಪ್ ಮೂಲಕ ಮೇಸೆಜ್ ಹೋಗಿದ್ದು, ಪಿರ್ಯಾದಿದಾರರನ್ನು Official Stock Securities 61 ಎಂಬ ಹೆಸರಿನ ವಾಟ್ಸ್ ಆಪ್ ಗ್ರೂಪ್ ಗೆ ಸೇರಿಸಿ ನಂತರ ಮೆಸೇಜ್ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು IPO HDFC app ನಲ್ಲಿ ತನ್ನ ಅಕೌಂಟ್ ಓಪನ್ ಮಾಡಿ ನಂತರ 31-01-2024 ರಂದು ತನ್ನ ಫೆಡರಲ್ ಬ್ಯಾಂಕ್ ಅಕೌಂಟ್ ನಿಂದ 38,900/- ರೂ ಹಣವನ್ನು Alpha Enterprises ಎಂಬ ಕಂಪೆನಿಯ ಇಂಡಸ್ ಬ್ಯಾಂಕ್ ನ ಅಕೌಂಟ್ಗೆ ಕಳುಹಿಸಿದ್ದು, ಅದೇ ದಿನ ಪಿರ್ಯಾದಿದಾರರಿಗೆ ರೂ 5000/- ಲಾಭವಾಗಿದ್ದು, ನಂತರ ದಿನಾಂಕ: 02-02-2024 ರಂದು ತನ್ನ ಎಕ್ಸೆಸ್ ಬ್ಯಾಂಕಿನ ಅಕೌಂಟ್ ದಿಂದ ರೂ 14,67000/- ರೂಪಾಯಿಯನ್ನು Bhole Creation ಎಂಬ ಕಂಪೆನಿಯ ಇಂಡಸ್ ಬ್ಯಾಂಕ್ ನ ಅಕೌಂಟ್ ಗೆ ಕಳುಹಿಸಿದ್ದು, ನಂತರ ಬಂದ ಲಾಭಾಂಶಕ್ಕೆ ರೂ 20,552.84/- ಟ್ಯಾಕ್ಸ್ ಕಟ್ಟಬೇಕೆಂದು ಮೇಸೆಜ್ ಬಂದಿದ್ದು, ಹಾಗೆ ಪಿರ್ಯಾದಿದಾರರು ದಿನಾಂಕ: 05-02-2024 ರಂದು ರಂದು ತನ್ನ ಎಕ್ಸೆಸ್ ಬ್ಯಾಂಕಿನ ಅಕೌಂಟ್ ದಿಂದ ರೂ 20,552.84/- ರೂಪಾಯಿಯನ್ನು S K Computer ಎಂಬ ಕಂಪೆನಿಯ ಪಂಜಾಬ್ ನ್ಯಾಷನಲ್  ಬ್ಯಾಂಕ್ ನ ಅಕೌಂಟ್ ಗೆ  ಕಳುಹಿಸಿರುತ್ತಾರೆ. ನಂತರ 2-3 ದಿನ ಪಿರ್ಯಾದಿದಾರರ ಮೊಬೈಲ್ ಗೆ ವ್ಯವಹಾರ ಲೇಟ್ ಅಗುತ್ತದೆ ನಿಮ್ಮ ಹಣ ನಿಮ್ಮ ಅಕೌಂಟಿಗೆ ಬರುತ್ತದೆ ಎಂದು ಮೇಸೆಜ್ ಗಳು ಬಂದಿದ್ದು, ನಂತರ ಪಿರ್ಯಾದಿದಾರರು ತನ್ನ ಮೊಬೈಲ್ ಗೆ ಮೆಸೇಜ್ ಬಾರದೇ ಇದ್ದು, ಪಿರ್ಯಾದಿದಾರರು ಪಾವತಿಸಿದ ಒಟ್ಟು ರೂ : 15,26,452.84/- ಹಣವನ್ನು ವಾಪಾಸು ಪಾವತಿಸದೇ ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

 

Kankanady Town PS

ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದುದಾರರಾದ ವಿನೋದ್ ಗಣೇಶ್ ನ್ಯಾಕ್ ಎಂಬವರು ಕೆ.ಎಸ್.ಆರ್.ಟಿ.ಸಿ 3 ನೇ ಘಟಕ ಮಂಗಳೂರಿನಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 13-02-2024 ರಂದು ಕೆಎ 19 ಎಫ್ 3284 ನಂಬ್ರದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ  ಕಂಡಕ್ಟರ್ ಸಂತೋಷ್ ಮಡಿವಾಳ ಜೊತೆ ರೂಟ್ ನಂಬ್ರ-43-44 ರಲ್ಲಿ, ಸಾಯಂಕಾಲ 6:00 ಗಂಟೆಗೆ ಸ್ಟೇಟ್ ಬ್ಯಾಂಕ್ ನಿಂದ ಧರ್ಮಸ್ಥಳಕ್ಕೆ ಹೋಗುವರೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಸ್ಟೇಟ್ ಬ್ಯಾಂಕ್ ನಿಂದ ಬಸ್ಸು ಚಲಾಯಿಸಿಕೊಂಡು ಹೊರಟು, ಸಾಯಂಕಾಲ 6:15 ಗಂಟೆ ಸುಮಾರಿಗೆ ಪಂಪ್ ವೆಲ್ ಸರ್ಕಲ್ ದಾಟಿಕೊಂಡು ಕಪಿತಾನಿಯ ಶಾಲೆಯ ಬಳಿ ತಲುಪಿದಾಗ, ರಸ್ತೆ ಅಗಲೀಕರಣ ಮಾಡುತ್ತಿರುವಲ್ಲಿ ರಸ್ತೆ ಬ್ಲಾಕ್ ಆಗಿದ್ದು, ಅಲ್ಲಿ ಬಸ್ಸನ್ನು ನಿಧಾನಕ್ಕೆ ಮುಂದಕ್ಕೆ ಚಲಾಯಿಸುತ್ತಿದ್ದಾಗ, ಬಸ್ ಸೈಲೆನ್ಸರ್  ನಿಂದ ಸ್ವಲ್ಪ ಹೊಗೆ ಬಂದಿದ್ದು, ಆಗ ಹಿಂದಿನಿಂದ ಸ್ಕೂಟರ್ ಒಂದನ್ನು ಅದರ ಸವಾರನು ಬಸ್ಸನ್ನು ಎಡಗಡೆಯಿಂದ ಓವರ್ ಟೇಕ್ ಮಾಡಿ,, ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬಸ್ಸಿಗೆ ಸ್ಕೂಟರನ್ನು ಅಡ್ಡಲಾಗಿ ಇಟ್ಟು, ಬಸ್ಸನ್ನು ತಡೆದು ನಿಲ್ಲಿಸಿ, ಪಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ್ಯ ಶಬ್ದಗಳಿಂದ ಬೈದುದಲ್ಲದೇ, ಬಸ್ಸಿನ ಎದುರುಗಡೆಯ ಬಾಗಿಲಿನಿಂದ ಬಸ್ಸಿನೊಳಗೆ ಬಂದು, ಪಿರ್ಯಾದಿದಾರರ ಕೈ ಹಿಡಿದು ಎಳೆದು, ಅವರ ಬೆನ್ನಿನ ಮೇಲ್ಗಡೆ ಭಾಗಕ್ಕೆ ಕೈಯಿಂದ ಗುದ್ದಿ ಹಲ್ಲೆ ನಡೆಸಿ, ಅವನು ಬಂದಿದ್ದ ಸ್ಕೂಟರಿನಲ್ಲಿ ಹೋಗಿರುತ್ತಾನೆ. ಪಿರ್ಯಾದಿದಾರರು ಸ್ಕೂಟರಿನ ನಂಬ್ರ ನೋಡಲಾಗಿ ಕೆ.ಎ-19-ಹೆಚ್.ಜೆ-7500 ನಂಬ್ರದ ನೀಲಿ ಬಣ್ಣದ್ದಾಗಿರುತ್ತದೆ. ಪಿರ್ಯಾದಿದಾರರು ಬಸ್ಸಿನಲ್ಲಿ ತುಂಬಾ ಪ್ರಯಾಣಿಕರಿದ್ದ ಕಾರಣ ಬಸ್ಸನ್ನು ಧರ್ಮಸ್ಥಳಕ್ಕೆ ಕೊಂಡು ಹೋಗಿ  ಅಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ, ಬೆಳ್ತಂಗಡಿಯ ತಾಲೂಕು ಸಾರ್ವಜನಿಕ  ಆಸ್ಪತ್ರೆಗೆ ಚಿಕಿತ್ಸೆಗೆಗಾಗಿ ತೆರಳಿದ್ದಲ್ಲಿ ವೈದ್ಯರು ಪಿರ್ಯಾದಿದಾರರನ್ನು ಪರೀಕ್ಷಿಸಿ ಒಳ-ರೋಗಿಯನ್ನಾಗಿ ದಾಖಲು ಮಾಡಿರುತ್ತಾರೆ. ಸ್ಕೂಟರ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

 

Panambur PS

ಪಿರ್ಯಾದಿ KARTHIK SHETTY ಇವರು  ಸುಮಾರು 8 ತಿಂಗಳಿನಿಂದ ಪಣಂಬೂರು ಟಿಂಬರ್ ಯಾರ್ಡ್ ನಲ್ಲಿರುವ ಗಣೇಶ್ ಶಿಪ್ಪಿಂಗ್ ಕಂಪೆನಿಯಲ್ಲಿ ಟ್ರಾನ್ಸ್ ಪೋರ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಸದ್ರಿ ಗಣೇಶ್ ಶಿಪ್ಪಿಂಗ್ ಕಂಪೆನಿಗೆ ಸಂಬಂಧಿಸಿದ ಲಾರಿಗಳನ್ನು ಮಂಗಳೂರು ನಗರದ ಪಣಂಬೂರು ಎನ್.ಎಂ.ಪಿ.ಟಿ. ಯಲ್ಲಿರುವ ಟಿಂಬರ್ ಯಾರ್ಡ್ ನಲ್ಲಿ ಪಾರ್ಕ್ ಮಾಡುವುದಾಗಿದೆ. ಹೀಗಿರುತ್ತಾ ಸದ್ರಿ ಕಂಪೆನಿಯ ಬಾಬ್ತು ಪಾರ್ಕ್ ಮಾಡಿರುವ ಲಾರಿ ನಂಬ್ರ KA 19 AA7457 ಮತ್ತು KA19AB 7464 ನೇ ಲಾರಿಗೆ ಸಂಬಂಧಿಸಿದ ಒಟ್ಟು 4 ಬ್ಯಾಟರಿಗಳನ್ನು ದಿನಾಂಕ 12-02-2024 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ 13-02-2024 ರ ಬೆಳಿಗ್ಗೆ 09-30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿ ಹಾಗೂ ಹಾಗೂ ಲಾರಿಯ ಚಾಲಕರು ಕಳವಾದ ಬ್ಯಾಟರಿಯ ಬಗ್ಗೆ ಹುಡುಕಾಡಿದ್ದಲ್ಲಿ ಪತ್ತೆಯಾಗಿರುವುದಿಲ್ಲ. ಸದ್ರಿ ಕಂಪೆನಿಯ ಲಾರಿಗಳಿಂದ ಕಳವಾದ ಬ್ಯಾಟರಿಗಳ ಅಂದಾಜು ಮೌಲ್ಯ ರೂ. 45,000/- ಆಗಬಹುದು, ಕಳವಾದ ಬ್ಯಾಟರಿಗಳ ನಂಬ್ರಗಳು 1) ಲಾರಿ ನಂಬ್ರ KA 19 AA7457- A1D3D406238 ಮತ್ತು A4A3C019801 ,  2) ಲಾರಿ ನಂಬ್ರ KA19AB 7464 – A1D3D4066275 ಮತ್ತು A1D3D4405838 ಆದುದರಿಂದ ಕಳವಾದ ಬ್ಯಾಟರಿಗಳನ್ನು ಪತ್ತೆ ಹಚ್ಚಲು ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ

 

Mangalore East PS

ಈ ಪ್ರಕರಣದ ಸಾರಾಂಶವೇನೆಂದರೆ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗ ವತಿಯಿಂದ ರಚಿಸಲಾಗಿರುವ Anti Drug Team ತಂಡದ ಅಧಿಕಾರಿ ಪೊಲೀಸ್ ಉಪ ನಿರೀಕ್ಷರಾದ ಪ್ರದೀಪ್ ಟಿ ಆರ್ ಉತ್ತರ ಪೊಲೀಸ್ ಠಾಣೆ ರವರು ದಿನಾಂಕ: 14-02-2024 ರಂದು  ಬೆಳ್ಳಗ್ಗೆ Anti Drug Team ನ ಉರ್ವ ಪೊಲೀಸ್ ಠಾಣಾ ಸಿಬ್ಬಂದಿ ರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ  ಯೆಯ್ಯಾಡಿ ಜಂಕ್ಷನ್  ಬಳಿ ತಲುಪಿದಾಗ ರಂಜಿತ್ ಪ್ರಾಯ; 29 ವರ್ಷ ತಂದೆ: ಲೋಕನಾಥ ವಾಸ: 6-12/30, 11 ನೇ ಬಿ ಕ್ರಾಸ್ ಜೋಕಟ್ಟೆ, ಕೋಡಿಕಲ್ ಮಂಗಳೂರು  ಎಂಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು, ಆತನನ್ನು  ಕುಂಟಿಕಾನ ಎ ಜೆ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕಳುಹಿಸಿ ಕೊಡಲಾಗಿದ್ದು ತಪಾಸಣೆ ಮಾಡಿದ ವೈದ್ಯರು ಪರಿಕ್ಷೀಸಿ TETRAHYDARCANNABINOID(MARIJUANA) 50ng per ml POSITIVE ಸೇವನೆ ಮಾಡಿರುವುದಾಗಿ ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

 

Surathkal PS

ದಿನಾಂಕ 13-02-2024 ರಂದು ರಾತ್ರಿ ಪಿರ್ಯಾದಿದಾರರಾದ  ರಘು ನಾಯಕ ಪಿ.ಎಸ್.ಐ ಸುರತ್ಕಲ್ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಾ ಸುರತ್ಕಲ್, ಚೊಕ್ಕಬೆಟ್ಟು, ಕಾನಾ, ಇಡ್ಯಾ, ಅಗರಮೇಲು ಮುಂತಾದ ಕಡೆಗಳಲ್ಲಿ ರೌಂಡ್ಸ್ ಮಾಡುತ್ತಾ ರಾತ್ರಿ ಮುಕ್ಕ ಜಂಕ್ಷನ್ ಬಳಿ ಇರುವ ರೆಡ್ ರಾಕ್ಸ್ ಬೋರ್ಬನ್ ಕೆಫೆ ಬಳಿ ಬಂದಾಗ  ಸಾರ್ವಜನಿಕ ರಸ್ತೆಯ ಬಳಿ ಇಬ್ಬರು ಯುವಕರು  1) ಸೂರಜ್.ಎಮ್.ರೇವನ್ಕರ್, ಪ್ರಾಯ: 29 ವರ್ಷ, ತಂದೆ: ಮಂಜುನಾಥ, ವಾಸ: 8-1-86/45, ಗುಲಾಬಿ ಶ್ರೀಪಾದ ನಿವಾಸ, ಕುದ್ರೋಳಿ, ಅಳಕೆ, ಮಂಗಳೂರು ತಾ ದ.ಕ ಜಿಲ್ಲೆ. ಮತ್ತು 2) ಹರ್ಶ್ ಕೀರ್ತಿ ರಾವ್, ಪ್ರಾಯ: 30 ವರ್ಷ, ತಂದೆ: ಕೀರ್ತಿ ಕುಮಾರ್, ವಾಸ: ಸೂರ್ಯ ಕಿರಣ್ ಮನೆ, ಜೆಪ್ಪು ಬಳಿ, ಮಾರ್ನಮಿಕಟ್ಟೆ ಜಂಕ್ಷನ್, ಮಂಗಳೂರು ಯಾವುದೋ  ಅಮಲು ವಸ್ತು ಸೇವಿಸಿದ್ಷಂತೆ ಕಂಡು ಬಂದಿದ್ದು  ಮುಂದಿನ ಕ್ರಮದ ಬಗ್ಗೆ  ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಅವರನ್ನು ಪರೀಕ್ಷಿಸಿ “Tetrahydracannabinoid (marijuana): POSITIVE ಎಂಬುದಾಗಿ ನೀಡಿದ ವರದಿಯನ್ನು ಸ್ವೀಕರಿಸಿದ್ದಾಗಿರುತ್ತದೆ ಸದ್ರಿ ಆರೋಪಿಗಳ ವಿರುದ್ದ  ಪ್ರಕರಣ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ

 

Surathkal PS

ದಿನಾಂಕ 13-02-2024 ರಂದು ರಾತ್ರಿ ಸಮಯ 22:50 ಗಂಟೆಗೆ ಪಿರ್ಯಾದಿದಾರರಾದ  ರಘು ನಾಯಕ ಪಿ.ಎಸ್.ಐ ಸುರತ್ಕಲ್ ಪೊಲೀಸ್ ಠಾಣೆ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯ ನ ಮಾಡುತ್ತಾ ರಾತ್ರಿ ಮುಕ್ಕ ಮಸೀದಿ ಬಳಿ ಬಂದಾಗ  ಸಾರ್ವಜನಿಕ ರಸ್ತೆಯ ಬಳಿ ಇಬ್ಬರು ಯುವಕರು 1) ಹಿಮೇಶ್ ಸೈನಿ, ಪ್ರಾಯ: 26 ವರ್ಷ, ತಂದೆ: ಸುಂದರ್ ಲಾಲ್ ಸೈನಿ, ವಾಸ: ವಾರ್ಡ್ ನಂ 24, ಪೋಸ್ಟ್ ಆಫೀಸ್ ಬಳಿ, ಗಾಂಧೀನಗರ, ರಾಜಸ್ಥಾನ ಮತ್ತು 2) ಶಶಾಂಕ್.ಎಸ್, ಪ್ರಾಯ: 25 ವರ್ಷ, ತಂದೆ: ಶಿವಾನಂದ, ವಾಸ: ಭೆಳಗರಹಳ್ಳಿ, ನೊಣವಿನಕೆರೆ, ತಿಪಟೂರು, ತುಮಕೂರು ಯಾವುದೋ  ಅಮಲು ವಸ್ತು ಸೇವಿಸಿದ್ಷಂತೆ ಕಂಡು ಬಂದಿದ್ದು  ಮುಂದಿನ ಕ್ರಮದ ಬಗ್ಗೆ  ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಅವರನ್ನು ಪರೀಕ್ಷಿಸಿ “Tetrahydracannabinoid (marijuana): POSITIVE ಎಂಬುದಾಗಿ ನೀಡಿದ ವರದಿಯನ್ನು ಸ್ವೀಕರಿಸಿದ್ದಾಗಿರುತ್ತದೆ ಸದ್ರಿ ಆರೋಪಿಗಳ ವಿರುದ್ದ  ಪ್ರಕರಣ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ

ಇತ್ತೀಚಿನ ನವೀಕರಣ​ : 16-02-2024 07:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080