ಅಭಿಪ್ರಾಯ / ಸಲಹೆಗಳು

Mulki PS

ಪಿರ್ಯಾದಿದಾರರ ಗಂಡನ ಹೆಸರಿನಲ್ಲಿರುವ  ಕೆಎ 19 ಇಎಫ್ 8740 ನೇ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನವನ್ನು ಪಿರ್ಯಾದಿದಾರರು ದಿನಾಂಕ: 13-03-2023 ರಂದು 18.30 ಗಂಟೆಗೆ ಮುಲ್ಕಿ ತಾಲೂಕು ತಾಳಿಪಾಡಿ ಗ್ರಾಮದ ಎಸ್ ಕೋಡಿ ಜಂಕ್ಷನ್ ಎಂಬಲ್ಲಿ ನಿಲ್ಲಿಸಿ ಚೇತನಾ ಕ್ಲಿನಿಕ್ ಗೆ ಹೋಗಿ ವಾಪಾಸು 19.30 ಗಂಟೆಗೆ ಬಂದು ನೋಡಿದಾಗ ಪಿರ್ಯಾದಿದಾರರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಪಿರ್ಯಾದಿದಾರರು ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಕಳವಾಗಿದ್ದು,  ಪಿರ್ಯಾದಿದಾರರ ಕಳವಾದ ದ್ವಿಚಕ್ರ ವಾಹನದ ಅಂದಾಜು ಮೌಲ್ಯ 25000/- ರೂಪಾಯಿ ಆಗಬಹುದು” ಎಂಬಿತ್ಯಾದಿಯಾಗಿದೆ.

Traffic South Police Station

ದಿನಾಂಕ:13-03-2023 ರಂದು ಪಿರ್ಯಾದಿದಾರರಾದ ಕೆ.ವಿಶ್ವನಾಥ್ (43ವರ್ಷ) ರವರು ಅವರ ಬಾಬ್ತು ಸ್ಕೂಟರ್ ನಂಬ್ರ: KL-14-Y-2554 ನೇದರಲ್ಲಿ ಸವಾರರಾಗಿ ಅವರ ದೊಡ್ಡಪ್ಪನ ಮಗನಾದ ಪದ್ಮನಾಬರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮುಡಿಪು ಕಡೆಯಿಂದ ಕೂಟತ್ತಜೆ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 09:30 ಗಂಟೆಗೆ ಮುಡಿಪು ಚರ್ಚ್ ಬಳಿಯ ಸ್ವಲ್ಪ ಮುಂದೆ ಮೈದಾನದ ಹತ್ತಿರ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಮುಡಿಪು ಕಡೆಯಿಂದ ಬಂದ ಅಪರಿಚಿತ ವಾಹನವೊಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಪಡಿಸಿ ನಿಲ್ಲಿಸದೆ ವಾಹನ ಸಮೇತ ಪರಾರಿಯಾಗಿರುತ್ತಾರೆ, ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರ ಪದ್ಮನಾಭ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡಗೈ ಅಂಗೈಗೆ ಮತ್ತು ಬಲಗೈ ಕಿರುಬೆರಳಿಗೆ ಹಾಗೂ ಎರಡೂ ಕಾಲುಗಳಿಗೆ ಅಲ್ಲಲ್ಲಿ ಗುದ್ದಿದ ಗಾಯ ಹಾಗೂ ಮೇಲಿನ ತುಟಿಗೆ ತರಚಿದ ರಕ್ತಗಾಯ ಪದ್ಮನಾಭ ರವರಿಗೆ ಬಲಗೈ ಮಧ್ಯದ ಬೆರಳಿಗೆ ತರಚಿದ ರಕ್ತಗಾಯ,ಬಲಬದಿ ಹಣೆಗೆ ಗುದ್ದಿದ ಗಾಯ,ಕೈ ಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಗಾಯಾಳುಗಳನ್ನು ಆಂಬುಲೆನ್ಸ್ ವೊಂದರಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದಲ್ಲಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Panambur PS

ಪಿರ್ಯಾದಿ DILWAR HUSSAIN TALUKDAR ದಾರರು  ದಿನಾಂಕ:13-3-2023 ರಂದು  ಸಂಜೆ 16.30 ಗಂಟೆಗೆ ಪಣಂಬೂರು ಗ್ರಾಮದ ಪಣಂಬೂರು ಸಿಗ್ನಲ್ ಬಳಿ  ಮಂಗಳೂರು ಕಡೆಯಿಂದ  ಬಂದು ಸಿಗ್ನಲ್ ಗಾಗಿ ನಿಂತ  ಪಿರ್ಯಾದಿದಾರರ  ಬಾಬ್ತು ಕೆಎ 19 ಎಇ 0399  ನೇ  ಮಿಲ್ಲರ್  ಲಾರಿಗೆ  ಎಡಗಡೆಯಿಂದ  ಬಂದ  ಕೆಎ 05 ಎಮ್.ಎಫ್ 1775  ನೇ  ಕಾರು ಲಾರಿಗೆ ಡಿಕ್ಕಿಯಾಗಿದ್ದು ಕೂಡಲೇ  ಅದರಿಂದ ಇಳಿದ  ಚಾಲಕ  ಹಾಗೂ ಇನ್ನೊಬ್ಬನು  ಲಾರಿಗೆ  ಅಡ್ಡವಾಗಿ ನಿಂತು  ತಡೆದು ನಿಲ್ಲಿಸಿ  ಅವರ ಪೈಕಿ ಒಬ್ಬಾತನು   ಪಿರ್ಯಾದಿದಾರರನ್ನು  ಲಾರಿಯಿಂದ ಎಳೆದು  ಹಾಕಿ ಶರ್ಟನ ಕಾಲರ್ ಪಟ್ಟಿಯನ್ನು ಹಿಡಿದು  ಎಲ್ಲೂ  ಹೋಗದಂತೆ ತಡೆದು  ನಿಲ್ಲಿಸಿದ್ದು  ಅಲ್ಲಿಗೆ  ಇನ್ನೂ ಇಬ್ಬರು  ಬಂದಿದ್ದು ಪಿರ್ಯಾದಿದಾರರಿಗೆ  ಕೈಯಿಂದ  ತಲೆಗೆ, ಕೆನ್ನೆಗೆ  , ಬೆನ್ನಿಗೆ  ಹೊಡೆದು  ಕಾರಿನ  ಚಾಲಕನು ತನ್ನ ಕೈಯಲಿದ್ದ   ಲಾರಿಯ  ಕೀ ಯನ್ನು ತೆಗೆದು  ತನ್ನ  ಬಲ ಕೈ ಮುಂಗೈಗೆ  ಹಣೆ  ಎಡಭಾಗಕ್ಕೆ  ಗೀರಿ ಕೀಯನ್ನು ಪಿರ್ಯಾದಿ ಕೈಯಲ್ಲಿಟ್ಟು  “ ಬೇವರ್ಸಿ ಹಿಂದಿ  ವಾಲಾ ಮಾರ್ಕೆ ಭಗಾಯೇಂಗೆ “ ಎಂದು ಕೆಟ್ಟದಾಗಿ ಬೈದು “ ಔರ್ ಕಬೀ ಮಿಲೋ  ಮಾರ್ ಡಾಲೇಂಗೇ”   ಎಂದು  ಕೊಲೆ  ಬೆದರಿಕೆ  ಹಾಕಿರುತ್ತಾರೆ. ಅದೇ  ವೇಳೆಗೆ  ಆ ದಾರಿಯಲ್ಲಿ  ಬರುತ್ತಿದ್ದ  ಕಂಪನಿಯ  ಗಣೇಶ್  ಮತ್ತು ಪ್ರಕಾಶ್  ಎಂಬುವವರು  ಓಡಿ ಬಂದು  ತನ್ನನ್ನು  ಬಿಡಿಸಿ  ಚಿಕಿತ್ಸೆಗಾಗಿ  ಮಂಗಳೂರಿನ  ಎ.ಜೆ  ಆಸ್ಪತ್ರೆಗೆ  ದಾಖಲಾಗಿದ್ದು ತನ್ನ  ಮೇಲೆ ಹಲ್ಲೆ  ಮಾಡಿದ ಕಾರಿನ  ಚಾಲಕ  ಸಹ  ಪ್ರಯಾಣಿಕ  ಹಾಗೂ ಇನ್ನೂ  ಇಬ್ಬರ  ಮೇಲೆ  ಸೂಕ್ತ  ಕಾನೂನು  ಕ್ರಮ  ಕೈಗೊಳ್ಳಬೇಕಾಗಿ  ಎಂಬಿತ್ಯಾದಿ  ಸಾರಾಂಶವಾಗಿರುತ್ತದೆ.

Mangalore West Traffic PS               

ಪಿರ್ಯಾದಿ THALAVAIE ದಾರರು  ದಿನಾಂಕ 13-03-2023 ರಂದು ಲೇಡಿಹಿಲ್ ಬಳಿ ಪೊಂಪೈ ಚರ್ಚ್ ಎದುರು ತಳ್ಳುಗಾಡಿಯಲ್ಲಿ  ಸಿಯಾಳ ವ್ಯಾಪಾರ ಮಾಡಿಕೊಂಡಿರುವಾಗ ಸಮಯ ಸುಮಾರು ಸಂಜೆ 04.20 ಗಂಟೆಗೆ  KA20-EX-8672 ನೇ ಸ್ಕೂಟರ್ ನ್ನು ಅದರ ಸವಾರ ಮೊಹಮ್ಮದ್ ಹನೀಪ್ ರವರು ಸಹಸವಾರ ಮಹಮ್ಮದ್ ಖಾಸಿಂ ರವರನ್ನು ಕುಳ್ಳಿರಿಸಿಕೊಂಡು ಉರ್ವ ಸ್ಟೋರ್ ಕಡೆಯಿಂದ ಲೇಡಿ ಹಿಲ್ ಕಡೆಗೆ ಹಾದು ಹೋಗುವ  ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ  ರಸ್ತೆಯ ವಿಭಜಕಕ್ಕೆ ವರೆಸಿಕೊಂಡು ಹೋಗಿ ನಿಯಂತ್ರಣ  ತಪ್ಪಿ ರಸ್ತೆಯ ವಿಭಜಕದ ಮದ್ಯೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸವಾರ  ಹಾಗೂ ಸಹ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸವಾರನ ತಲೆಗೆ ಗಂಬೀರ ಸ್ವರೂಪದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಸಹಸವಾರನ ಬಲಗಾಲಿಗೆ ತರಚಿದ ನಮೂನೆಯ ರಕ್ತಗಾಯ ಕಿವಿ ಮತ್ತು ಮೂಗಿನಿಂದ ರಕ್ತ ಬರುತ್ತಿದ್ದು ಸಹಸವಾರನನ್ನು ಅಲ್ಲಿಯೇ ಬರುತ್ತಿದ್ದ ಆಟೋರಿಕ್ಷಾದಲ್ಲಿ ನಗರದ ಯೇನಪೊಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸವಾರನನ್ನು   ಆಂಬುಲೆನ್ಸ್ ನಲ್ಲಿ ಎ  ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಗಾಯಗೊಂಡ ಸವಾರ ಮೃತ ಪಟ್ಟಿರುವುದಾಗಿ ಎಂಬಿತ್ಯಾದಿ

Ullal PS

ದಿನಾಂಕ 13-02-2023 ರಂದು ಪೊಲೀಸ್ ಉಪ ನಿರೀಕ್ಷಕರಾದ ಮಂಜೇಶ್ವರ್  ಚಂದಾವರ್ ಹೆಚ್ ಸಿ ರಂಜಿತ್ ಕುಮಾರ್, ಪಿ ಸಿ  ಅಶೋಕ್  ಕುಮಾರ್ , ಪಿ ಸಿ ಅಕ್ಬರ್ ಯಡ್ರಾಮಿ ನೇಯವರೊಂದಿಗೆ ಮಂಗಳೂರು ನ್ಯಾಯಲಯದ CC NO-3348/2018  ಉಳ್ಳಾಲ CR NO-206/2012 ಕಲಂ 504,323,427,506,&34 IPC ನೇದರಲ್ಲಿಯ ಆರೋಪಿತನಾದ ಮಹಮದ್ ನಿಜಾಮ್ ಪ್ರಾಯ(34) ವರ್ಷ ತಂದೆ ಇಸ್ಮಾಯಿಲ್ ವಾಸ ವಾಟರ್ ಟ್ಯಾಂಕ್ ಬಳಿಮನೆ ಕಿನ್ಯಾ ಗ್ರಾಮ ಮಂಗಳೂರು ನಗರ ಈತನು ನ್ಯಾಯಲಯಕ್ಕೆ ಹಾಜರಾಗದೇ ದಿರ್ಘ ಸಮಯದಿಂದ ತಲೆಮರಿಸಿಕೊಂಡಿದ್ದು ಈ ದಿವಸ 05.00 ಗಂಟೆಗೆ ವಾರೆಂಟ್ ಅಪಾದಿತನಿಗೆ ಪತ್ರೆಯ ಬಗ್ಗೆ ಪ್ರಸ್ತುತ ವಿಳಾಸವಾದ ಹಮೀದ್ ರವರ ಬಾಡಿಗೆ ಮನೆ ಸಲಾತ್ ಮಸೀದಿ  ಮದನಿ ನಗರ ಕುತ್ತಾರ್ ಮುನ್ನುರು ಗ್ರಾಮ ಮಂಗಳೂರು ಮನೆಯಲ್ಲಿ ಇರುವ ವಿಚಾರ ತಿಳಿಸಿ ಆತನು ಮನೆಯಿಂದ ಹೊರಗಡೆ ಬಂದಾಗ ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 14-03-2023 07:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080