ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

CEN Crime PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೆನೆಂದರೆ, ಪಿರ್ಯಾದಿದಾರರಾದ ಪಂಕಜ್ ಆರ್ ಶೇಕ್ ಎಂಬವರು ಅಶೋಕನಗರ ನಿವಾಸಿಯಾಗಿದ್ದು, ಫಿರ್ಯಾದಿದಾರರು ಫೇಸ್ ಬುಕ್ ನ್ನು ನೋಡುತ್ತಿರುವಾಗ ಆನ್ ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ಜಾಹಿರಾತು ನೋಡಿದ್ದು ಆ ಜಾಹಿರಾತಿನಲ್ಲಿ ಫಿರ್ಯಾದಿದಾರರು ಲಿಂಕ್ ನೋಡಿದ್ದು  ಪಿರ್ಯಾದಿದಾರರು ಸದ್ರಿ ಲಿಂಕ್ ನ್ನು ತೆರದಾಗ Skyrim Capital  ಎನ್ನುವ ವಾಟ್ಸಾಪ್ ಗ್ರೂಪ್ ಗೆ ವಿವರ ಬಂದಿರುತ್ತದೆ. ಸದ್ರಿ ವಾಟ್ಸಾಪ್ ಗ್ರೂಪ್ ಗೆ  +1(317540-3164 ಮತ್ತು 9913667168 ಎನ್ನುವ ನಂಬ್ರ ಹೊಂದಿರುವ ಅಪರಿಚಿತ ವ್ಯಕ್ತಿಗಳು ಅಡ್ಮಿನ್ ಗಳಾಗಿರುತ್ತಾರೆ.ಸದ್ರಿ ವಾಟ್ಸಾಪ್ ಗ್ರೂಪ್ ಗೆ ಫಿರ್ಯಾದುದಾರರು ಸದಸ್ಯರಾಗಿರುತ್ತಾರೆ. ವಾಟ್ಸಾಪ್ ಗ್ರೂಪ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದ್ದಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಅಪರಿಚಿತ ವ್ಯಕ್ತಿಗಳು ಪ್ರಚೋದನೆ ನೀಡಿ, ನಂತರದಲ್ಲಿ ಆನ್ ಲೈನ್ ನಲ್ಲಿ ಆಡಿಯೋ ತರಬೇತಿ ಎಂದು ಮಾಹಿತಿ ಹಂಚಿರುತ್ತಾರೆ. ನಂತರ ವಾಟ್ಸಾಪ್ ಗ್ರೂಪ್ ನಲ್ಲಿ ಹಣ ತೊಡಗಿಸುವಂತೆ ಹೇಳಿದ ಮೇರೆಗೆ ಪಿರ್ಯಾದಿದಾರರು ದಿನಾಂಕ 16-01-2024 ರಂದು 1,000/- ರೂ ಮತ್ತು 99,000/- ಹಣವನ್ನು ತನ್ನ Tamilunadu Mercantile Bank LTD Mangalore ಶಾಖೆ ಖಾತೆ ಯಿಂದ ಗ್ರೂಪ್ ಅಡ್ಮಿನ್ ಆಗಿದ್ದ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬ್ರ +1(317540-3164  ನ್ನು ಹೊಂದಿರುವ ವ್ಯಕ್ಯಿಯು ತಿಳಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ನಂಬ್ರ 0447002100118158 ನೇದಕ್ಕೆ ವರ್ಗಾಯಿಸಿದ್ದು, ತದ ನಂತರ 17-01-2024 ರಂದು ರೂ.2,00,000/- ಹಣವನ್ನು 18-01-2024 ರಂದು ರೂ.1,00,000/- ಹಣವನ್ನು ತದ ನಂತರ 19-01-2024 ರಂದು ರೂ.1,00,000/- ಒಟ್ಟು 5,00,000/- ರೂ ಹಣವನ್ನು ವರ್ಗಾಯಿಸಿರುತ್ತಾರೆ. ಮತ್ತೊಮ್ಮೆ ಅದೇ ರೀತಿ ಆರೋಪಿತನ ಇಂಡಸ್ ಇಂಡ್ ಬ್ಯಾಂಕ್ ಖಾತೆ ನಂಬ್ರ 257304792873 ನೇದರ ಖಾತೆಗೆ 1,000/- ಹಣ ಮತ್ತೊಮ್ಮೆ ಅದೇ ದಿನ ರೂ.4,99,000/-  ಹಾಗೂ 25-01-2024 ರಂದು 4,20,000/- ಹಣವನ್ನು ಹಾಗೂ ದಿನಾಂಕ 01-02-2024 ರಂದು 8,00,000/- ಹಾಗೂ ದಿನಾಂಕ 02-02-2024 ರಂದು 8,20,000/- ರೂ ಹಣ ದಿನಾಂಕ 03-02-2024 ರಂದು ರೂ.4.00,000/- ಒಟ್ಟು 29,40,000/- ರೂ ಹಣವನ್ನು ವರ್ಗಾಯಿಸಿರುತ್ತಾರೆ. ಮತ್ತೊಮ್ಮೆ ಅದೇ ರೀತಿ ಆರೋಪಿತನ ಇಂಡಸ್ ಇಂಡ್ ಬ್ಯಾಂಕ್ ಖಾತೆ ನಂಬ್ರ 259666662485 ನೇದಕ್ಕೆ 5,00,000/-ರೂ ಹಣವನ್ನು ವರ್ಗಾಯಿಸಿರುತ್ತಾರೆ.ಪಿರ್ಯಾದಿದಾರರು ಹಣ ವಾಪಾಸ್ಸಾಗುವರೇ ಕಾಯುತ್ತಿದ್ದರೂ ಯಾವುದೇ ಹಣ ಹಾಗೂ ಲಾಭಾಂಶ ಬಂದಿರುವುದಿಲ್ಲ ಈ ಬಗ್ಗೆ ಪುನಃ ವಿಚಾರಿಸಿದಾಗ ತೆರಿಗೆ ರೂಪದಲ್ಲಿ 20%/- ಹಣವನ್ನು ಕಟ್ಟಬೇಕು ಎಂದು ತಿಳಿಸಿದ್ದು ನಂತರ ಹಣ ಬಾರದೇ ಇದ್ದುದರಿಂದ ಪಿರ್ಯಾದಿದಾರರಿಗೆ ತಾನು ಮೋಸ ಹೋದ ಬಗ್ಗೆ ತಿಳಿದು ಬಂದಿರುತ್ತದೆ. ಹೀಗೆ ಅಪರಿಚಿತ ವ್ಯಕ್ತಿಗಳು Skyrim Capital  ಎನ್ನುವ ವಾಟ್ಸಾಪ್ ಗ್ರೂಪ್ ನಲ್ಲಿ ಟ್ರೇಡಿಂಗ್ ಮಾಡುವ ಬಗ್ಗೆ ಸುಳ್ಳು ಮಾಹಿತಿ ನೀಡಿ ಫಿರ್ಯಾದುದಾರರನ್ನು ನಂಬಿಸಿ ದಿನಾಂಕ 16-01-2024 ರಿಂದ 03-02-2024 ರವರೆಗೆ ಒಟ್ಟು ರೂಪಾಯಿ 39,40,000/- ಹಣವನ್ನು ಫಿರ್ಯಾದುದಾರರಿಂದ ಆರೋಪಿಗಳ ವಿವಿಧ ಬ್ಯಾಂಕ್ ಗೆ ವರ್ಗಾಯಿಸಿಕೊಂಡು ಮೋಸ ವಂಚನೆ ಮಾಡಿರುವುದಾಗಿದೆ. ಎಂಬಿತ್ಯಾದಿ

 

CEN Crime PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದು LARISSA MARTHA ಇವರಿಗೆ ದಿನಾಂಕ 25-01-2024 ರಂದು ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದುದಾರರ ವಾಟ್ಸ್ ಆಪ್ ಗೆ ಅಪರಿಚಿತ ವ್ಯಕ್ತಿಯ ವಾಟ್ಸ್ ಆಪ್ ನಂಬ್ರ-6370442319 ನೇದರಿಂದ ಆನ್ ಲೈನ್ ಪಾರ್ಟ್ ಜಾಬ್ ನ ಬಗ್ಗೆ ಸಂದೇಶ ಕಳುಹಿಸಿರುತ್ತಾರೆ ಇದನ್ನು ನೋಡಿದ ಪಿರ್ಯಾದುದಾರರು ವಾಟ್ಸ್ ಆಪ್ ಮುಖಾಂತರ ವಿಚಾರಿಸಿದಾಗ ಸದ್ರಿ ಅಪರಿಚಿತ ವ್ಯಕ್ತಿಯು ಗೂಗಲ್ ರಿವೀವ್ ಮಾಡುವ ಟಾಸ್ಕ್ ನ ಬಗ್ಗೆ ತಿಳಿಸಿ ಪ್ರತಿ ಬಾರಿ ಗೂಗಲ್ ರಿವೀವ್ ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿರುತ್ತಾರೆ ಅದರಂತೆ ಪಿರ್ಯಾದುದಾರರು ಗೂಗಲ್ ರಿವೀವ್ ಮಾಡಿರುತ್ತಾರೆ.ನಂತರದಲ್ಲಿ ಸದ್ರಿ ಅಪರಿಚಿತ ವ್ಯಕ್ತಿಯು http://t.me/Queenhjy ಎಂಬ ಟೆಲೆಗ್ರಾಂ ಲಿಂಕ್ ಕಳುಹಿಸಿರುತ್ತಾರೆ ಪಿರ್ಯಾದುದಾರರು ಸದ್ರಿ ಲಿಂಕ್ ಮುಖಾಂತರ ಟೆಲೆಗ್ರಾಂ ಜಾಯಿನ್ ಆದ ನಂತರದಲ್ಲಿ ಬೇರೆ ಬೇರೆ ಗೂಗಲ್ ರಿವೀವ್ ಟಾಸ್ಕ್ ಅನ್ನು ನೀಡಿರುತ್ತಾರೆ ಅಷ್ಟೆ ಅಲ್ಲದೇ ಹಣ ಹೂಡಿಕೆ ಮಾಡಿ ಗೂಗಲ್ ರಿವೀವ್ಯ ಮಾಡಿದರೆ ಹೆಚ್ಚಿನ ಹಣ ಲಾಭಾಂಶ ನೀಡುವುದಾಗಿ ಪಿರ್ಯಾದುದಾರರಿಗೆ ತಿಳಿಸಿದಂತೆ ಇದನ್ನು ನಂಬಿದ ಪಿರ್ಯಾದುದಾರರು ತಮ್ಮ ಆಕ್ಸಿಸ್ ಬ್ಯಾಂಕ್ ಖಾತೆ ಯಿಂದ ಮತ್ತು ಕೆನರಾ ಬ್ಯಾಂಕ್ ಖಾತೆ ಯಿಂದ ಹಂತ ಹಂತವಾಗಿ 35,27,239/-ರೂಗಳು ಹಾಗೂ ಪಿರ್ಯಾದುದಾರರ ಸ್ನೇಹಿತರ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 4,10,900/- ರೂಗಳು ಒಟ್ಟು 39,38,139/- ರೂಗಳನ್ನು ಅಪರಿಚಿತ ವ್ಯಕ್ತಿಯು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ದಿನಾಂಕ 25-01-2024 ರಿಂದ 21-02-2024 ರವರೆಗೆ UPI,RTGS,ONLINE ಮುಖಾಂತರ ವರ್ಗಾಯಿಸಿರುವುದಾಗಿದೆ.ಆನಂತರ ಪಿರ್ಯಾದುದಾರರು ತಾವು ಹೂಡಿದ ಹಣವನ್ನು ವಾಪಾಸು ಕೇಳಿದಾಗ ಅಪರಿಚಿತ ವ್ಯಕ್ತಿಯು ಇನ್ನು ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಪಿರ್ಯಾದುದಾರರನ್ನು ಒತ್ತಾಯಿಸಿದಾಗ ಪಿರ್ಯಾದುದಾರಿಗೆ ಅನುಮಾನ ಉಂಟಾಗಿ ತಾವು ಮೋಸ ಹೋಗಿರುವ ವಿಷಯ ಬೆಳಕಿಗೆ ಬಂದಿರುತ್ತದೆ, ಪಿರ್ಯಾದುದಾರರು ಇದೂವರೆಗೂ ಹಣ ವಾಪಾಸು ಸಿಗುವುದಾಗಿ ಕಾಯುತ್ತಿದ್ದು ಯಾವುದೇ ಹಣ ಸಿಗದಿದ್ದಾಗ ಈ ದಿನ ಠಾಣೆಗೆ ತಡವಾಗಿ ಹಾಜರಾಗಿ ದೂರು ನೀಡುತ್ತಿರುವುದಾಗಿದೆ,ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದುದಾರರಿಗೆ ಆನ್ ಲೈನ್ ಟಾಸ್ಕ್ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ ಆನ್ ಲೈನ್ ಮುಖಾಂತರ ಒಟ್ಟು 39,38,139/- ರೂಗಳನ್ನು ವರ್ಗಾಹಿಸಿಕೊಂಡು ಆನ್ ಲೈನ್ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

 

Traffic South Police

ಫಿರ್ಯಾದಿ KISHANTH ಇವರು ದಿನಾಂಕ-14-03-2024 ರಂದು ತಮ್ಮ ದೊಡ್ಡಮ್ಮನ ಮಗನ KL14R2931 ನೇ ನಂಬ್ರದ ಬೈಕ್ ನ್ನು ಸವಾರಿ ಮಾಡಿಕೊಂಡು ಕೊಲ್ಯ ಕಣ್ಣಿರು ತೊಟದಿಂದ  ಮಂಜೆಶ್ವರ ಕಡೆ ಹೊರಟು  ರಾ.ಹೆ-66 ಕೊಲ್ಯ ಬಳಿಯ ಸರ್ವಿಸ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಚಿಗುರು ನರ್ಸರಿ ಎದುರಿನ ಸರ್ವಿಸ್ ರಸ್ತೆ ಕೊನೆಯ ಬಳಿ ತಲುಪುತ್ತಿದ್ದಂತೆ ಸಂಜೆ ಸುಮಾರು-05-45 ಗಂಟೆಗೆ ವಿರುದ್ದ ದಿಕ್ಕಿನಲ್ಲಿ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ KA 19 ET 4328 ನೇ ನಂಬ್ರದ ಒಂದು ಸ್ಕೂಟರ್ ನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಪಿರ್ಯಾದಿದಾರರ ಬೈಕ್ ಗೆ ಡಿಕ್ಕಿ ಪಡಿಸಿದ್ದು ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಇದರ ಪರಿಣಾಮ ಪಿರ್ಯಾದಿದಾರರ  ಬಲ ಕೈ ಮಣಿ ಗಂಟಿನ ಬಳಿ ಮೂಳೆ ಮುರಿತದ ರಕ್ತಗಾಯ,ಎಡ ಕೈನ ಹೆಬ್ಬರಳನ್ನು ಬಿಟ್ಟು ಉಳಿದ ನಾಲ್ಕು ಬೆರಳುಗಳ ಮೂಳೆ ಮುರಿತದ ರಕ್ತಗಾಯವಾಗಿದ್ದು ಹಾಗೂ ಎಡಕಾಲಿನ ಮಂಡಿಯ ಬಳಿ ತೆರಚಿದ ನಮೂನೆಯ ರಕ್ತಗಾಯವಾಗಿರುತ್ತದೆ ಗಾಯಾಳು ಕೆ,ಎಸ್,ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಅಪಘಾತಪಡಿಸಿದ KA 19 ET 4328 ನೇ ನಂಬ್ರದ  ಸ್ಕೂಟರ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

 

Barke PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ:14.03.2024 ರಂದು ಮಂಗಳೂರು ನಗರ ಪೊಲೀಸ್ ಕೇಂದ್ರ  ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್. ಪಿಎಸ್ ಐ ಮಂಗಳೂರು ಮತ್ತು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ ಬಾಗ್ ಬಳಿ ತಲುಪಿದಾಗ ಕೌಶಿಕ್.ಎಸ್. ಪ್ರಾಯ: 26 ವರ್ಷ ತಂದೆ: ಸೋಮಶೇಖರ ವಾಸ: ಡೋರ್ ನಂ:2-13 ಕ್ಯೂ2, ಎಜಿ, ಮೂರುಕಟ್ಟೆ, ಕುಂಪಲ, ಕೋಟೇಕರ್ ಪೋಸ್ಟ್ ಅಂಡ್ ವಿಲೇಜ್, ಕೋಟೇಕರ್, ಮಂಗಳೂರು ಎಂಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಎ,ಜೆ ಆಸ್ಪತ್ರೆಗೆ ಕಳಹಿಸಿದಲ್ಲಿ  ವೈಧ್ಯಾಧಿಕಾರಿಯವರು ಪರೀಕ್ಷಿಸಿ ಮಾದಕ ವಸ್ತು ಸೇವನೆ ಮಾಡಿದ ದೃಢಪಟ್ಟಿರುವುದರಿಂದ ಆಪಾದಿತನ ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳವಂತೆ ಎಂಬಿತ್ಯಾದಿಯಾಗಿರುತ್ತದೆ

 

Mulki PS           

ಪಿರ್ಯಾದಿ Hanumantharaya ಇವರ  ಮಗಳು ಭುವನೇಶ್ವರಿ (13 ವರ್ಷ) ಎಂಬಾಕೆಯು ಲಿಂಗಪ್ಪಯ್ಯಕಾಡು ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಮತ್ತು ನೆರೆಕರೆ ಮನೆಯ ಶಿವಲಿಂಗಪ್ಪರವರ ಮಗಳು ರಾಜೇಶ್ವರಿ ಪ್ರಾಯ: (15 ವರ್ಷ) ಎಂಬಾಕೆಯು ಮುಲ್ಕಿ ಮೆಡಲಿನ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದು ಈ ದಿನ ದಿನಾಂಕ 14/03/2024 ರಂದು ಶಾಲೆಯಿಂದ ಮನೆಗೆ ಬಂದವರು ರಾತ್ರಿ ಸುಮಾರು 7-30 ಗಂಟೆಗೆ ಮನೆಯ ಬಳಿ ಸೇರಿಕೊಂಡು ಇಬ್ಬರು ಮನೆಯ ಬಳಿ ಇರುವ ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿ ಬರುತ್ತೇವೆ ಎಂದು ಹೇಳಿ ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದು ಆಸುಪಾಸಿನಲ್ಲಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗದೆ ಇರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ

 

Panambur PS

ಪಿರ್ಯಾದಿದಾರರಾದ ಶ್ರೀಮತಿ ರಿಜು ಬೇಗಂರವರು ಅಸ್ಸಾಂ ಮೂಲದವರಾಗಿದ್ದು, ಜೋಕಟ್ಟೆಯಲ್ಲಿ ತನ್ನ ಪತಿ, ಪತಿಯ ಮೊದಲ ಹೆಂಡತಿಯ ಒಬ್ಬ ಮಗ,  ಹಾಗೂ ತನ್ನ ಮೊದಲ ಪತಿಯ ಮಗ ಶಾಹೀದ್ ಅಹಮ್ಮದ್ ಲಶ್ಕರ್ ಪ್ರಾಯ: 12 ವರ್ಷನ ಜೊತೆಗೆ 3 ವರ್ಷಗಳಿಂದ ವಾಸ ಮಾಡಿಕೊಂಡಿದ್ದು, ಮಗ ಶಾಹಿದ್ ಅಹಮ್ಮದ್ ಲಷ್ಕರನು ಜೋಕಟ್ಟೆಯ ಯತೀಂಖಾನದಲ್ಲಿ ಉಳಕೊಂಡು  ಜೋಕಟ್ಟೆಯ ಅಂಜುಮಾನ್ ಶಾಲೆಯಲ್ಲಿ 6 ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದವನು, ಕಳೆದ 3 ತಿಂಗಳಿನಿಂದ ಶಾಲೆಗೆ ಹೋಗದೇ ಯತೀಂಖಾನವನ್ನು ತೊರೆದು ಮನೆಯಲ್ಲೇ ಇರುತ್ತಿದ್ದನು. ಈ ಮೊದಲೊಮ್ಮೆ ಮನೆಯಲ್ಲಿ ಹೇಳದೇ ಹೊರಹೋಗಿದ್ದ ಅವನು 2 ದಿನ ಬಿಟ್ಟು ಮನೆಗೆ ವಾಪಾಸು ಬಂದಿದ್ದು, ದಿನಾಂಕ 08.03.2024 ರಂದು ಬೆಳಗ್ಗೆ 09:00 ಗಂಟೆಗೆ ಮಸೀದಿಗೆಂದು ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬರದೇ ಕಾಣೆಯಾಗಿದ್ದು, ಪಿರ್ಯಾದಿದಾರರು ಮತ್ತು ಅವರ ಗಂಡ ಎಲ್ಲಾ ಕಡೆ ಹುಡುಕಾಟದಲ್ಲಿರುವಾಗ ದಿನಾಂಕ 10.03.2024 ರಂದು ಭಾನುವಾರ ಬಾಲಕನನ್ನು ಬೈಕಂಪಾಡಿ ಮಾರುಕಟ್ಟೆಯಲ್ಲಿ ನೋಡಿದ್ದು, ಜನಜಂಗುಳಿಯಲ್ಲಿ ಅವನನ್ನು ಹಿಡಿಯಲಾಗಿರುವುದಿಲ್ಲ. ನಂತರ ಎಲ್ಲಾ ಕಡೆ ಹುಡುಕಾಡಿ, ಸಿಗದೇ ಠಾಣೆಗೆ ಬಂದು ದೂರು ನೀಡಿದ್ದು, ಯಾರಾದರೂ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುವ ತನ್ನ ಮಗ ಶಾಹೀದ್ ಅಹಮ್ಮದ್ ಲಶ್ಕರ್ ಪ್ರಾಯ: 12 ವರ್ಷ ನನ್ನು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ.

ಚಹರೆ ಗುರುತುಗಳು

ಸುಮಾರು 4 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ತೆಳ್ಳಗಿನ ಶರೀರ.ಹಳದಿ ಬಣ್ಣದ ತುಂಬು ತೋಳಿನ ಟಿ.ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಉರ್ದು, ಹಿಂದಿ, ಕನ್ನಡ ಮಾತನ್ನಾಡುತ್ತಾನೆ.

 

Konaje PS                 

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:14-03-2024 ರಂದು ಪಿರ್ಯಾದಿ Puneet Gaonkar ಇವರು  ಇ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಮಂಗಳೂರು ತಾಲೂಕು, ಬೆಳ್ಮ ಗ್ರಾಮದ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಮೈದಾನದ ಬಳಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಜಾಫರ್ ಸಾದಿಕ್, ಪ್ರಾಯ: 31 ವರ್ಷ, ತಂದೆ: ಅಬೂಬಾಕರ್, ವಾಸ: #1-75 ಜೆ .ಎಮ್ ರೋಡ್ ಮುಡಿಪು, ಕೈರಂಗಳ ವಿಲೇಜ್ ಮತ್ತು ಪೋಸ್ಟ್ ಉಳ್ಳಾಲ ತಾಲೂಕು ಎಂಬಾತರನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿತರು AMPHETAMINES ಎಂಬ ಮಾದಕ ದ್ರವ್ಯ ಸೇವನೆ  ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 16-03-2024 10:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080