ಅಭಿಪ್ರಾಯ / ಸಲಹೆಗಳು

Traffic North Police Station                                             

ಪಿರ್ಯಾದಿ Prakash H  ನಿನ್ನೆ ದಿನ ದಿನಾಂಕ 13-04-2023 ರಂದು ತಾನು ಕೆಲಸ ಮಾಡುತ್ತಿದ್ದ ಅರವಿಂದ್ ಮೋಟಾರ್ಸ್ ಶೋ ರೂಂ ಕೂಳೂರಿನಲ್ಲಿ ಕೆಲಸ ಮುಗಿಸಿ, ತನ್ನ ಮಿತ್ರನ ಶಾಪ್ ಬಿಜೈ ಗೆ ತೆರಳುವ ಸಲುವಾಗಿ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA-19-HL-4673 ನೇದನ್ನು ಚಲಾಯಿಸಿಕೊಂಡು ಹೋಗುತ್ತಾ ರಾ.ಹೆ. 66 ರಲ್ಲಿ  ಕೊಟ್ಟಾರ ಚೌಕಿಯಿಂದ ಸ್ವಲ್ಪ ಮುಂದೆ IDEAL ICE CREAM FACTORY ಎದುರುಗಡೆ ರಸ್ತೆಯನ್ನು ತಲುಪಿದಾಗ ಸಮಯ ಸುಮಾರು 8:15 ಗಂಟೆಗೆ ರಸ್ತೆಯ ತೀರಾಎಡಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಮೋಟಾರು ಸೈಕಲಿಗೆ ಹಿಂದುಗಡೆಯಿಂದ ನಂಬ್ರ ತಿಳಿಯದ ಕಾರೊಂದನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕೆತಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೊಟಾರು ಸೈಕಲನ್ನು ರಸ್ತೆಯ ಬಲಬದಿಯಲ್ಲಿ ಓವರ್ ಟೇಕ್ ಮಾಡುವ ಬರದಲ್ಲಿ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲಿನ ನಿಯಂತ್ರಣ ತಪ್ಪಿ ತನ್ನ ಎದುರಿನಿಂದ ಹೋಗುತ್ತಿದ್ದ KA-19-MM-9130 ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಹಿಂಬದಿಯ ಬಂಪರ್ ಜಖಂ ಗೊಂಡಿರುತ್ತದೆ ಅಲ್ಲದೇ ಪಿರ್ಯಾದಿದಾರರು ಮೋಟಾರು ಸೈಕಲಿನ ಸಮೇತ ರಸ್ತೆಗೆ ಬಿದ್ದು, ಬಲಬದಿ ಕೈಯ ಭುಜದ ಹತ್ತಿರ ಮೂಳೆ ಮುರಿತದ ಗಾಯವಾಗಿದ್ದು, ಬಲಕೈಯ ಬೆರಳುಗಳಿಗೆ ಮತ್ತು ಎಡಕೈಯ ಮೊಣಗಂಟಿನ ಬಳಿ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ,ಅಲ್ಲದೇ ಪಿರ್ಯಾದಿದಾರರ ಮೋಟಾರು ಸೈಕಲ್ ಕೂಡ ಜಖಂ ಗೊಂಡಿರುತ್ತದೆ ಎಂಬಿತ್ಯಾದಿ.

 

Mangalore East Traffic PS       

ಪಿರ್ಯಾದಿ ಶ್ರೀಮತಿ ಮಿತ್ರಾ ಬೈ ರವರು ದಿನಾಂಕ 12-04-2023 ರಂದು ಮದ್ಯಾಹ್ನ ಸುಮಾರು 3.10 ಗಂಟೆಗೆ  ತನ್ನ ಗುಮಾಸ್ತೆ ಶ್ರೀಮತಿ ಸೋನಿಕಾ ರವರೊಂದಿಗೆ ತನ್ನ ಬಾಬ್ತು KA-19-HK-3712  ನೊಂದಣಿ ನಂಬ್ರದ ಸುಜ್ಹುಕಿ ಆಕ್ಸೆಸ್  ಸ್ಕೂಟರ್ ನಲ್ಲಿ ಸವಾರೆಯಾಗಿ ಮತ್ತು ಹಿಂಬದಿ ಸಹ ಸವಾರೆಯಾಗಿ ಶ್ರೀಮತಿ ಸೋನಿಕಾ ರವರನ್ನು  ಕುಳ್ಳಿರಿಸಿಕೊಂಡು  ಮಂಗಳೂರಿನ ಜೈಲ್ ರಸ್ತೆಯಿಂದ ಪಿಯೋ ಮಾಲ್ ಕಡೆಗೆ ಹೋಗುತ್ತಿರುವಾಗ  ತಂದೂರ್ ಬಾರ್ ಎಂಡ್ ರೆಸ್ಟೋರೆಂಟ್ ಕಡೆಯಿಂದ KA-19-MG-0823  ನೊಂದಣಿ ನಂಬ್ರದ ಕಪ್ಪು ಬಣ್ಣದ ಹೋಂಡಾ ಸಿಟಿ ಕಾರನ್ನು ಅದರ ಚಾಲಕ ಪ್ರೇಮ್ ರಾಜ್ ಎಂಬಾತನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು  ಹಾಗೂ ಸಹ ಸವಾರೆ ಸೋನಿಕಾ ರವರು ರಸ್ತೆಗೆ ಬಿದ್ದಿದ್ದವರನ್ನು ಅಪಘಾತಪಡಿಸಿದ ಕಾರು ಚಾಲಕ ಯೆನಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರ ಬಲ ಕಾಲಿಗೆ ಗಾಯ,  ಬಲ ಕೈ ಎಲುಬು ಮುರಿದಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕೆಂದು  ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಸಹ ಸವಾರೆ  ಶ್ರೀಮತಿ ಸೋನಿಕಾ ರವರಿಗೆ ಬಲ ಕೈ ಹಾಗೂ ಬಲ ಕಾಲಿಗೆ ಗಾಯವಾಗಿದ್ದು, ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಅಪಘಾತದ ನಂತರ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ. ಆದುದರಿಂದ ಅಪಘಾತಪಡಿಸಿದ ಕಾರು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

Traffic South Police Station

ದಿನಾಂಕ: 13-04-2023 ರಂದು ಪಿರ್ಯಾದಿದಾರರಾದ ಕಂಕನಾಡಿ ನಗರ ಪೋಲಿಸ್ ಠಾಣಾ ಉಪ ನಿರೀಕ್ಷಕರಾದ ಎನ್.ಎ ಜ್ಯೋತಿ (47 ವರ್ಷ) ರವರು ಆಡಂ ಕುದ್ರು ಬಸ್ ಸ್ಟಾಪ್ ಬಳಿ ಪಾಯಂಟ್ ಕರ್ತವ್ಯಕ್ಕೆ ನೇಮಿಸಿದ್ದ ಕಂಕನಾಡಿ ನಗರ ಠಾಣಾ ಸಿಬ್ಬಂದಿ ಮಂಜುನಾಥ ಹೆಗ್ಡೆ, ಹೆಚ್ ಸಿ  ರವರ ಜೊತೆ ರಸ್ತೆ ಬದಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 02:30 ಗಂಟೆಗೆ ಪಂಪವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ರಾ.ಹೆ-66 ರ ರಸ್ತೆಯಲ್ಲಿ ಮಾನ್ಯ ಮುಖ್ಯಮಂತ್ರಿಯವರ ಕಾನ್ವೆ ಬರುತ್ತಿದ್ದು ಆ ವೇಳೆ ಅದೇ ರಸ್ತೆಯಲ್ಲಿ ಕಾನ್ವೆ ಮುಂದಿನಿಂದ ಬರುತ್ತಿದ್ದ ವಾಹನಗಳನ್ನು ಹೆಚ್ ಸಿ  ಮಂಜುನಾಥ ಹೆಗ್ಡೆ ರವರು ರಸ್ತೆ ಬದಿಗೆ ಹಾಕುವಂತೆ ರಸ್ತೆ ಮೇಲೆ ನಿಂತು ಸೂಚನೆ ನೀಡುತ್ತಿರುವಾಗ  ಪಂಪವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಟಾಟಾ ಏಸ್ ಮಿನಿ ಗೂಡ್ಸ್ ಟೆಂಪೋ ನಂಬ್ರ KA-19-AC-5606 ನೇದನ್ನು ಅದರ ಚಾಲಕ ಮೊಹಮ್ಮದ್ ಶಾಹೀದ್ ಎಂಬಾತನು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕರ್ತವ್ಯದಲ್ಲಿದ್ದ ಮಂಜುನಾಥ ಹೆಗ್ಡೆ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಅವರ ಹಣೆಗೆ ಹಾಗೂ ತಲೆಗೆ ಗುದ್ದಿದ ರೀತಿಯ ತೀವ್ರ ಸ್ವರೂಪದ ರಕ್ತಗಾಯ, ಬಲಗೈಗೆ ಮೂಳೆ ಮುರಿತದ ಗಾಯ ಹಾಗೂ ಎಡಗೈ ತಟ್ಟಿಗೆ ರಕ್ತಗಾಯ ಮತ್ತು ಎಡಗೈ ಕೋಲು ಕೈಗೆ ತರಚಿದ ಗಾಯವಾಗಿದ್ದು ಅವರನ್ನು ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ್ದ ಜನರು ಉಪಚರಿಸಿ ಅಲ್ಲಿಯೇ  ಎದುರು ರಸ್ತೆಯಲ್ಲಿ ಚುನಾವಣೆ ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ಠಾಣಾ ಸಿಬ್ಬಂದಿ ದಿನೇಶ್ ರಾಥೋಡ್ ಪಿಸಿ  ರವರ ಜೊತೆ ಕಾರೊಂದರಲ್ಲಿ ಚಿಕಿತ್ಸೆ ಬಗ್ಗೆ ಪಂಪವೆಲ್ ನ ಇಂಡಿಯಾನ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ.ಎಂಬಿತ್ಯಾದಿ.

 

Traffic North Police Station          

ಪಿರ್ಯಾದಿ ನಿಶಾಂತ್ (30 ವರ್ಷ) ರವರು  ದಿನಾಂಕ: 12-04-2023 ರಂದು ಅವರ ಗೆಳೆಯ ಚೋಟೆ ಎಂಬುವರ ಜೊತೆ ಆತನ ಗೆಳೆಯ ಕಾರ್ತೀಕ್ ಎಂಬುವರ ಮಾಲೀಕತ್ಚದ KA-19-HK-7733 ನಂಬ್ರದ ಮೋಟಾರ್ ಸೈಕಲಿನಲ್ಲಿ ಸಹಸವಾರನಾಗಿ ಕುಳಿತುಕೊಂಡು ಚೋಟೆ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಗುಡ್ಡೆಕೊಪ್ಲು ಸೈಟಿನಿಂದ ಸುರತ್ಕಲ್ ಕಡೆಗೆ ಬರುವ ಸಮಯ ಸಂಜೆ ಸುಮಾರು 18:00 ಗಂಟೆಗೆ ಗುಡ್ಡೆ ಕೊಪ್ಲ ಚಂದ್ರಗಿರಿ ಹೋಟೆಲ್ ಬಳಿಯ ಕ್ರಾಸ್ ತಲುಪುತ್ತಿದ್ದಂತೆ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಚೋಟೆ ಮೋಟಾರ್ ಸೈಕಲನ್ನು ತೀರಾ ಅಜಾಗರುಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಮೋಟಾರ್ ಸೈಕಲ್ ಸಮೇತ ಇಬ್ಬರೂ ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಮೋಟಾರ್ ಸೈಕಲಿನಲ್ಲಿ ಸಹಸವಾರನಾಗಿ ಕುಳಿತಿದ್ದ ನಿಶಾಂತ್ ರವರಿಗೆ ಎಡಕಾಲಿನ ಪಾದದ ಹಿಮ್ಮಡಿ ಚರ್ಮ ಹರಿದಂತ ರಕ್ತಗಾಯ ಹಾಗೂ ಕೈ ಮತ್ತು ಕಾಲುಗಳಲ್ಲಿ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ ಮೋಟಾರ್ ಸೈಕಲ್ ಸವಾರ ಚೋಟೆನಿಗೂ ಕೂಡಾ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲಿನ ಅಥರ್ವ ಆಸ್ಪತ್ರೆಯಲ್ಲಿ ನಿಶಾಂತ್ ರವರು ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

    

 

 

ಇತ್ತೀಚಿನ ನವೀಕರಣ​ : 21-08-2023 12:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080