ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore East Traffic PS  

       

ಪಿರ್ಯಾದಿದಾರರಾದ ಲೋಯಿಸ್ ಮಾಂತೆರೋ ಪ್ರಾಯ 77 ವರ್ಷ ರವರು ದಿನಾಂಕ 13-04-2024 ರಂದು ಮಧ್ಯಾಹ್ನ ತಮ್ಮ ಸ್ಕೂಟರ್ ನೊಂದಣಿ ಸಂಖ್ಯೆ: KA-19-EK-2837 ನೇಯದನ್ನು ಚಲಾಯಿಸಿಕೊಂಡು ನಂತೂರು ಕಡೆಯಿಂದ ಶಿವಭಾಗ್ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 3:55 ಗಂಟೆಗೆ ಶಿವಭಾಗ್ ನ್ಯೂ ರೋಡ್ ಅಡ್ಡರಸ್ತೆ ಬಳಿ ಇರುವ ಹಂಪ್ಸ್ ಹತ್ತಿರ ತಲುಪುತ್ತಿದ್ದಂತೆ ಸ್ಕೂಟರಿನ ಹಿಂಭಾಗದಿಂದ ಬರುತ್ತಿದ್ದ ಬಸ್ಸು ನೊಂದಣಿ ಸಂಖ್ಯೆ: KA-19-C-8537 ನೇಯದನ್ನು ಅದರ ಚಾಲಕ ಮೊಹಮ್ಮದ್ ಹನೀಫ್ ಎಂಬಾತನು ಬಸ್ಸನ್ನು ನಿಧಾನಗೊಳಿಸದೆ ನಿರ್ಲಕ್ಷ್ಯತನದಿಂದ ಚಲಾಯಿಸಿ ಸ್ಕೂಟರಿನ ಹಿಂಭಾಗಕ್ಕೆ ಢಿಕ್ಕಿಪಡಿಸಿದ್ದು, ಪಿರ್ಯಾದಿದಾರರು ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ ಎಂಬಿತ್ಯಾದಿ.

 

Traffic North Police Station    

                             

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ,  ದಿನಾಂಕ 14-04-2024 ರಂದು  ಸುರತ್ಕಲ್ ಚೊಕ್ಕಬೆಟ್ಟು ಬಳಿ ಪಿರ್ಯಾದಿ Pradeep Haridas Waghmore ಇವರು ಮತ್ತು ಮುಖೇಶ್, ಮನೀಶ್ ರವರ ಜೊತೆಯಲ್ಲಿ ಜಾಹಿರಾತು ಅಂಟಿಸುತ್ತಿದ್ದ ಸಮಯ ಸುಮಾರು 00:15 ಗಂಟೆಗೆ ಕೃಷ್ಣಾಪುರ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ KA-19-HF-6115 ನಂಬ್ರದ ಮೋಟಾರ್ ಸೈಕಲಿನಲ್ಲಿ ಸಹ ಸವಾರರನ್ನು ಕುಳ್ಳಿರಿಸಿಕೊಂಡು ಅದರ ಸವಾರ ಪ್ರದೀಶ್ ಎಂಬಾತನು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಬಲಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿದ್ದು,ಅಲ್ಲದೇ ಮೋಟಾರ್ ಸೈಕಲ್ ಸವಾರನಿಗೂ ಗಾಯವಾಗಿರುತ್ತದೆ ಎಂಬಿತ್ಯಾದಿ

 

Kavoor PS

       

ಪಿರ್ಯಾದಿ GAYATRI ಇವರು ತಂದೆ ತಾಯಿ ಹಾಗೂ ಅಕ್ಕನೊಂದಿಗೆ ವಾಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ತಂದೆ ರಮೇಶ ಆಚಾರ್ಯ ಎಂಬವರು ದಿನಾಂಕ: 12.08.2024 ರಂದು ಮದ್ಯಾಹ್ನ ಊಟ ಮಾಡಿದ ಬಳಿಕ ಗಂಟಲಲ್ಲಿ ಆಹಾರ ಸಿಕ್ಕಿಕೊಂಡು ನೀರು ಸೇವಿಸಲು ಸಾದ್ಯ ವಾಗದೇ ಇದ್ದು, ಆಸ್ಪತ್ರೆಗೆ ಹೋಗದೇ ಇದ್ದವರಿಗೆ ದಿನಾಂಕ: 13.04.2024 ರಂದು ಬೆಳಿಗ್ಗೆ ಪಿರ್ಯಾದಿದಾರರ ತಾಯಿ ಆಸ್ಪತ್ರೆಗೆ ಹೋಗುವಂತೆ ರಮೇಶ ಆಚಾರ್ಯ ರವರಿಗೆ ತಿಳಿಸಿ ಕೆಲಸಕ್ಕೆ ಹೋಗಿದ್ದು, ಪಿರ್ಯಾದಿದಾರರರು ಬೆಳಿಗ್ಗೆ 08-00 ಗಂಟೆಗೆ ಮನೆಯಲ್ಲಿ ಎದ್ದು ನೋಡಿದಾಗ ರಮೇಶ ಆಚಾರ್ಯ ರವರು ಮನೆಯಲ್ಲಿ ಇಲ್ಲದೇ ಇದ್ದು, ಚಿಕಿತ್ಸೆ ಪಡೆದುಕೊಳ್ಳಲು ಹೊದವರು ಈ ದಿನ ದಿನಾಂಕ: 14.04.2024 ರಂದು ಈ ವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ ಕಾಣೆಯಾದವರ ಚಹರೆ:

ಹೆಸರು: ರಮೇಶ ಆಚಾರ್ಯ (73)

ತಂದೆ: ದಿ.ದಾಸಪ್ಪ ಆಚಾರ್ಯ

ವಾಸ: 4-134/4 ಕೊರಂಟಾಡಿ ಮನೆ ಮರಕಡ ಗ್ರಾಮ ಕುಂಜತ್ತ್ ಬೈಲ್ ಮಂಗಳೂರು.

ಎತ್ತರ: 5’3

ಎಣ್ಣೆಗಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ

ಧರಿಸಿದ್ದ ಬಟ್ಟೆ :ಬಿಳಿ ಮತ್ತು ನೀಲಿ ಬಣ್ಣವಿರುವ ಶರ್ಟ, ಕಪ್ಪು ಬಣ್ಣದ ಪ್ಯಾಂಟ್

 

 

 Kankanady Town PS

 

ಈ ಪ್ರಕರಣದ ಪಿರ್ಯಾದಿದಾರರಾದ  ಶ್ರೀ  ಎ. ವಿಜಯ  ಕುಮಾರ್  ಭಂಡಾರಿ ರವರು, ಅವರ ಮಂಗಳೂರು  ಪದವಿನಂಗಡಿ, INLAND WINDSOR APARTMENT, ಫ್ಲಾಟ್ ನಂಬ್ರ 007 ರಲ್ಲಿ  ದಿನಾಂಕ:13-04-2024 ರಂದು ಅವರ ಮನೆಯ ಅಕ್ವೋಗಾರ್ಡ್ ನ್ನು ದುರಸ್ತಿ ಮಾಡಲು  ಗೂಗಲ್ ನಲ್ಲಿ ಸರ್ಚ್ ಮಾಡಿ ದೊರೆತ ಟೋಲ್ ಪ್ರೀ ನಂಬ್ರಕ್ಕೆ  ಮದ್ಯಾಹ್ನ 12-00 ಗಂಟೆಗೆ ಕರೆ ಮಾಡಿ  ಅಕ್ವೋಗಾರ್ಡ್ ದುರಸ್ತಿಗಾಗಿ  ದೂರು ದಾಖಲಿಸಿದ ಬಳಿಕ  ಮದ್ಯಾಹ್ನ 12-05 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಮೊಬೈಲ್  ನಂಬ್ರ  9448000447 ನೇಯದಕ್ಕೆ ಮೊಬೈಲ್ ನಂಬ್ರ 09732845439 ನೇಯದ್ದರಿಂದ ಕರೆ ಮಾಡಿ,  ಹಿಂದಿ ಭಾಷೆಯಲ್ಲಿ ಅಕ್ವೋಗಾರ್ಡ್  ದುರಸ್ತಿ ಬಗ್ಗೆ ಮಾತನಾಡಿ customersupport.apk ಎನ್ನುವ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಲು ಹೇಳಿದಂತೆ,  ಪಿರ್ಯಾದಿದಾರರ  ಮೊಬೈಲ್ ನ ವಾಟ್ಸಪ್ ಗೆ ಮೊಬೈಲ್ ಸಂಖ್ಯೆ 6202277155 ಹಾಗೂ 8981294983 ನೇಯದ್ದರಿಂದ  ಬಂದಿರುವ customersupport.apk  ಎಂಬ ಆಪ್ ನ್ನು ಡೌನ್ ಲೋಡ್ ಮಾಡಿರುತ್ತಾರೆ.   09732845439 ನೇ  ಮೊಬೈಲ್ ನಂಬ್ರದ ವ್ಯಕ್ತಿ ಕರೆ ಮಾಡಿ,  ಪಿರ್ಯಾದಿದಾರರ ಗೂಗಲ್ ಪೇಯಿಂದ ರೂಪಾಯಿ 10 ನ್ನು ಅಪ್ಲಿಕೇಶನ್ ಚಾರ್ಜ್ ಆಗಿ   6202277155 ಹಾಗೂ 8981294983 ನೇ ಖಾತೆಗೆ ವರ್ಗಾವಣೆ ಮಾಡಲು ಹೇಳಿದಾಗ, ಪಿರ್ಯಾದಿದಾರರಿಗೆ ಅನುಮಾನ ಬಂದು  ಕಳುಹಿಸಿಕೊಟ್ಟಿರುವುದಿಲ್ಲ.  ಪಿರ್ಯಾದಿದಾರರ ಮೊಬೈಲ್ ನ್ನು ಆರೋಪಿಗಳು ಹ್ಯಾಕ್ ಮಾಡಿ, 20-00 ಗಂಟೆಗೆ  ರೂ 50,000/- IMPS (Ref No. 410420622924) ಮುಖಾಂತರ  ಪಿರ್ಯಾದಿದಾರರ ಕಾವೂರು ಯೂನಿಯನ್ ಬ್ಯಾಂಕ್ ನ ಎಸ್ ಬಿ ಖಾತೆ ಯಿಂದ  ವಂಚಿಸಿ ಕಟಾವು ಮಾಡಿದಾಗ,  ಪಿರ್ಯಾದಿದಾರರು 1930 ಗೆ ದೂರು ದಾಖಲಿಸಿದರೂ ಅದೇ ಖಾತೆಯಿಂದ 20-51 ಗಂಟೆಗೆ Mob Bk ref No.410420104065 ಇದರ ಮುಖಾಂತರ 50,000/- ರೂ ಹಣವನ್ನು ವಂಚಿಸಿ ಕಟಾವು ಮಾಡಿರುತ್ತಾರೆ ಪಿರ್ಯಾದಿದಾರರು ಖಾತೆಯನ್ನು ಸ್ಥಗಿತಗೊಳಿಸಿದ ನಂತರ ಸದ್ರಿ ಖಾತೆಯಿಂದ ಮೂರು ಬಾರಿ ಹಾಗೂ ಹೆಚ್ ಡಿ ಎಫ್ ಸಿ ಬ್ಯಾಂಕ್ ಖಾತೆಯಿಂದ ಒಂದು ಬಾರಿ ಹಣ ವರ್ಗಾವಣೆ ಮಾಡಲು ಪ್ರಯತ್ನಿಸಿರುವುದಲ್ಲದೇ ದಿನಾಂಕ:14-04-2024 ರಂದು  ಬೆಳಿಗ್ಗೆ 08-15 ಮತ್ತು 8-16 ಗಂಟೆಗೆ ಎರಡು ಬಾರಿ ಸದ್ರಿ ಖಾತೆಯಿಂದ  ಓಟಿಪಿ ಕ್ರಿಯೇಟ್ ಮಾಡಿ, ಹಣ ವರ್ಗಾಯಿಸಿಕೊಳ್ಳಲು ಪ್ರಯತ್ನ ಪಟ್ಟಿರುವ ಬಗ್ಗೆ ಮೆಸೇಜ್ ಬಂದಿರುತ್ತದೆ.  ಮೊಬೈಲ್ ಸಂಖ್ಯೆ 7799735705 ನೇಯದ್ದರಿಂದ ಪಿರ್ಯಾದಿದಾರರ ಖಾತೆಯಿಂದ ಹಣ ಕಟಾವು ಆದ ಬಗ್ಗೆ ಹಾಗೂ OTP ಕ್ರಿಯೇಟ್ ಮಾಡಿರುವ  ಮೆಸೇಜ್ ಗಳು ಬಂದಿರುತ್ತದೆ.   ಎಂಬಿತ್ಯಾದಿಯಾಗಿರುತ್ತದೆ.   

ಇತ್ತೀಚಿನ ನವೀಕರಣ​ : 16-04-2024 09:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080