ಅಭಿಪ್ರಾಯ / ಸಲಹೆಗಳು

Crime report in Mangalore East Traffic PS                    

ಪಿರ್ಯಾದಿ GADWAL SHAIKSHAVALI ದಿನಾಂಕ: 14-06-2023 ರಂದು ತನ್ನ ಗೆಳೆಯನಾದ ಸಂದೇಶ್ ತೋಮಸ್ ರವರೊಂದಿಗೆ KA-21-EC-5179 ನಂಬ್ರದ ಸ್ಕೂಟರಿನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಸಂದೇಶ್ ತೋಮಸ್ ರವರು ಸವಾರಿ ಮಾಡುತ್ತಾ  ಬೆಳಿಗ್ಗೆ ಬೆಂದೂರ್ ವೆಲ್ ನಲ್ಲಿರುವ ಕಾಗ್ನಿಜೆಂಟ್ ನಿಂದ ಪಂಪ್ ವೆಲ್ ಪ್ಲೈ ಓವರ್ ಬಳಿ ಇರುವ ಟೀ ಅಂಗಡಿಗೆ ಹೋಗಿದ್ದು, ಅಲ್ಲಿ ಪಿರ್ಯಾಧಿದಾರರನ್ನು ಟೀ ಕುಡಿಯಲು ಬಿಟ್ಟು ಸಂದೇಶ್ ತೋಮಸ್ ರವರು ತಮ್ಮ ಇನ್ನೊಬ್ಬ ಗೆಳೆಯನನ್ನು ಕರೆ ತರಲು ಕರಾವಳಿ ಸರ್ಕಲ್ ಕಡೆಯಿಂದ ಪಂಪ್ ವೆಲ್ ಕಡೆಗೆ ಸಾಗಿರುವ ರಸ್ತೆಯಲ್ಲಿ ಏಕಮುಖ ರಸ್ತೆಯ ವಿರುದ್ಧವಾಗಿ ಚಲಾಯಿಸಿಕೊಂಡು ಬಂದು ಸಮಯ ಸುಮಾರು ಬೆಳಿಗ್ಗೆ  4:00 ಗಂಟೆಗೆ ಪಂಪ್ವೆಲ್ ಪ್ಲೈಓವರ್ ಕೆಳಗೆ ಬಂದು ತಲುಪುತ್ತಿದ್ದಂತೆ ಹಳೆ ಕಂಕನಾಡಿ ರಸ್ತೆಯಿಂದ ಪಂಪ್ ವೆಲ್ ಪ್ಲೈ ಓವರ್ ಕಡೆಗೆ  KA-09-B-8183 ನೇ  ನಂಬ್ರದ ಟಿಪ್ಪರ್ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸಂದೇಶ್ ತೋಮಸ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಢಿಕ್ಕಿಪಡಿಸಿದ ಪರಿಣಾಮ ಸಂದೇಶ್ ತೋಮಸ್ ರವರು ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ಎಡಬದಿಯ ಪಕ್ಕೆಲುಬು ಮುರಿತದ ಗಂಭೀರ ಗಾಯಗೊಂಡಿದ್ದು, ಗಾಯಾಳುವನ್ನು ಪಿರ್ಯಾದಿದಾರರು ಆಟೋರಿಕ್ಷಾವೊಂದರಲ್ಲಿ  ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು,  ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 6:55 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

Bajpe PS

ಪಿರ್ಯಾದಿ Dananjaya ಅಣ್ಣನಾದ ಲಕ್ಷ್ಮೀಶನು ದಿನಾಂಕ 12.06.2023 ರಂದು ಸಂಜೆ ಸುಮಾರು 7.00 ಗಂಟೆಗೆ  ತನ್ನ ಬೈಕ್ ನಂ KA19-HL-8645 ನೇದರಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವ ಸಮಯ  ಮಂಗಳೂರು ತಾಲೂಕು ಪೆರ್ಮುದೆ ಗ್ರಾಮದ ಅಂಬಲ್ ಪೆರೆಡೈಸ್ ಅಪಾರ್ಟಮೆಂಟ್ ಬಳಿ ಹೋಗುತ್ತಿರುವ ಸಮಯ ಕಟೀಲು ಕಡೆಯಿಂದ ಬಜಪೆ ಕಡೆಗೆ ವೇಗವಾಗಿ ಹೋಗುತಿದ್ದ KA19D8578 ನೇದರ ಪಿಕಪ್ ಚಾಲಕ ತನ್ನ ವಾಹನವನ್ನು ವೇಗವಾಗಿ ಚಲಾಯಿಸಿ ಪಿರ್ಯಾದಿದಾರರ ಅಣ್ಣನಾದ ಲಕ್ಷ್ಮೀಶನು ಚಲಾಯಿಸುತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಲ್ಷಕ್ಮೀಶನಿಗೆ ತೆಲೆಗೆ ಹಾಗೂ ಎಡಕಾಲಿಗೆ ರಕ್ತಗಾಯವಾಗಿದ್ದು ನಂತರ ಗಾಯಾಳು ಪಿರ್ಯಾದಿದಾರರ ಅಣ್ಣನನ್ನು ಕಾರಿನಲ್ಲಿ ತೇಜಶ್ವಿನಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

Bajpe PS

ದಿನಾಂಕ;21-04-2023 ರಂದು ಸಂಜೆ 04-00 ಗಂಟೆಗೆ ಪಿರ್ಯಾದಿ SABIHA TABASAMA ತಂದೆ ಕೆ,ಎ, ಉಮರಬ್ಬ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA19EQ8312 ನ್ನು ಮುತ್ತೂರು ಕಡೆಯಿಂದ ಕುಪ್ಪೆಪದವು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಮುತ್ತೂರು ನೂದೊಟ್ಟು ಮರದ ಮಿಲ್ ಬಳಿ ತಲುಪುವಾಗ ಮೋಟಾರ್ ಸೈಕಲ್ ಹಿಂದಿನಿಂದ ವೇಗವಾಗಿ ಬಂದ ಟಾಟಾ ಗೂಡ್ಸ್ ವಾಹನ KA19AE1167 ನ್ನು ಅದರ ಚಾಲಕ ಪ್ರಜ್ವಲ್ ಎಂಬಾತನು ಮೋಟಾರ್ ಸೈಕಲನ್ನು ಎಡಬದಿಯಿಂದ ಓವರ್ ಟೇಕ್ ಮಾಡುವಾಗ ದುಡುಕುತನದಿಂದ ಚಲಾಯಿಸಿದರಿಂದ ಗೂಡ್ಸ್ ವಾಹನದ ಹಿಂಬದಿಯ ಬಲ ಚಕ್ರಕ್ಕೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಉಮರಬ್ಬರವರು ಮೋಟಾರ್ ಸೈಕಲ್ ಸಮೇತ ರಸ್ತೆಯ ಬಲಬದಿಯಲ್ಲಿ  ಹೋಗುತ್ತಿದ್ದ ಆಟೋ ರಿಕ್ಷಾ ನಂಬ್ರ KA19AC7647 ರ ಮೇಲೆ ಬಿದ್ದು ತಲೆಗೆ ಗಂಭೀರ ಸ್ವರೂಪದ ರಕ್ತ ಗಾಯ ಹಾಗೂ ಎರಡು ಭುಜಗಳಿಗೆ ಗಾಯಗಳಾಗಿದ್ದು, ಎ,ಜೆ ಆಸ್ವತ್ರೆ ಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ, ಎಂಬಿತ್ಯಾದಿ.

Bajpe PS

ಪಿರ್ಯಾದಿ PRAKASH B ಅಣ್ಣ ಹರೀಶ್ ರವರು  ದಿನಾಂಕ;13/06/2023 ರಂದು ಸಂಜೆ 04:30 ಗಂಟೆಗೆ ಮೋಟಾರ್ ಸೈಕಲ್ ನಂಬ್ರ KA19EZ 7300  ಕೈಕಂಬ ಯಿಂದ ಬಜಪೆ ಕಡೆಗೆ ಬರುತ್ತಿರುವಾಗ ಕಜೆಪದವು ಎಂಬಲ್ಲಿ  ಬಜಪೆ ಕಡೆಯಿಂದ ಕೈಕಂಬ ಕಡೆಗೆ ವೇಗವಾಗಿ ಹೋಗುತ್ತಿದ್ದ ರಾಜಶ್ರೀ ಹೆಸರಿನ ಬಸ್ಸ್ ನಂಬ್ರ KA19 AA 3749 ನೇದರ ಚಾಲಕನಾದ ಅಜೀಜ್ ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೂಂಡು ಬಂದು ಕಜೆಪದವು ಬಳಿ ಹರೀಶ್ ರವರು ಚಲಾಯಿಸಿಕೂಂಡು ಬರುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೂಡೆದ ಪರಿಣಾಮ ತಲೆ ಮತ್ತು ಕೈ ಕಾಲುಗಳಿಗೆ ಗಾಯವಾಗಿದ್ದು, ಗಾಯಳುವನ್ನು ಮಂಗಳೂರು ವೆನ್ ಲಾಕ್ ಆಸ್ವತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.

Surathkal PS

ದಿನಾಂಕ 13-06-2023 ರಂದು 16-00 ಗಂಟೆಗೆ ಠಾಣಾ ಸಿಬ್ಬಂದಿ ದಿಲಿಪ್ ರಾಜೇ ಅರಸ್ ರವರು ನೀಡಿದ ಖಚಿತ ಮಾಹಿತಿಯ ದಿನಾಂಕ 13-06-2023 ರಂದು 18-30 ಗಂಟೆಗೆ ಮಾಹಿತಿ ಬಂದಿರುವ ಸ್ಥಳವಾದ ಮಂಗಳೂರು ತಾಲೂಕು ಸೂರಿಂಜೆ ಗ್ರಾಮದ ಮಾರುತಿ ನಗರ ಎಂಬಲ್ಲಿಗೆ ದಾಳಿ ಮಾಡಿ ಮೊಹಮ್ಮದ್ ರಫಿ ಎಂಬಾತನು ಕೈಯಲ್ಲಿ ಒಂದು ಪುಸ್ತಕವನ್ನು ಹಾಗೂ ಕೆಲವು ಚೀಟಿಗಳನ್ನು ಇಟ್ಟುಕೊಂಡು ಪೆನ್ ನಿಂದ ಅಲ್ಲಿಗೆ ಬರುತ್ತಿದ್ದ ಕೂಲಿಯಾಳುಗಳು ಹೇಳಿದ ನಂಬ್ರವನ್ನು ಪೆನ್ ನಿಂದ ಚೀಟಿಯಲ್ಲಿ ಬರೆದು ಚೀಟಿಯನ್ನು ಕೂಲಿಯಾಳುಗಳಿಗೆ ಕೊಟ್ಟು ಮತ್ತು ಅದೇ ನಂಬ್ರವನ್ನು ಪುಸ್ತಕದಲ್ಲಿ ಬರೆದು ಕೂಲಿಯಾಳುಗಳಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಎಂಬ ನಸೀಬಿನ ಜೂಜಾಟವನ್ನು ಆಡುತ್ತಿದ್ದವನನ್ನು ವಶಕ್ಕೆ ಪಡೆದು ವಿಚಾರಿಸಿಕೊಂಡಾಗ ಆತನು ಅಂಬರೀಶ್ ಎಂಬಾತ ತಿಳಿಸಿದಂತೆ ಈ ನಸೀಬಿನ ಜುಗಾರಿ ಆಟವನ್ನು ಆಡಿರುವುದಾಗಿ ತಿಳಿಸಿದ್ದರಿಂದ ಆರೋಪಿ ಮತ್ತು ಕೃತ್ಯಕ್ಕೆ ಬಳಸಿದ 1,000/- ರೂ ನಗದು, ಪೆನ್, ಚೀಟಿ, ಪುಸ್ತಕ ಹಾಗೂ ಆರೋಪಿ ವಶದಲ್ಲಿದ್ದ ಇನ್ಫಿನಿಕ್ಸ್ ಮೊಬೈಲ್ ನ್ನು ವಶಪಡಿಸಿಕೊಂಡಿರುವುದು ಎಂಬಿತ್ಯಾದಿಯಾಗಿದೆ.

Ullal PS

ದಿನಾಂಕ. 10-6-2023 ರಂದು ಸಂಜೆ 3-30 ಗಂಟೆಯ ಸಮಯಕ್ಕೆ ಕೋಟೆಕಾರು ಗ್ರಾಮದ ಸಂಕೋಳಿಗೆ ಶ್ರೀಕೃಷ್ಣ ಹಾಲ್ ಮತ್ತು ಫರ್ನಿಚರ್ ಅಂಗಡಿಯ ಸಮೀಪದ ರಸ್ತೆಯಲ್ಲಿ ಕೆಎ-19-ಸಿ-2924 ನೇ ಸ್ವರಾಜ್ ಮಜ್ದಾ ಲಾರಿಯನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟ ವಿದ್ಯುತ್ಚ್ಛಕ್ತಿ ಸರಬರಾಜಿನ ಎರಡು ಹೆಚ್.ಟಿ/ಎಲ್.ಟಿ. ಕಂಬಕ್ಕೆ ಢಿಕ್ಕಿ ಉಂಟು ಮಾಡಿ ಕಂಬಗಳು ತುಂಡಾಗಿದ್ದು, ಇದರಿಂದಾಗಿ ಇಲಾಖೆಗೆ ರೂ.48,634-00 ನಷ್ಟ ಉಂಟಾಗಿರುವುದಾಗಿಯೂ,  ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Ullal PS               

ದಿನಾಂಕ. 13/06/2023 ರಂದು 19.30 ಗಂಟೆಗೆ  ಉಳ್ಳಾಲ ತಾಲೂಕು, ಉಳ್ಳಾಲ ಗ್ರಾಮದ ಅಳೇಕಲ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಮೊಹಮ್ಮದ್ ಇಕ್ಬಾಲ್ (32) ವಾಸ. ಸ್ಟೋರ್ ಮನೆ, ಮಾರ್ಗತಲೆ, ಅಲೇಕಳ, ಉಳ್ಳಾಲ ಗ್ರಾಮ ಒಬ್ಬ ಯುವಕನು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದವನನ್ನು ವಶಕ್ಕೆ ಪಡೆದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಂತೆ ಸದ್ರಿ ವ್ಯಕಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ ನೀಡಿರುತ್ತಾರೆ. ಆದುದರಿಂದ ಕಾನೂನು ಬಾಹಿರವಾದ ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಮೊಹಮ್ಮದ್ ಇಕ್ಬಾಲ್‌ಎಂಬಾತನ ವಿರುದ್ಧ ಎನ್‌ಡಿಪಿಎಸ್ ಕಾಯಿದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುವುದು ಎಂಬಿತ್ಯಾದಿ.

 

 

 

 

 

ಇತ್ತೀಚಿನ ನವೀಕರಣ​ : 21-08-2023 01:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080