ಅಭಿಪ್ರಾಯ / ಸಲಹೆಗಳು

Crime Reported in Panambur PS

ಪಿರ್ಯಾದಿ Dulari ದಾರರು, ಪಿರ್ಯಾದಿದಾರರ ಗಂಡ  ರಾಜಕುಮಾರ, ಮೈದುನ ರಾಜೇಶ್ ಮತ್ತು ಅವರ ಹೆಂಡತಿ ಧರ್ಮವತಿ ಜೊತೆ ವಾಸಮಾಡಿಕೊಂಡಿದ್ದು,  ಅವರೆಲ್ಲರೂ ಕೂಲಿ ಕೆಲಸ ಮಾಡಿದ್ದು,ದಿನಾಂಕಃ12-07-2023 ರಂದು ತನ್ನ ಗಂಡ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು ಅವರೆಲ್ಲರು ಕೆಲಸ ಮುಗಿಸಿ ಬಂದು ರಾತ್ರಿ ಊಟ ಮುಗಿಸಿ 10 ಗಂಟೆಗೆ ಮನೆಯಲ್ಲಿ ಮಲಗಿದ್ದೆವು ರಾತ್ರಿ 10-30 ಗಂಟೆಗೆ ಎಚ್ಚರವಾಗಿ ನೋಡಿದಾಗ ತನ್ನ ಗಂಡ ರಾಜಕುಮಾರ ಮನೆಯಲ್ಲಿರಲಿಲ್ಲ, ತನ್ನ ಗಂಡ ಹೊರಗೆ ಹೋಗಿರಬಹುದೆಂದು ಭಾವಿಸಿ ಸುಮ್ಮನಿದ್ದರು.  ಮರುದಿನವು ಕೂಡ ತನ್ನ ಗಂಡ ಬಂದಿರುವುದಿಲ್ಲ, ಅವರಿಗೆ ಮದ್ಯಪಾನ ಮಾಡುವ ಅಭ್ಯಾಸವಿರುತ್ತದೆ. ತಮ್ಮ ಊರಿನವರಿಗೆಲ್ಲ ಮತ್ತು ಹತ್ತಿರದವರನೆಲ್ಲ ವಿಚಾರಿಸಿದ್ದು, ತನ್ನ ಗಂಡ ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ. ಬುಧವಾರ ರಾತ್ರಿ ಮಧ್ಯಪಾನ ಮಾಡಿ ತಣ್ಣೀರು ಭಾವಿ ಮಸೀದಿ ಹತ್ತಿರ ನಡೆದುಕೊಂಡು ಹೋಗುವುದನ್ನು ಬಿಹಾರದ ಕೆಲಸಗಾರರು ನೋಡಿರುವುದಾಗಿ ಪಿರ್ಯಾದಿದಾರರು ಹುಡುಕಾಡುವ ಸಮಯದಲ್ಲಿ ಬಿಹಾರದ ಯಾರೋ ಪರಿಚಯವಿಲ್ಲದ ಕೆಲಸಗಾರರು ಹೇಳಿದ್ದಾರೆ. ಅವರಲ್ಲಿ ಮೊಬೈಲ್ ಪೋನ್ ಕೂಡ ಇಲ್ಲ. ತನ್ನ ಗಂಡನನ್ನು ಹುಡುಕಾಡಿ ಇವರೆಗೆ ಪತ್ತೆಯಾಗದ ಕಾರಣ ಪಿರ್ಯಾದಿ ನೀಡಿರುವುದಾಗಿದೆ.

ಕಾಣೆಯಾದ ವ್ಯಕ್ತಿಯ ಚಹರೆಯ ವಿವರಃ

ಹೆಸರುಃರಾಜ್ ಕುಮಾರ್ ಧ್ರುವೆ

ಪ್ರಾಯ-30 ವರ್ಷ

ತಂದೆ:ಚೈನ್ ಸಿಂಗ್ ಧ್ರುವೆ

ಎತ್ತರಃ ಅಂದಾಜು 5 ಅಡಿ, ಸಾಧಾರಣ ಶರೀರ,

 

Mangalore South PS                                

ಪಿರ್ಯಾದಿದಾರ ಮಗ ಮೆಕಾನಿಕಲ್ ವಿಭಾಗದಲ್ಲಿ ಪದವಿ ಹೊಂದಿದ್ದು,ಆರೋಪಿ ಅವಿನಾಶ್ ಶೆಟ್ಟಿ ಎಂಬಾತನು 2022 ನೇ ಇಸವಿಯ ನವಂಬರ್ ತಿಂಗಳಿನಲ್ಲಿ ಮಂಗಳೂರಿನ ಡಿ.ಸಿ.ಆಫೀಸ್ ಬಳಿಯಲ್ಲಿ ಉದ್ಯೋಗಕ್ಕಾಗಿ ಮಾತನಾಡಿ ಎಂ.ಆರ್.ಪಿ.ಎಲ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಪಿರ್ಯಾದಿದಾರರ ಪಾಂಡೇಶ್ವ ರದ ಯೂನಿಯನ್ ಬ್ಯಾಂಕ್  ಬ್ರಾಂಚ್ ಹಾಗೂ ವೆಲೆನ್ಸಿಯಾ ಬ್ರಾಂಚ್ ನ ಬ್ಯಾಂಕ್ ಖಾತೆ ನಂಬ್ರ  ರಿಂದ ದಿನಾಂಕ 30-11-2022 ರಂದು ರೂ 1,00,000/- ದಿನಾಂಕ 02-12-2022 ರಂದು ರೂ 75,000/-,ದಿನಾಂಕ 08-12-2022 ರಂದು ರೂ 25,000/- ವನ್ನು ಆರೋಪಿತನ ಮಂಗಳೂರಿನ ಕೃಷ್ನಾಪುರದಲ್ಲಿರುವ ಕರ್ನಾಟಕ ಬ್ಯಾಂಕ್ ಖಾತೆ ನಂಬ್ರ 6052500102013501 ನೇದಕ್ಕೆ ವರ್ಗಾಯಿಸಿದ್ದು, ಆ ಬಳಿಕ ಆರೋಪಿತನು ಪಿರ್ಯಾದಿದಾರರ ಮಗನಿಗೆ ಕೆಲಸಕೊಡಿಸದೇ ಮೋಸ ವಂಚನೆ ಮಾಡಿ ನಂಬಿಕೆ ದ್ರೋಹ ಎಸಗಿರುತ್ತಾನೆ., ಎಂಬಿತ್ಯಾದಿಯಾಗಿರುತ್ತದೆ.

Moodabidre PS

ಪಿರ್ಯಾದಿದಾರರ ಬಗ್ಗೆ ಯಾರೋ ಅಪರಿಚಿತ ವ್ಯಕ್ತಿಯು  https://instagram.com/4942/.Pavithra?igshid=MzRIOD:iNWFIZA = = URL ವಿಳಾಸವನ್ನು ಉಪಯೋಗಿಸಿಕೊಂಡು ದಿನಾಂಕ 06.07.2023 ರಿಂದ 14.07.2023 ರ  ಮಧ್ಯಾವಧಿಯಲ್ಲಿ ಅರ್ಜಿದಾರರ ನಕಲಿ ಖಾತೆಯನ್ನು ತೆರೆದು ಸೋಷಿಯಲ್ ಮೀಡಿಯಾದ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಅಕೌಂಟ್ ಗಳಲ್ಲಿ ಪಿರ್ಯಾದಿದಾರರ ಭಾವಚಿತ್ರಗಳನ್ನು ಅವರ ಅರಿವಿಗೆ ಬಾರದೇ ಅಪ್ ಲೋಡ್ ಮಾಡಿದ್ದು, ಅಲ್ಲದೇ ಪಿರ್ಯಾದಿದಾರರ ಬಗ್ಗೆ ಅಶ್ಲೀಲವಾಗಿ ಬಿಂಬಿಸಿರುವ ಸಾಧ್ಯತೆಗಳಿರುತ್ತದೆ ಎಂಬಿತ್ಯಾದಿ

Mangalore North PS ..                                            

ಪ್ರಕರಣದ ಪಿರ್ಯಾದಿದಾರರಾದ ಪ್ರಾಂಕ್ ರೋಡ್ರಿಗಸ್ ಎಂಬವರು ಮಂಗಳೂರು ನಗರದ ಬಂದರ್ ನಲ್ಲಿ ಸ್ವಂತ ಗೋಡೌನ್ ಹೊಂದಿದ್ದು, 2015 ರಿಂದ ಮಂಗಳೂರು ದ.ಕ ಎಂಬಲ್ಲಿ ಶರೋನ್ ಎಂಟರ್ ಪ್ರೈಸಿಸ್ ಎಂಬ ಹೆಸರಿನಲ್ಲಿ ತಮ್ಮ ವಿತರಣಾ ವ್ಯವಹಾರವನ್ನು ಸೂಪರ್ ಸ್ಟಾಕಿಸ್ಟ್ ಆಗಿ ನಡೆಸುತ್ತಿದ್ದಾರೆ. ಆರೋಪಿ ಜೀವನ್ ಕೋಟ್ಯಾನ್ ಎಂಬಾತನು ಪಿರ್ಯಾದಿದಾರರಿಗೆ ಸೇರಿದ ಗೂಡ್ಸ ಟೆಂಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 01/08/2014 ರಿಂದ ದಿನಾಂಕ 30/06/2022 ರವರೆಗೆ ಮಂಗಳೂರು ಬೆಳ್ತಂಗಡಿ ಮತ್ತು ಕುಂದಾಪುರ,ಮತ್ತು ಉಡುಪಿ ಲೈನ್ ವ್ಯವಹಾರದ ಸಂಪೂರ್ಣ ಸರಕು ವಿತರಣಾ ಮಾರಾಟಗಾರನನ್ನು ನಿರ್ವಹಿಸುತ್ತಿದ್ದು. ಆರೋಪಿಯು ತನ್ನ ಪರಸ್ಪರ ನಂಬಿಕೆಯಿಂದ ಪಿರ್ಯಾದಿದಾರರ ಲಾಭವನ್ನು ಪಡೆದುಕೊಂಡು, ಮಾರಾಟ ವಿಭಾಗದಲ್ಲಿ ಪಿರ್ಯಾದಿದಾರರಿಗೆ ಸುಳ್ಳು ಬಿಲ್ಲುಗಳನ್ನು ಸೃಷ್ಠಿಸಿ ರೂ. 3,47,000/-(ರೂ.ಮೂರು ಲಕ್ಷ ನಲವತ್ತೇಳು ಸಾವಿರ) ವಂಚನೆ ಮಾಡಿದ್ದಾನೆ. ಪಿರ್ಯಾದಿದಾರರಿಂದ ರೂ 15000/- ವೈಯಕ್ತಿಕ ಸಾಲವನ್ನು ಸಹ ಪಡೆದಿದ್ದು ಈ ವರೆಗೆ ಮರುಪಾವತಿ ಮಾಡದೇ ಕಂಪನಿಯ ವ್ಯಾಪಾರ ಮಾರುಕಟ್ಟೆಯನ್ನು ಸೃಷ್ಠಿಸುವ ಮೂಲಕ ಪಿರ್ಯಾದಿ ದಾರರಿಗೆ ರೂ 3,62,000/- ರೂ ವಂಚಿಸಿರುತ್ತಾನೆ. ಈ ಬಗ್ಗೆ ವಿಚಾರಿಸಿದಾಗ ಮತ್ತು ಆರೋಪಿಯ ವಿರುದ್ಧ ಪೊಲೀಸ್ ದೂರು ನೀಡಲು ಮುಂದಾದಾಗ ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಒಂದು ವರ್ಷದೊಳಗೆ ಸಂಪೂರ್ಣ ಮೊತ್ತವನ್ನು ನೀಡುವುದಾಗಿ ತಿಳಿಸಿ ಆರೋಪಿಯು 30/06/2022 ರಂದು ಪಿರ್ಯಾದುದಾರರಿಗೆ ಯಾವುದೇ ಮಾಹಿತಿ ಅಥವಾ ಸೂಚನೆ ನೀಡದೆ ಕೆಲಸ ಬಿಟ್ಟು ಹೋಗಿ ಪಿರ್ಯಾದಿದಾರರಿಗೆ ಮೋಸ ಮತ್ತು ಅಪರಾಧಿಕ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ ದೂರಿನ ಸಾರಾಂಶ.

 

ಇತ್ತೀಚಿನ ನವೀಕರಣ​ : 21-08-2023 02:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080