ಅಭಿಪ್ರಾಯ / ಸಲಹೆಗಳು

 

 

 

Crime Report in  Mangalore East PS                                                 

ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ಉಪ-ನಿರೀಕ್ಷಕಿ ಪ್ರತಿಭಾ ಕೆ. ಹೆಚ್.  ರವರು ದಿನಾಂಕ: 13-08-2023 ರಂದು ಮುಂಜಾನೆ ಸಮಯ  03-00 ಗಂಟೆ ಸಮಯಕ್ಕೆ  ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು 03-30 ವೇಳೆಗೆ ನಗರದ ಫಳ್ನೀರ್ ಬಳಿಯಲ್ಲಿ ಸಾರ್ವಜನಿಕವಾಗಿ ಸಿಗರೇಟ್ ಸೇದುತ್ತಿದ್ದುದನ್ನು ಕಂಡು ಆತನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ತನ್ನ ಹೆಸರು ಅದೀಬ ಅಶ್ರಪ್ ಎಮ್, ವಿ  ಪ್ರಾಯ: 22 ವರ್ಷ, ವಾಸ: ದಯಾ ಮಂಜೀಲ್ ಎಸ್,ಎಸ್,ರೋಡ್ ತಲಶ್ಚೆರಿ ಚೆಲಕ್ಕರ ಕಣ್ಣೂರು, ಎಂಬುದಾಗಿ ತಿಳಿಸಿದ್ದು ಈತನ ಮಾತುಗಳು ತೊದಲುತ್ತಿದ್ದು ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಈತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಲ್ಲಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ವರದಿಯಿಂದ ಕಂಡುಬಂದಿರುವುದರಿಂದ ಆರೋಪಿ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Traffic North Police Station          

ಪಿರ್ಯಾದಿ James Vinod D Souza ದಾರರು ಎಂದಿನಂತೆ ಕೆಲಸದ ಬಗ್ಗೆ ಪಡೀಲ್ ನಿಂದ ಅವರ ಗೆಳಯ ವಿಶಾಲ್ ರವರ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-EM-2147 ನೇದರಲ್ಲಿ ಒಬ್ಬನೇ ಸವಾರಿ ಮಾಡಿಕೊಂಡು ಕೂಳೂರು K.I.O.C.L ರಸ್ತೆಯ ಮೂಲಕ MRPL ಕಡೆಗೆ ಹೋಗುವರೇ ಜೋಕಟ್ಟೆ ACZ ತಲುಪುವಾಗ  ಬೆಳಿಗ್ಗೆ ಸಮಯ ಸುಮಾರು 8-45 ಗಂಟೆಗೆ  K.I.O.C.L ಕಡೆಯಿಂದ KA-19-HN-3516 ನೇ ನಂಬ್ರದ ದ್ವಿ ಚಕ್ರ ವಾಹನವನ್ನು ಅದರ ಸವಾರ ಶಾನ್ ಡಿಸೋಜಾ ಎಂಬುವರು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕ್ ನ್ನು ಓವರ್ ಟೇಕ್ ಮಾಡುವ ರಭಸದಲ್ಲಿ ಪಿರ್ಯಾದಿದಾರರ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರವರು ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಅವರ ಬಲಕಾಲಿನ ಪಾದದ ಕಿರು ಬೆರಳಿನ ಮೇಲ್ಬಾಗವು ಮುರಿತ ಉಂಟಾಗಿ ರಕ್ತ ಗಾಯವಾಗಿದ್ದು ಮತ್ತು ಬಲಕಾಲಿನ ಮೊಣಗಂಟಿನ ಕೆಳಬಾಗದ ಎಲುಬು ಮುರಿತದ ಗಾಯವಾಗಿದ್ದು. ನಂತರ ಚಿಕಿತ್ಸೆಯ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

    

 

Traffic South Police Station                  

ಪಿರ್ಯಾದಿ STEEVAN D'SOUZA ದಾರರು  ದಿನಾಂಕ: 11-08-2023 ರಂದು ಅವರ ಬಾಬ್ತು ಸ್ಕೂಟರ್ ನಂಬ್ರ KA-19-EP-6131 ನೇದನ್ನು ಸವಾರಿ ಮಾಡಿಕೊಂಡು ಮಂಗಳೂರು ನಗರದಿಂದ ನರಿಂಗಾನ ಗ್ರಾಮದ ಪೊಟ್ಟೋಳಿಕೆ ಕಡೆ ಹೊರಟು ಅನ್ಸಾರ್ ನಗರದ ಮಸೀದಿ ಕ್ರಾಸ್ ಸಮೀಪ ತಲುಪುತ್ತಿದ್ದಂತೆ ಸಮಯ ಸುಮಾರು ಸಂಜೆ 4:30 ಗಂಟೆಗೆ ಮೇಲಿನಿಂದ ಅಂದರೆ ಮಣ್ಣು ರಸ್ತೆಯಿಂದ KA-19-AD-1289 ನೇ ನಂಬ್ರದ ಪ್ಯಾಸೆಂಜರ್ ಆಟೋ ರಿಕ್ಷಾವನ್ನು ಅದರ ಚಾಲಕ ಮೊಹಮ್ಮದ್ ಸವಾದ್ ಎಂಬಾತನು ಸಾರ್ವಜನಿಕ ಡಾಮಾರು ರಸ್ತೆಗೆ ಯಾವುದೇ ಸೂಚನೆಯನ್ನು ನೀಡದೆ ಆಟೋ ರಿಕ್ಷಾವನ್ನು ನಿಧಾನಿಸದೆ ಏಕಾಏಕಿಯಾಗಿ ಒಮ್ಮೆಲೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ಪಿರ್ಯಾದಿದಾರರು ಮೇಲಿನ ಮಣ್ಣು ರಸ್ತೆ ಕಾಣದೆ ಆಟೋ ರಿಕ್ಷಾಕ್ಕೆ ಡಿಕ್ಕಿ ಪಡಿಸಿ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಗೆ ಸ್ಕೂಟರ್ ಸಮೇತ ಬಿದ್ದಿದ್ದು, ಆಟೋ ರಿಕ್ಷಾದಲ್ಲಿದ್ದ ಮಗುವೊಂದಕ್ಕೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಳಿಕ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಯೆನೆಪೋಯಾ ಆಸ್ಪತ್ರೆಗೆ ಕಳಿಸಿರುತ್ತಾರೆ, ಯೆನೆಪೋಯಾ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಹೊರ ರೋಗಿಯಾಗಿ ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿರುತ್ತಾರೆ, ಮರು ದಿನ ಪಿರ್ಯಾದಿದಾರರ ಬಲ ಭುಜದ ಬಳಿ ನೋವು ಜಾಸ್ತಿಯಾದ ಕಾರಣ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Kavoor PS

ಪಿರ್ಯಾದಿದಾರರಾದ ನರೇಂದ್ರ ಪೊಲೀಸ್ ಉಪ ನಿರೀಕ್ಷಕರು ನಗರ ಅಪರಾಧ ವಿಭಾಗರವರಿಗೆ ದಿನಾಂಕ 13/08/2023 ರಂದು ಬೆಳಿಗ್ಗೆ 10.45 ಗಂಟೆಗೆ ಮೂಡುಶೆಡ್ಡೆಯ ಮೊಹಮ್ಮದ್ ಇಮ್ರಾನ್ ಎಂಬಾತನು ಇನ್ನಿಬ್ಬರ ವ್ಯಕ್ತಿಗಳೊಂದಿಗೆ ಸೇರಿಕೊಂಡು ಅಕ್ರಮವಾಗಿ ಮಾದಕ ವಸ್ತುವಾದ MDMA ನ್ನು ವಶದಲ್ಲಿರಿಸಿಕೊಂಡು KA 20 MB 0569 ನೇ ರಿಡ್ಜ್ ಕಾರಿನಲ್ಲಿ ಪಡುಶೆಡ್ಡೆ ಎಂಬಲ್ಲಿ ಮಧ್ಯಾಹ್ನದ ವೇಳೆಗೆ ಮಾರಾಟ ಮಾಡಲು ಬರುತ್ತಿರುವುದಾಗಿ ನೀಡಿದ ಖಚಿತ ಮಾಹಿತಿಯಂತೆ ದಿನಾಂಕ:13-08-2023 ರಂದು 12.05 ಗಂಟೆಗೆ ತಲುಪಿ ಪರಿಶೀಲಿಸಿದಲ್ಲಿ ರಸ್ತೆ ಬದಿಯಲ್ಲಿ KA 20 MB 0569 ನೇ ರಿಡ್ಜ್ ಕಾರನ್ನು ನಿಲ್ಲಿಸಿ ಕಾರಿನಲ್ಲಿ ಮೂರು ಜನ ಕುಳಿತುಕೊಂಡಿದ್ದು ಅದರಲ್ಲಿ ಹಳೆ ಆರೋಪಿಯಾದ ಮೂಡುಶೆಡ್ಡೆಯ ಇಮ್ರಾನ್ ಮತ್ತು ಇತರೆ ಇಬ್ಬರು ಇದ್ದು ಸಿಬ್ಬಂದಿಗಳೊಂದಿಗೆ  ಮದ್ಯಾಹ್ನ: 12-10 ಗಂಟೆಗೆ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರನ್ನು ಸಿಬ್ಬಂದಿಯವರ ಸಹಾಯದಿಂದ ಸುತ್ತುವರಿದು ಹಿಡಿದು ಸದ್ರಿ ಆರೋಪಿತರಲ್ಲಿ ವಿಚಾರಿಸಿದಾಗ 1) ಇಮ್ರಾನ್ @ ಮೂಡುಶೆಡ್ಡೆ ಇಮ್ರಾನ್, ಪ್ರಾಯ:36 ವರ್ಷ, 2) ಅಮ್ಜತ್ ಖಾನ್, ಪ್ರಾಯ:42 ವರ್ಷ, 3)  ಅಬ್ದುಲ್ ಬಶೀರ್ ಅಬ್ಬಾಸ್, ಪ್ರಾಯ:39 ವರ್ಷ, ಎಂಬುದಾಗಿ ತಿಳಿಸಿದಂತೆ ವಶದಲ್ಲಿ ನಿಷೇದಿತ MDMA ಮಾದಕ ವಸ್ತು ಇರುವುದಾಗಿ ತಿಳಿಸಿದಂತೆ ಸದ್ರಿ 3 ಜನರನ್ನು ಮದ್ಯಾಹ್ನ: 12-15 ಗಂಟೆಗೆ ದಸ್ತಗಿರಿ ಮಾಡಿ ನಂತರ ವಶಕ್ಕೆ ಪಡೆದು  1)ಮೆಟಾಲಿಕ್ ತಿಳಿ ನೀಲಿ ಬಣ್ಣದ VIVO ಕಂಪನಿಯ VIVO Y20T ಹೆಸರಿನ, V2129 ಮೊಡಲ್ ನ ಮೊಬೈಲ್ ಪೋನ್- 1 ಮೌಲ್ಯ: 10,000/-, 2) ಮೆಟ್ಯಾಲಿಕ್ ಕಪ್ಪು ನೇರಳೆ ಬಣ್ಣದ VIVO ಕಂಪನಿಯ V1907 ಮೊಡಲ್ ನ ಮೊಬೈಲ್ ಪೋನ್ – 1 ಮೌಲ್ಯ: 10,000/-, 3) ಸುಮಾರು 80 ಗ್ರಾಂ ತೂಕದ ಬಿಳಿ ಬಣ್ಣದ ಹರಳುನಂತಿರುವ MDMA ಮಾದಕ ವಸ್ತು ಇರುವ ಪ್ಲಾಸ್ಟಿಕ್ ಪ್ಯಾಕೆಟ್ -1    ಆಂದಾಜು ಮೌಲ್ಯ ರೂ. 4,50,000/- ( ನಾಲ್ಕು ಲಕ್ಷ  ಐವತ್ತು ಸಾವಿರ), 4) Blue Royc Rolls ಎಂದು ಮಾರ್ಕ್ ಇರುವ MDMA ಮಾದಕ ವಸ್ತು MDMA Pill.ID ಮಾದಕ ವಸ್ತು -5 ಇದು ಒಟ್ಟು ಸುಮಾರು 2 ಗ್ರಾಂ ತೂಕ ಇರುತ್ತದೆ ಮೌಲ್ಯ ರೂ: 25,000/- ಆಗಬಹುದು. ಸದ್ರಿ ಸ್ವತ್ತುಗಳನ್ನು ಸ್ವಾಧಿನಪಡಿಸಿಕೊಂಡು ನಂತರ ಆರೋಪಿ ಇಮ್ರಾನ್ @ ಮೂಡುಶೆಡ್ಡೆ ಇಮ್ರಾನ್ ಎಂಬಾತನು  ತಾವು 3 ಜನ ಬಂದ KA-20-MB-0569 ನೇ ಬಿಳಿ ಬಣ್ಣದ ಮಾರುತಿ ರಿಡ್ಜ್  ಕಾರಿನಲ್ಲಿ  ಸಾದಿಕ್ ನಿಗೆ ಸೇರಿದ ಸ್ವತ್ತುಗಳನ್ನು ಹಾಜರುಪಡಿಸುವುದಾಗಿ ತಿಳಿಸಿ ಹಾಜರುಪಡಿಸಿದಂತೆ ಪರೀಶಿಲನೆ ಮಾಡಲಾಗಿ 1)ಸುಮಾರು 50 ಗ್ರಾಂ ತೂಕದ ಬಿಳಿ ಬಣ್ಣದ ಹರಳುನಂತಿರುವ MDMA ಮಾದಕ ವಸ್ತು ಇರುವ ಪ್ಲಾಸ್ಟಿಕ್ ಪ್ಯಾಕೆಟ್ -1   ಆಂದಾಜು ಮೌಲ್ಯ ರೂ. 2,50,000/- ( ಎರಡು ಲಕ್ಷ ಐವತ್ತು ಸಾವಿರ) ಆಗಬಹುದು, 2)ಸುಮಾರು 40 ಗ್ರಾಂ ತೂಕದ ಬಿಳಿ ಬಣ್ಣದ ಹರಳುನಂತಿರುವ MDMA ಮಾದಕ ವಸ್ತು ಇರುವ ಪ್ಲಾಸ್ಟಿಕ್ ಪ್ಯಾಕೆಟ್ -1   ಆಂದಾಜು ಮೌಲ್ಯ ರೂ. 2,00,000/- ( ಎರಡು ಲಕ್ಷ) ಆಗಬಹುದು, 3)ಸಿಲ್ವರ್ ಬಣ್ಣದ ಡಿಜಿಟಲ್ ತೂಕ ಮಾಪನ -1  ಇದು ಸುಸ್ಥಿತಿಯಲ್ಲಿ ಇರುತ್ತದೆ.  ಮೌಲ್ಯ ರೂ: 500/- , 4) ವಿವಿಧ ಗಾತ್ರ ಸಣ್ಣ ಸಣ್ಣ ಖಾಲಿ ಪ್ಲಾಸ್ಟಿಕ್ ಲಕೋಟೆಗಳು – 150, 5) ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ -1 ಸದ್ರಿ ಸೊತ್ತುಗಳನ್ನು ಸ್ವಾಧೀನ ಪಡಿಸಿ ಕೊಂಡಿದ್ದು ನಂತರ ಆರೋಪಿ ಅಮ್ಜತ್ ಖಾನ್  ಎಂಬಾತನನ್ನು ಪರಿಶೀಲನೆ ನಡೆಸಿದಾಗ ಆತನ ವಶದಲ್ಲಿದ್ದ 1)ಬಿಳಿ ಬಣ್ಣದ REDMI ಕಂಪನಿಯ REDMI NOTE 10S ಹೆಸರಿನ, M2101K7BI ಮೊಡಲ್ ನ ಮೊಬೈಲ್ ಪೋನ್-1  ಅಂದಾಜು ಮೌಲ್ಯ ರೂ : 10,000/- ಆಗಿರುತ್ತದೆ, 2) ಮೆಟ್ಯಾಲಿಕ್ ಆಕಾಶ ನೀಲಿ ಬಣ್ಣದ VIVO ಕಂಪನಿಯ VIVO Y20G ಹೆಸರಿನ, V2037 ಮೊಡಲ್ ನ ಮೊಬೈಲ್ ಪೋನ್-1  ಅಂದಾಜು ಮೌಲ್ಯ ರೂ : 10,000/- ಆಗಿರುತ್ತದೆ, 3) ಕಪ್ಪು ಬಣ್ಣದ NOKIA ಕಂಪನಿಯ ಕೀ ಪ್ಯಾಡ್ ಮೊಬೈಲ್ ಪೋನ್-1 ಅಂದಾಜು ಮೌಲ್ಯ ರೂ : 1,000/- ಆಗಿರುತ್ತದೆ. ಸದ್ರಿ ಸ್ವತ್ತುಗಳನ್ನು ಸ್ವಾಧಿನಪಡಿಸಿ ನಂತರ ಅಮ್ಜತ್ ಖಾನ್ ನು  ತಾನು, ಇಮ್ರಾನ್ ಮತ್ತು ಸಾದಿಕ್ ರವರರವನ್ನು MDMA ಮಾದಕ ವಸ್ತು ವನ್ನು ಖರೀದಿ ಮಾಡಲು ಬೆಂಗಳೂರಿನಿಂದ ಕರೆದುಕೊಂಡು ಹೋಗಿ  MDMA ಮಾದಕ ವಸ್ತು ವನ್ನು ಖರೀದಿ ಮಾಡಲು ಮತ್ತು ಸಾಗಾಟ ಮಾಡಲು ಬಳಸಿದ ಬಿಳಿ ಬಣ್ಣದ KA-20-MB-0569  ನೇ ಮಾರುತಿ ರಿಡ್ಜ್ ಕಾರನ್ನು ಸ್ವಾಧೀನ ಪಡಿಸಿಕೊಂಡು ನಂತರ ಅಬ್ದುಲ್ ಬಶೀರ್ ಅಬ್ಬಾಸ್ ಎಂಬಾತನನ್ನು  ಪರಿಶೀಲನೆ ನಡೆಸಿದಾಗ ಕಪ್ಪು ಬಣ್ಣದ REDMI ಕಂಪನಿಯ REDMI NOTE 12S ಮೊಡಲ್ ನ ಮೊಬೈಲ್ ಪೋನ್-1  ಅಂದಾಜು ಮೌಲ್ಯ ರೂ : 10,000/- ಆಗಿರುತ್ತದೆ ಸದ್ರಿ ಸೊತ್ತುಗಳನ್ನು ಸ್ವಾಧಿನಪಡಿಸಿಕೊಂಡಿದ್ದು ಸ್ವಾಧಿನ ಪಡಿಸಿದ ಸ್ವತ್ತಿನ ಒಟ್ಟು ಮೌಲ್ಯ 1426500/- ರೂ ಆಗಿರುತ್ತದೆ. ಸದ್ರಿ ಆರೋಪಿಗಳು ಎನ್.ಡಿ.ಪಿ.ಎಸ್ ಕಾಯ್ದೆಯನ್ನು ಉಲ್ಲಂಘಿಸಿ ವಾಣಿಜ್ಯ ಪ್ರಮಾಣದಲ್ಲಿ MDMA ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಯಾವುದೇ  ಪರವಾನಿಗೆ ಇಲ್ಲದೇ ಆರೋಗ್ಯಕ್ಕೆ ಹಾನಿಕಾರಕವಾದ 170 ಗ್ರಾಂ ನಿಷೇದಿತ MDMA ಮಾಧಕ ವಸ್ತು ಮತ್ತು 2 ಗ್ರಾಂ ತೂಕದ MDMA Pill.ID ಮಾದಕ ವಸ್ತು ವನ್ನು ಅಕ್ರಮವಾಗಿ ವಶದಲ್ಲಿರಿಸಿಕೊಂಡು ಮಾರಾಟ ಮಾಡಲು ಪ್ರಯತ್ನಿಸಿರುತ್ತಾರೆ, ಎಂಬಿತ್ಯಾದಿ.

 Surathkal PS

ದಿನಾಂಕ 12-08-2023 ರಂದು ಪಿರ್ಯಾದಿದಾರರಾದ ಶ್ರೀಮತಿ ಮಿನತಿ ದೇವಿ (30) ಎಂಬವರ ತಂಗಿಯಾದ ಪ್ರಮೋದಿನಿ (25) ರವರು ಎಂದಿನಂತೆ ಬೆಳಿಗ್ಗೆ 09:30 ಗಂಟೆಗೆ ಸುರತ್ಕಲ್ ಜೀವನ್ ತಾರಾ ಕಟ್ಟಡದಲ್ಲಿರುವ ಲಕ್ಕಿ ಫ್ಯಾಶನ್ ಎಂಬ ಬಟ್ಟೆ ಅಂಗಡಿಗೆ ಕೆಲಸಕ್ಕೆಂದು ಹೋದವರು ಎಂದಿನಂತೆ ಸಂಜೆ 7:30 ಗಂಟೆಯಾದರು ಮನೆಗೆ ವಾಪಸು ಬಾರದೇ ಇದ್ದು ಈ ಬಗ್ಗೆ ಪಿರ್ಯಾದಿದಾರರು ತನ್ನ ತಾಯಿಗೆ ವಿಚಾರ ತಿಳಿಸಿದಾಗ ಅವರು ಪ್ರಮೋದಿನಿಯು ಸ್ವಂತ ಊರಾದ ಓರಿಸ್ಸಾಕ್ಕೆ ಬರುವುದಾಗಿ ತಿಳಿಸಿರುವುದಾಗಿ ಹೇಳಿದ್ದು ಆದರೆ ಈವರೆಗೆ ಅಲ್ಲಿಗೂ ಹೋಗಿರುವುದಿಲ್ಲ ಈ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಎಲ್ಲಾ ಕಡೆ ವಿಚಾರಿಸಿದ್ದಲ್ಲಿ ಪ್ರಮೋದಿನಿ ರವರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಕೋರಿಕೆ ಎಂಬಿತ್ಯಾದಿ.

Mangalore South PS                           

 ಪ್ರಕರಣದ ಪಿರ್ಯಾದಿ Sathish ದಾರರು ಮಂಗಳೂರು ನಗರದ ಮೊರ್ಗನ್ಸಗೇಟ್ ಎಂಬಲ್ಲಿರುವ ಸೆವೆನ್ ಸ್ಟಾರ್ ಎಂಬ ವೈನ್ ಶಾಪ್ ನ ಮ್ಯಾನೇಜರ್ ಆಗಿರುತ್ತಾರೆ. ದಿನಾಂಕ 13-08-2023 ರಂದು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರು ಮ್ಯಾನೇಜರ್ ಆಗಿ ಕೆಲಸ ಮಾಡುವ ವೈನ್ ಶಾಪ್ ಗೆ ಬಂದಿದ್ದ ಆರೋಪಿ ಯಶವಂತ್ ಎಂಬಾತನು ಮಹೇಶ್ ಎಂಬಾತನ ಮೇಲಿನ ಹಳೆ ದ್ವೇಷದಿಂದ ಮಹೇಶನನ್ನು ಕೊಲೆ ಮಾಡುವ ಉದ್ದೇಶದಿಂದ ತುಳು ಭಾಷೆಯಲ್ಲಿ ಮಹೇಶನನ್ನು ಉದ್ದೇಶಿಸಿ” ಬೇವರ್ಷಿ ರಂಡೆ ಮಗಾ, ನಿನನ್ ಕೆರಂದ್ ಬುಡ್ಪುಜಿ” (ಬೇವರ್ಷಿ ರಂಡೆ ಮಗಾ, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ) ಎಂದು ಹೇಳಿ, ವೈನ್ ಶಾಪ್ ನ ಹೊರಗಡೆ ಹೋದವನು ಸ್ವಲ್ಪ ಹೊತ್ತಿನಲ್ಲಿ ವಾಪಾಸು ಬಂದವನೇ ಆರೋಪಿ ಯಶವಂತ್ ನು ತನ್ನ ಕೈಯಲ್ಲಿದ್ದ ಬ್ಲೇಡ್ ನಿಂದ ಮಹೇಶನ ಕುತ್ತಿಗೆಗೆ ಕೊಯ್ದು ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-08-2023 02:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080