ಅಭಿಪ್ರಾಯ / ಸಲಹೆಗಳು

Crime Report in  Mangalore Rural PS

 ಪಿರ್ಯಾದಿ Jagdeesha Poojary ದಾರರು ಮತ್ತು ಆರೋಪಿತರ ಮಧ್ಯೆ ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ದಾವೆಯಿದ್ದು, ಈ ದಾವೆಯಲ್ಲಿ ಆರೋಪಿತೆಯಾದ ಶ್ರೀಮತಿ ಸುಂದರಿ ಎಂಬವರು ಚೆನ್ನಯ್ಯ ಪೂಜಾರಿ @ ದೂಮಪ್ಪ ಪೂಜಾರಿ, ವೀರಮ್ಮ, ತನಿಯಾರು ಎಂಬವರುಗಳ ಮರಣ ಪ್ರಮಾಣ ಪತ್ರಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ರಿ ಮರಣ ಪ್ರಮಾಣ ಪತ್ರಗಳನ್ನು ಪಿರ್ಯಾದಿದಾರರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಜನನ ಮರಣಗಳ ರಿಜಿಸ್ಟ್ರಾರ್ ರವರ ಕಛೇರಿಯಿಂದ ಪಡೆದುಕೊಂಡು ಪರಿಶೀಲಿಸಿದಾಗ ಮೃತರ ಮರಣ ದಿನಾಂಕ ವೆಗೈರೆಗಳನ್ನು ಸರಕಾರಿ ಮರಣ ರಿಜಿಸ್ಟರ್ ನಲ್ಲಿ ತನ್ನ ಗಂಡ ಕೊರಗಪ್ಪ ಮತ್ತು ಇತರ ಆರೋಪಿತರ ಸಹಕಾರದಿಂದ ದಿನಾಂಕ: 11-12-1944 ರಿಂದ ದಿನಾಂಕ: 15-11-2018 ರ ಮಧ್ಯಾವಧಿಯಲ್ಲಿ ಅಕ್ರಮವಾಗಿ ತಿದ್ದುಪಡಿ ಮಾಡಿ ಮೋಸ ವಂಚನೆ ಮಾಡುವ ಉದ್ಧೇಶದಿಂದ ಸರಕಾರಿ ದಾಖಲೆಯನ್ನು ಪೋರ್ಜರಿ ಮಾಡಿ ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವುದು ಎಂಬಿತ್ಯಾದಿ.

Traffic North Police Station               

ದಿನಾಂಕ 14-09-2023 ರಂದು ಪಿರ್ಯಾದಿ Adwithya Srinidhi M ದಾರರು ಅಡ್ಯಾರಿನ ಶ್ರೀನಿವಾಸ ಕಾಲೇಜಿಗೆ ಹೋಗುವರೇ ಅವರ ಅಣ್ಣನ ಬಾಬ್ತು KA-19-HB-9021 ನಂಬ್ರದ ಮೋಟಾರ್ ಸೈಕಲಿನಲ್ಲಿ ಸುರತ್ಕಲಿನ ಮುಂಚೂರಿನಿಂದ ಹೊರಟು ಮಂಗಳೂರು ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 07:15 ಗಂಟೆಗೆ ಹೊನ್ನಕಟ್ಟೆ ಜಂಕ್ಷನ್ ತಲುಪಿದಾಗ ಬೈಕಂಪಾಡಿ ಕಡೆಯಿಂದ DL-14-C-1487 ನಂಬ್ರದ POLO ಕಾರನ್ನು ಅದರ ಚಾಲಕ ಶ್ರವನ್ ರಾಜ್ ಕಾಂಬಳಿ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹೊನ್ನಕಟ್ಟೆ ಜಂಕ್ಷನಿನ ತೆರೆದ ಡಿವೈಡರಿನಲ್ಲಿ ಯಾವುದೇ ಸೂಚನೆ ನೀಡದೇ ಕಾನ ರಸ್ತೆಯ ಕಡೆಗೆ ಹೋಗುವ ಸಲುವಾಗಿ ಅಪಾಯಕಾರಿ ರೀತಿಯಲ್ಲಿ ಒಮ್ಮಲೇ ಬಲಕ್ಕೆ ತಿರುಗಿಸಿ, ಪಿರ್ಯಾದಿದಾರರ ಮೋಟಾರ್ ಸೈಕಲಿನ ಎದುರು ಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಸೂಂಟದ ಎಡಭಾಗ ಮತ್ತು ಬಲಕೈ ಮಣಿಗಂಟಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಹಣೆಯ ಎಡಬದಿ, ಎರಡೂ ತುಟಿಗಳಿಗೆ ಚರ್ಮ ಹರಿದ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

Kankanady Town PS                

ಪಿರ್ಯಾದು Mohammed Jaabir  ದಾರರು ಮಂಗಳೂರಿನ ಪಂಪ್ವೆಲ್ ಬಳಿ ಇರುವ ಜಾನ್ಸನ್ ಎಂಬವರ ಲಾಯ್ಡ್ ಎ.ಸಿ ಸರ್ವೀಸ್ ಸೆಂಟರ್ ನಲ್ಲಿ ಹೆಲ್ಪರ್ ಕೆಲಸ ಮಾಡಿಕೊಂಡಿದ್ದು, ಸದ್ರಿ ಕಂಪನಿಯಲ್ಲಿ ಎ.ಸಿ ಸರ್ವೀಸ್ ಕೆಲಸದ ಬಗ್ಗೆ ಉಪಯೋಗಿಸುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡುವ ಸುಜಿತ್ ಎಂಬವರ ಬಾಬ್ತು KA-19-EX-3556ನೇ ನಂಬ್ರದ ಬೂದು ಬಣ್ಣದ ಹೋಂಡಾ ಡಿಯೋ ಸ್ಕೂಟರನ್ನು ಪಿರ್ಯಾದುದಾರರು ಕಂಪನಿಯಲ್ಲಿ ಕೆಲಸ ಮಾಡುವ ಸಲ್ಮಾನ್ ಎಂಬಾತನ ಜೊತೆ ಎ.ಸಿ ಸರ್ವೀಸ್ ಕೆಲಸ ಬಗ್ಗೆ ಹೋಗಿ ಕೆಲಸ ಮುಗಿದ ಬಳಿಕ ದಿನಾಂಕ: 10.09.2023 ರಂದು ಸಂಜೆ ಸಮಯ ಸುಮಾರು 6:20 ಗಂಟೆಗೆ ತಾನು ಕೆಲಸ ಮಾಡುವ ಲಾಯ್ಡ್ ಎ.ಸಿ ಸರ್ವೀಸ್ ಸೆಂಟರ್ ಮುಂದೆ ಲಾಕ್ ಮಾಡಿ ನಿಲ್ಲಿಸಿ ಮನೆಗೆ ಹೋಗಿದ್ದು, ದಿನಾಂಕ: 11.09.2023 ರಂದು ಬೆಳಿಗ್ಗೆ ಸುಮಾರು 09:30 ಗಂಟೆಗೆ ಬಂದು ನೋಡಿದಾಗ ಸ್ಕೂಟರ್ ನಿಲ್ಲಿಸಿದ್ದ ಸ್ಥಳದಲ್ಲಿ ಇರದೇ ಇರುವುದು ಕಂಡು ಬಂದಿದ್ದು, ಸದ್ರಿ ಸ್ಕೂಟರನ್ನು ಯಾರೋ ಕಳ್ಳರು ದಿನಾಂಕ: 10.09.2023 ರಂದು ಸಂಜೆ 6:20 ಗಂಟೆಯಿಂದ ದಿನಾಂಕ: 11.09.2023 ರಂದು ಬೆಳಿಗ್ಗೆ 09:30 ಗಂಟೆಯ ಮಧ್ಯಾವದಿಯಲ್ಲಿ KA-19-EX-3556ನೇ ನಂಬ್ರದ ಸ್ಕೂಟರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಸ್ಕೂಟರಿನ ಅಂದಾಜು ಮೌಲ್ಯ ಸುಮಾರು 40,000/- ಆಗಬಹುದು ಎಂಬಿತ್ಯಾದಿಯಾಗಿರುತ್ತದೆ.

Moodabidre PS

ಪಿರ್ಯಾದಿದಾರರ ತಮ್ಮ ಓಲ್ವಿನ್ ಪಿಂಟೋ ಪ್ರಾಯ: 59 ವರ್ಷ ಎಂಬುವರು ಸುಮಾರು 3 ವರ್ಷಗಳ ಹಿಂದೆ ಮಂಗಳೂರಿನ ತಲಪಾಡಿಯಲ್ಲಿ ಫ್ರೆಂಡ್ಸ್ ಹೌಸ್ ಎಂಬ ಹಾಸ್ಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದವರು ಇತ್ತೀಚೆಗೆ ತಲಪಾಡಿಯಿಂದ ವಾಪಸು ಮನೆಗೆ ಬಂದು ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ. ಓಲ್ವಿನ್ ಪಿಂಟೋ ರವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಆಗಾಗ ಮನೆ ಬಿಟ್ಟು ಹೋಗುತ್ತಿದ್ದವರು, ದಿನಾಂಕ 08-09-2023 ರಂದು ಸಂಜೆ 4.30 ಗಂಟೆಗೆ ಮನೆಯಲ್ಲಿ ತನ್ನ ಮೊಬೈಲ್ ಬಿಟ್ಟು ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಪಿರ್ಯಾದಿದಾರರು ಸಂಬಂಧಿಕರಲ್ಲಿ ಮತ್ತು ಪರಿಚಯದವರಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಆದ್ದರಿಂದ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

ಕಾಣೆಯಾದವರ ಚಹರೆ ಗುರುತು

ಹೆಸರು: ಓಲ್ವಿನ್ ಪಿಂಟೋ ಪ್ರಾಯ: 59 ವರ್ಷ

ಎತ್ತರ: 5 ಅಡಿ

ಮುಖ: ದುಂಡು ಮುಖ, ಎಣ್ಣೆಕಪ್ಪು ಮೈಬಣ್ಣ,

ಶರೀರ: ಸಪೂರ ಶರೀರ

 

ಇತ್ತೀಚಿನ ನವೀಕರಣ​ : 14-09-2023 08:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080