ಅಭಿಪ್ರಾಯ / ಸಲಹೆಗಳು

Crime Report in  Traffic South Police Station              

ಪಿರ್ಯಾದಿ JOHN BAPTIST D SOUZA ದಾರರು ದಿನಾಂಕ 13-11-2023 ರಂದು  ಬೆಳಿಗ್ಗೆ 11.00 ಗಂಟೆಗೆ ಪಡೀಲ್ ನಿಂದ ಪಂಪವೆಲ್ ಕಡೆಗೆ  ಹೋಗುವ ಸಾರ್ವಜನಿಕ ರಸ್ತೆಯನ್ನು ದಾಟಿ ಅಲೆಕ್ಸಾಂಡರ್ ಚಿಕ್ಕನ್ ಸ್ಟಾಲ್ ನಿಂದ ಮೊಟ್ಟೆ ಖರೀದಿಸಿ ಮರಳಿ ಅದೇ ರಸ್ತೆಯನ್ನು ಅಂದರೆ (ಪಡೀಲ್ ನಿಂದ ಪಂಪವೆಲ್) ದಾಟುವಾಗ ಅದೇ ರಸ್ತೆಯಲ್ಲಿ ಸ್ಕೂಟರ್ ಸವಾರನೊಬ್ಬ ಕಾರನ್ನು ಓವರ್ ಟೇಕ್ ಮಾಡಿ ದುಡುಕು ಮತ್ತು ನಿರ್ಲಕ್ಷತನದಿಂದ  ಸಮಯ ಸುಮಾರು 11.30 ಗಂಟೆಗೆ  ಪಿರ್ಯದಿದಾರರಿಗೆ ಡಿಕ್ಕಿ ಪಡಿಸಿದ್ದು ಡಿಕ್ಕಿಯ ಪರಿಣಾಮ ಪಿರ್ಯಾದಿದಾರರು ಡಾಮರು ರಸ್ತೆಗೆ ಬಿದ್ದಿದ್ದು   ತಲೆಯ ಹಿಂಬಾಗಕ್ಕೆ ರಕ್ತಗಾಯ ಮತ್ತು ಬಲಕಾಲಿನ ಕೋಲು ಕಾಲಿಗೆ ಹಾಗೂ ಎಡಭುಜಕ್ಕೆಗುದ್ದಿದ ಗಾಯವಾಗಿರುತ್ತದೆ,ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಸ್ಕೂಟರ್ ಸವಾರ ಪಿರ್ಯಾದಿದಾರರನ್ನು ಆಟೋರಿಕ್ಷಾ ಒಂದರಲ್ಲಿ ಕಂಕನಾಡಿ ಫಾದರ್ ಮುಲ್ಲಾರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೊರರೋಗಿಯಾಗಿ  ಚಿಕಿತ್ಸೆ ನೀಡಿರುತ್ತಾರೆ.ಅಲ್ಲಿದ್ದ  ಸಾರ್ವಜನಿಕರನ್ನು ವಿಚಾರಿಸಲಾಗಿ ಸ್ಕೂಟರ್ ಸವಾರನ ಹೆಸರು ಸುಜಿತ್ ಮತ್ತು ಆತನ ಮೊಬೈಲ್ ದೂರವಾಣಿ ನಂಬರ್ 6361763509 ಎಂದು ತಿಳಿದು ಬಂದಿದ್ದು ಆತನ ಸ್ಕೂಟರ್ ನಂಬರ್ ತಿಳಿದು ಬಂದಿರುವುದಿಲ್ಲ.ಈ ಅಪಘಾತಕ್ಕೆ ಸ್ಕೂಟರ್ ಸವಾರನ ದುಡುಕುತನ ಮತ್ತು ನಿರ್ಲಕ್ಷತನದ ಚಾಲನಯೇ ಕಾರಣವಾಗಿದ್ದು ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೆಂಕೆಬಿತ್ಯಾಧಿ ಈ ಪ್ರಕರಣದ ಸಾರಾಂಶವಾಗಿದೆ.

Mangalore South PS                    

ಪಿರ್ಯಾದುದಾರರಾದ ಗುನ್ನು ಚೌದರಿ ಎಂಬಾತನು ದಿನಾಂಕ 13-11-2023 ರಂದು ಮಧ್ಯಾಹ್ನ 1-30 ಗಂಟೆಗೆ ಸಮಯಕ್ಕೆ ಮಂಗಳೂರು ನಗರದ, ನೆಹರೂ ಮೈನಾದ ಪುಟ್ಟಾಲ್ ಗ್ರೌಂಡ್ ನ ಪುಟ್ ಪಾತ್ ಮೇಲೆ ಕುಳಿತುಕೊಂಡಿದ್ದ ಸಮಯ, ಅಲ್ಲಿಗೆ ಬಂದ ಪಿರ್ಯಾದುದಾರರ ಪರಿಚಯದ ಪೈಸಲ್, ಸಂತು ಮತ್ತು ಇನ್ನೊರ್ವ  ಪಿರ್ಯಾದುದಾರರನ್ನು ಗುರಾಯಿಸಿ ನೋಡಿದ್ದು, ಇದೇ ವಿಚಾರದಲ್ಲಿ ಪಿರ್ಯಾದುದಾರರಿಗೆ ಮತ್ತು ಆ ಮೂರು ಮಂದಿಗೆ ಮಾತಿನ ವಾಗ್ವಾದವಾಗಿದ್ದು, ಪಿರ್ಯಾದುದಾರರು ಸ್ಥಳದಿಂದ ಎದ್ದು ಹೊರಡಲು ತಯಾರಾದಾಗ ಆ ಮೂರು ಮಂದಿ ಪಿರ್ಯಾದಿಯನ್ನು ಹೋಗದಂತೆ ತಡೆದು ನಿಲ್ಲಿಸಿ, ಪೈಸಲ್ ಎಂಬಾತನು ಪಿರ್ಯಾದಿಯನ್ನು ಉದ್ದೇಶಿಸಿ “ನೀನು ಮೈದಾನದಲ್ಲಿ ಇರಬಾರದು, ನೀನು ಇಲ್ಲಿಯಾ ಡಾನಾ? ನಿನ್ನನ್ನು ಇಲ್ಲಿಯೇ ಕೊಂದರೆ ಎಲ್ಲಾವು ಸರಿಯಾಗುತ್ತದೆ ಮಾದರ್ ಚೂತ್ ” ಎಂದು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಅವಾಚ್ಯವಾಗಿ ಬೈದು ಫೈಸಲ್ ನು ಕೈಯಲ್ಲಿದ್ದ ಚಿಕ್ಕ ಕತ್ತಿಯಿಂದ ಪಿರ್ಯದಿಯ ಎದೆಗೆ ಹಾಕಲು ಕತ್ತಿ ಬಿಸಿದಾಗ ಪಿರ್ಯಾದಿದಾರರು ಹಿಂದೆ ಸರಿದಾಗ ಕತ್ತಿಯ ತುದಿ ಪಿರ್ಯಾದಿಯ ಶರ್ಟ್ ಗೆ ತಾಗಿ ಶರ್ಟ್ ಹರಿದಿರುತ್ತದೆ. ಆಗ ಸಂತು ಎಂಬಾತನು ಪೈಸಲ್ ನ ಕೈಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು, ಅವರ ಜೊತೆಯಲ್ಲಿದ್ದ ಇನ್ನೋರ್ವ ಆತನ ಕೈಯಿಂದ ಪಿರ್ಯಾದಿಯ ಎದೆಗೆ ಬಲವಾಗಿ ಗುದ್ದಿ ನಿನ್ನನ್ನು ಬಿಡುವುದಿಲ್ಲವೆಂದು ಹೇಳಿ ಪಿರ್ಯಾದಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಾಗ, ಸಂತು ಎಂಬಾತನು ಆತನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿಯ ಹೊಟ್ಟೆಯನ್ನು ಕುಯ್ದು ಕರುಳು ಹೊರ ಬರುವಂತೆ ತೀವ್ರ ತಹರದ ರಕ್ತಗಾಯವನ್ನುಂಟು ಮಾಡಿರುತ್ತಾನೆ. ತೀವ್ರಗಾಯಗೊಂಡ ಪಿರ್ಯಾದಿಯು ಮಂಗಳೂರು ಸರಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Konaje PS

ದಿನಾಂಕ:13-11-2023 ರಂದು 13.45 ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಎಂಬಲ್ಲಿ ರಸ್ತೆಯ ಬದಿಯಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಜಾಫರ್ ಸಾಧಿಕ್, ಪ್ರಾಯ: 22 ವರ್ಷ,  ವಾಸ: ಪನೀರ್ ರಸ್ತೆ, ದೇರಳಕಟ್ಟೆ, ಬೆಳ್ಮ ಗ್ರಾಮ ಉಳ್ಳಾಲ ತಾಲೂಕು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ಮಧ್ಯಾಹ್ನ 14.00 ಗಂಟೆಗೆ ವಶಕ್ಕೆ ಪಡೆದುಕೊಂಡು ಮಂಗಳೂರು ಕಣಚೂರು ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು Positive for MARIJUANA(THC) ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

CEN Crime PS

ದಿನಾಂಕ 01-11-2023 ರಂದು ಪಿರ್ಯಾದಿದಾರರ ಮೊಬೈಲ್ ಗೆ ಯುಟ್ಯೂಬ್ ಮುಖಾಂತರ ಜಾಹೀರಾತು ಬಂದಿದ್ದು, ಪಿರ್ಯಾದಿದಾರರು ಸದ್ರಿ  ಜಾಹೀರಾತಿನ ಲಿಂಕ್ ನ್ನು ಕ್ಲಿಕ್ ಮಾಡಿದಾಗ, ಪಿರ್ಯಾದಿದಾರರ ವಾಟ್ಸಾಪ್ ನಂಬ್ರ  ನೇದಕ್ಕೆ 8428518047 ನೇದರಿಂದ ಲಿಂಕ್ ಬಂದಿದ್ದು, ಸದ್ರಿ ಲಿಂಕ್ ನ್ನು ಕ್ಲಿಕ್ ಮಾಡಿದಾಗ  Telegram messenger ನಲ್ಲಿ Training Instructor (@kaiyun 0660) ಎಂಬ ಹೆಸರಿನ ಟೆಲಿಗ್ರಾಂ ಖಾತೆ ಒಪನ್ ಆಗಿ  ಅದರಲ್ಲಿ ಪಿರ್ಯಾದಿದಾರರಿಗೆ  ಟಾಸ್ಕ್ ಗಳನ್ನು ನೀಡಿದ್ದು, ಅದರಂತೆ ಪಿರ್ಯಾದಿದಾರರು 9 ಟಾಸ್ಕ್ ಗಳನ್ನು ಪೂರ್ಣಗೊಳಿಸಿರುತ್ತಾರೆ. ನಂತರ ಪಿರ್ಯಾದಿದಾರರ 5 ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ ಒಟ್ಟು ರೂ 6,91,714/- ರೂ ಹಣವನ್ನು UPI ಮೂಲಕ ವರ್ಗಾಯಿಸಿಕೊಂಡಿರುತ್ತಾರೆ. ಹೀಗೆ ದಿನಾಂಕ 01-11-2023 ರಿಂದ 07-11-2023 ರವರೆಗೆ ಪಿರ್ಯಾದಿದಾರರಿಗೆ ಮೋಸ ಹಾಗೂ ವಂಚನೆ ಮಾಡಿ ಹಣ ವರ್ಗಾಯಿಸಿಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ ದೂರಿನ ಸಾರಾಂಶ.

Kavoor PS

ಪಿರ್ಯಾದಿ SMT SHOBHA KUBER ದಾರರ ಮಗನಾದ ಮನೋಜ್ ಬಾಗಲೆ (19) ಎಂಬವನು RAIKATTE, KULUR  ದಿನಾಲು ಕೂಲಿ ಕೆಲಸ ಮಾಡಿಕೊಂಡಿದ್ದವನು ಒಮ್ಮೊಮ್ಮೆ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದವನು ದಿನಾಂಕ 15/10/2023 ರಂದು ಎಂದಿನಂತೆ ಸೆಕ್ಯೂರಿಟಿ ಕೆಲಸಕ್ಕೆ ಬಸವರಾಜ್ ಎಂಬವನು ಕರೆದುಕೊಂಡು ಹೋಗಿದ್ದು, ಸಂಜೆ ವಾಪಾಸ್ಸು ಮನೆಗೆ ಬಾರದೇ ಇರುವುದರಿಂದ ಪಿರ್ಯಾದಿದಾರರು ಬಸವರಾಜ್ ರವರಲ್ಲಿ ವಿಚಾರಿಸಿದಾಗ ಪಿರ್ಯಾದಿದಾರರ ಮಗ ಮನೋಜ್ ಬಾಗಲೆ ನು ಸೆಕ್ಯೂರಿಟಿ ಕೆಲಸಕ್ಕೆ ಪೊಳಲಿ ಕಡೆ ಹೋಗಿರುವುದಾಗಿ ತಿಳಿಸಿರುತ್ತಾರೆ, ನಂತರ ಪಿರ್ಯಾದಿದಾರರ ಮಗನು ಈ ವರೆಗೂ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ, ಈ ಬಗ್ಗೆ ಪಿರ್ಯಾದಿದಾರರು ತಮ್ಮ ಸ್ವಂತ ಊರಾದ ಬದಾಮಿ ಗೆ ಹೋಗಿರಬಹುದು ಎಂದು ತಿಳಿದು ಸಂಬಂದಿಕರಲ್ಲಿ ವಿಚಾರಿಸಿದಲ್ಲಿ ಈ ವರೆಗೂ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ.

Mangalore North PS                               

ದಿನಾಂಕ: 13.11.2023  ರಂದು ಮಾದಕ ದ್ಯವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team  ತಂಡದ ಅಧಿಕಾರಿ ಪ್ರದೀಪ್ ಟಿ.ಆರ್  ಮತ್ತು ಸಿಬ್ಬಂದಿ ರೌಂಡ್ಸ್ ಕರ್ತವ್ಯ ದಲ್ಲಿರುವ ಸಮಯ 16.00  ಗಂಟೆಗೆ ಬಂದರಿನ  ಯಾಸಿನ್ ಮಂಡಿ ಕುದ್ರೋಳಿ ಬಳಿ ತಲುಪಿದಾಗ ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ಕಂಡು ವಿಚಾರಿಸಿದಾಗ ಹೆಸರು ಮಹಮ್ಮದ್ ಕಾಮಿಲ್ (31),  ವಾಸ-ಕಾಸ್ಟ್ ಲೀನ್ ಕಾಲೋನಿ, ಕುಲಶೇಖರ ಕ್ರಾಸ್ ಶಕ್ತಿನಗರ, ಮಂಗಳೂರು ಎಂಬುದಾಗಿ  ತಿಳಿಸಿದ್ದು ಪಿರ್ಯಾದಿದಾರರು ಅನುಮಾನಗೊಂಡು ಆತನಲ್ಲಿ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕೂಲಂಕುಷವಾಗಿ ವಿಚಾರಿಸಲಾಗಿ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ್ದು. ಸದ್ರಿ ಮಹಮ್ಮದ್ ಕಾಮಿಲ್ ನನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಸ್ಪರ್ಶ ಡಯಾಗ್ನೊಸ್ಟಿಕ್ ಸೆಂಟರ್ ಗೆ ಹಾಜರುಪಡಿಸಿದ್ದು, ಸ್ಪರ್ಶ ಡಯಾಗ್ನೊಸ್ಟಿಕ್ ಸೆಂಟರ್ ವೈದ್ಯರು ಆತನನ್ನುಪರೀಕ್ಷಿಸಿದಲ್ಲಿ ಮಹಮ್ಮದ್ ಕಾಮಿಲ್  ಎಂಬಾತನು, Benzodiazepines(BZO), Tetrahydracannabinoid,(Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ತಿಳಿಸಿ ವರದಿಯನ್ನು ನೀಡಿರುತ್ತಾರೆ. ಮಹಮ್ಮದ್ ಕಾಮಿಲ್ ನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಎಂಬಿತ್ಯಾದಿ ನೀಡಿದ ದೂರಿನ ಸಾರಾಂಶ

Kavoor PS

ಪಿರ್ಯಾದಿದಾರರಾದ ನಾಕು (28)ತಂದೆ: ರತಿರಾಮ್ ವಿಳಾಸ: ಮಾಲು ಮುಟಿಯ ಪಂಚಾಯತ್ ಗೋಪಾಲ್ ಸರಯ್ ಪೋಸ್ಟ್ ಗಾಜುರಿ ಗ್ರಾಮ ಗೋಪಾಲ ಸರಯ್ ಸ್ವರವಸ್ತಿ ಜಿಲ್ಲೆ ಉತ್ತರ ಪ್ರದೇಶ  ರಾಜ್ಯವಾಗಿದ್ದು ಪಿರ್ಯಾದಿದಾರರು ಹಾಗೂ ಅವರೊಟ್ಟಿಗೆ ಅವರ  ಚಿಕ್ಕಪ್ಪನ ಮಗನಾದ  ಗುಡೈ @ ಬಾಬಾ ರವರೊಂದಿಗೆ ಮಂಗಳೂರಿನ ಮಾಲೇಮಾರ್ ನ ಕೊಟ್ಟಾರ ಚೌಕಿಯ ಗೋಪಾಲ್ ಎಂಬುವವರ ಮನೆಯ ಲಿಪ್ಟ್ ಮಾಡುವ ಕೆಲಸ ಮಾಡಿಕೊಂಡಿದ್ದು ಗೋಪಾಲ್ ರವರ ಮನೆಯ ಮಹಡಿಯಲ್ಲಿ ಶೀಟ್ ಹಾಕಿದ ಮೇಲ್ಚಾವಣಿ ಇರುವ ಸ್ಥಳದಲ್ಲಿ ವಾಸ್ತವ್ಯ ಮಾಡಿಕೊಂಡಿದ್ದು ಈ ಮನೆಯ ಮಹಡಿಗೆ ಹೋಗಲು ಮೆಟ್ಟಿಲುಗಳು ಇದ್ದು ಇದಕ್ಕೆ ಯಾವುದೇ ರೀತಿಯ ಸುರಕ್ಷತೆ ಗ್ರಿಲ್ಸ್ ಅಳವಡಿಸದೇ ಮೆಟ್ಟಿಲುಗಳು ಇರುತ್ತವೆ ದಿನಾಂಕ-13-11-2023 ರಂದು ದೀಪಾವಳಿ ಹಬ್ಬದ ನಿಮಿತ್ಯ ಕೆಲಸಕ್ಕೆ ರಜೆ ಮಾಡಿ ಎಂದಿನಂತೆ ಮಹಡಿಯಲ್ಲಿ ಉಳಿದುಕೋಮಡಿದ್ದು ಸಂಜೆ 4:00 ಗಂಟೆಗೆ ಹಬ್ಬ ಆಚರಣೆ ಮಾಡಿದ ನಂತರ ಗುಡೈ@ ಬಾಬಾ ನು ಮನೆಯ ಹೊರಗಡೆ ಅಳವಡಿಸಿದ  ಮನೆಯ ಮೆಟ್ಟಿಲುಗಳ ಮೂಲಕ ಕೆಳಗೆ ಇಳಿದು ಬರುವ ಸಮಯ ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ಬಲ ಬದಿಯ ಕೆಣ್ಣೆ ಹಾಗೂ ತಲೆಗೆ ರಕ್ತ ಗಾಯವಾಗಿದ್ದು ಕೂಡಲೇ ಪಿರ್ಯಾಧಿದಾರರು ಹಾಗೂ ಪಪ್ಪು ಎಂಬುವವರು ಅವನನ್ನು ಉಪಚರಿಸಿ ನಂತರ ಅವರ ಮನೆ ಕೆಲಸ ನೋಡಿಕೊಳ್ಳುವ ಕಮಲೇಶನಿಗೆ ಪೋನ್ ಮಾಡಿ ಕರೆಸಿಕೊಂಡು ಕೂಡಲೇ ಅವರನ್ನು ಒಂದು ರಿಕ್ಷಾದಲ್ಲಿ ಕರೆದುಕೊಂಡು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ  ಅವನ್ನು ಪರಿಶೀಲಿಸಿದ ವೈಧ್ಯರು ಗುಡೈ @ಬಾಬಾನು ಮರಣ ಹೊಂದಿರುವುದಾಗಿ ತಿಳಿಸಿರುತ್ತಾರೆ ಆದುದರಿಂದ ನಾವುಗಳು ಕೆಸಲ ಮಾಡುವ ಗೋಪಾಲ್ ರವರ ಮನೆಯ ಮೆಟ್ಟಿಲುಗಳಿಗೆ ಗ್ರಿಲ್ಸ್ ಅಳವಡಿಸದೇ ಗೋಪಾಲ್ ರವರ ಮೆನಯಲ್ಲಿ ವಾಸ್ತವ ವಿರುವಂತೆ ತಿಳಿಸಿದ ಕಾಂಟ್ರಕ್ಟರ್ ಹಾಗೂ ಮನೆಯ ಮಾಲೀಕ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 14-11-2023 08:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080