ಅಭಿಪ್ರಾಯ / ಸಲಹೆಗಳು

Crime Report in : Ullal PS

ಪಿರ್ಯಾಧಿದಾರರಾದ ಕೃಷ್ಣ ಬಿ.ಎಂ. ರವರ ಮನೆಯಾದ 2 ನೇ ಕೊಲ್ಯ, ಮನೆ ಎ ಶೈಲ ನಿವಾಸ  ಮನೆಯಲ್ಲಿ ದಿನಾಂಕ: 06-12-2023 ರಂದು ಅವರ ಪತ್ನಿಯ ಅಕ್ಕ ದಿ. ಶೋಭಾರವರ ಮಗ ರಜತ್ ರವರ ಕಾರ್ಯಕ್ರಮವಿದ್ದು, ಅದಕ್ಕೆ ಸಂಬಂಧಿಕರಾದ ಶ್ರೀಮತಿ ಸುವರ್ಣ ಲತಾ  ಎಂಬವರು ಬಂದಿದ್ದು, ದಿನಾಂಕ: 05-12-2023 ರಂದು ಸಂಬಂಧಿಕರಾದ ನಯನ ಕುಮಾರಿ ರವರು ಬಂದಿರುತ್ತಾರೆ. ದಿನಾಂಕ:06/12/2023 ರಂದು  ರಜತ್ ರವರ ಮದುವೆಯು ಮಂಗಳೂರಿನ ಸೈಂಟ್  ಸೆಬೆಸ್ಟಿಯನ್ ಹಾಲ್ ನಲ್ಲಿ ನಡೆ ದಿದ್ದು, ಪಿರ್ಯಾದಿದಾರರ ವಾಸದ ಮನೆಯಲ್ಲಿ ಸುಲೋಚನಾರವರನ್ನು ನಿಲ್ಲಿಸಿ ಹೋಗಿದ್ದು, ಅವರು ಮನೆಯಲ್ಲಿ ಗುಡಿಸುತ್ತಿರುವಾಗ  ಓರ್ವ ಅಪರಿಚಿತ ವ್ಯಕ್ತಿಯು ಬೆಳಿಗ್ಗೆ ಸುಮಾರು 10.30 ಗಂಟೆಗೆ ಮನೆಗೆ ಬಂದು ನಾನು ಎಲೆಕ್ಟೀಶ್ರಿಯನ್ ಕಡೆಯವರು ಲೈಟಿಂಗ್ ಸ್ವಿಚ್ ಆಫ್ ಮಾಡಲು ಬಂದಿರುವುದಾಗಿ ಹೇಳಿ ಮನೆಯಲ್ಲಿ ಒಳಗೆ ಹುಡುಕುತ್ತಿದ್ದವನನ್ನುನೋಡಿ ಸುಲೋಚನಾ ರವರು ಬೊಬ್ಬೆ ಹಾಕಿದಾಗ ಆ ಅಪರಿಚಿತ ವ್ಯಕ್ತಿಯು ಹೊರಟು ಹೋಗಿದ್ದು, ಬಳಿಕ ಶ್ರೀಮತಿ ಸುವರ್ಣ ಲತಾ ಮತ್ತು ಶ್ರೀಮತಿ ನಯನ ಕುಮಾರಿಯವರು ಮದುವೆ ಹೋಗುವಾಗ ಮನೆಯ ಬೆಡ್ ರೂಂ ನ ಕಪಾಟಿನಲ್ಲಿರಿಸಿದ ಚಿನ್ನಾಭರಣಗಳಾದ 20 ಗ್ರಾಂ. ತೂಕದ ಕೈಬಳೆಗಳು, 12 ಗ್ರಾಂ ತೂಕದ 2 ಜೊತೆ ಕಿವಿ ಒಲೆಗಳು, ಹಾಗೂ ಶ್ರೀಮತಿ ನಯನ ಕುಮಾರಿಯವರ 5 ಗ್ರಾಂ ತೂಕದ 1 ಜೊತೆ ಕಿವಿ ಒಲೆ ಮತ್ತು 3 ಗ್ರಾಂ ತೂಕದ 1 ಜೊತೆ ಕಿವಿ ಒಲೆ ಕಳವು ಆಗಿರುತ್ತದೆ. ಕಳವಾದ ಚಿನ್ನಾಭರಣ ಗಳ ಒಟ್ಟು ಅಂದಾಜು ಮೌಲ್ಯ ರೂ.1,45,000/- ಆಗಬಹುದು.

Moodabidre PS

ಪಿರ್ಯಾದಿ Muhammad Zameerದಾರರು ತನ್ನ ಬಾಬ್ತು KA 21 N 5396 ವಾಹನ ಖರೀದಿಸಲು ಮೂಡುಬಿದಿರೆ ಸಹಕಾರ ಸೇವಾ ಬ್ಯಾಂಕ್ ಲಿಮಿಟೆಡ್ ಮೂಡುಬಿದಿರೆ ಶಾಖೆಯಿಂದ ಸಾಲವನ್ನು ಪಡೆದಿದ್ದು ಸದ್ರಿ ವಾಹನವನ್ನು ಮಾರಾಟ ಮಾಡಲು ದಿನಾಂಕ 14-07-2022 ರಂದು ಆರೋಪಿ ಅಮೀರ್ ಹಸನ್ ಎಂಬಾತನೊಂದಿಗೆ 5,40,000/- ರೂಗಳಿಗೆ ಒಪ್ಪಂದ ಮಾಡಿಕೊಂಡು ಸಹಿ ಹಾಕಿದ್ದು ಸದ್ರಿ ವಾಹನದ ಮೇಲೆ ಇರುವ ಸಾಲದ EMI ಹಣವನ್ನು ಕಟ್ಟುವುದಾಗಿ ಒಪ್ಪಂದದಲ್ಲಿ ಮಾತುಕತೆಯಾಗಿದ್ದು, ಒಟ್ಟು ಹಣದಲ್ಲಿ ಮುಂಗಡವಾಗಿ 50000 ರೂ ಹಣವನ್ನು ಪಿರ್ಯಾದಿದಾರರಿಗೆ ನೀಡಿದ್ದು, ಉಳಿದ 4,90,000 ರೂಗಳನ್ನು ಮೂಡುಬಿದಿರೆ ಸಹಕಾರ ಸೇವಾ ಬ್ಯಾಂಕ್ ಲಿಮಿಟೆಡ್ ಮೂಡುಬಿದಿರೆ ಶಾಖೆಗೆ ಆರೋಪಿ ಅಮೀರ್ ಹಸನ್ ರವರು EMI ಮೂಲಕ ಹಣವನ್ನು ಕಟ್ಟುವುದಾಗಿ ಒಪ್ಪಂದದಲ್ಲಿ ಒಪ್ಪಿಕೊಂಡ ಮೇರೆಗೆ ಸದ್ರಿ ವಾಹನವನ್ನು ಅಮೀರ್ ಹಸನ್ ರವರಿಗೆ ನೀಡಿದ್ದು, ಅಮೀರ್ ಹಸನ್ ರವರು KA 21 N 5396 ವಾಹನದ ರಿಜಿಸ್ಟ್ರೇಷನ್ ನ್ನು ಪಿರ್ಯಾದಿದಾರರ ನಕಲಿ ಸಹಿ ಮಾಡಿ ಶಂಶಾದ್ ಬಾನು ಎಂಬುವರ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿ ಪಿರ್ಯಾದಿದಾರರಿಗೆ ಮೋಸ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ

Ullal PS

ದಿನಾಂಕ 9-12-2023 ರಂದು ಬೆಳಿಗ್ಗೆ 6-00 ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ಕಲ್ಲಾಪು ಕೆ.ಬಿ.ಆರ್.ಮಿನಿ ಸುಪರ್ ಬಜಾರ್ ಬಳಿ ವಾಸವಾಗಿದ್ದ ಫಿರ್ಯಾದಿದಾರರಾದ ಮೆಲ್ವಿನ್ ಕುತಿಂಞ ರವರ ತಾಯಿಯವರಾದ ಮೆಗ್ದಲಿನ್ ಕ್ರಾಸ್ತ (ಪ್ರಾಯ 55 ವರ್ಷ) ರವರು ಮನೆಯಿಂದ ಹೊರಗೆ ಹೋದವರು ಮನೆಗೆ ವಾಪಾಸು ಬಾರದೇ ಕಾಣೆಯಾಗಿದ್ದು, ಅವರನ್ನು ಆಸುಪಾಸಿನಲ್ಲಿ, ಸಂಬಂಧಿಕರ ಮನೆ ಹಾಗೂ ಹೆಚ್ಚಿನ ಕಡೆಗಳಲ್ಲಿ ಈ ತನಕ ಹುಡುಕಾಡಿದರೂ ಪತ್ತೆಯಾಗದೇ ಇದ್ದ ಕಾರಣ ಕಾಣೆಯಾದವರನ್ನು ಪತ್ತೆ ಹಚ್ಚಿ ಕೊಡುವಂತೆ ಫಿರ್ಯಾದಿದಾರರು ದಿನಾಂಕ.  12-12-2023 ರಂದು ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Mangalore South PS

ದಿನಾಂಕ 09-12-2023 ರಂದು ಪ್ರಕರಣದ ಪಿರ್ಯಾದುದಾರರಾದ ಅಬ್ದುಲ್ ಹಮೀದ್ ರವರು ಭಟ್ಖಳ ದಿಂದ ಮಂಗಳೂರಿಗೆ ಬಂದು ಮಂಗಳೂರು ನಗರದ ಹಂಪನಕಟ್ಟೆಯಿಂದ ರೈಲ್ವೆ ನಿಲ್ದಾಣ ಕಡೆಗೆ ಹಾದು ಹೋದ ರಸ್ತೆಯಲ್ಲಿರುವ ನೂರು ಮಸೀದಿಗೆ ಪ್ರಾರ್ಥನೆಗೆ ಹೋಗಿ ಪ್ರಾರ್ಥನೆ ಸಂದರ್ಭ ತನ್ನಲ್ಲಿದ್ದ ನಗದು ಹಣ 2,18,480/- ರೂಪಾಯಿ ಇದ್ದ ಬ್ಯಾಗ್ ನ್ನು ಪ್ರೇಯರ್ ಹಾಲ್ ನಲ್ಲಿರುವ ಕುರಾನ್ ಇಡುವ Rack ಬಳಿ ಇಟ್ಟಿರುತ್ತಾರೆ. ನಂತರ ಪ್ರೇಯರ್ ಮುಗಿಸಿ ಮಂಗಳೂರು ನಗರದ ಕಲ್ಪನಾ ರಸ್ತೆಯಲ್ಲಿರುವ ತಾನು ಟೀಚರ್ ಆಗಿ ಕೆಲಸ ಮಾಡುತ್ತಿರುವ ಇಕ್ರಾ ಅರೇಬಿಕ್ ಸ್ಕೂಲ್ ಗೆ ಹೋಗಿ ಆಸೀಪ್ ಎಂಬವರಿಗೆ ಹಣ ಕೊಡಲೆಂದು ಬ್ಯಾಗ್ ಚೆಕ್ ಮಾಡಿದಾಗ ಬ್ಯಾಗ್ ನಲ್ಲಿ ಇಟ್ಟಿದ್ದ 2,18,480/- ರೂಪಾಯಿ ಹಣದ ಪ್ಲಾಸ್ಟೀಕ್ ಚೀಲ ಇರಲಿಲ್ಲ. ನಂತರ ಪಿರ್ಯಾದುದಾರರು ನೂರು ಮಸೀದಿಗೆ ಬಂದು ಸಿ. ಸಿ. ಕ್ಯಾಮರಾ ಪರಿಶೀಲಿಸಿ ನೋಡಿದಾಗ ಯಾರೋ ಕಳ್ಳರು 19-48 ಗಂಟೆಯಿಂದ 19-50 ಗಂಟೆಯ ಮದ್ಯಾವದಿಯಲ್ಲಿ ಕಳವು ಮಾಡಿರುವುದು ಕಂಡು ಬಂದಿರುತ್ತದೆ. ಕಳ್ಳತನ ನಡೆದ ವಿಚಾರವನ್ನು ಪಿರ್ಯಾದಿದಾರರು ತನಗೆ ಭಟ್ಕಳದಲ್ಲಿ ನಗದು ಹಣ ನೀಡಿದ್ದ ಪೈಜಾನ್ ಕೋಬಟ್ಟೆ ಹಾಗೂ ಇತರರಲ್ಲಿ ಚರ್ಚಿಸಿ ಪಿರ್ಯಾದು ನೀಡಿರುವುದಾಗಿದೆ.

ಇತ್ತೀಚಿನ ನವೀಕರಣ​ : 14-12-2023 03:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080