ಅಭಿಪ್ರಾಯ / ಸಲಹೆಗಳು

Crime Report in  Panambur PS

ಪಿರ್ಯಾದಿ Anmol ದಾರರು ದಿನಾಂಕ 13.01.2024 ರಂದು ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಪೆಟ್ರೋ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ವೆಲ್ಡಿಂಗ್ ಕೆಲಸವನ್ನು 6 ಜನ ಕೆಲಸಗಾರರೊಂದಿಗೆ ಖಾಲಿ ಆಯಿಲ್ ಟ್ಯಾಂಕಿಯ ಕೆಳಗಡೆಯಲ್ಲಿ ಮಾಡಿಕೊಂಡಿದ್ದು, ಟ್ಯಾಂಕಿಯ ಮೇಲೆ ನಿಂತುಕೊಂಡು ರೋನಾಲ್ಡ್ ಪೌಲ್ ಎಂಬವರು ಕೆಲಸವನ್ನು ಮಾಡಿಕೊಂಡಿರುವ ಸಮಯ ಸಂಜೆ 4 ಗಂಟೆಯ ಸುಮಾರಿಗೆ ಕೆಳಗಡೆಯಲ್ಲಿ ಒಮ್ಮೆಲೆ ಬೆಂಕಿ ಹತ್ತಿಕೊಂಡಿದ್ದು ದೊಡ್ಡದಾಗಿ ಶಬ್ದ ಬಂದಿದ್ದು, ಅದರಿಂದ ಬಂದ ಬೆಂಕಿಯ ಕೆನ್ನನಾಲೆಯು ಪಿರ್ಯಾದಿ ಹಾಗೂ ಇತರರಿಗೆ ತಾಗಿ ಸುಟ್ಟಗಾಯಗಳಾಗಿದ್ದು, ಅಲ್ಲದೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು , ಈ ಸಮಯ ಟ್ಯಾಂಕಿಯ ಮೇಲುಗಡೆಯಲ್ಲಿ ಕೆಲಸ ಮಾಡಿಕೊಂಡಿದ್ದ ರೊನಾಲ್ಡ್ ಪೌಲ್ ರವರು ಸುಮಾರು 20 ಅಡಿಗಳಷ್ಟು ಮೇಲುಗಡೆಯಿಂದ ಕೆಳಗೆ ಬಿದ್ದುದರಿಂದ ಸೊಂಟ ಹಾಗೂ ತಲೆಗೆ ತೀವ್ರ ತರಹದ ಗುದ್ದಿದ ಗಾಯವಾಗಿ ನಡೆದಾಡಲು ಆಗದೆ ಇದ್ದು, ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್ ಕಂಪೆನಿಯವರು ತರಿಸಿಕೊಂಡು ಎಜೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಎಲ್ಲರಿಗೂ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು , ಪಿರ್ಯಾದಿ ಮತ್ತು ಸಕುನ್ ಪಾಸ್ವಾನ್ ಒಳ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಪೈಕಿ ತೀವ್ರ ತರಹದ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ರೊನಾಲ್ಡ್ ಪೌಲ್ ರವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 13-01-2024 ರಂದು ರಾತ್ರಿ 8.34 ಗಂಟೆಗೆ ಮೃತಪಟ್ಟಿದ್ದು, ಈ ಘಟನೆಗೆ ಕಂಪೆನಿಯ ಮಾಲಕ ಹಾಗೂ ಮನೇಜರ್ ರವರುಗಳು, ಕೆಲಸಗಾರರು ಕೆಲಸ ಮಾಡುವಲ್ಲಿ ಯಾವುದೇ ಸುರಕ್ಷತೆಯ ಕ್ರಮಗಳನ್ನು ಅನುಸರಿಸದೇ ಇರುವುದರಿಂದ ಸಂಭವಿಸಿರುವುದಾಗಿದೆ

Traffic South Police

ದಿನಾಂಕ-12-01-2024 ರಂದು ಪಿರ್ಯಾದಿ ABDUL JALEEL T H ದಾರರ ಮಗ  ಹರಿಪುಲ್ ಮರ್ವಾನ್ ಟಿ ಎಚ್(19) ಎಂಬುವನು ಎಂದಿನಂತೆ ಮಂಗಳೂರಿಗೆ ಜಿಮ್ ಗೆ ಹೋಗಿದ್ದು ಮಂಗಳೂರಿನಿಂದ ಅಡ್ಯಾರ ಕಡೆ KL 14 AB 0863  ನೇ ನಂಬರ ದ ಸ್ಕೂಟರ್ ನ್ನು ಸವಾರಿಮಾಡಿಕೊಂಡು ಬರುತ್ತಿರುವ ಸಮಯ ಬೆಳಿಗ್ಗೆ ಸುಮಾರು 07-30 ಗಂಟೆಗೆ ರಾ.ಹೆ.73 ರ ಅಡ್ಯಾರ್ ಕಟ್ಟೆ ಬಳಿಯ ಬರಖಾಶಾಲೆ  ಹತ್ತಿರದ ಡಾಮಾರು ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಹೋಗಿ ಪಿರ್ಯಾದಾರರ ಮಗನ ಸ್ಕೂಟರ್ ನ ಮುಂದೆ ಹೋಗುತ್ತಿದ್ದ  -KA 19 F 3247 ನೇ ನಂಬ್ರದ ಕೆ,ಎಸ್,ಆರ್,ಟಿ,ಸಿ ಬಸ್  ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿ ಸ್ಕೂಟರ್ ಸಮೇತ ಡಾಮಾರು  ರಸ್ತೆಗೆ ಬಿದ್ದಿದ್ದು ಬಿದ್ದ ಪರಿಣಾಮ  ಮುಖಕ್ಕೆ,ಗದ್ದಕ್ಕೆ ತರಚಿದ ರಕ್ತಗಾಯವಾಗಿದ್ದು, ಮೂಗಿಗೆ ಮೂಳೆ ಮುರಿತದ ಗಾಯವಾಗಿದ್ದು ಎಡಕೈ, ಬಲಕಾಲಿಗೆ ತರಚಿದ ರಕ್ತ ಗಾಯವಾಗಿದ್ದು. ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು  ಪಿರ್ಯಾದಿದಾರರ ಮಗನನ್ನು ಉಪಚರಿಸಿ, ಚಿಕಿತ್ಸೆ ಬಗ್ಗೆ ವಾಹನವೊಂದರಲ್ಲಿ  ಹೈಲ್ಯಾಂಡ್ ಆಸ್ಪತ್ರೆಗೆ ಕೆರದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ  ಒಮೇಗಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Kankanady Town PS

ಪಿರ್ಯಾದಿದಾರರಾದ ಆಂಟೋನಿ ಡಿಸೋಜಾ ರವರು ಡ್ರೈವರ್ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 13-01-2024 ರಂದು ರಾತ್ರಿ ಸಮಯ ಪಿರ್ಯಾದಿದಾರರು ಮಂಗಳೂರು ನಗರದ ಕುಲಶೇಖರ ಕ್ರಾಸ್ ಗೆ ಹೋಗಿ,  ವಾಪಾಸ್ಸು  ರಾತ್ರಿ ಸಮಯ ಸುಮಾರು 21-20 ಗಂಟೆಗೆ ಸಿರ್ ಲಾ ಪಡ್ಪು ರಸ್ತೆಯಲ್ಲಿ ತಮ್ಮ ಮನೆ ಕಡೆಗೆ ಹೋಗುತ್ತಿದ್ದಾಗ,  ಆರೋಪಿಗಳಾದ, ಪಿರ್ಯಾದಿದಾರರ ಹೆಂಡತಿ ರೇಣುಕಾ ಅಂಟೋನಿ ಡಿಸೋಜಾ ಹಾಗೂ ರಾಜೇಶ್ ಎಂಬುವರು ಸ್ಕೂಟರ್ ಒಂದರಲ್ಲಿ ಪಿರ್ಯಾದಿದಾರರ ಬಳಿಗೆ ಬಂದು, ರೇಣುಕಾ ಆಂಟೋನಿ ಡಿಸೋಜಾ ರವರು ಪಿರ್ಯಾದಿದಾರರಲ್ಲಿ “ನನಗೆ ಡೈವರ್ಸ್ ಕೊಡು” ಎಂದು ಕೇಳಿದಾಗ, ಪಿರ್ಯಾದಿದಾರರು “ಡೈವರ್ಸ್ ಕೊಡುವುದಿಲ್ಲ”  ಎಂದು ಹೇಳಿರುತ್ತಾರೆ.  ಆಗ ರೇಣುಕಾ ಆಂಟೋನಿ ಡಿಸೋಜಾ ರವರು ಪಿರ್ಯಾದಿದಾರರ ಬಲ ಕೆನ್ನೆಗೆ ಕೈಯಿಂದ ಹಲ್ಲೆ ಮಾಡಿದ್ದು, ಅವರ ಜೊತೆಯಿದ್ದ  ಇನ್ನೋರ್ವ ಆರೋಪಿ ರಾಜೇಶ್ ರವರು ತನ್ನ ಕೈಯಲ್ಲಿದ್ದ ಮಾರಕಾಯುಧವಾದ ಬಿಯರ್ ಬಾಟಲಿಯಿಂದ ಪಿರ್ಯಾದಿದಾರರ ತಲೆಯ ನೆತ್ತಿಯ ಭಾಗಕ್ಕೆ ಹೊಡೆದು ರಕ್ತಗಾಯ ಉಂಟು ಮಾಡಿರುತ್ತಾರೆ. ನಂತರ  ರೇಣುಕಾ ಆಂಟೋನಿ ಡಿಸೋಜಾ ರವರು ಕಲ್ಲಿನಿಂದ ಪಿರ್ಯಾದಿದಾರರ ಹಣೆಗೆ ಹಾಗೂ ಮೂಗಿಗೆ ಹೊಡೆದು ರಕ್ತಗಾಯ ಉಂಟು ಮಾಡಿ, ಪಿರ್ಯಾದಿದಾರರನ್ನು ಉದ್ದೇಶಿಸಿ “ನೀನು ಡೈವರ್ಸ್ ಕೊಡದೇ ಹೋದಲ್ಲಿ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ, ಬೇವರ್ಷಿ” ಎಂದು ಕೊಲೆ ಬೆದರಿಕೆ ಹಾಕಿ, ಕೆಟ್ಟ ಶಬ್ದಗಳಿಂದ ನಿಂದಿಸಿರುತ್ತಾರೆ, ಎಂಬಿತ್ಯಾದಿಯಾಗಿರುತ್ತದೆ.

Bajpe PS

ಪಿರ್ಯಾದಿ Pavan Kumar Shetty ದಾರರು ಶ್ರ ರಾಜೇಶ್ ನಾಯ್ಕ್ ರವರ ಆಪ್ತ ಸಹಾಯಕರಾಗಿದ್ದು ಈ ದಿನ ದಿನಾಂಕ 14.01.2024 ರಂದು ಶ್ರೀ ರಾಜೇಶ್ ನಾಯ್ಕ್ ರವರು ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನಕ್ಕೆ ಸಂಕ್ರಮಣ ಪೂಜೆಗೆಂದು ಬಂದಿದ್ದು ಪೂಜೆ ಮುಗಿದ ನಂತರ ಮಧ್ಯಾಹ್ನ ಸುಮಾರು 1.30 ಗಂಟೆಯ ಸಮಯಕ್ಕೆ ಶ್ರೀ ರಾಜೇಶ್ ನಾಯ್ಕ್ ರವರು ದೇವಸ್ಥಾನದ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಅವರ ಕಾರಿನ ಕಡೆಗೆ ಹೋಗಲೆಂದು ರಸ್ತೆಗೆ ಬಂದು ನಿಂತಾಗ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ KA-19MD-6298 ನೇ ಕಾರಿನ ಚಾಲಕ ತನ್ನ ಕಾರನ್ನು ರಸ್ತೆಯಲ್ಲಿ ಅತೀವೇಗವಾಗಿ ಮತ್ತು ದುಡುಕುತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ದೇವಸ್ಥಾನದ ಎದರು ನಿಂತಿದ್ದ ಶ್ರೀ ರಾಜೇಶ್ ನಾಯ್ಕ್ ರವರಿಗೆ ಡಿಕ್ಕಿ ಹೊಡೆದು ತನ್ನ ಕಾರನ್ನು ಸ್ಥಳದಲ್ಲಿ ನಿಲ್ಲಿಸದೆ ಮತ್ತಷ್ಠು ವೇಗವಾಗಿ ಕಾರನ್ನು ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿದ್ದು ಈ ಅಪಘಾತದಿಂದ ರಾಜೇಶ್ ನಾಯ್ಕ್ ರವರಿಗೆ ಎರೆಡು ಕಾಲುಗಳಿಗೆ ರಕ್ತಗಾಯವಾಗಿದ್ದು ಕೂಡಲೆ ಸ್ಥಳದಲ್ಲಿದ್ದ ಪಿರ್ಯಾದಿದಾರರು ಮತ್ತು ಇತರರು ರಾಜೇಶ್ ನಾಯ್ಕ್ ರವರನ್ನು ಉಪಚರಿಸಿ ಮಂಗಳೂರಿನ ಎಜೆ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ. 

Mangalore South PS

ದಿನಾಂಕ: 14-01-2024 ರಂದು ಸಮಯ 9-40 ಗಂಟೆಗೆ ಮಂಗಳೂರು ನಗರದ ಶಿವನಗರ ಶ್ರೀನಿವಾಸ ಕಾಲೇಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ಯುವಕ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆಪಡಿಸುತ್ತಿರುವುದಾಗಿ ಮಾಹಿತಿ ಬಂದಂತೆ, ಕೂಡಲೇ ಅವರು ಸದ್ರಿ ಸ್ಥಳಕ್ಕೆ ತೆರಳಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಪಡಿಸುತ್ತಿದ್ದ ಸಬೀತ್ ಪ್ರಾಯ: 36 ವರ್ಷ, ವಾಸ:  ಸೂಟರಪೇಟೆ, ಕಂಕನಾಡಿ, ಮಂಗಳೂರು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ  ಆರೋಪಿಯು  ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು,  ಮಂಗಳೂರು ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಯು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ  ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

ಇತ್ತೀಚಿನ ನವೀಕರಣ​ : 15-01-2024 04:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080